ಐಶ್ವರ್ಯ – ಅಭಿ ಮಧ್ಯೆ ಡಾಕ್ಟರ್ ವಿಲನ್? – ಐಶ್ ಕಿಸ್ ಕೊಟ್ಟಿದ್ದೇ ಡಿವೋರ್ಸ್ ಗೆ ಕಾರಣ?
ಡಾ. ಜಿರಾಕ್ ಮಾರ್ಕರ್ ಯಾರು?
ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್.. ಸದ್ಯ ಬಿ ಟೌನ್ ನಲ್ಲಿ ಇವರಿಬ್ಬರದ್ದೇ ಸುದ್ದಿ.. ಇವರಿಬ್ಬರ ಸಂಸಾರದ ಹಳಿ ತಪ್ಪಿದೆ.. ಸದ್ಯದಲ್ಲೇ ಡಿವೋರ್ಸ್ ಪಡ್ಕೊಳ್ತಿದ್ದಾರೆ ಅನ್ನೋ ವದಂತಿ ಹರಿದಾಡ್ತಿದೆ.. ಇದೀಗ ಮತ್ತೊಂದು ಶಾಕಿಂಗ್ ವಿಚಾರ ಭಾರಿ ಸದ್ದು ಮಾಡ್ತಿದೆ.. ಇವರಿಬ್ಬರು ದೂರ ಆಗೋಕೆ ಆ ವ್ಯಕ್ತಿಯೇ ಕಾರಣ ಅಂತಾ ಹೇಳಲಾಗ್ತಿದೆ.. ಆ ಡಾಕ್ಟರ್ನಿಂದಾಗಿಯೇ ಇರಿಬ್ಬರ ಮಧ್ಯೆ ಬಿರುಕು ಬಿದ್ದಿದೆ ಅಂತಾ ಹೇಳಲಾಗ್ತಿದೆ.. ಅಷ್ಟಕ್ಕೂ ಆ ಡಾಕ್ಟರ್ ಯಾರು? ಐಶ್ ಹಾಗೂ ಆಭಿಗೂ ಈ ವ್ಯಕ್ತಿಗೂ ಏನ್ ಸಂಬಂಧ? ಹರಿದಾಡ್ತಿರೋ ಸುದ್ದಿಯಾದ್ರು ಏನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಪುಟ್ಟಕ್ಕನ ಮಡಿಲು ಸೇರಿದ ಸಹನಾ – ಅಮ್ಮ ಮಗಳು ಒಂದಾಗಿದ್ದು ಕನಸಾ, ನನಸಾ?
ಈಗ ಸಂಬಂಧಕ್ಕೆ ಬೆಲೆ ಇಲ್ಲ ಅನ್ನೋ ತರ ಆಗಿದೆ.. ಪ್ರೀತಿಸಿ ಮದುವೆ ಆದವರು ಕೂಡ ಸಣ್ಣ ಪುಟ್ಟ ವಿಚಾರಕ್ಕೆ ದೂರ ಆಗ್ತಿದ್ದಾರೆ.. ಸಾಮಾನ್ಯ ಜನರು ಬಿಡಿ.. ಎಲ್ಲರಿಗೂ ಮಾದರಿಯಾಗ್ಬೇಕಿದ್ದ ಸೆಲೆಬ್ರಿಟಿಗಳು ಕೂಡ ಡಿವೋರ್ಸ್ ಪಡ್ಕೊಳ್ತಿದ್ದಾರೆ.. ಇದೀಗ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಡಿವೋರ್ಸ್ ವಿಚಾರ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡ್ತಾ ಇದೆ.. ಇವರಿಬ್ಬರು ಆದಷ್ಟು ಬೇಗ ವಿಚ್ಛೇದನ ಪಡಿತಾ ಇದ್ದಾರೆ ಅನ್ನೋ ಗಾಸಿಪ್ ಹಬ್ತಾ ಇದೆ.. ಇದಕ್ಕೆ ಸಾಕಷ್ಟು ಪುಷ್ಠಿ ನೀಡುವಂತೆ ಬೆಳವಣಿಗೆಗಳು ನಡಿತಾ ಇದೆ.. ಆದ್ರೆ ಈ ಬಗ್ಗೆ ಬಚ್ಚನ್ ಫ್ಯಾಮಿಲಿ ಯಾವುದೇ ಸ್ಪಷ್ಟನೆ ನೀಡಿಲ್ಲ.. ಹೀಗಾಗಿ ಇಲಿ ಹೋದ್ರು ಹುಲಿ ಹೋಯ್ತು ಅಂತಾ ಜನ ಮಾತಾಡ್ಕೊಳ್ತಿದ್ದಾರೆ. ಇದೀಗ ಮತ್ತೊಂದು ಶಾಕಿಂಗ್ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಲ್ಲಿದೆ.. ಅದೇನಂದ್ರೆ ಐಶ್ ಅಭಿ ದಾಂಪತ್ಯದಲ್ಲಿ ಬಿರುಕು ಮೂಡಲು ವೈದ್ಯರೊಬ್ಬರು ಕಾರಣ ಅಂತ.
ಹೌದು.. ಗಂಡ ಹೆಂಡ್ತಿಯ ಮಧ್ಯೆ ಏನು ಸರಿಯಿಲ್ಲ.. ಹೀಗಾಗಿ ಐಶ್ವರ್ಯ ರೈ ಮಗಳೊಂದಿಗೆ ಬೇರೆ ಮನೆಯಲ್ಲಿ ವಾಸ ಮಾಡ್ತಿದ್ದಾರೆ ಅನ್ನೋ ಮಾತು ಕೇಳಿ ಬರ್ತಾ ಇರೋ ಹೊತ್ತಲ್ಲೇ.. ಇವರಿಬ್ಬರು ದೂರವಾಗಲು ಡಾಕ್ಟರ್ ಜಿರಾಕ್ ಮಾರ್ಕರ್ ಕಾರಣ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಡಾಕ್ಟರ್ ಜಿರಾಕ್ ಮಾರ್ಕರ್ ಮತ್ತು ಐಶ್ವರ್ಯ ರೈ ಅವರ ಫೋಟೋಗಳನ್ನು ಹೆಕ್ಕಿ ತೆಗೆದು ವೈರಲ್ ಮಾಡುತ್ತಿದ್ದಾರೆ. ಡಾಕ್ಟರ್ ಜಿರಾಕ್ ಮಾರ್ಕರ್ ಅವರ ಜಾತಕ ಜಾಲಾಡುತ್ತಿದ್ದಾರೆ.
ಅಷ್ಟಕ್ಕೂ ಈ ಜಿರಾಕ್ ಯಾರು ಅಂತಾ ನೋಡೋದಾದ್ರೆ, ಇವರು ಮುಂಬೈ ಮೂಲದವರು.. ಮಕ್ಕಳ ವೈದ್ಯರಾಗಿ ಹೆಸರುವಾಸಿಯಾಗಿರುವ ಡಾ.ಜಿರಾಕ್ ಮಾರ್ಕರ್, ಹದಿಹರೆಯದವರು ಎದುರಿಸುತ್ತಿರುವ ವಿವಿಧ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ನೀಡುತ್ತಾರೆ. ಇದಲ್ಲದೇ ಆದಿತ್ಯ ಬಿರ್ಲಾ ಇಂಟಿಗ್ರೇಟೆಡ್ ಸ್ಕೂಲ್ನಲ್ಲಿ ವೈದ್ಯಕೀಯ ನಿರ್ದೇಶಕರಾಗಿದ್ದಾರೆ. ನೀರ್ಜಾ ಮತ್ತು ಅನನ್ಯಾ ಬಿರ್ಲಾ ಪ್ರಾರಂಭ ಮಾಡಿದ ಮಾನಸಿಕ ಯೋಗ ಕ್ಷೇಮ ಉತ್ತೇಜಿಸುವ M POWER ನ ಹಿರಿಯ ವೈದ್ಯ ಮತ್ತು ಸಲಹೆಗಾರರು ಕೂಡ ಹೌದು. ಇದಿಷ್ಟೇ ಅಲ್ಲದೇ ಜಿರಾಕ್ ಬಚ್ಚನ್ ಮನೆಗೂ ತುಂಬಾ ಕ್ಲೋಸ್.. ಅದ್ರಲ್ಲೂ ಐಶ್ವರ್ಯ ರೈಗೆ ಡಾ.ಜಿರಾಕ್ ಮಾರ್ಕರ್ ಇಂದು ನಿನ್ನೆ ಆಪ್ತರಾದವರಲ್ಲ. ಐಶ್ ಹಾಗೂ ಜಿರಾಕ್ ಹಲವು ವರ್ಷಗಳಿಂದ ಫ್ರೆಂಡ್ಸ್ ಆಗಿದ್ದಾರೆ.. ಜಿರಾಕ್ ಮಡದಿ ಪ್ರಿಯಾ ಕೂಡ ಐಶ್ ಫ್ರೆಂಡ್ ಆಗಿದ್ದಾರೆ.. ಈ ಎರಡು ಕುಟುಂಬದವರು ಆಗಾಗ ಪ್ರವಾಸಕ್ಕೆ ಒಟ್ಟಿಗೆ ಹೋಗಿದ್ದು ಕೂಡ ಇದೆ.. ರಜಾ ದಿನಗಳನ್ನು ಒಟ್ಟಿಗೆ ಈ ಎರಡು ಕುಟುಂಬ ಕಳೆದಿದ್ದು ಇದೆ.. ಇಷ್ಟೆಲ್ಲಾ ಆಗಿದ್ರೆ ಏನು ಆಗ್ತಾ ಇರ್ಲಿಲ್ಲ ಕಾಣುತ್ತೆ.. ಆದ್ರೆ ಅದೊಂದು ದಿನ ಐಶ್ವರ್ಯ ರೈ ಎಲ್ಲರ ಮುಂದು ಜಿರಾಕ್ ಗೆ ಕಿಸ್ ಕೊಟ್ಟಿದ್ರು.. ಇದೀಗ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿದೆ.
ಹಿಂದೊಮ್ಮೆ ಡಾ.ಜಿರಾಕ್ ಮಾರ್ಕರ್ ‘Parenting In The Age Of Anxiety’ ಎಂಬ ಪುಸ್ತಕವನ್ನು ಬರೆದಿದ್ದರು. ಈ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಐಶ್ವರ್ಯ ರೈ ಅತಿಥಿಯಾಗಿ ಬಂದಿದ್ರು.. ಇದೇ ಸಮಯದಲ್ಲಿ ಐಶ್ ವೇದಿಕೆ ಮೇಲೆ ಡಾ.ಜಿರಾಕ್ ಕೆನ್ನೆಗೆ ಮುತ್ತಿಕ್ಕಿದ್ದರು. ಅವತ್ತು ಐಶ್ವರ್ಯ ನೀಡಿದ್ದ ಈ ಮುತ್ತು ಈಗ ಚರ್ಚೆಯ ವಿಷಯವಾಗಿದೆ. ಐಶ್ ಈ ನಡೆಯಿಂದ ಅಭಿಷೇಕ್ ಬೇಜಾರು ಮಾಡ್ಕೊಂಡಿದ್ದಾರೆ.. ಇದ್ರಿಂದಾಗೇ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿದೆ.. ಡಿವೋರ್ಸ್ ಗೆ ಇದೇ ಕಾರಣ.. ಅಂತಾ ಫ್ಯಾನ್ಸ್ ಚರ್ಚೆ ಮಾಡ್ತಿದ್ದಾರೆ.. ಆದ್ರೆ ಈ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ..
ಒಟ್ನಲ್ಲಿ ಅಭಿಷೇಕ್ ಹಾಗೂ ಐಶ್ವರ್ಯ ದಾಂಪತ್ಯ ವಿಚಾರ ಸದಾ ಸುದ್ದಿಯಲ್ಲಿರುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ.. ಫ್ಯಾನ್ಸ್ ಕೂಡ ಈ ಬಗ್ಗೆ ತುಂಬಾ ತಲೆ ಕೆಡಿಸ್ಕೊಂಡಿದ್ದಾರೆ.. ಇವರಿಬ್ಬರು ದೂರ ಆಗಲು ಕಾರಣ ಏನಿರ್ಬೋದು ಅಂತಾ ಪತ್ತೆದಾರಿ ಕೆಲ್ಸ ಮಾಡ್ತಾ ಇದ್ದಾರೆ. ಇನ್ನಾದ್ರೂ ಅಭಿಷೇಕ್ ಹಾಗೂ ಐಶ್ವರ್ಯ ಈ ಬಗ್ಗೆ ಸ್ಪಷ್ಟನೆ ನೀಡ್ತಾರಾ ಅಂತಾ ಕಾದುನೋಡ್ಬೇಕು..