RCBಗೆ ಸಿಕ್ಸರ್ ಕಿಂಗ್ ರಿಂಕು? – ರಿಂಕು ಸೆಳೆದಿದ್ದೇ ವಿರಾಟ್ ಕೊಹ್ಲಿ
ಫಿನಿಶರ್ DK ಪ್ಲೇಸ್​ ಗೆ ಬೆಸ್ಟ್ ಚಾಯ್ಸ್

RCBಗೆ ಸಿಕ್ಸರ್ ಕಿಂಗ್ ರಿಂಕು? – ರಿಂಕು ಸೆಳೆದಿದ್ದೇ ವಿರಾಟ್ ಕೊಹ್ಲಿಫಿನಿಶರ್ DK ಪ್ಲೇಸ್​ ಗೆ ಬೆಸ್ಟ್ ಚಾಯ್ಸ್

ಸದ್ಯ ಕ್ರಿಕೆಟ್ ಲೋಕದಲ್ಲಿ ಹಾಟ್ ಟಾಪಿಕ್ ಅಂದ್ರೆ 2025ರ ಐಪಿಎಲ್. 18ನೇ ಆವೃತ್ತಿಯ ಕ್ರಿಕೆಟ್ ಆರಂಭಕ್ಕೂ ಮುನ್ನ ಹರಾಜು ನಿಯಮಗಳು ಸಾಕಷ್ಟು ಸದ್ದು ಮಾಡ್ತಿವೆ. ಈಗಾಗ್ಲೇ ಫ್ರಾಂಚೈಸಿಗಳ ಜೊತೆ ಸಭೆ ನಡೆಸಿರೋ ಬಿಸಿಸಿಐ ಅಂತಿಮ ರೂಪುರೇಷೆಗಳ ಸಿದ್ಧತೆಯಲ್ಲಿದೆ. ಎಷ್ಟು ಜನರನ್ನ ರೀಟೇನ್ ಮಾಡಿಕೊಳ್ಬೇಕು. ಹಾಗೇ ಎಷ್ಟು ಆಟಗಾರರ ಆರ್ಟಿಎಂಗೆ ಅವಕಾಶ ನೀಡ್ಬೇಕು ಅನ್ನೋ ಬಗ್ಗೆ ಚರ್ಚೆ ನಡೀತಿದೆ. 3+1 ಅಥವಾ 4+2 ರೂಲ್ಸ್ ಜಾರಿಯಾದ್ರೆ ಬಹುತೇಕ ಸ್ಟಾರ್ ಆಟಗಾರರು ಫ್ರಾಂಚೈಸಿಗಳಿಂದ ಹೊರ ಬೀಳಲಿದ್ದಾರೆ. ಹಾಗೇ ಹರಾಜಿಗೆ ಬರಲಿದ್ದಾರೆ. ಹೀಗೆ ಆಕ್ಷನ್ಗೆ ಬರೋ ಪ್ಲೇಯರ್ಸ್ ಯಾವ ತಂಡ ಸೇರ್ತಾರೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಿಗೆ ಇದೆ. ಇದೀಗ ಸಿಕ್ಸರ್ ಕಿಂಗ್ ಅಂತಾನೇ ಕರೆಸಿಕೊಳ್ತಿದ್ದ ರಿಂಕು ಸಿಂಗ್ ಅಚ್ಚರಿಯ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಏನದು ಸ್ಟೇಟ್ಮೆಂಟ್ ಅನ್ನೋ  ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಸ್ಟಾರ್ ಪ್ಲೇಯರ್ಸ್ ನಂಬಿ ಕೆಟ್ಟ RCB -ಮನೋಜ್ ಗತ್ತು ಇನ್ನಾದ್ರೂ ಗೊತ್ತಾಗುತ್ತಾ?

ಐಪಿಎಲ್ ಲೀಗ್ ನ 10 ಫ್ರಾಂಚೈಸಿಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿರೋವಷ್ಟು ಫ್ಯಾನ್ಸ್  ಕ್ರೇಜ್ ಇನ್ಯಾವ ತಂಡಕ್ಕೂ ಇಲ್ಲ. 17 ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಆಡ್ತಿರೋ ಬೆಂಗಳೂರು ತಂಡದ ಅಭಿಮಾನಿಗಳಿಗೆ ಇರೋ ಮಹದಾಸೆ ಅಂದ್ರೆ ಒಂದು ಸಲನಾದ್ರೂ ಕಪ್ ಗೆಲ್ಬೇಕು ಅನ್ನೋದು. ಹಾಗೇ ಬೇರೆ ಬೇರೆ ಫ್ರಾಂಚೈಸಿಗಳ ಆಟಗಾರರಿಗೂ ಕೂಡ ನಾವು ಒಂದು ಸಲನಾದ್ರೂ ಬೆಂಗಳೂರು ತಂಡದಲ್ಲಿ ಆಡ್ಬೇಕು ಅನ್ನೋ ಆಸೆ ಇಟ್ಕೊಂಡಿದ್ದಾರೆ. ಇದೀಗ ರಿಂಕು ಸಿಂಗ್ ಕೂಡ ತಮ್ಮ ಮನದಾಳವನ್ನ ಬಿಚ್ಚಿಟ್ಟಿದ್ದಾರೆ. ಹೌದು. ಸದ್ಯ ಐಪಿಎಲ್ 2025ರ ಮೆಗಾ ಹರಾಜಿಗಾಗಿ ಪ್ರಿಪರೇಷನ್ಸ್ ಸ್ಟಾರ್ಟ್ ಆಗಿದೆ. ಬಳಿಕ ಎಲ್ಲಾ ಫ್ರಾಂಚೈಸಿಗಳಿಗೆ ಇಂತಿಷ್ಟು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತೆ. ಸದ್ಯದ ಮಾಹಿತಿ ಪ್ರಕಾರ ಈ ಬಾರಿಯ ಹರಾಜಿಗೂ ಮುನ್ನ ಎಲ್ಲಾ ತಂಡಗಳಿಗೆ 4+2 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಅಂದರೆ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ನಾಲ್ವರನ್ನು ನೇರವಾಗಿ ರಿಟೈನ್ ಮಾಡಿಕೊಳ್ಳಬಹುದು. ಇನ್ನುಳಿದ ಇಬ್ಬರು ಆಟಗಾರರನ್ನು ಆರ್ಟಿಎಂ ಕಾರ್ಡ್ ಬಳಸಿ ಹರಾಜಿಗೆ ಬಿಡುಗಡೆ ಮಾಡಲು ಅವಕಾಶ ಸಿಗಲಿದೆ. ಹೀಗಾದಲ್ಲಿ ಮೆಗಾ ಹರಾಜಿಗೂ ಮುನ್ನ ಪ್ರತಿ ತಂಡಗಳಿಂದ 19 ಆಟಗಾರರು ಹೊರಬೀಳುವುದು ಖಚಿತ.

ಆರ್ ಸಿಬಿ ಪರ ಆಡುವುದು ಕನಸು ಎಂದ ರಿಂಕು ಸಿಂಗ್!

2024ರ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಪಟ್ಟಕ್ಕೇರಿತ್ತು. ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ತಂಡ ಟ್ರೋಫಿಯನ್ನ ತನ್ನದಾಗಿಸಿಕೊಂಡಿತ್ತು. ಹಾಲಿ ಚಾಂಪಿಯನ್ ತಂಡದ ಸ್ಫೋಟಕ ಆಟಗಾರ ರಿಂಕು ಸಿಂಗ್. ಇದೇ ರಿಂಕು ಸಿಂಗ್ ಈಗ ಆರ್ ಸಿಬಿಗೆ ಜಾಯ್ನ್ ಆಗೋ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಸ್ಪೋರ್ಟ್ಸ್ ತಕ್ ಚಾನೆಲ್ನ ಇಂಟರ್ವ್ಯೂನಲ್ಲಿ ಮಾತನಾಡಿರುವ ರಿಂಕು ಬಳಿ ಒಂದು ಪ್ರಶ್ನೆ ಕೇಳಲಾಗಿದೆ. ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ನಿಮ್ಮನ್ನು ರಿಟೈನ್ ಮಾಡಿಕೊಳ್ಳದಿದ್ದರೆ ಯಾವ ತಂಡದ ಪರ ಕಣಕ್ಕಿಳಿಯುತ್ತೀರಿ ಎಂಬ ಪ್ರಶ್ನೆ ಅದು. ಈ ಕುತೂಹಲಕಾರಿ ಪ್ರಶ್ನೆಗೆ ಕೆಕೆಆರ್ ದಾಂಡಿಗ ನೀಡಿದ ನೇರ ಉತ್ತರ RCB. ಕೆಕೆಆರ್ ತಂಡವು ನನ್ನನ್ನು ರಿಟೈನ್ ಮಾಡದಿದ್ದರೆ, ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವುದನ್ನು ಎದುರು ನೋಡುತ್ತಿದ್ದೇನೆ. ನನಗೆ ಆರ್ಸಿಬಿ ಪರ ಆಡಬೇಕೆಂಬ ಆಸೆಯಿದೆ. ಯಾಕಂದ್ರೆ ಅಲ್ಲಿ ವಿರಾಟ್ ಕೊಹ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿಯವರ ಅಪ್ಪಟ ಅಭಿಮಾನಿ ರಿಂಕು ಸಿಂಗ್!

ಅಷ್ಟಕ್ಕೂ ರಿಂಕು ಸಿಂಗ್ ಆರ್ಸಿಬಿಗೆ ಬರ್ತೇನೆ ಅನ್ನೋಕೆ ಮೇನ್ ರೀಸನ್ ಕಿಂಗ್ ವಿರಾಟ್ ಕೊಹ್ಲಿ. ವಿರಾಟ್ ಅಂದ್ರೆ ರಿಂಕುಗೆ ತುಂಬಾ ಪ್ರೀತಿ ಹಾಗೇ ಗೌರವ. ವಿರಾಟ್ರನ್ನೇ ಸ್ಪೂರ್ತಿಯಾಗಿಸಿಕೊಂಡಿರೋ ಆಟಗಾರ. ಅದೆಲ್ಲಕ್ಕಿಂತ ಒಬ್ಬ ಅಪ್ಪಟ ಅಭಿಮಾನಿ ಅಂತಾನೇ ಹೇಳ್ಬೋದು. ವಿರಾಟ್ ಜೊತೆ ಟೈಂ ಸಿಕ್ಕಾಗಲೆಲ್ಲಾ ಅವ್ರಿಂದ ಸಜೇಷನ್ಸ್ ಪಡೀತಾನೇ ಇರ್ತಾರೆ. ಅದ್ರಲ್ಲೂ ವಿರಾಟ್ ಕೊಹ್ಲಿಯವರು ಬಳಸೋ ಬ್ಯಾಟ್ ಅಂದ್ರೆ ರಿಂಕುಗೆ ಅಚ್ಚುಮೆಚ್ಚು. ಕಳೆದ ಐಪಿಎಲ್ ಸೀಸನ್ನಲ್ಲಿ ನೀವೆಲ್ಲಾ ನೋಡೇ ಇರ್ತೀರಾ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2 ತಂಡಗಳ ನಡುವಿನ ಕೊನೆಯ ಪಂದ್ಯದ ನಂತರ, ಆರ್‌ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೆಕೆಆರ್ನ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್‌ಗೆ ವಿಶೇಷ ಉಡುಗೊರೆಯಾಗಿ ಬ್ಯಾಟ್ ನೀಡಿದ್ದರು. ಪಂದ್ಯ ಮುಗಿದ ಮೇಲೆ ಡ್ರೆಸಿಂಗ್ ರೂಮ್ಗೆ ತೆರಳಿ ರಿಂಕು ಬ್ಯಾಟ್ ಪಡೆದಿದ್ರು. ಆದ್ರೆ ಪಂದ್ಯದಲ್ಲಿ ಸ್ಪಿನ್ನರ್ ವಿರುದ್ಧ ಆಡುವಾಗ ರಿಂಕು ಸಿಂಗ್ ಬ್ಯಾಟ್ ಮುರಿದು ಹೋಗಿತ್ತು. ಇದ್ರಿಂದ ನಿರಾಸೆಗೊಂಡ ರಿಂಕು ವಿರಾಟ್ ಬಳಿ ಮತ್ತೊಂದು ಬ್ಯಾಟ್ ನೀಡುವಂತೆ ದುಂಬಾಲು ಬಿದ್ದಿದ್ರು. ಹೇಗೆ ಬ್ಯಾಟ್ ಮುರಿದುಹೋಯ್ತು ಅನ್ನೋದನ್ನೂ ಎಕ್ಸ್ಪ್ಲೇನ್ ಮಾಡಿದ್ದರು. ಆದ್ರೆ ಕೊಂಚ ಗರಂ ಆದಂತೆ ಕಂಡು ಬಂದಿದ್ದ ವಿರಾಟ್, ನಿನಗೆ ಮತ್ತೊಂದು ಬ್ಯಾಟ್ ಕೊಟ್ರೆ ನಂತರದ ಪಂದ್ಯಗಳಲ್ಲಿ ನನಗೆ ತೊಂದರೆಯಾಗುತ್ತೆ ಅಂದಿದ್ರು. ಇಬ್ಬರ ಸಂಭಾಷಣೆಯ ವಿಡಿಯೋ ಸಾಕಷ್ಟು ವೈರಲ್ ಕೂಡ ಆಗಿತ್ತು.

2018ರಿಂದ ಕೆಕೆಆರ್ ಪರ ಆಡ್ತಿರುವ ಸಿಕ್ಸರ್ ಕಿಂಗ್ ರಿಂಕು!

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿರುವ ರಿಂಕು ಸಿಂಗ್ 2018 ರಿಂದ ಕೆಕೆಆರ್ ಪರ ಆಡುತ್ತಿದ್ದಾರೆ. ಅಲ್ಲದೆ ಕಳೆದ ಮೂರು ಹರಾಜಿನ ವೇಳೆಯೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಅವರನ್ನು ರಿಟೈನ್ ಮಾಡಿಕೊಂಡಿತ್ತು. ರಿಂಕು ಸಿಂಗ್ ಅಂದ್ರೆ ಪಟ್ ಅಂತಾ ನೆನಪಾಗೋದೇ ಅವ್ರ ಸಿಕ್ಸಸ್. ಐಪಿಎಲ್ 2023ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಯಶ್ ದಯಾಳ್ ಬೌಲಿಂಗ್ನಲ್ಲಿ ಸತತ ಐದು ಸಿಕ್ಸರ್ಗಳನ್ನು ಹೊಡೆಯುವ ಸಂಚಲನ ಮೂಡಿಸಿದ್ದರು. ಆ ಬಳಿಕ ಸಿಕ್ಸರ್ ಕಿಂಗ್ ಎಂದೇ ಕರೆಸಿಕೊಳ್ತಿದ್ದಾರೆ. ಆದ್ರೆ ಈ ಬಾರಿ ರಿಲೀಸ್ ಮಾಡೋ ಸಾಧ್ಯತೆ ಇದೆ. ಹೀಗಾಗಿ ತಂಡದಿಂದ ಹೊರಬಂದರೆ ರಿಂಕು ಖರೀದಿಗೆ ಇತರೆ ಫ್ರಾಂಚೈಸಿಗಳು ಮುಗಿಬೀಳುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅದಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಬೇಕೆಂಬ ಆಸೆಯನ್ನು ರಿಂಕು ಸಿಂಗ್ ಬಹಿರಂಗಪಡಿಸಿದ್ದಾರೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ರಿಂಕು ಕಾಣಿಸಿಕೊಂಡರೆ ಆರ್ಸಿಬಿ ಫ್ರಾಂಚೈಸಿ ಅವರ ಖರೀದಿಗಾಗಿ ಭರ್ಜರಿ ಪೈಪೋಟಿ ನಡೆಸೋ ಸಾಧ್ಯತೆ ಇದೆ. ಅದೂ ಅಲ್ದೇ ಅನುಭವಿ ದಿನೇಶ್ ಕಾರ್ತಿಕ್ ವಿದಾಯದ ನಂತರ ಆರ್ಸಿಬಿ ತಂಡಕ್ಕೆ ಫಿನಿಶರ್ ಪಾತ್ರ ನಿರ್ವಹಿಸುವ ಆಟಗಾರನ ಅವಶ್ಯಕತೆ ಇದೆ. ಹೀಗಾಗಿ ರಿಂಕು ಸಿಂಗ್ ಆರ್ಸಿಬಿಗೆ ಬಂದರೆ ಡಿಕೆ ಸ್ಥಾನವನ್ನು ತುಂಬಬಹುದು. ಅಲ್ಲದೆ ವಿರಾಟ್ ಕೊಹ್ಲಿಯೊಂದಿಗೆ ರಿಂಕು ಉತ್ತಮ ಸ್ನೇಹವನ್ನು ಸಂಪಾದಿಸಿದ್ದು, ಇದು ಕೂಡ ತಂಡಕ್ಕೆ ಅನುಕೂಲಕರವಾಗಿರಲಿದೆ.

ಬೆಸ್ಟ್ ಫಿನಿಶರ್ ಆಗಿದ್ರೂ ಸಂಭಾವನೆ ಬರೀ 55 ಲಕ್ಷ ರೂಪಾಯಿ!

ರಿಂಕು ಸಿಂಗ್ ಎಂತಹ ಕ್ವಾಲಿಟಿ ಆಟಗಾರ ಅನ್ನೋದು ಎಲ್ಲಾ ಅಭಿಮಾನಿಗಳಿಗೂ ಗೊತ್ತಿದೆ. ಕೋಟಿ ಕೋಟಿ ಪಡೆದು ಫ್ಲಾಪ್ ಶೋ ನೀಡೋ ಆಟಗಾರರಿಗಿಂತ ರಿಂಕು ಎಷ್ಟೋ ಬೆಟರ್. ಆದ್ರೆ ಐಪಿಎಲ್ನಲ್ಲಿ ಇವ್ರ ಸಂಭಾವನೆ ನಿಜಕ್ಕೂ ಕೂಡ ತೀರಾ ಕಡಿಮೆ ಇದೆ. 2018ರಲ್ಲಿ ಕೋಲ್ಕತ್ತಾ ಫ್ರಾಂಚೈಸಿ ರಿಂಕು ಸಿಂಗ್ ಅವರನ್ನು 80 ಲಕ್ಷ ರೂಪಾಯಿಗೆ ಖರೀದಿಸಿತ್ತು. ಅಂದಿನಿಂದ ರಿಂಕು ಕೆಕೆಆರ್ ಪರ ಆಡುತ್ತಿದ್ದಾರೆ. 2022ರ ಮೆಗಾ ಹರಾಜಿನಲ್ಲಿ, ಅವರ ಬೆಲೆ ಸ್ವಲ್ಪ ಕಡಿಮೆ ಆಗಿದೆ. KKR ಅವರನ್ನು 55 ಲಕ್ಷಕ್ಕೆ ಖರೀದಿ ಮಾಡಿತ್ತು. ರಿಂಕು ಇಲ್ಲಿಯವರೆಗೆ 45 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. 40 ಇನ್ನಿಂಗ್ಸ್ಗಳಲ್ಲಿ 30.79 ಸರಾಸರಿ ಮತ್ತು 143.34 ಸ್ಟ್ರೈಕ್ ರೇಟ್ನಲ್ಲಿ 893 ರನ್ ಗಳಿಸಿದ್ದಾರೆ. 4 ಅರ್ಧ ಶತಕ ಕೂಡ ಸೇರಿದ್ದು, 67 ಅತ್ಯಧಿಕ ರನ್ ಆಗಿದೆ.

ಲಂಕಾ ವಿರುದ್ಧ ಬೌಲಿಂಗ್ ನಲ್ಲೂ ಮಿಂಚಿದ್ದ ರಿಂಕು!

ಟೀಂ ಇಂಡಿಯಾದಲ್ಲೂ ಸಾಕಷ್ಟು ಸದ್ದು ಮಾಡ್ತಿರುವ ರಿಂಕು 2024ರ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆದಿದ್ರು. ಆದ್ರೆ ನಾಲ್ವರು ಮೀಸಲು ಆಟಗಾರರಲ್ಲಿ ಒಬ್ಬರಾಗಿದ್ದ ಕಾರಣಕ್ಕೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಬಳಿಕ ಜುಲೈ ತಿಂಗಳಲ್ಲಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ರಿಂಕು ಕೊನೆಯದಾಗಿ ಭಾರತದ ಪರ ಆಡಿದ್ದರು. ಮೂರನೇ ಟಿ20 ಪಂದ್ಯದಲ್ಲಿ ಎರಡು ವಿಕೆಟ್ ಪಡೆದ ರಿಂಕು, ನಾನು ಬೌಲಿಂಗ್ ಮೂಲಕವೂ ತಂಡಕ್ಕೆ ಕೊಡುಗೆ ನೀಡಬಹುದು ಎಂದು ಎಲ್ಲರಿಗೂ ತೋರಿಸಿಕೊಟ್ಟಿದ್ರು. ಆದ್ರೀಗ ಸೆಪ್ಟೆಂಬರ್ 5 ರಂದು ಪ್ರಾರಂಭವಾಗಲಿರುವ 2024ರ ದುಲೀಪ್ ಟ್ರೋಫಿಯಲ್ಲಿ ಸ್ಥಾನ ಪಡೆದಿಲ್ಲ. ತಾನು ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿಲ್ಲ, ಹೀಗಾಗಿ ಬಿಸಿಸಿಐ ಘೋಷಿಸಿದ ನಾಲ್ಕು ತಂಡಗಳಲ್ಲಿ ನನ್ನನ್ನು ಆಯ್ಕೆ ಮಾಡಿಲ್ಲ ಎಂದು ರಿಂಕು ಹೇಳಿಕೊಂಡಿದ್ದಾರೆ. ಅದೇನೇ ಇದ್ರೂ ರಿಂಕು ಸಿಂಗ್ ಒಬ್ಬ ಅದ್ಭುತ ಆಟಗಾರ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದೀಗ ಆರ್ಸಿಬಿಗೆ ಆಡ್ಬೇಕು ಅನ್ನೋ ಆಸೆಯನ್ನ ಅವ್ರೇ ಹೇಳಿಕೊಂಡಿದ್ದಾರೆ.

Shwetha M

Leave a Reply

Your email address will not be published. Required fields are marked *