ಚಾಂಪಿಯನ್ಸ್ ಟ್ರೋಫಿಗೆ ಗಿಲ್ ಗಿಂತ ಜೈಸ್ವಾಲ್ ಬೆಸ್ಟ್ – ರೋಹಿತ್ ನಿಲುವೇನು?

ಚಾಂಪಿಯನ್ಸ್ ಟ್ರೋಫಿಗೆ ಗಿಲ್ ಗಿಂತ ಜೈಸ್ವಾಲ್ ಬೆಸ್ಟ್ – ರೋಹಿತ್ ನಿಲುವೇನು?

ಟೀಮ್ ಇಂಡಿಯಾ ಶ್ರೀಲಂಕಾ ಸರಣಿಯಲ್ಲಿ ಸೋಲು ಕಂಡಿದ್ದು ಬಾಂಗ್ಲಾ ಸರಣಿಗೆ ರೆಡಿಯಾಗ್ತಿದೆ. ಆದ್ರೆ ಭಾರತದ ಮುಂದಿರೋ ಅತಿದೊಡ್ಡ ಸವಾಲು ಅಂದ್ರೆ 2025ರ ಚಾಂಪಿಯನ್ಸ್ ಟ್ರೋಫಿ. ಈ ಇಂಪಾರ್ಟೆಂಟ್ ಮ್ಯಾಚ್ಗಳಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಓಪನರ್ ಆಗಿ ಬಂದ್ರೆ, ಇವರಿಗೆ ಜೊತೆಗಾರ ಆಗಲು ಶುಭ್ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ನಡುವೆ ಯಾರು ಬೆಸ್ಟ್ ಅನ್ನೋ ಫೈಟ್ ಏರ್ಪಟ್ಟಿದೆ. ಯಶಸ್ವಿ ಜೈಸ್ವಾಲ್ ಮತ್ತು  ಶುಭ್ಮನ್ ಗಿಲ್ ಇಬ್ಬರೂ ಕೂಡಾ ಟೀಮ್ ಇಂಡಿಯಾದ ಸೆನ್ಷೆಷನಲ್ ಯಂಗ್ಸ್ಟರ್ಸ್. ಲೆಫ್ಟ್ ಬ್ಯಾಟರ್ ಜೈಸ್ವಾಲ್ ಅಗ್ರೆಸ್ಸಿವ್ ಆಟದಿಂದ, ಗಿಲ್ ಕ್ಲಾಸ್ ಅಂಡ್ ಮಾಸ್ ಆಟದಿಂದ ಸಖತ್ ಸದ್ದು ಮಾಡ್ತಿದ್ದಾರೆ. ಇದೀಗ ಈ ಯಂಗ್ ಜೋಡಿಗಳ ನಡುವೆ ರೋಹಿತ್ ಶರ್ಮಾ ಪಾರ್ಟನರ್ ಯಾರಾಗಬಹುದು ಎಂಬ ವಿಚಾರ ಸದ್ದು ಮಾಡ್ತಿದೆ. ಅದ್ರಲ್ಲೂ ಯಂಗ್ ಗನ್ ಶುಭ್ಮನ್ ಗಿಲ್ ಬಹುತೇಕ ಈ ರೇಸ್ನಿಂದ ಹೊರಬೀಳಬಹುದು ಎಂಬ ವಿಚಾರ ಚರ್ಚೆಯಲ್ಲಿದೆ.

ಗಿಲ್ V/S ಜೈಸ್ವಾಲ್ ಯಾರು ಬೆಸ್ಟ್? 

ಗಿಲ್ ಇತ್ತೀಚೆಗೆ ಮುಗಿದ ಶ್ರೀಲಂಕಾ ಒನ್ಡೆ ಸರಣಿಯಲ್ಲಿ ಅಟ್ಟರ್ ಪ್ಲಾಫ್ ಶೋ ನೀಡಿದ್ರು. ಸಿಂಹಳೀಯರ ಸ್ಪಿನ್ ಜಾಲಕ್ಕೆ ಸಿಲುಕಿ ಗಿಲ್ ವಿಲ ವಿಲ ಒದ್ದಾಡಿದ್ರು. ಇದ್ರ ಬೆನಲ್ಲೇ ಪಂಜಾಬ್ ಪುತ್ತರ್ ಬದಲು ಜೈಸ್ವಾಲ್ಗೆ ತಂಡದಲ್ಲಿ ಚಾನ್ಸ್ ನೀಡ್ಬೇಕು ಅನ್ನೋ ಆಗ್ರಹ ಕೇಳಿ ಬಂದಿದೆ. ಶುಭ್ಮನ್ ಗಿಲ್ ಶ್ರೀಲಂಕಾ ಎದುರಿನ ಏಕದಿನ ಸರಣಿಯಲ್ಲಿ 3 ಪಂದ್ಯಗಳಲ್ಲಿ ಕಾಣಿಸಿಕೊಂಡ್ರು. 19ರ ಎವರೇಜ್ನಲ್ಲಿ ಜಸ್ಟ್ 57 ರನ್ ಗಳಿಸಿ ಟೀಕಾಕಾರರ ಬಾಯಿಗೆ ಆಹಾರವಾದ್ರು. ಒಂದೆಡೆ ಗಿಲ್ ಹೀಗೆ ಲಂಕಾ ಸರಣಿಯಲ್ಲಿ ಮುಗ್ಗರಿಸ್ತಿದ್ರೆ ಜೈಸ್ವಾಲ್ ಸಿಕ್ಕ ಅವಕಾಶಗಳಲ್ಲಿ ಲೀಲಾಜಾಲವಾಗಿ ರನ್ ಗಳಿಸ್ತಿದ್ದಾರೆ. ಫೈರಿ ಲೆಫ್ಟಿ ಬ್ಯಾಟರ್ಗೆ ಏಕದಿನದಲ್ಲಿ ಕಣಕ್ಕಿಳಿಯುವ ಭಾಗ್ಯ ಸಿಕ್ಕಿಲ್ಲ ನಿಜ. ಟೆಸ್ಟ್ ಹಾಗೂ ಟಿ20 ಕ್ರಿಕೆಟ್ನಲ್ಲಿ ಇಂಪ್ರೆಸ್ಸಿವ್ ಆಟವಾಡಿದ್ದಾರೆ. ಯಶಸ್ವಿ ಜೈಸ್ವಾಲ್ ಇವರೆಗೆ 9 ಟೆಸ್ಟ್ ಪಂದ್ಯಗಳನ್ನಾಡಿದ್ದು, 1028 ರನ್ ಚಚ್ಚಿದ್ದಾರೆ. ಇದ್ರಲ್ಲಿ ಅಮೋಘ 3 ಶತಕ ಹಾಗೂ 4 ಅರ್ಧಶತಕ ಸೇರಿಕೊಂಡಿವೆ. ಇನ್ನೂ ಟಿ20 ಕ್ರಿಕೆಟ್ನಲ್ಲಿ ಜೈಸ್ವಾಲ್ ರನ್ ಭರಾಟೆ ಜೋರಾಗಿದೆ. ಆಡಿದ 23 ಪಂದ್ಯಗಳಿಂದ 723 ರನ್ ಗಳಿಸಿದ್ದಾರೆ. 5 ಅರ್ಧಶತಕದ ಜೊತೆ 1 ಸೆಂಚುರಿ ಮೂಡಿ ಬಂದಿದೆ. ಈ ಇಂಪ್ರೆಸ್ಸಿವ್ ಟ್ರ್ಯಾಕ್ ರೆಕಾರ್ಡ್ ಅಷ್ಟೇ ಅಲ್ಲ. ಮುಂಬರೋ ಚಾಂಪಿಯನ್ಸ್ ಟ್ರೋಫಿಯಲ್ಲಿ ಗಿಲ್ ಬದಲು ಜೈಸ್ವಾಲ್ ಆರಂಭಿಕನಾಗಿ ಆಡಿದ್ರೆ ತಂಡಕ್ಕೆ ಹೆಚ್ಚು ಲಾಭವಾಗಲಿದೆ. ಜೈಸ್ವಾಲ್ ಆಡಿದ್ರೆ ರೋಹಿತ್ ಒತ್ತಡ ಕಮ್ಮಿ ಆಗಲಿದೆ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಇದೆ ನಿರ್ಭೀತ ಆಟವಾಡಿ ಪಂದ್ಯ ಗತಿಯನ್ನೇ ಬದಲಿಸಬಲ್ಲರು

ಈ ಎಲ್ಲಾ ಕಾರಣಗಳಿಂದ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕ್ಯಾಪ್ಟನ್ ರೋಹಿತ್ ಜೊತೆ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದ್ರೆ ತಂಡಕ್ಕೆ ಹೆಚ್ಚು ಲಾಭವಿದೆ ಎಂಬ ಲೆಕ್ಕಾಚಾರ ನಡೀತಿದೆ. ಇದೆಲ್ಲದ್ರ ನಡುವೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅಗ್ರ ಸ್ಥಾನದಲ್ಲಿರುವ ಪಾಕಿಸ್ತಾನದ ಬಾಬರ್ ಅಜಂ ಅವರಿಗಿಂತ ಕೇವಲ 59 ಅಂಕಗಳ ಹಿನ್ನಡೆಯಲ್ಲಿದ್ದಾರೆ.  ಇನ್ನು ಈ ಹಿಂದೆ 2ನೇ ಸ್ಥಾನದಲ್ಲಿದ್ದ ಯುವ ಬ್ಯಾಟರ್ ಶುಭಮನ್ ಗಿಲ್ ಒಂದು ಸ್ಥಾನಗಳ ಕುಸಿತ ಕಂಡು ಮೂರಕ್ಕೆ ಇಳಿದಿದ್ದಾರೆ.

Shwetha M