ಸಿಕ್ಸ್, ಫೋರ್​ಗಳೇ ಇಲ್ಲದ ಟಿ-20 – T-20 ವಿಶ್ವಕಪ್ ಕೆಡಿಸಿದ್ದೇ ಪಿಚ್
3 ಮೈದಾನಗಳು ಕಳಪೆ ಎಂದ ICC

ಸಿಕ್ಸ್, ಫೋರ್​ಗಳೇ ಇಲ್ಲದ ಟಿ-20 – T-20 ವಿಶ್ವಕಪ್ ಕೆಡಿಸಿದ್ದೇ ಪಿಚ್3 ಮೈದಾನಗಳು ಕಳಪೆ ಎಂದ ICC

ಈ ಬಾರಿ ಟಿ20 ವಿಶ್ವಕಪ್ ಟೀಮ್ ಇಂಡಿಯಾ ಗೆದ್ದಾಗಿದೆ. ಆದ್ರೆ, ಟಿ20 ಆಟ ಅಂದ್ರೇನೇ ಹೊಡಿಬಡಿ. ಫುಲ್ ಎಂಟರ್‌ಟೈನ್ ಮೆಂಟ್. 20 ಓವರ್‌ಗಳಲ್ಲಿ ಬ್ಯಾಟರ್ ಗಳ ಸಾಮರ್ಥ್ಯ, ಬ್ಯಾಟರ್‌ಗಳ ಪವರ್ ಹಿಟ್ಟಿಂಗ್ ಸಿಕ್ಸ್, ಫೋರ್ ಗಳನ್ನ ನೋಡೋದೇ ಮಜಾ. ಈ ಬಾರಿ ಟಿ20 ವಿಶ್ವಕಪ್ ನೋಡಿದವ್ರಿಗೆ ಈ ಮಜಾ ಸಿಕ್ಕಿದ್ದು ರೇರ್. ಹೊಡಿಬಡಿ ಆಟದಲ್ಲಿ ಸಿಕ್ಸ್ ಫೋರ್ ಬಿಡಿ. ಒಂದೊಂದು ರನ್ ಗಳಿಸಲು ಬ್ಯಾಟರ್‌ಗಳು ಪಟ್ಟಿರೋ ಶ್ರಮ ಅಷ್ಟಿಷ್ಟಲ್ಲ. ಇದಕ್ಕೆ ಮೈನ್ ರೀಸನ್ ಸ್ಟೇಡಿಯಂ ಅನ್ನೋದ್ರಲ್ಲಿ ನೋ ಡೌಟ್. ಕೊನೆಗೂ ಪ್ರೇಕ್ಷಕರು ಏನೆಲ್ಲಾ ಬೈಯ್ಕೊಂಡಿದ್ದಾರೋ ಅದೇ ನಿಜವಾಗಿದೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿ ನಡೆದ ಪಿಚ್‌ಗಳಿಗೆ ಐಸಿಸಿ ರೇಟಿಂಗ್ ಕೊಟ್ಟಿದೆ. ಅದ್ರಲ್ಲಿ ಮೂರು ಪಿಚ್‌ಗಳಿಗೆ ಸಿಕ್ಕಿದ್ದು ಕಳಪೆ ರೇಟಿಂಗ್. ಯಾವ ಪಿಚ್ ಹೇಗಿತ್ತು? ಐಸಿಸಿ ಹೇಳಿದ್ದೇನು ಅನ್ನೋ ಮಾಹಿತಿ ಇಲ್ಲಿದೆ.

ವಿಶ್ವಕಪ್ ನಡೆದ ಪಿಚ್‌ಗಳೇ ಕಳಪೆ  

ಟಿ20 ವಿಶ್ವಕಪ್ ಮುಕ್ತಾಯ ಕಂಡು 2 ತಿಂಗಳು ಆಗಿದೆ. ಇದಾದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪಿಚ್ ರೇಟಿಂಗ್‌ಗಳನ್ನು ಬಿಡುಗಡೆ ಮಾಡಿದೆ. ಎಲ್ಲಾ 52 ಪೂರ್ಣಗೊಂಡ ಪಂದ್ಯಗಳನ್ನು ಒಳಗೊಂಡಿರುವ ವರದಿಯಲ್ಲಿ ಮೂರು ಪಂದ್ಯಗಳ ಪಿಚ್‌ಗಳನ್ನು ಅತೃಪ್ತಿಕರ ಎಂದು ಪರಿಗಣಿಸಿದೆ. ಸೂಪರ್ 8 ಹಂತದ ಪಂದ್ಯಗಳನ್ನು ಆಯೋಜಿಸಿದ್ದ ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ ಪಿಚ್ ಅನ್ನು ಅತ್ಯಂತ ಕೆಟ್ಟ ಪಿಚ್ ಎಂದು ಪರಿಗಣಿಸಲಾಗಿದೆ. ಇಲ್ಲಿ ನಡೆದಿದ್ದ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ, ಭಾರತ ಮತ್ತು ಐರ್ಲೆಂಡ್ ಪಂದ್ಯಗಳ ಪಿಚ್ಗಳನ್ನು ‘ಅತೃಪ್ತಿಕರ’ ಎಂದು ಐಸಿಸಿ ರೇಟಿಂಗ್ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ 77 ರನ್ಗಳಿಗೆ ಆಲೌಟ್ ಆಗಿದ್ದರೆ, ಭಾರತದ ವಿರುದ್ಧ ಐರ್ಲೆಂಡ್ ಕೇವಲ 96 ರನ್ ಗಳಿಸಿತು. ಈ ಸ್ಟೇಡಿಯಂನ ಪಿಚ್ನಲ್ಲಿ ಗರಿಷ್ಠ ರನ್ ದಾಖಲಾದದ್ದು 137 ರನ್. ಕೆನಡಾ ಮತ್ತು ಐರ್ಲೆಂಡ್ ವಿರುದ್ಧ ಈ ಮೊತ್ತ ದಾಖಲಾಗಿತ್ತು. ಇನ್ನು ವೆಸ್ಟ್ ಇಂಡೀಸ್ನ ಟ್ರಿನಿಡಾಡ್ ಪಿಚ್ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಮತ್ತು ಅಫಘಾನಿಸ್ತಾನ ನಡುವಣ ಸೆಮಿಫೈನಲ್ ಪಂದ್ಯವನ್ನು ಕೂಡ ಅತೃಪ್ತಿಕರ ಎಂದು ಪರಿಗಣಿಸಿದೆ.

ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿನ ಪಿಚ್ ಬಗ್ಗೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ, ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರು ಅಂದೇ ಅಸಾಮಾಧಾನ ವ್ಯಕ್ತಪಡಿಸಿದ್ದರು. ಇದು ಕ್ರಿಕೆಟ್ ಆಡಲು ಸೂಕ್ತವಾಗಿಲ್ಲ ಎಂದು ಹೇಳಿದ್ದರು. ಜೊತೆಗೆ ಭಾರತ-ಐರ್ಲೆಂಡ್ ಪಂದ್ಯದ ವೇಳೆ ನಾಯಕ ರೋಹಿತ್ ಶರ್ಮಾ ಅವರು ಇಂಜುರಿ ಸಮಸ್ಯೆಗೂ ಒಳಗಾಗಿದ್ರು.

Shwetha M