ರಾಹುಲ್, ರೋಹಿತ್, ರಾಣಾ ಬೆಲೆ ಎಷ್ಟು? – IPL ಹರಾಜಿಗೆ ಈ ಮೂವರೇ ಟಾರ್ಗೆಟ್
ಫ್ರಾಂಚೈಸಿ ಮಾಲೀಕರ ಲೆಕ್ಕಾಚಾರ ಏನು?

ರಾಹುಲ್, ರೋಹಿತ್, ರಾಣಾ ಬೆಲೆ ಎಷ್ಟು? – IPL ಹರಾಜಿಗೆ ಈ ಮೂವರೇ ಟಾರ್ಗೆಟ್ಫ್ರಾಂಚೈಸಿ ಮಾಲೀಕರ ಲೆಕ್ಕಾಚಾರ ಏನು?

2025ರ ಐಪಿಎಲ್ ಈಗಾಗ್ಲೇ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದೆ. ಹರಾಜು ಪ್ರಕ್ರಿಯೆಯಲ್ಲಿ ಏನೆಲ್ಲಾ ನಿಯಮ ಇರಬೇಕು, ಎಷ್ಟು ಆಟಗಾರರ ರೀಟೇನ್, ಆರ್​ಟಿಎಂ ಬಳಕೆಗೆ ಅವಕಾಶ ಕೊಡ್ಬೇಕು ಅನ್ನೋ ಬಗ್ಗೆ ಚರ್ಚೆಯಾಗ್ತಿದೆ. ಫ್ರಾಂಚೈಸಿಗಳ ಬೇಡಿಕೆಗಳನ್ನ ಪರಿಶೀಲನೆ ಮಾಡ್ತಿರೋ ಬಿಸಿಸಿಐ ಅಂತಿಮ ನಿರ್ಧಾರಗಳನ್ನ ಶೀಘ್ರದಲ್ಲೇ ಘೋಷಣೆ ಮಾಡಲಿದೆ. ಇತ್ತ ಮಾಲೀಕರು ಕೂಡ ಯಾರನ್ನ ಕೈ ಬಿಡಬೇಕು, ಯಾರನ್ನ ತಂಡಕ್ಕೆ ಖರೀದಿ ಮಾಡ್ಬೇಕು ಅಂತಾ ಈಗಿನಿಂದಲೇ ಲೆಕ್ಕಾಚಾರ ಹಾಕ್ತಿದ್ದಾರೆ. ಅದ್ರಲ್ಲೂ ಎಲ್ಲಾ ಫ್ರಾಂಚೈಸಿ ಮಾಲೀಕರ ಕಣ್ಣು ಆ ಮೂವರ ಮೇಲೆಯೇ ನೆಟ್ಟಿದೆ. ಅಷ್ಟಕ್ಕೂ ಯಾರು ಆ ಆಟಗಾರರು? ಮಾಲೀಕರ ಪ್ಲ್ಯಾನ್ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಬೆಳ್ಳಿ ತೆರೆ ಮೇಲೆ ಯುವಿ ಬಯೋಪಿಕ್‌ – ಯುವರಾಜ್‌ ಪಾತ್ರದಲ್ಲಿ ಸ್ಟಾರ್‌ ನಟ!

ಐಪಿಎಲ್ ಬಿಡ್ಡಿಂಗ್ ಅಂದ್ರೇನೆ ಹಬ್ಬ. ಅದ್ರಲ್ಲೂ ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಹಿಂದಿನ ದಾಖಲೆಗಳೆಲ್ಲಾ  ಉಡೀಸ್ ಆಗೋ ಲಕ್ಷಣಗಳು ಕಾಣ್ತಿದೆ. ಯಾಕಂದ್ರೆ ಈ ಬಾರಿ ಬಿಡ್ಡಿಂಗ್‌ ಅಂಗಳಕ್ಕೆ ಸೂಪರ್ ಸ್ಟಾರ್ ಆಟಗಾರರೇ ಎಂಟ್ರಿ ನೀಡಲಿದ್ದಾರೆ. ಹೀಗಾಗಿ ಸಹಜವಾಗಯೇ ಕುತೂಹಲ ಹೆಚ್ಚಾಗಿದೆ. ಫ್ರಾಂಚೈಸಿಗಳ ಮಾಲೀಕರು ಭಾರತೀಯ ಆಟಗಾರರ ಮೇಲೆ ಹಣದ ಮಳೆ ಸುರಿಸೋಕೆ ರೆಡಿ ಮಾಡಿಕೊಳ್ತಿದ್ದಾರೆ. ಸ್ಟಾರ್ ಆಟಗಾರರನ್ನೇ ತಂಡಕ್ಕೆ ಸೆಳೆದು ಚಾಂಪಿಯನ್ ಪಟ್ಟಕ್ಕೇರೋದು ರಣತಂತ್ರ ರೂಪಿಸುತ್ತಿದ್ದಾರೆ. ಅದರಲ್ಲೂ ಈ ಮೂವರು ಆಟಗಾರರ ಬಿಡ್ಡಿಂಗ್​ನತ್ತಲೇ ಎಲ್ಲರ ಚಿತ್ತ ನೆಟ್ಟಿದೆ.

ಮೂವರ ಮೇಲೆ ಹಣದ ಮಳೆ!

ರೋಹಿತ್‌ ಶರ್ಮಾ. ಐಪಿಎಲ್ ಇತಿಹಾಸದಲ್ಲೇ ಒನ್ ಆಫ್ ದಿ ಬೆಸ್ಟ್ ಕ್ಯಾಪ್ಟನ್ & ಪ್ಲೇಯರ್. ಸದ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿರೋ ರೋಹಿತ್ ಮುಂದಿನ ಸೀಸನ್​ಗೆ ತಂಡ ಬಿಡೋ ಸಾದ್ಯತೆ ಇದೆ.  ಗುಜರಾತ್ ಟೈಟನ್ಸ್‌ನಿಂದ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್‌ ಮಾಡಿದ್ದ ಮುಂಬೈ, ನಾಯಕತ್ವವನ್ನು ನೀಡಿತ್ತು. ಇದರಿಂದ ರೋಹಿತ್‌ಗೆ ಅಸಮಾಧಾನಗೊಂಡಿದ್ರು. ಆದರೆ ನಂತರದ ಸಿಚುಯೇಶನ್ ತುಂಬಾನೇ ಬದಲಾಗಿದೆ.  ರೋಹಿತ್‌ ತಮ್ಮಲ್ಲಿ ಇನ್ನು ನಾಯಕತ್ವದ ಗುಣಗಳು ಇವೆ ಎಂಬುದನ್ನು ಟಿ20 ವಿಶ್ವಕಪ್‌ ಗೆಲ್ಲುವ ಮೂಲಕ ಸಾಬೀತು ಮಾಡಿ ತೋರಿಸಿದ್ದಾರೆ. ಹೀಗಾಗಿ ಅಂಬಾನಿ ಬ್ರಿಗೇಡ್ ಮತ್ತೆ ಕ್ಯಾಪ್ಟನ್ಸಿ ನೀಡಿದ್ರೂ ರೋಹಿತ್ ಒಪ್ಪಿಕೊಳ್ಳೋದು ಡೌಟ್ ಇದೆ. ಹಾಗೇನಾದ್ರೂ ಹರಾಜಿಗೆ ಬಂದಿದ್ದೇ ಆದಲ್ಲಿ ರೋಹಿತ್​ರನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಹಣದ ಹೊಳೆಯನ್ನು ಹರಿಸಲು ಮಾಲೀಕರು ರೆಡಿಯಾಗಿದ್ದಾರೆ.ಯಾಕಂದ್ರೆ ರೋಹಿತ್ ಸ್ಟಾರ್ ಪ್ಲೇಯರ್‌ ಆರಂಭಿಕರಾಗಿ ಕಣಕ್ಕೆ ಇಳಿಯುವುದಲ್ಲದೆ, ನಾಯಕರಾಗಿಯೂ ತಂಡಕ್ಕೆ ನೆರವಾಗಬಲ್ಲರು. ಹಾಗೇ ಮತ್ತೊಬ್ಬ ಆಟಗಾರ ಕನ್ನಡಿಗ ಕೆ.ಎಲ್. ರಾಹುಲ್‌. ಈ ಬಾರಿ ಎಲ್ಲರ ಚಿತ್ತ ಕದ್ದಿರುವ ಇನ್ನೋಬ್ಬ ಭಾರತೀಯ ಆಟಗಾರ. ಕಳೆದ ಆವೃತ್ತಿಯ ವೇಳೆ ಲಕ್ನೋ ಸೂಪರ್‌ ಜೈಂಟ್ಸ್‌ ಮಾಲೀಕರ ಹಾಗೂ ರಾಹುಲ್‌ ನಡುವೆ ಮಾತಿನ ಚಕಮಕಿ ನಡೆದಿತ್ತು. ಹೀಗಾಗಿ ಎಲ್‌ಎಸ್‌ಜಿ ಇವರನ್ನು ರಿಲೀಸ್‌ ಮಾಡಿದ್ದೇ ಆದಲ್ಲಿ ಫ್ರಾಂಚೈಸಿಗಳ ಮಾಲೀಕರು ಕೆಎಲ್ ಖರೀದಿಗೆ ಜಿದ್ದಿಗೆ ಬೀಳಲಿದ್ದಾರೆ. ರಾಹುಲ್‌ ಬಹು ಮುಖ ಪ್ರತಿಭೆ. ವಿಕೆಟ್‌ ಕೀಪರ್ ಆಗಿಯೂ ಬ್ಯಾಟಿಂಗ್‌ನಲ್ಲೂ ಆನೆ ಬಲ ತುಂಬ ಬಲ್ಲ ಪ್ಲೇಯರ್. ಹಾಗೇ ಹರಾಜಿಗೂ ಮುನ್ನವೇ ಸದ್ದು ಮಾಡ್ತಿರೋ ಮತ್ತೊಂದು ಹೆಸ್ರು ಹರ್ಷಿತ್ ರಾಣಾ. ಕೆಕೆಆರ್​ನ ಪ್ರಮುಖ ಆಟಗಾರನಾಗಿರುವ ಹರ್ಷಿತ್ ರಾಣಾಗೆ ಈ ಬಾರಿ ಕೋಲ್ಕತ್ತಾ  ನೈಟ್ ರೈಡರ್ಸ್ ಫ್ರಾಂಚೈಸಿ ಮಣೆ ಹಾಕುತ್ತದೋ ಇಲ್ಲವೋ ಇನ್ನು ಸ್ಪಷ್ಟ ಮಾಹಿತಿ ಇಲ್ಲ. ಹಾಗೇನಾದ್ರೂ ರಾಣಾ ಬಿಡ್‌ ಅಂಗಳಕ್ಕೆ ಎಂಟ್ರಿ ಕೊಟ್ರೆ ಕೋಟಿ ಕೋಟಿ ಕೊಳ್ಳೆ ಹೊಡೆಯಬಲ್ಲರು. ಹರ್ಷಿತ್ ರಾಣಾ ಕಳೆದ ಬಾರಿಯ ಐಪಿಎಲ್‌ನಲ್ಲಿ ಆಡಿದ 13 ಪಂದ್ಯಗಳಲ್ಲಿ 19 ವಿಕೆಟ್‌ ಪಡೆದು ಮಿಂಚಿದ್ದರು. ಹೀಗಾಗಿ ಇವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮಾಲೀಕರು ಬಾಜಿ ಕಟ್ಟಲಿದ್ದಾರೆ.

ಐಪಿಎಲ್ ಅಂದ್ರೆ ಹೊಡಿಬಡಿ ಟೂರ್ನಿ. ಭರ್ಜಿ ಎರಡು ತಿಂಗಳು ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡೋ ಲೀಗ್. ಜೊತೆಗೆ ಫ್ರಾಂಚೈಸಿಗಳಿಗೆ ಹಣದ ಹೊಳೆಯೇ ಹರಿದು ಬರುತ್ತೆ. ಅದ್ರಲ್ಲೂ ಸ್ಟಾರ್ ಆಟಗಾರರು ಇದ್ರಂತೂ ಫ್ಯಾನ್ಸ್ ಕ್ರೇಜ್ ಇನ್ನೂ ಜಾಸ್ತಿನೇ ಇರುತ್ತೆ. ಹೀಗಾಗಿ 2025ರ ಮೆಗಾ ಆಕ್ಷನ್​ಗೂ ಮುನ್ನ ಏನೆಲ್ಲಾ ರೂಲ್ಸ್ ಇರುತ್ತೆ..? ಯಾರೆಲ್ಲಾ ಹರಾಜಿಗೆ ಬರ್ತಾರೆ ಅನ್ನೋ ಮಾಹಿತಿ ಕಲೆ ಹಾಕುತ್ತಿದ್ದಾರೆ. ತಂಡದ ಸ್ಟ್ರೆಂಥ್ ಹೆಚ್ಚಿಸಲು ಸ್ಟಾರ್ಸ್ ಮೇಲೆ ಕೋಟಿ ಕೋಟಿ ಹಣ ಸುರಿಯೋಕೆ ರೆಡಿ ಆಗಿದ್ದಾರೆ.

Shwetha M