ಸೀರಿಯಲ್ನಲ್ಲಿ ದೊಡ್ಡ ಟ್ವಿಸ್ಟ್!! – ಸ್ನೇಹ ಪಾತ್ರ ಬದಲಾಗುತ್ತಾ?
ಧಾರಾವಾಹಿಗೆ ಸಂಜನಾ ಬುರ್ಲಿ ಗುಡ್ಬೈ?

ಪುಟ್ಟಕ್ಕನ ಮಕ್ಕಳು ಸೀರಿಯಲ್ ಸದ್ಯ ರೋಚಕ ಘಟ್ಟ ತಲುಪಿದೆ.. ಪುಟ್ಟಕ್ಕಳಿಗೆ ಮಗಳು ಬದುಕಿರುವ ವಿಚಾರ ಗೊತ್ತಾಗಿದೆ. ಸಹನಾಳನ್ನ ಹುಡುಕಿಕೊಂಡು ಪುಟ್ಟಕ್ಕ ಬೆಂಗಳೂರಿಗೆ ಬಂದಿದ್ದಾಳೆ.. ಇತ್ತ ಸ್ನೇಹ ಕೂಡ ದೆಹಲಿಗೆ ಹೋಗಿದ್ದಾಳೆ.. ಈ ಬೆನ್ನಲ್ಲೇ ಸ್ನೇಹ ಪ್ರಾತ್ರ ಮಾಡುತ್ತಿರುವ ಸಂಜನಾ ಬುರ್ಲಿ ಈ ಪಾತ್ರಕ್ಕೆ ಗುಡ್ಬೈ ಹೇಳ್ತಾರಾ? ಈ ಪಾತ್ರಕ್ಕೆ ಬೇರೆ ನಟಿ ಎಂಟ್ರಿ ಕೊಡ್ತಾರಾ ಅನ್ನೋ ಪ್ರಶ್ನೆ ಎದುರಾಗಿದೆ. ಇದಕ್ಕೆ ಕಾರಣ ಸೀರಿಯಲ್ ಡೈರೆಕ್ಟರ್ ನಡೆ.. ಹೌದು, ಸೀರಿಯಲ್ನಲ್ಲಿ ಸ್ನೇಹ ಪಾತ್ರವನ್ನ ದೆಹಲಿಗೆ ಕಳುಹಿಸಿ, ಈಗ ಸೋಶಿಯಲ್ ಮೀಡಿಯಾದಲ್ಲಿ ನಟಿಯೊಬ್ಬರು ಬೇಕು ಅಂತಾ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್ಗೆ KL ಗುಡ್ ಬೈ? – RCB ಕ್ಯಾಪ್ಟನ್ಸಿ ಹಿಂಟ್ ಕೊಟ್ರಾ ರಾಹುಲ್?
ಪುಟ್ಟಕ್ಕನ ಮಕ್ಕಳು ಸೀರಿಯಲ್ಗೆ ಫಾನ್ ಬೇಸ್ ದೊಡ್ಡದಿದೆ. ಉಮಾಶ್ರೀ ಆಕ್ಟಿಂಗ್ಗೆ ಫ್ಯಾನ್ಸ್ ಫಿಧಾ ಆಗಿದ್ದಾರೆ.. ಒಬ್ಬ ತಾಯಿ ಹಾಗೂ ಮೂವರು ಹೆಣ್ಣು ಮಕ್ಕಳ ಬದುಕಿನ ಕಥಾ ಹಂದರವಿರುವ ಪುಟ್ಟಕ್ಕನ ಮಕ್ಕಳು ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿಯಾಗಿದೆ. ಸೀರಿಯಲ್ ಕತೆ ಕೂಡ ರೋಚಕ ತಿರುವು ಪಡೆದುಕೊಂಡಿದೆ.. ಹೊಸತನದ ಜೊತೆಗೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸದ್ಯ ಬಂಗಾರಮ್ಮನ ಬದಲು ಸಿಂಗಾರಮ್ಮನ ವರಸೆ ಜೋರಾಗಿದೆ. ಒಂದು ಕಡೆ ಸಹನಾ ಹೊಸ ಬದುಕು ಆರಂಭಿಸಿದ್ದಾಳೆ. ಮತ್ತೊಂದು ಕಡೆ ಪುಟ್ಟಕ್ಕ ಮಗಳನ್ನ ಹುಡುಕಿಕೊಂಡು ಬೆಂಗಳೂರಿಗೆ ಹೋಗಿದ್ರೆ, ಆಕೆಯ ಮೇಲೆ ಕಳ್ಳತನ ಆರೋಪ ಹೊರಿಸಲಾಗಿದೆ. ಇವೆಲ್ಲದ್ರ ಮಧ್ಯೆ ಸೀರಿಯಲ್ನಲ್ಲಿ ಏಕಾಏಕಿ ಸ್ನೇಹ ಐಪಿಎಸ್ ಪಾಸ್ ಆಗಿದ್ದು, ದೆಹಲಿಗೆ ಹೋಗಬೇಕು ಅಂತಾ ತೋರಿಸಲಾಗಿದೆ.. ಸ್ನೇಹ ದೆಹಲಿಗೆ ಹೋಗಿದ್ದು ಮಾತ್ರ ಸಾಕಷ್ಟು ಅಚ್ಚರಿ ಮೂಡಿಸಿದೆ.
ಹೌದು, ಸ್ನೇಹ ದೆಹಲಿಗೆ ಹೋಗುತ್ತಿರುವ ಬೆನ್ನಲ್ಲೇ ಸ್ನೇಹಾ ಪಾತ್ರಕ್ಕೆ ಹೊಸ ನಟಿಯ ಎಂಟ್ರಿ ಆಗಲಿದೆ ಅನ್ನೋ ಮಾತು ಕೇಳಿ ಬಂದಿದೆ. ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಈ ರೀತಿ ಬೇರೆ ಊರಿಗೆ ಹೋದಾಗ, ಅಪಘಾತ ಆದಾಗ ಪಾತ್ರಗಳ ಬದಲಾವಣೆ ಆಗುವುದು ಸಹಜ. ಹಾಗೆಯೇ ಇಲ್ಲಿಯೂ ಕೂಡ ಅದೇ ರೀತಿ ಮಾಡ್ತಾರಾ ಅಂತ ಕುತೂಹಲ ಶುರುವಾಗಿದೆ.. ಇದಕ್ಕೆ ಕಾರಣ ನಿರ್ದೇಶಕರ ನಡೆ.. ಕೆಲ ದಿನಗಳ ಹಿಂದೆ ಈ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಅವರು ಹೊಸ ಪ್ರಧಾನ ಪಾತ್ರಕ್ಕೆ 25 ವರ್ಷದ ಹುಡುಗಿಯರು ಬೇಕಾಗಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದರು. ಈ ಬೆನ್ನಲ್ಲೇ ಆರೂರು ಜಗದೀಶ್ ಅವರು ಹೊಸ ಪಾತ್ರವನ್ನು ಪರಿಚಯ ಮಾಡುತ್ತಿದ್ದಾರಾ? ಅಥವಾ ಬೇರೆ ಪಾತ್ರವನ್ನು ರಿಪ್ಲೇಸ್ ಮಾಡುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.
ಈ ಸೀರಿಯಲ್ನಲ್ಲಿ ಸ್ನೇಹ ಪಾತ್ರಕ್ಕೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಸ್ನೇಹ ಪಾತ್ರಧಾರಿ ಬದಲಾದರೆ ವೀಕ್ಷಕರು ತುಂಬ ಬೇಸರ ಮಾಡಿಕೊಳ್ಳುತ್ತಾರೆ. ಆದರೆ ಈ ಬಗ್ಗೆ ವಾಹಿನಿಯಾಗಲೀ, ಸಂಜನಾ ಬುರ್ಲಿ ಅವರಾಗಲೀ ಯಾವುದೇ ಮಾಹಿತಿ ಕೊಟ್ಟಿಲ್ಲ.