ಸ್ಟಾರ್ ಪ್ಲೇಯರ್ಸ್ ನಂಬಿ ಕೆಟ್ಟ RCB -ಮನೋಜ್ ಗತ್ತು ಇನ್ನಾದ್ರೂ ಗೊತ್ತಾಗುತ್ತಾ?
ಕನ್ನಡಿಗನಿಗೆ ಬೆಂಚ್ ಬಿಟ್ಟು ಚಾನ್ಸ್ ಕೊಡ್ತಾರಾ?

ಸ್ಟಾರ್ ಪ್ಲೇಯರ್ಸ್ ನಂಬಿ ಕೆಟ್ಟ RCB -ಮನೋಜ್ ಗತ್ತು ಇನ್ನಾದ್ರೂ ಗೊತ್ತಾಗುತ್ತಾ?ಕನ್ನಡಿಗನಿಗೆ ಬೆಂಚ್ ಬಿಟ್ಟು ಚಾನ್ಸ್ ಕೊಡ್ತಾರಾ?

ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ಯಾನ್ಸ್ಗೆ ಇರೋ ಎರಡು ಬೇಡಿಕೆ ಅಂದ್ರೆ ಒಂದು ಸಲನಾದ್ರೂ ಕಪ್ ಗೆಲ್ಲಬೇಕು ಅನ್ನೋದು. ಮತ್ತೊಂದು ನಮ್ಮ ಕನ್ನಡಿಗರಿಗೆ ಅವಕಾಶ ಕೊಡಿ ಅನ್ನೋದು. ಬೆಂಗಳೂರು ತಂಡ ಮೊದ್ಲಿಂದಲೂ ಸ್ಟಾರ್ ಪ್ಲೇಯರ್ಗಳನ್ನೇ ತಲೆ ಮೇಲೆ ಹೊತ್ತು ಮೆರೆಸುತ್ತಿದೆ. ಬ್ಯಾಕ್ ಟು ಬ್ಯಾಕ್ ಫ್ಲ್ಯಾಪ್ ಶೋ ನೀಡಿದ್ರೂ ಚಾನ್ಸ್ ಮೇಲೆ ಚಾನ್ಸ್ ಕೊಡ್ತಾರೆ. ಬಟ್ ನಮ್ಮ ಲೋಕರ್ ಹುಡುಗರಿಗೆ ಮಾತ್ರ ಅವಕಾಶ ಕೊಡಲ್ಲ. ಅದ್ರಲ್ಲೂ ನಮ್ಮ ಕನ್ನಡಿಗರು ಅಂದ್ರೆ ಇನ್ನೂ ಅಸಡ್ಡೆ. ಆದ್ರೀಗ ನಮ್ಮ ಕನ್ನಡಿಗರ ಪವರ್ ಏನು ಅಂತಾ ಗೊತ್ತಾಗ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಹಾರಾಜ ಟ್ರೋಫಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಫ್ಯಾನ್ಸ್ಗೂ ಕನ್ನಡಿಗರ ಬೊಂಬಾಟ್ ಬ್ಯಾಟಿಂಗ್ ಸಖತ್ ಕಿಕ್ ನೀಡ್ತಿದೆ. ಇದೇ ಮಹಾರಾಜ ಟ್ರೋಫಿಯಿಂದಾಗಿಯೇ ಆರ್ಸಿಬಿ ಫ್ರಾಂಚೈಸಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅದಕ್ಕೆ ಕಾರಣ ಮನೋಜ್ ಬಾಂಡಗೆ. ರಾಯಚೂರು ಜಿಲ್ಲೆಯ ಸಿಂಧನೂರಿನ ಹುಡುಗ ಈ ಮನೋಜ್ ಬಾಂಡಗೆ. ಸಿಡಿಲ ಹೊಡೆತಗಳ ಆಟಗಾರ. ಮನೋಜ್ ಬಾಂಡಗೆ ವಿಚಾರದಲ್ಲೇ ಫ್ಯಾನ್ಸ್ ಆರ್ಸಿಬಿ ವಿರುದ್ಧ ತಿರುಗಿಬಿದ್ದಿದ್ದಾರೆ. ಅಷ್ಟೇ ಅಲ್ಲ, ಆರ್ಸಿಬಿಗೆ ಒಳ್ಳೇ ಮಾತಲ್ಲೇ ಒಂದು ರಿಕ್ವೆಸ್ಟ್ ಕೂಡಾ ಮಾಡ್ತಿದ್ದಾರೆ. ಏನದು ಮನವಿ ಅನ್ನೋ ಮಾಹಿತಿ ಇಲ್ಲಿದೆ.

ಮನೋಜ್ ಬಾಂಡಗೆ ಬೊಂಬಾಟ್ ಆಟ

ಮಹಾರಾಜ ಟಿ20 ಟೂರ್ನಿಯಲ್ಲಿ ಕರ್ನಾಟಕದ ಆಲ್ರೌಂಡರ್ ಮನೋಜ್ ಬಾಂಡಗೆ ಆರ್ಭಟಿಸ್ತಿದ್ದಾರೆ. KSCA ನಡೆಸ್ತಿರುವ ಟೂರ್ನಿಯಲ್ಲಿ ಮನೋಜ್ ಬಾಂಡಗೆ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಮೈಸೂರು ವಾರಿಯರ್ಸ್ ಪರ ಯಂಗ್ ಗನ್ ಮನೋಜ್ ಬಾಂಡಗೆ ಕಣಕ್ಕಿಳಿದಿದ್ದಾರೆ. ಶಿವಮೊಗ್ಗ ಎದುರಿನ ಮೊದಲ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿದು ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ರು. ಜಸ್ಟ್ 16 ಎಸೆತಗಳಲ್ಲೇ 4 ಸಿಕ್ಸರ್ ಒಳಗೊಂಡ ಅಜೇಯ 42 ರನ್ ಸಿಡಿಸಿದ್ರು. 262.50 ಭಯಾನಕ ಸ್ಟ್ರೈಕ್ರೇಟ್ನಲ್ಲಿ ಆಡಿದ್ರು. ಬೆಂಗಳೂರು ಬ್ಲಾಸ್ಟರ್ಸ್ ಎದುರಿನ 2ನೇ ಪಂದ್ಯದಲ್ಲೂ ಅದೇ ಬ್ಯಾಟಿಂಗ್ ಧಮಾಕ ತೋರಿದ್ರು. ಈ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಬಾಂಡಗೆ 33 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಒಳಗೊಂಡ 58 ರನ್ ಚಚ್ಚಿದರು. ಆರ್ಸಿಬಿ ಆಟಗಾರನ ಈ ಪವರ್ ಫುಲ್ ಬ್ಯಾಟಿಂಗ್ಗೆ ಮನಸೋತ ಫ್ಯಾನ್ಸ್, ಇದೀಗ ಆರ್ಸಿಬಿ ವಿರುದ್ಧ ಸಿಡಿದೆದ್ದಿದ್ದಾರೆ. ಜೊತೆಗೆ ಆರ್ಸಿಬಿ ಮ್ಯಾನೇಜ್ಮೆಂಟ್ ಗೆ ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ. ಅದ್ಭುತ ಆಟಗಾರನನ್ನ ಎರಡು ಸೀಸನ್ಗಳ ಕಾಲ ಆರ್ಸಿಬಿ ಫ್ರಾಂಚೈಸಿ ನಡೆಸಿಕೊಂಡ ರೀತಿಗೆ ಫ್ಯಾನ್ಸ್ ಕಿಡಿಕಾರ್ತಿದ್ದಾರೆ. ಮನೋಜ್ ಬಾಂಡೆಗೆ ಆರ್ಸಿಬಿ ಪರ ಬೆಂಚ್ ಬಿಸಿ ಮಾಡಲಷ್ಟೇ ಸೀಮಿತವಾಗಿ ಹೋಗಿದ್ದರು. ಬಾಂಡಗೆ ಅಬ್ಬರದ ಆಟದ ಬಳಿಕ ಟೀಮ್ ಇಂಡಿಯಾ ಮಾಜಿ ಆಟಗಾರ ದೊಡ್ಡ ಗಣೇಶ್, ಆರ್ಸಿಬಿ ನಡೆಯನ್ನ ಪ್ರಶ್ನಿಸಿದ್ದಾರೆ. ಮನೋಜ್ ಓರ್ವ ಕ್ಲೀನ್ ಹಿಟ್ಟಿಂಗ್ ಸ್ಟ್ರೈಕರ್.  ಮತ್ತೊಂದು ಫ್ರಾಂಚೈಸಿ ಆತನಿಗೆ ಅವಕಾಶ ನೀಡುವ ನಂಬಿಕೆ ನನಗೆ ಇದೆ ಎಂದು ಹೇಳಿದ್ದಾರೆ ದೊಡ್ಡ ಗಣೇಶ್. ಬಾಂಡಗೆ ಬಗ್ಗೆ ಇನ್ನೂ ಒಂದು ಇಂಟ್ರಸ್ಟಿಂಗ್ ವಿಚಾರ ಹೇಳಲೇಬೇಕು. ಲೋವರ್ ಆರ್ಡರ್ನಲ್ಲಿ ವಿಕೆಟ್ ಮೇಲೆ ವಿಕೆಟ್ ಬೀಳ್ತಾ ಹೋದಾಗ ಗೇಮ್ ಚೇಂಜ್ ಮಾಡೋದ್ರಲ್ಲೂ ಮನೋಜ್ ಪಂಟರ್.  ಫಿಯರ್ ಲೆಸ್ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರೋ ಈ ಕನ್ನಡಿಗನಿಗೆ, ಆರ್ಸಿಬಿಯ ಮ್ಯಾಚ್ ವಿನ್ನರ್ ಆಗಬಲ್ಲ ತಾಕತ್ತು ಇದೆ.

ಪ್ರತಿ ಸೀಸನ್ನಲ್ಲೂ ಒಂದಿಲ್ಲೊಂದು ತಪ್ಪು ಮಾಡೋ ಆರ್ಸಿಬಿ, ಮುಂದಿನ ಸೀಸನ್ನಲ್ಲಾದರೂ ಮನೋಜ್ ಬಾಂಡಗೆ ವಿಚಾರದಲ್ಲಿ ಯೋಚನೆ ಮಾಡಬೇಕು. ಟ್ಯಾಲೆಂಟೆಡ್ ಆಟಗಾರರನ್ನ ಬಿಟ್ಟು, ಸ್ಟಾರ್ ಗಿರಿಯ ಹಿಂದೆ ಹೋದ್ರೆ ನೋ ಯೂಸ್. ಯಾರೋ ಕೆಲಸಕ್ಕೆ ಬಾರದ ಆಟಗಾರರನ್ನು ಬೆಳೆಸುವ ಬದಲು ನಮ್ಮ ಕನ್ನಡಿಗ, ಸಿಡಿಲಬ್ಬರದ ಬ್ಯಾಟರ್ ಮನೋಜ್ ನನ್ನ ಬೆಳೆಸಿದ್ದರೆ ಇಷ್ಟೊತ್ತಿಗೆ ಆರ್ಸಿಬಿ ತಂಡಕ್ಕೆ ಆಸ್ತಿಯಾಗುತ್ತಿದ್ದ. ಹೀಗಾಗಿ ಫ್ಯಾನ್ಸ್ ಕೂಡಾ ಆರ್ ಸಿಬಿ ಟೀಮ್ ಮ್ಯಾನೇಜ್ಮೆಂಟ್ ಹತ್ರ ಒಂದ್ ರಿಕ್ವೆಸ್ಟ್ ಮಾಡಿಕೊಳ್ತಿದ್ದಾರೆ. ದಯವಿಟ್ಟು ಈ ಮನೋಜ್ ಭಾಂಡಗೆಯನ್ನು ತಂಡದಲ್ಲಿ ಉಳಿಸಿಕೊಳ್ಳಬೇಡಿ.. ನೀವು ಅವನನ್ನು ತಂಡದಿಂದ ರಿಲೀಸ್ ಮಾಡಿದರೆ, ಇನ್ಯಾವುದೋ ತಂಡವನ್ನು ಸೇರಿಕೊಳ್ಳುತ್ತಾನೆ. ಅಲ್ಲಿ ಆತನ ಪ್ರತಿಭೆಗೆ ಬೆಲೆ ಸಿಕ್ಕೇ ಸಿಗುತ್ತದೆ ಅಂತಿದ್ದಾರೆ. ಸೋ ಇನ್ನಾದ್ರೂ ಬೆಂಗಳೂರು ಫ್ರಾಂಚೈಸಿ ಬುದ್ಧಿ ಕಲೀಬೇಕಿದೆ.

Shwetha M

Leave a Reply

Your email address will not be published. Required fields are marked *