ನಾಗಚೈತನ್ಯ ಮದುವೆ ಡೇಟ್ ಫಿಕ್ಸ್? – ಶೋಭಿತಾ ಮಧ್ಯೆ ಏಜ್‌ ಗ್ಯಾಪ್‌ ಇಷ್ಟೊಂದಾ?
ಡೆಸ್ಟಿನೇಷನ್‌ ವೆಡ್ಡಿಂಗ್‌ಗೆ ಭರ್ಜರಿ ಪ್ಲಾನ್!

ನಾಗಚೈತನ್ಯ ಮದುವೆ ಡೇಟ್ ಫಿಕ್ಸ್? – ಶೋಭಿತಾ ಮಧ್ಯೆ ಏಜ್‌ ಗ್ಯಾಪ್‌ ಇಷ್ಟೊಂದಾ?ಡೆಸ್ಟಿನೇಷನ್‌ ವೆಡ್ಡಿಂಗ್‌ಗೆ ಭರ್ಜರಿ ಪ್ಲಾನ್!

ನಾಗ ಚೈತನ್ಯ ಸೌತ್‌ ಬ್ಯೂಟಿ ಸಮಂತಾಗೆ ಡಿವೋರ್ಸ್‌ ನೀಡಿದ್ದಾರೆ.. ಇದೀಗ ಶೋಭಿತಾ ಧೂಳಿಪಾಲ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.. ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.. ನಿಶ್ಚಿತಾರ್ಥದ ಬಳಿಕ ಶೋಭಿತಾ ಹಾಗೂ ನಾಗಚೈತನ್ಯ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ.. ಇದೀಗ ನಿಶ್ಚಿತಾರ್ಥ ಆಯ್ತು.. ಮದುವೆ ಯಾವಾಗ ಅಂತಾ ಕೇಳ್ತಾ ಇದ್ದ ಫ್ಯಾನ್ಸ್‌ಗೆ ಒಂದು ಗುಡ್‌ ನ್ಯೂಸ್‌ ಸಿಕ್ಕಿದೆ.. ಶೋಭಿತಾ, ನಾಗಚೈತನ್ಯ ಮದುವೆ ಯಾವಾಗ ಅನ್ನೋ ವಿಚಾರ ಕೂಡ ರಿವೀಲ್‌ ಆಗಿದೆ.

ಮನಸಾರೆ ಮೆಚ್ಚಿ, ಪ್ರೀತಿಸಿ ಮದುವೆಯಾಗಿದ್ದ ಜೋಡಿ ಈಗ ದೂರವಾಗಿದ್ದಾರೆ.. ನಾಗಚೈತನ್ಯ,  ಸಮಂತಾಗೆ ಡಿವೋರ್ಸ್‌ ನೀಡಿದ್ದಾರೆ. ಸಮಂತಾಳನ್ನ ಸಂಪೂರ್ಣವಾಗಿ ಮರೆತಿರುವ ನಾಗಚೈತನ್ಯ, ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ಮದುವೆ ಯಾವಾಗ ಅಂತಾ ಕೇಳ್ತಿದ್ದ ಪ್ರಶ್ನೆಗೂ ಈಗ ಉತ್ತರ ಸಿಕ್ಕಿದೆ.

ಇದನ್ನೂ ಓದಿ: ಸಿಕ್ಸ್, ಫೋರ್​ಗಳೇ ಇಲ್ಲದ ಟಿ-20 – T-20 ವಿಶ್ವಕಪ್ ಕೆಡಿಸಿದ್ದೇ ಪಿಚ್

ಹೌದು, ಮೊನ್ನೆ ಮೊನ್ನೆಯಷ್ಟೇ .. ಉಂಗುರ ಬದಲಿಸಿಕೊಂಡ ನಾಗಚೈತನ್ಯ ಮತ್ತು ಶೋಭಿತಾ ಇದೇ ವರ್ಷ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸದ್ಯಕ್ಕೆ ಹೈದ್ರಾಬಾದ್‌ನಲ್ಲಿ ಗುಲ್ಲೆಬ್ಬಿದೆ. ನಾಗಾರ್ಜುನ ಒಡೆತನದ ಅನ್ನಪೂರ್ಣ ಸ್ಟುಡಿಯೋದಲ್ಲಿ ಮದುವೆಗೆ ಸಕಲ ತಯಾರಿಯನ್ನೂ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಇನ್ನೂ ಇದು ಡೆಸ್ಟಿನೇಶನ್ ವೆಡ್ಡಿಂಗ್ ಕಾಲ. ತಮ್ಮ ಇಷ್ಟದ ಸ್ಥಳದಲ್ಲಿ, ದೇಶದಲ್ಲಿ ಮದುವೆಯಾಗುವ ಕಾಲ. ಪ್ರಿಯಾಂಕ ಚೋಪ್ರಾ ಅವರಿಂದ ಹಿಡಿದು ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಪರಿಣಿತಿ ಚೋಪ್ರಾವರೆಗೆ ಅನೇಕರು ಈ ಪರಿಕಲ್ಪನೆಯಡಿಯಲ್ಲಿಯೇ ಮದುವೆಯಾಗಿದ್ದಾರೆ. ತಮ್ಮ ಅಭಿರುಚಿಗೆ ತಕ್ಕಂತೆ, ತಮ್ಮ ಇಷ್ಟದ ಸ್ಥಳದಲ್ಲಿ ಈ ಸೆಲೆಬ್ರಿಟಿಗಳು ಮದುವೆ ಆಗಿದ್ದಾರೆ. ಇದೀಗ ನಾಗಚೈತನ್ಯ ಮತ್ತು ಶೋಭಿತಾ ಕೂಡ ಇದೇ ಸಾಲಿಗೆ ಸೇರಲಿದ್ದಾರೆ ಅಂತಾ ಹೇಳಲಾಗ್ತಿದೆ. ಹೌದು, ಶೋಭಿತಾ ಹಾಗೂ ನಾಗಚೈತನ್ಯ ಡೆಸ್ಟಿನೇಶನ್ ವೆಡ್ಡಿಂಗ್ ಗೆ ಅಣಿಯಾಗಿದ್ದಾರೆ. ಹೈದ್ರಾಬಾದ್ ಅಥವಾ ರಾಜಸ್ಥಾನದಲ್ಲಿ ಮದುವೆಯ ಸ್ಥಳವನ್ನು ಹುಡುಕುತ್ತಿದ್ದಾರೆ ಅಂತಾ ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಭಾರತದಲ್ಲಿ ಸಾಧ್ಯವಾಗದೇ ಇದ್ದರೆ, ವಿದೇಶದಲ್ಲಿ ಇಬ್ಬರ ಮದುವೆ ನಡೆಯಲಿದೆ ಎಂದು ಮತ್ತೂ ಕೆಲವು ವೆಬ್ ಸೈಟ್‌ಗಳು ವರದಿ ಮಾಡಿವೆ. ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ನಾಗಚೈತನ್ಯ ಮತ್ತು ಶೋಭಿತಾ ಹಸೆಮಣೆ ಏರಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಇನ್ನೂ ನಾಗಚೈತನ್ಯ ಮತ್ತು ಶೋಭಿತಾ ದಾಂಪತ್ಯ ವಿಚಾರದಲ್ಲಿ ಈ ಹಿಂದೆ ಉತ್ತರ ಭಾರತದ ಖ್ಯಾತ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಕೂಡ ಭವಿಷ್ಯ ನುಡಿದಿದ್ದಾರೆ. 2025ರ ಮೊದಲಾರ್ಧದಲ್ಲಿ ಮದುವೆ ನಡೆದರೆ ಇಬ್ಬರು ಆದರ್ಶ ಸತಿ-ಪತಿಗಳಾಗಿ ಬದುಕುತ್ತಾರೆ, ಖುಷಿ ಖುಷಿಯಾಗಿರುತ್ತಾರೆ ಎಂದು ಹಿಂದೆ ಹೇಳಿರುವ ಹಿನ್ನೆಲೆ ಮಾರ್ಚ್‌ನಲ್ಲಿಯೇ ಮದುವೆ ಇಬ್ಬರ ಮದುವೆ ಮಾಡಲು ನಾಗಾರ್ಜುನ ಸಿದ್ಧರಾಗಿದ್ದಾರೆ ಎಂಬ ಸುದ್ದಿ ಕೂಡ ಸದ್ಯಕ್ಕೆ ಕೇಳಿ ಬರುತ್ತಿದೆ.

ಇನ್ನು ಶೋಭಿತಾ ಹಾಗೂ ನಾಗಚೈತನ್ಯ ಏಜ್ ಗ್ಯಾಪ್‌ ಬಗ್ಗೆ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ನಾಗಚೈತನ್ಯಗೆ ಈಗ 37 ವರ್ಷ.. ಶೋಭಿತಾಗೆ ಈಗ 32 ವರ್ಷ. ಇವರಿಬ್ಬರ ಮಧ್ಯೆ ಅಷ್ಟೊಂದು ಏಜ್‌ ಗ್ಯಾಪ್‌ ಇಲ್ಲ.. ಬರೀ ಐದು ವರ್ಷ ಮಾತ್ರ ಏಜ್‌ ಗ್ಯಾಪ್‌ ಇರೋದು.. ಹೀಗಾಗಿ ಇವರ ದಾಂಪತ್ಯ ಜೀವನದಲ್ಲಿ ಅಷೊಂದಾಗಿ ಸಮಸ್ಯೆ ಬರಲ್ಲ.. ಇವರಿಬ್ಬರು ಹೊಂದಾಣಿಕೆಯಿಂದ ಜೀವನ ನಡೆಸ್ತಾರೆ ಅಂತಾ ಫ್ಯಾನ್ಸ್‌ ಲೆಕ್ಕಾಚಾರ ಹಾಕಿದ್ದಾರೆ..

ಇನ್ನೂ.. ಇಬ್ಬರ ಕೈಯಲ್ಲಿ ಸದ್ಯಕ್ಕೆ ಅನೇಕ ಸಿನಿಮಾಗಳಿವೆ. ಅದರಲ್ಲಿಯೂ ಶೋಭಿತಾ ತಮ್ಮ ಕೆಲಸದ ಕಡೆ ತುಸು ಹೆಚ್ಚೇ ಗಮನ ಕೊಡುತ್ತಾ ಬಂದಿದ್ದಾರೆ. ಹೀಗಾಗಿ ಇಬ್ಬರು ಈಗಲೇ ಮದುವೆಯಾಗಲ್ಲ, ಚಿತ್ರರಂಗದ ಕೆಲಸಗಳನ್ನು ಮುಗಿಸಿಕೊಂಡು, ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು, ಮುಂದಿನ ವರ್ಷದ ಅಂತ್ಯದವರೆಗೆ ಇಬ್ಬರು ಮದುವೆಯಾಗಬಹುದು ಎಂಬ ಮಾತು ಕೂಡ ಇದೇ ಸಮಯದಲ್ಲಿ ಕೇಳಿ ಬರುತ್ತಿದೆ.

ಒಟ್ಟಿನಲ್ಲಿ ಶೋಭಿತಾ ಹಾಗೂ ನಾಗಚೈತನ್ಯ ಮದುವೆ ವಿಚಾರ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಇವರಿಬ್ಬರು ಯಾವಾಗ ಮದುವೆ ಆಗಲಿದ್ದಾರೆ ಅಂತಾ ಕಾಯ್ತಾ ಇದ್ದಾರೆ.

Shwetha M

Leave a Reply

Your email address will not be published. Required fields are marked *