RCBಗೆ ಸಿಕ್ಕೇ ಬಿಟ್ರಾ ನಾಯಕ? – ಕಿಂಗ್ ಕೊಹ್ಲಿಗೇ ಮತ್ತೆ ಪಟ್ಟಾಭಿಷೇಕ?
ಮೂವರ ರೇಸ್.. ಫ್ರಾಂಚೈಸಿ ಟ್ವಿಸ್ಟ್ ಏನು?
2025ರ ಐಪಿಎಲ್ ಹರಾಜಿಗೂ ಮುನ್ನ ಅಂತಿಮ ನಿಯಮಗಳ ಸಿದ್ಧತೆಯಲ್ಲಿದೆ ಬಿಸಿಸಿಐ. ಫ್ರಾಂಚೈಸಿಗಳು ನೀಡಿರುವ ಸಲಹೆಗಳನ್ನ ಚರ್ಚಿಸಿ ಫೈನಲ್ ಡಿಸಿಷನ್ ತೆಗೆದುಕೊಳ್ತಾರೆ. ಸೋ ರೀಟೇನ್ ಮತ್ತು ಆರ್ಟಿಎಂ ರೂಲ್ಸ್ ಹೊರ ಬಿದ್ದ ಮೇಲೆ ಫ್ರಾಂಚೈಸಿಗಳು ಯಾರನ್ನ ಉಳಿಸಿಕೊಳ್ಬೇಕು, ಯಾರನ್ನ ರಿಲೀಸ್ ಮಾಡ್ಬೇಕು ಅನ್ನೋ ನಿರ್ಧಾರ ಮಾಡಲಿದ್ದಾರೆ. ಅದ್ರಲ್ಲೂ 18ನೇ ಆವೃತ್ತಿಯ ಐಪಿಎಲ್ ವೇಳೆಗೆ ದೊಡ್ಡ ದೊಡ್ಡ ಬದಲಾವಣೆಗಳೇ ನಡೆಯೋ ಹಿಂಟ್ ಸಿಕ್ಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೂ ಕ್ಯಾಪ್ಟನ್ ಬದಲಾವಣೆಗೆ ಫ್ರಾಂಚೈಸಿ ಮುಂದಾಗಿದ್ದು ಮೂವರ ಮೇಲೆ ಕಣ್ಣಿಟ್ಟಿದೆ. ಬಟ್ ಈ ಮೂವರು ಸಿಗದೇ ಇದ್ರೆ ಅಂತಿಮವಾಗಿ ನಾಲ್ಕನೇ ಆಫ್ಶನ್ ಕೂಡ ಇದೆ. ಅಭಿಮಾನಿಗಳ ಆಯ್ಕೆ ಕೂಡ ನಾಲ್ಕನೇ ಆಪ್ಶನ್ನೇ ಆಗಿದೆ. ಅಷ್ಟಕ್ಕೂ ಆರ್ಸಿಬಿ ಫ್ರಾಂಚೈಸಿ ಲಿಸ್ಟ್ನಲ್ಲಿರೋ ಆಟಗಾರರು ಯಾರು? ಯಾರಿಗೆ ಕ್ಯಾಪ್ಟನ್ಸಿ ಕೊಡಿ ಅಂತಿದ್ದಾರೆ ಫ್ಯಾನ್ಸ್? ಈ ಬಗೆಗಿನ ಅಚ್ಚರಿಯ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕ್ರಿಕೆಟ್ಗೆ ಗಬ್ಬರ್ ಸಿಂಗ್ ಗುಡ್ ಬೈ – ರೋಹಿತ್ರನ್ನೇ ಮೀರಿಸಿದ್ದೇಗೆ Mr. ICC?
2024ರ ಐಪಿಎಲ್ ಸೀಸನ್ ಹಿಂದೆಂದಿಗಿಂತಲೂ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಇದರ ಎಫೆಕ್ಟ್ 2025ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇನ್ನೂ ದೊಡ್ಡ ಮಟ್ಟಕ್ಕೆ ಸದ್ದು ಮಾಡೋದಂತೂ ಪಕ್ಕಾ. ಅದ್ರಲ್ಲೂ ಕೆಲ ಫ್ರಾಂಚೈಸಿಗಳ ನಾಯಕರಿಗೇ ಗೇಟ್ಪಾಸ್ ಕೊಡೋಕೆ ರೆಡಿಯಾಗಿದ್ದಾರೆ. ಬೆಂಗಳೂರು ತಂಡದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ರನ್ನ ತೆಗೆದು ಹೊಸ ನಾಯಕನ ಪಟ್ಟಾಭಿಷೇಕಕ್ಕೆ ಸಿದ್ಧತೆ ನಡೀತಿದೆ. ಬಟ್ ಈಗ ಇರೋ ಪ್ರಶ್ನೆ ಅಂದ್ರೆ ಯಾರಿಗೆ ಕ್ಯಾಪ್ಟನ್ಸಿ ಕೊಡ್ಬೇಕು ಅನ್ನೋದು. ಫ್ರಾಂಚೈಸಿ ಬಳಿ ಮೂರ್ನಾಲ್ಕು ಆಟಗಾರರು ಹೆಸರುಗಳಿವೆ. ಬಟ್ ಅವ್ರನ್ನೆಲ್ಲಾ ಹೊರತುಪಡಿಸಿ ಈಗ ತಂಡದ ಐಕಾನ್ ಆಟಗಾರನಿಗೇ ಮತ್ತೊಮ್ಮೆ ಪಟ್ಟ ಕಟ್ಟೋಕೆ ಸರ್ವತಂತ್ರಗಳನ್ನೂ ನಡೆಸಲಾಗ್ತಿದೆ. ಅದು ಮತ್ತಿನ್ಯಾರೂ ಅಲ್ಲ ಕಿಂಗ್ ವಿರಾಟ್ ಕೊಹ್ಲಿ. ವಿರಾಟ್ರನ್ನೇ ಮತ್ತೆ ನೇತೃತ್ವ ತೆಗೆದುಕೊಳ್ಳಿ ಅಂತಾ ಮಾಲೀಕರು ದುಂಬಾಲು ಬಿದ್ದಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ.
ವಿರಾಟ್ ಗೆ ಮತ್ತೆ ಕ್ಯಾಪ್ಟನ್ಸಿ?
ಸತತ 17 ಸೀಸನ್ಗಳಿಂದ ಟ್ರೋಫಿ ವಂಚಿತವಾಗಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಸೀಸನ್ನಲ್ಲಾದ್ರೂ ಚಾಂಪಿಯನ್ ಪಟ್ಟಕ್ಕೇರಬೇಕು ಅನ್ನೋ ಮಹದಾಸೆಯಲ್ಲಿದೆ. ಜೊತೆಗೆ ಭವಿಷ್ಯದ ದೃಷ್ಟಿಯಿಂದ ಬಲಿಷ್ಠ ನಾಯಕನನ್ನೇ ನೇಮಕ ಮಾಡುವ ಯೋಜನೆಯಲ್ಲಿದೆ. ಬಟ್ ಆರ್ಸಿಬಿ ಫ್ರಾಂಚೈಸಿ ತಲೆಯಲ್ಲಿರೋ ಮೊದಲ ಹೆಸ್ರೇ ವಿರಾಟ್ ಕೊಹ್ಲಿ. ಹೇಳಿ ಕೇಳಿ ವಿರಾಟ್ ಸ್ಟಾರ್ ಆಟಗಾರ. ಬೆಂಗಳೂರು ತಂಡದ ಐಕಾನ್ ಪ್ಲೇಯರ್. ಹೀಗಾಗಿ ಹರಾಜಿಗೂ ಮುನ್ನ ರಿಟೇನ್ ಮಾಡಿಕೊಳ್ಳುವ ನಂಬರ್ 1 ಆಟಗಾರ ವಿರಾಟ್. ಸದ್ಯ ನಾಯಕನಾಗಿರುವ ಫಾಫ್ ಡುಪ್ಲೆಸಿಸ್ ಅವರನ್ನು ಫ್ರಾಂಚೈಸಿ ಈ ಸಲ ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆ. ಯಾಕಂದ್ರೆ ಇನ್ನೂ ಮೂರು ವರ್ಷಗಳ ಕಾಲ ಮೆಗಾ ಹರಾಜು ನಡೆಯೋದಿಲ್ಲ. 40 ವರ್ಷದ ಫಾಫ್ರನ್ನ ಕೆಳಗಿಸಿಳಿ ಭಾರತೀಯ ಸ್ಟಾರ್ ಆಟಗಾರನನ್ನೇ ನಾಯಕನನ್ನಾಗಿ ಮಾಡಲು ಮುಂದಾಗಿದೆ. ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಮತ್ತು ಲಕ್ನೋ ಸೂಪರ್ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಅವರನ್ನು ಆರ್ಸಿಬಿ ಟಾರ್ಗೆಟ್ ಮಾಡಿದೆ. ಅದ್ರಲ್ಲೂ ಕನ್ನಡಿಗ ಕೆಎಲ್ ರಾಹುಲ್ಗೆ ಕ್ಯಾಪ್ಟನ್ಸಿ ರೇಸ್ನ ಮೊದಲ ಆಯ್ಕೆಯಾಗಿದ್ದಾರೆ. ಆದ್ರೆ ಲಕ್ನೋ ತಂಡದಿಂದ ಹೊರಬಿದ್ರೆ ರಾಹುಲ್ ಹರಾಜಿಗೆ ಬರಲಿದ್ದಾರೆ. ಈ ವೇಳೆ ಬಿಡ್ಡಿಂಗ್ನಲ್ಲಿ ರಾಹುಲ್ ಬೇರೆ ತಂಡದ ಪಾಲಾದ್ರೆ ಮುಂದೇನು ಅನ್ನೋ ಆತಂಕ ಇದೆ. ಇನ್ನು ಬೆಂಗಳೂರು ಫ್ರಾಂಚೈಸಿಗೆ ಇರೋ ಮತ್ತೊಂದು ಆಯ್ಕೆ ಎಂದರೆ ಮಾಜಿ ನಾಯಕ ವಿರಾಟ್ ಕೊಹ್ಲಿ. ವಿರಾಟ್ರನ್ನೇ ಮತ್ತೊಮ್ಮೆ ನಾಯಕತ್ವಕ್ಕೆ ಒಪ್ಪಿಸಿ ಉಳಿದ ಆಟಗಾರರನ್ನು ಖರೀದಿಸುವುದು ಉತ್ತಮ ಎಂದು ಫ್ರಾಂಚೈಸಿ ಮಾಲೀಕರು ಪ್ಲ್ಯಾನ್ ಮಾಡಿದ್ದಾರೆ. ವಿರಾಟ್ಗೆ ಮತ್ತೊಮ್ಮೆ ಕ್ಯಾಪ್ಟನ್ಸಿಗೆ ಒತ್ತಾಯಿಸೋಕೆ ಕಾರಣವೂ ಇದೆ. ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟ-20 ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಕಳೆದ ಬಾರಿ ಭಾರತ ತಂಡದ ನಾಯಕತ್ವದ ಒತ್ತಡದ ಕಾರಣದಿಂದಲೇ ಆರ್ಸಿಬಿ ಸಾರಥ್ಯ ತ್ಯಜಿಸಿದ್ರು. ಬಟ್ ಈಗ ಟೆಸ್ಟ್ ಮತ್ತು ಏಕದಿನ ಪಂದ್ಯ ಮಾತ್ರ ಆಡೋದ್ರಿಂದ ಮತ್ತೊಮ್ಮೆ ನೇತೃತ್ವ ತೆಗೆದುಕೊಳ್ಳುವಂತೆ ಮನವೊಲಿಕೆಗೆ ಮುಂದಾಗಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್ಸಿಬಿ ನಾಯಕತ್ವ ವಹಿಸಿಕೊಂಡರೆ ತಂಡದ ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಲಿದೆ.
ವಿರಾಟ್ ಕೊಹ್ಲಿ ಬೆಂಗಳೂರು ತಂಡಕ್ಕೆ ಮತ್ತೆ ಕ್ಯಾಪ್ಟನ್ ಆಗ್ಬೇಕು ಅನ್ನೋದು ಬರೀ ಅಭಿಮಾನಿಗಳ ಆಸೆ ಮಾತ್ರ ಅಲ್ಲ. ಫ್ರಾಂಚೈಸಿಯ ಒತ್ತಾಯವೂ ಅಲ್ಲ. ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ಸ್ ಕೂಡ ಇದನ್ನೇ ಹೇಳಿದ್ದಾರೆ. ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ಅಕಾಶ್ ಚೋಪ್ರಾ ಕೂಡ ಕೊಹ್ಲಿಯವ್ರನ್ನೇ ನಾಯಕನನ್ನಾಗಿ ಮಾಡುವಂತೆ ಫ್ರಾಂಚೈಸಿಗೆ ಸಲಹೆ ನೀಡಿದ್ದಾರೆ. ಮಾಲೀಕರು ಕೂಡ ರೆಡಿ ಇದ್ದಾರೆ. ಐಪಿಎಲ್ ಫ್ರಾಂಚೈಸಿಗಳ ಪೈಕಿ ಬೆಂಗಳೂರು ತಂಡವೇ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರೋ ತಂಡ. ಇಂಥ ತಂಡ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಅದೂ ಕೂಡ ವಿರಾಟ್ ಕೊಹ್ಲಿಗೋಸ್ಕರನಾದ್ರೂ ಕಪ್ ಗೆಲ್ಲಿ ಅಂತಾ ಫ್ಯಾನ್ಸ್ ಕೂಡ ಕೇಳಿ ಕೊಳ್ತಿದ್ದಾರೆ. ಯಾಕಂದ್ರೆ ವಿರಾಟ್ಗೆ ಬೇರೆ ಬೇರೆ ತಂಡಗಳಿಂದ ಕೋಟಿಗಳ ಆಫರ್ ಬಂದ್ರೂ ಕೂಡ ಹೋಗಿಲ್ಲ. ಐಪಿಎಲ್ ಇತಿಹಾಸದಲ್ಲಿ ಡೇ ಒನ್ನಿಂದ 17 ವರ್ಷಗಳ ಕಾಲ ಒಂದೇ ತಂಡದ ಪರ ಆಡಿದ ಆಟಗಾರ ಎಂಬ ದಾಖಲೆ ಕೂಡ ಕಿಂಗ್ ಕೊಹ್ಲಿ ಹೆಸರಿನಲ್ಲಿದೆ. ಸತತ 8 ಆವೃತ್ತಿಗಳಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದ ವಿರಾಟ್ ಒಮ್ಮೆಯೂ ಪ್ರಶಸ್ತಿಗೆ ಮುತ್ತಿಡೋಕೆ ಸಾಧ್ಯವಾಗಿಲ್ಲ. 17 ವರ್ಷಗಳಿಂದ ತಂಡಕ್ಕಾಗಿ ಆಡ್ತಿರೋ ಚಾಂಪಿಯನ್ ಪಟ್ಟಕ್ಕೇರೋ ಕನಸು ಕನಸಾಗೇ ಉಳಿದಿದೆ. ಪ್ರತೀ ಬಾರಿ ಆರ್ಸಿಬಿ ತಂಡ ಟೂರ್ನಿಯಿಂದ ಹೊರ ಬಿದ್ದಾಗ ವಿರಾಟ್ ಕೊಹ್ಲಿಗೆ ಕ್ರಿಕೆಟ್ ದಿಗ್ಗಜರೇ ಬೇರೆ ತಂಡ ಸೇರಿ ಅಂತಾ ಸಜೇಷನ್ ಕೊಡ್ತಾರೆ. ಹೀಗಾಗಿ ವಿರಾಟ್ರನ್ನೇ ಕ್ಯಾಪ್ಟನ್ ಮಾಡಿ ಅವ್ರ ನೇತೃತ್ವದಲ್ಲೇ ಟ್ರೋಫಿ ಗೆಲ್ಲೋ ಉದ್ದೇಶ ಮಾಲೀಕರದ್ದು. ಆದ್ರೆ ವಿರಾಟ್ ಕೊಹ್ಲಿ ಈ ಮನವಿಯನ್ನ ಒಪ್ಪಿಕೊಳ್ತಾರಾ? ಬೆಂಗಳೂರು ತಂಡವನ್ನ ಮುನ್ನಡೆಸ್ತಾರಾ ಅನ್ನೋದೇ ಈಗಿರುವ ಪ್ರಶ್ನೆ.