15 ಜನ್ರ ಟೀಂ.. 22 ಪ್ಲೇಯರ್ಸ್ ಫೈಟ್ – ಬಾಂಗ್ಲಾ ಟೆಸ್ಟ್ ಸರಣಿಗೆ ಯಾರೆಲ್ಲಾ ಆಯ್ಕೆ?
ರಾಹುಲ್ Vs ಪಂತ್.. ಯಾರಿಗೆ ಚಾನ್ಸ್?

15 ಜನ್ರ ಟೀಂ.. 22 ಪ್ಲೇಯರ್ಸ್ ಫೈಟ್ – ಬಾಂಗ್ಲಾ ಟೆಸ್ಟ್ ಸರಣಿಗೆ ಯಾರೆಲ್ಲಾ ಆಯ್ಕೆ?ರಾಹುಲ್ Vs ಪಂತ್.. ಯಾರಿಗೆ ಚಾನ್ಸ್?

ಅಂತರಾಷ್ಟ್ರೀಯ ಪಂದ್ಯಗಳಿಲ್ಲದೆ ರೆಸ್ಟ್ ಮೂಡ್​​ನಲ್ಲಿರೋ ಟೀಮ್ ಇಂಡಿಯಾ ಆಟಗಾರರು ಮುಂದಿನ ತಿಂಗಳು ಬಾಂಗ್ಲಾ ದೇಶದ ವಿರುದ್ಧ ಟೆಸ್ಟ್ ಸಿರೀಸ್ ಆಡಲಿದ್ದಾರೆ. ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆದ ಅವಮಾನವನ್ನ ಟೆಸ್ಟ್ ಸಿರೀಸ್ ಗೆಲ್ಲೋ ಮೂಲಕ ಕಮ್ ಬ್ಯಾಕ್ ಮಾಡೋ ಹುಮ್ಮಸ್ಸಿನಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಈ ವರ್ಷದ ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ನಂತರ ಭಾರತ ಆಡುತ್ತಿರುವ ಮೊದಲ ಟೆಸ್ಟ್ ಸರಣಿ ಇದು. ಮುಂದಿನ ಐದು ತಿಂಗಳಲ್ಲಿ ಭಾರತ 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಅಷ್ಟಕ್ಕೂ ಬಾಂಗ್ಲಾ ವಿರುದ್ಧದ ಸರಣಿ ಭಾರತಕ್ಕೆ ಯಾಕೆ ಮುಖ್ಯ? 15 ಜನರ ಆಯ್ಕೆಗಾಗಿ ರೇಸ್​​ನಲ್ಲಿ ಎಷ್ಟು ಆಟಗಾರರಿದ್ದಾರೆ? ಯಾವ ಸ್ಲಾಟ್​ಗಳಲ್ಲಿ ಪೈಪೋಟಿ ಹೆಚ್ಚಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಲಂಡನ್‌ ಬಿಟ್ಟ ಅನುಷ್ಕಾ ಶರ್ಮಾ? – ಸಿನಿಮಾಗೆ ಮರಳ್ತಾರಾ ಕೊಹ್ಲಿ ಪತ್ನಿ?

ಭಾರತ ಮತ್ತು ಬಾಂಗ್ಲಾ ನಡುವಿನ ಟೆಸ್ಟ್ ಸರಣಿಗೆ ಇನ್ನು ನಾಲ್ಕು ವಾರಗಳಷ್ಟೇ ಬಾಕಿ ಇದೆ. ರೋಹಿತ್​ ಪಡೆ ಸುಲಭವಾಗಿ ಬಾಂಗ್ಲಾ ಹುಲಿಗಳನ್ನ ಬೇಟೆಯಾಡೋ ಲೆಕ್ಕಾಚಾರದಲ್ಲಿದೆ. ಸೆಪ್ಟೆಂಬರ್​​ 19 ರಿಂದ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಟೆಸ್ಟ್ ಸರಣಿ​ ಆರಂಭಗೊಳ್ಳಲಿದೆ. ಎರಡು ಪಂದ್ಯಗಳ ಟೆಸ್ಟ್​​​​ ಕದನಕ್ಕೆ ಭಾರತ ಆತಿಥ್ಯ ವಹಿಸಿದ್ದು, ಆಯ್ಕೆ ಸಮಿತಿ ಇನ್ನಷ್ಟೇ ತಂಡವನ್ನ ಪ್ರಕಟಿಸಬೇಕಿದೆ. ಆದ್ರೆ ಟೀಮ್​ ಇಂಡಿಯಾದ ಸೆಲೆಕ್ಷನ್​ ಕಮಿಟಿಗೆ ದೊಡ್ಡ ತಲೆನೋವು ಸೃಷ್ಟಿಯಾಗಿದೆ. ಯಾಕಂದ್ರೆ ಇರೋ 15 ಸ್ಥಾನಗಳಲ್ಲಿ ಆಟಗಾರರ ದಂಡೇ ಇದೆ. ಬರೋಬ್ಬರಿ 22 ಪ್ಲೇಯರ್ಸ್ ರೇಸ್​​ನಲ್ಲಿದ್ದಾರೆ. ಸದ್ಯ ಸರಣಿಯ ತಂಡದಲ್ಲಿ 9 ಪ್ಲೇಯರ್ಸ್​ ಸ್ಲಾಟ್​​​​ ಫಿಕ್ಸ್ ಆಗಿದೆ. ಆದ್ರೆ, ಇನ್ನುಳಿದ 6 ಸ್ಥಾನಕ್ಕಾಗಿ 13 ಮಂದಿ ಮಧ್ಯೆ ಮೆಗಾ ಫೈಟ್​​ ಏರ್ಪಟ್ಟಿದೆ. ಇದು ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಹೆಡ್ ​ಕೋಚ್​ ಗೌತಮ್​ ಗಂಭೀರ್​​​, ಸೆಲೆಕ್ಷನ್​ ಕಮಿಟಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಯಾರನ್ನ ಸೆಲೆಕ್ಟ್ ಮಾಡ್ಬೇಕು ಯಾರನ್ನ ಕೈ ಬಿಡಬೇಕು ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಅಷ್ಟಕ್ಕೂ ಯಾವ್ಯಾವ ಆಟಗಾರರ ಹೆಸರು ಮುಂಚೂಣಿಯಲ್ಲಿದೆ ಅನ್ನೋದನ್ನೇ ಹೇಳ್ತೇನೆ ನೋಡಿ.

ಟೀಂ ಇಂಡಿಯಾ ಪ್ಲೇಯರ್ಸ್ ರೇಸ್!

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್​ ಶರ್ಮಾ ಓಪನರ್ ಆಗಿ ಕಣಕ್ಕಿಳಿಯೋದು ಫಿಕ್ಸ್.  ಆದ್ರೆ ರೋಹಿತ್​ ಜೊತೆಗಾರನಾಗಿ ಆಡಲು ಯಶಸ್ವಿ ಜೈಸ್ವಾಲ್​ ಹಾಗೂ ಶುಭ್​ಮನ್ ಗಿಲ್​​ ನಡುವೆ ಫೈಟ್​ ಇದೆ. ಜೈಸ್ವಾಲ್​​ ಹಿಂದಿನ ಸರಣಿಗಳಲ್ಲಿ ಉತ್ತಮವಾಗಿ ಆಡಿದ್ದು, ಆಯ್ಕೆಗಾರರ ನಂಬಿಕೆ ಉಳಿಸಿಕೊಂಡಿದ್ದಾರೆ. ಒಂದು ವೇಳೆ ಗಿಲ್​​​ಗೆ ಓಪನಿಂಗ್ ಸ್ಥಾನ ಮಿಸ್ ಆದ್ರೆ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇನ್ನು ಕಿಂಗ್ ಕೊಹ್ಲಿ ಕೂಡ ಬಾಂಗ್ಲಾ ಸಿರೀಸ್​ನಲ್ಲಿ ಕಣಕ್ಕಿಳಿಯಲಿದ್ದಾರೆ. 4ನೇ ಸ್ಲಾಟ್​ನಲ್ಲಿ ಎಂಟ್ರಿ ಕೊಡಲಿದ್ದಾರೆ. ನಂತರದ ಸ್ಥಾನದಲ್ಲಿ ಸರ್ಫರಾಜ್​​ ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್, ರಿಷಬ್ ಪಂತ್ ಹಾಗೂ ಶ್ರೇಯಸ್ ಅಯ್ಯರ್​ ನಡುವೆ ಪೈಪೋಟಿ ಇದೆ. ಈ ನಾವ್ಲರ ಪೈಕಿ 5ನೇ ಸ್ಲಾಟ್​ಗೆ ಯಾರನ್ನ ಆಯ್ಕೆ ಮಾಡಬೇಕು ? ಯಾರನ್ನ ಡ್ರಾಪ್ ಮಾಡ್ಬೇಕು ಅನ್ನೋದು ಆಯ್ಕೆ ಸಮಿತಿಗೆ ದೊಡ್ಡ ಸವಾಲಾಗಿದೆ. ಹಾಗೇ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್​​ ಸ್ಪಿನ್ ಆಲ್​ರೌಂಡರ್​ಗಳಾಗಿ, ಸ್ಪೆಷಲಿಸ್ಟ್​ ಸ್ಪಿನ್ನರ್​ ಆಗಿ ಆರ್​.ಅಶ್ವಿನ್​ ಸ್ಥಾನ ಪಡೆಯೋದು ಬಹುತೇಕ ಫಿಕ್ಸ್​​​. ಇವ್ರ ಹೊರತಾಗಿ ಕುಲ್​ದೀಪ್​​ ಯಾದವ್​​​​​​ ಹಾಗೂ ವಾಷಿಂಗ್ಟನ್ ಸುಂದರ್​​ ನಡುವೆ ಸ್ಥಾನಕ್ಕಾಗಿ ಫೈಟ್​​​ ಇದೆ. ಇಬ್ಬರಲ್ಲಿ ಯಾರನ್ನ ಫೈನಲ್ ಮಾಡಬೇಕು ಅನ್ನೋ ಕನ್ಫ್ಯೂಷನ್ ಇದೆ. ಇನ್ನು ಜಸ್​ಪ್ರೀತ್​​​ ಬೂಮ್ರಾ ಬಾಂಗ್ಲಾ ಸರಣಿಯಿಂದ ರೆಸ್ಟ್​ ಪಡೆಯೋ ಸಾಧ್ಯತೆ ಇದೆ. ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಹಾಗೇ ಅರ್ಷ್​ದೀಪ್ ಸಿಂಗ್​​, ಖಲೀಲ್​ ಅಹ್ಮದ್​​​, ಆವೇಶ್ ಖಾನ್​​, ಮುಕೇಶ್ ಕುಮಾರ್ ಹಾಗೂ ಆಕಾಶ್​ ದೀಪ್ ತಂಡದಲ್ಲಿ ಚಾನ್ಸ್ ಸಿಗೋ ವಿಶ್ವಾಸದಲ್ಲಿದ್ದಾರೆ. 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಭಾರತ ತನ್ನ ಅಗ್ರಸ್ಥಾನ ಗಟ್ಟಿಗೊಳಿಸಲು ಬಾಂಗ್ಲಾ ವಿರುದ್ಧದ ಸರಣಿ ಮಹತ್ವದ ಸರಣಿಯಾಗಿದೆ. ಅಲ್ಲದೆ, ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ಮೇಲ್ವಿಚಾರಣೆ ನಡೆಸುತ್ತಿರುವ ಮೊದಲ ಟೆಸ್ಟ್ ಸರಣಿ ಇದಾಗಿದೆ. ಚೆನ್ನೈನ ಎಂ. ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ಆಯೋಜಿಸಲಾಗಿದೆ.

ಸದ್ಯಕ್ಕೆ ಬಾಂಗ್ಲಾ ಎದುರಿನ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾವನ್ನ ಆಯ್ಕೆ ಮಾಡೋದೇ ಕಷ್ಟವಾಗ್ತಿದೆ. ಇದ್ರ ನಡುವೆ ಸೆಪ್ಟೆಂಬರ್ 5ರಿಂದ ದೇಶಿ ಕ್ರಿಕೆಟ್​ ಟೂರ್ನಿ ದುಲಿಫ್ ಟ್ರೋಫಿ ಆರಂಭಗೊಳ್ಳಲಿದೆ. ಟೆಸ್ಟ್​ ಆಡುವ ಬಹುತೇಕ ಆಟಗಾರರು ಇದ್ರಲ್ಲಿ ಆಡಲಿದ್ದಾರೆ. ಈ ಟೂರ್ನಿಯ ಪರ್ಫಾಮೆನ್ಸ್ ಆಧಾರದಲ್ಲಿ ಆಟಗಾರರಿಗೆ ಟೀಮ್​ ಇಂಡಿಯಾ ಡೋರ್​ ಓಪನ್​ ಆಗುವ ಸಾಧ್ಯತೆ ಇದೆ. ಇನ್ನು ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಸುಮಾರು 24 ವರ್ಷಗಳಿಂದ ಟೆಸ್ಟ್‌ ಪಂದ್ಯಗಳನ್ನು ಆಡುತ್ತಿವೆ. ಅಂದಿನಿಂದ ಇಲ್ಲಿಯವರೆಗೆ ಒಟ್ಟು 13 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿ ಆಗಿವೆ. ಭಾರತ 11 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 2 ಟೆಸ್ಟ್ ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. ಅಂದರೆ ಬಾಂಗ್ಲಾದೇಶ ತಂಡ ಕಳೆದ 24 ವರ್ಷಗಳಿಂದ ಭಾರತದ ವಿರುದ್ಧ ಕನಿಷ್ಠ ಒಂದು ಟೆಸ್ಟ್ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿಯೂ ಭಾರತವೇ ಗೆಲ್ಲುವ ಫೇವರೆಟ್ ಟೀಂ ಎನಿಸಿಕೊಂಡಿದೆ.

Shwetha M

Leave a Reply

Your email address will not be published. Required fields are marked *