ವಾರ್ 2 ಚಿತ್ರೀಕರಣದ ಮೊದಲ ದಿನವೇ ಜೂ. ಎನ್‌ಟಿಆರ್ ಎಡವಟ್ಟು!! – ಚಿತ್ರ ತಂಡಕ್ಕೆ ದೊಡ್ಡ ನಷ್ಟ
ಜ್ಯೂನಿಯರ್ ಎನ್‌ಟಿಆರ್ ತೆಲುಗು ಚಿತ್ರರಂಗದ ಬಹು ಬೇಡಿಕೆಯ ನಟ. ವಾರ್ 2 ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಮುಂದಿನ ವರ್ಷವೇ ವಾರ್ 2 ಸಿನಿಮಾ ತೆರೆಗೆ ಅಪ್ಪಳಿಸಲಿದೆ ಎಂದು ಹೇಳಲಾಗುತ್ತಿತ್ತು. ಆದ್ರೀಗ ಮುಂದಿನ ವರ್ಷ ಸಿನಿಮಾ ರಿಲೀಸ್ ಆಗೋದು ಡೌಟ್ ಅಂತಾ ಹೇಳಲಾಗುತ್ತಿದೆ. ಯಾಂಕದ್ರೆ ವಾರ್ 2 ಮೊದಲ ದಿನವೇ ದೊಡ್ಡ ಎಡವಟ್ಟು ಆಗಿದೆ.
ಇದನ್ನೂ ಓದಿ: ರಕ್ಷಾ ಬಂಧನದ ಇತಿಹಾಸ ಏನು ಗೊತ್ತಾ? – ರಾಖಿ ಕಟ್ಟೋ ಮುನ್ನ ಈ ವಿಚಾರ ತಿಳಿದುಕೊಳ್ಳಿ!
200 ಕೋಟಿ ರೂಪಾಯಿ ವೆಚ್ಚದ ಈ ಸಿನಿಮಾ ಈಗಾಗಲೆ ಭಾಗ 1ರಲ್ಲಿ ಪ್ರೇಕ್ಷಕರನ್ನು ಗೆದ್ದಿದೆ, ಹೀಗಾಗಿ ವಾರ್ 2 ಮಾಡಲು ಮುಂದಾಗಿದ್ದಾರೆ. ದೊಡ್ಡ ಬಜೆಟ್ ಸಿನಿಮಾ ಆಗಿರುವುದರಿಂದ ದೊಡ್ಡ ನಟ-ನಟಿಯರು ಇರಲೇ ಬೇಕು…ಆರ್‌ಆರ್‌ಅರ್ ಖ್ಯಾತಿಯ ಜ್ಯೂನಿಯರ್ ಎನ್‌ಟಿಆರ್ ವಾರ್ 2ಗೆ ಸಹಿ ಮಾಡಿ ಬಿ-ಟೌನ್‌ಗೆ ಕಾಲಿಟ್ಟರು. ಅಯಾ ಮುಖರ್ಜಿ ನಿರ್ದೇಶನ ಮಾಡುತ್ತಿರುವ ವಾರ್ 2 ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್ ಮತ್ತು ಹೃತಿಕ್ ರೋಷನ್ ಪ್ರಮುಖ ಪಾತ್ರಧಾರಿಗಳು. ಹೀಗಾಗಿ ಇಬ್ಬರು ಸ್ಟಾರ್ ನಟರಿಗೆ ಒಳ್ಳೆಯ ಓಪನಿಂಗ್ ಸೀನ್ ನೀಡಲಾಗಿದೆ. ಜ್ಯೂನಿಯರ್ ಎನ್‌ಟಿಆರ್ ಓಪನಿಂಗ್ ಸೀನ್ ಚಿತ್ರೀಕರಣ ಮಾಡುವಾಗ ಗಂಭೀರವಾಗಿ ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೂನಿಯರ್ ಕೈಗೆ ಬಲವಾಗಿ ಪೆಟ್ಟು ಬಿದ್ದಿರುವ ಕಾರಣ ಎರಡು ತಿಂಗಳ ಕಾಲ ಸಂಪೂರ್ಣ ರೆಸ್ಟ್‌ನಲ್ಲಿ ಇರಬೇಕು ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ವಾರ್ 2 ಸಿನಿಮಾ ಚಿತ್ರೀಕರಣ ತಡೆಯಾಗಲಿದೆ.
ವಾರ್ 2 ಸಿನಿಮಾವನ್ನು ಮುಂಬೈ ಅಥವಾ ಇಟಲಿಯಲ್ಲಿ ಚಿತ್ರೀಕರಣ ಮಾಡಬೇಕು ಎಂದು ಪ್ರೊಡಕ್ಷನ್ ಟೀಂ ಪ್ಲ್ಯಾನ್ ಮಾಡಿದೆ. ಜ್ಯೂನಿಯರ್ ಎನ್‌ಟಿಆರ್ ಓಪನಿಂಗ್ ಸೀನ್ ಮುಂಬೈನಲ್ಲಿ ಚಿತ್ರೀಕರಣ ಮಾಡಲಾಗಿತ್ತು, ಈಗ ಎರಡು ತಿಂಗಳ ಬ್ರೇಕ್ ಆಗಿರುವುದರಿಂದ ಅಕ್ಟೋಬರ್ ತಿಂಗಳಿನಲ್ಲಿ ಮತ್ತೆ ಆರಂಭಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಜ್ಯೂನಿಯರ್ ರೆಸ್ಟ್ ತೆಗೆದುಕೊಳ್ಳುವವರೆಗೂ ಇಟಲಿಯಲ್ಲಿ ಸಾಂಗ್ ಚಿತ್ರೀಕರಣ ನಡೆಯಲಿದೆ.