RR ಕ್ಯಾಪ್ಟನ್ಸಿ ಕಳ್ಕೊಂಡ್ರಾ ಸಂಜು? – IPLನಲ್ಲಿ ಯಾವ ತಂಡಕ್ಕೆ ಸ್ಯಾಮ್ಸನ್?
ಟೀಂ ಇಂಡಿಯಾ ಫೇಲ್ಯೂರ್ ಕಾರಣನಾ?

ಟೀಂ ಇಂಡಿಯಾ ಪರ ಕಣಕ್ಕಿಳಿಯಲು ಒಂದೇ ಒಂದು ಚಾನ್ಸ್ ಸಿಕ್ರೂ ಸಾಕು ಅನ್ನೋದು ನೂರಾರು ಕ್ರಿಕೆಟಿಗರ ಕನಸು. ಆದ್ರೆ ಇನ್ನೂ ಕೆಲ ಆಟಗಾರರಿಗೆ ಅವಕಾಶ ಸಿಕ್ರೂ ಸರಿಯಾಗಿ ಬಳಸಿಕೊಳ್ಳೋದಿಲ್ಲ. ತಮ್ಮ ಸಾಮರ್ಥ್ಯವನ್ನ ತೋರಿಸೋಕೂ ಆಗಲ್ಲ. ಈ ಪೈಕಿ ಭಾರತ ತಂಡದಲ್ಲಿ ಮೋಸ್ಟ್ ಅನ್ ಲಕ್ಕಿ ಪ್ಲೇಯರ್ ಅಂತಾ ಕರೆಸಿಕೊಳ್ಳೋ ಆಟಗಾರ ಅಂದ್ರೆ ಅದು ಸಂಜು ಸ್ಯಾಮ್ಸನ್. ಟೀಂ ಇಂಡಿಯಾದಲ್ಲಿ ಸಂಜು ಸ್ಥಾನ ಹಾವು ಏಣಿಯಂತೆ ಏರಿಳಿತ ಕಾಣ್ತಿರುವಾಗ್ಲೇ ಐಪಿಎಲ್ನಲ್ಲೂ ಬಿಗ್ ಶಾಕ್ ಎದುರಾಗಿದೆ. ಅದೇನಂದ್ರೆ ರಾಜಸ್ಥಾನ ರಾಯಲ್ಸ್ ಕ್ಯಾಪ್ಟನ್ಸಿ ಸ್ಥಾನದಿಂದಲೂ ಸಂಜುಗೆ ಕೊಕ್ ಕೊಡ್ತಾರೆ ಅನ್ನೋದು. ಭಾರತ ತಂಡದಲ್ಲಿ ಪದೇಪದೇ ಚಾನ್ಸ್ ಕೊಟ್ರೂ ಬಳಸಿಕೊಳ್ಳುವಲ್ಲಿ ಫೇಲ್ಯೂರ್ ಆದ ಸಂಜು ಡೊಮೆಸ್ಟಿಕ್ ಟೂರ್ನಿಯಲ್ಲಿ ದೊಡ್ಡ ಬೆಲೆ ತೆರಬೇಕಾದ ಅನಿವಾರ್ಯತೆ ಎದುರಾಗಿದೆ.
ಕ್ಯಾಪ್ಟನ್ಸಿಯಿಂದ ಸಂಜು ಔಟ್?
ಟೀಂ ಇಂಡಿಯಾದಲ್ಲಿನ ಸಂಜು ಸ್ಯಾಮ್ಸನ್ರ ಫ್ಲ್ಯಾಪ್ ಶೋ ಐಪಿಎಲ್ ಮೇಲೆ ಪರಿಣಾಮ ಬೀರ್ತಿದೆ. ಟಿ-20 ವಿಶ್ವಕಪ್‌ನುದ್ದಕ್ಕೂ ಸಂಪೂರ್ಣ ಬೆಂಚ್ ಕಾಯಿಸಿದ್ದ ಸಂಜು ಐಸಿಸಿ ಪಂದ್ಯಾವಳಿಯ ನಂತರ ನಡೆದ ಜಿಂಬಾಬ್ವೆ ಸರಣಿಯಲ್ಲಿ ಆಡಲು ಅವಕಾಶ ಪಡೆದಿದ್ರು. ಆ ಸರಣಿಯಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಅರ್ಧಶತಕ ಗಳಿಸಿದರು. ಬಳಿಕ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಶ್ರೀಲಂಕಾ ವಿರುದ್ಧದ ಟಿ20 ತಂಡಕ್ಕೆ ಆಯ್ಕೆ ಮಾಡಲಾಯಿತು. ಆದ್ರೆ ಸಿಕ್ಕ ಅವಕಾಶವನ್ನ ಸಂಜು ಸರಿಯಾಗಿ ಬಳಸಿಕೊಳ್ಳಲಿಲ್ಲ. ಮೊದಲ ಪಂದ್ಯದಲ್ಲಿ ಬೆಂಚ್ ಕಾದಿದ್ದ ಸಂಜುಗೆ ಎರಡನೇ ಪಂದ್ಯದಲ್ಲಿ ಅವಕಾಶ ಕೊಡಲಾಗಿತ್ತು. ಆದ್ರೆ ಮೊದಲ ಬಾಲ್ನಲ್ಲೇ ಡಕ್ ಔಟ್ ಆಗಿದ್ರು. ಇನ್ನು ಮೂರನೇ ಪಂದ್ಯದಲ್ಲೂ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿದ್ರು. ಸತತ ಎರಡು ಪಂದ್ಯಗಳಲ್ಲಿ ಡಕ್ ಔಟ್ ಆಗಿದ್ರು. ಸತತ ಕಳಪೆ ಪ್ರದರ್ಶನದಿಂದ ಸಂಜು ಸ್ಯಾಮ್ಸನ್ ತಂಡ ತನ್ನ ಮೇಲಿಟ್ಟಿದ್ದ ಭರವಸೆಯನ್ನು ಕಳೆದುಕೊಂಡಿದ್ದಾರೆ. ಇದೇ ಕಾರಣಕ್ಕೋ ಏನೋ ಸಂಜು ಸ್ಯಾಮ್ಸನ್ ಅವರನ್ನು 2024ರ ದುಲೀಪ್ ಟ್ರೋಫಿಗೂ ಆಯ್ಕೆ ಮಾಡಿಲ್ಲ. ಇದು ಸಂಜು ಸ್ಯಾಮ್ಸನ್ ಐಪಿಎಲ್ ಕರಿಯರ್ ಮೇಲೂ ಪರಿಣಾಮ ಬೀರಿದೆ. ಸಂಜು ಸ್ಯಾಮ್ಸನ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದ ಕ್ಯಾಪ್ಟನ್ ಆಗಿ 2021ರಲ್ಲಿ ನೇಮಕ ಮಾಡಲಾಗಿತ್ತು. ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ್ 2 ಬಾರಿ ಸೆಮಿ ಫೈನಲ್ಸ್ ಮತ್ತು 1 ಬಾರಿ ಫೈನಲ್ ತಲುಪಿದೆ. ಕಳೆದ ಸೀಸನ್ನಲ್ಲೂ ಸಂಜು ರಾಜಸ್ಥಾನ್ ಪರ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ರು. ಆದ್ರೆ 2025ರ ಸೀಸನ್ಗೆ ರಾಜಸ್ಥಾನ್ ರಾಯಲ್ಸ್ ತಂಡದ ನೂತನ ಕ್ಯಾಪ್ಟನ್ ಆಗಿ ಜೋಸ್ ಬಟ್ಲರ್ ನೇಮಕ ಮಾಡೋಕೆ ಫ್ರಾಂಚೈಸಿ ಮುಂದಾಗಿದೆ. ಹೀಗಾಗಿ ಸಂಜು ತಂಡದಿಂದ ಹೊರಬೀಳ್ತಾರೆ ಎನ್ನಲಾಗ್ತಿದೆ.
ಸಂಜು ಸ್ಯಾಮ್ಸನ್ ಫೇಲ್ಯೂರ್ ಬಗ್ಗೆ ಅಭಿಮಾನಿಗಳು ಕೂಡ ಬೇಸರಗೊಂಡಿದ್ದಾರೆ. ಸಿಕ್ಕ ಅವಕಾಶಗಳನ್ನು ಸಂಜು ಸ್ಯಾಮ್ಸನ್ ಕೈಯಾರೆ ಮಣ್ಣುಪಾಲು ಮಾಡಿಕೊಳ್ತಿದ್ದಾರೆ ಎಂದು ಬೇಸರ ಹೊರ ಹಾಕುತ್ತಿದ್ದಾರೆ. ಇನ್ಮುಂದೆ ಅವ್ರನ್ನ ಯಾರು ಕಾಪಾಡಲು ಸಾಧ್ಯವಿಲ್ಲ, ಆತನ ಕೆರಿಯರ್ ಎಂಡ್ ಆಯ್ತು ಎಂದು ವ್ಯಂಗ್ಯ ಮಾಡ್ತಿದ್ದಾರೆ. ಟೀಂ ಇಂಡಿಯಾದಲ್ಲಿ ರಿಷಭ್ ಪಂತ್ ರೀ ಎಂಟ್ರಿ ಮತ್ತೊಂದು ಕಡೆ ದ್ರುವ್ ಜುರೇಲ್, ಜಿತೇಶ್ ಶರ್ಮಾ ಪೈಪೋಟಿ ಕೊಡ್ತಿದ್ದಾರೆ. ನಡುವೆ ರಿಯಾನ್ ಪರಾಗ್ ಆಲ್ ರೌಂಡರ್ ಕೋಟಾದಲ್ಲಿ ಮುನ್ನುಗುತ್ತಿದ್ದಾರೆ. ಹೀಗಾಗಿ ಸಂಜು ವೈಫಲ್ಯ ಅವ್ರ ಭವಿಷ್ಯಕ್ಕೆ ದೊಡ್ಡ ಪೆಟ್ಟು ಕೊಡ್ತಿದೆ. ಟೀಂ ಇಂಡಿಯಾದಲ್ಲಿನ ಫ್ಲ್ಯಾಪ್ ಶೋ ಐಪಿಎಲ್ ನಾಯಕತ್ವವನ್ನೂ ಕಿತ್ತುಕೊಳ್ತಿದೆ.