ಕೆಟ್ಟ ಮೇಲೆ ಇಶಾನ್ ಗೆ ಬುದ್ದಿ ಬಂತಾ? – ಟೀಮ್ ಇಂಡಿಯಾ ಬಾಗಿಲು ಓಪನ್ ಆಗುತ್ತಾ?

ಕೆಟ್ಟ ಮೇಲೆ ಇಶಾನ್ ಗೆ ಬುದ್ದಿ ಬಂತಾ? – ಟೀಮ್ ಇಂಡಿಯಾ ಬಾಗಿಲು ಓಪನ್ ಆಗುತ್ತಾ?

ಇಶಾನ್ ಕಿಶನ್.. ಟೀಂ ಇಂಡಿಯಾದ ಯಂಗ್​ಸ್ಟರ್​ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಸಾಧನೆ ಮಾಡೋದು ಸಾಕಷ್ಟಿದೆ. ಆದ್ರೆ ಅದ್ಯಾಕೋ ಇಶಾನ್ ಕಿಶನ್ ತನ್ನ ಕೆರಿಯರ್ ಗೆ ತನ್ನ ಅಹಂಕಾರದಿಂದಲೇ ಕಲ್ಲು ಹಾಕಿಕೊಂಡಿದ್ದ. ಈ ಹಿಂದೆ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಇಶಾನ್​​ ಕಿಶನ್​​ಗೆ ಒಳ್ಳೇ ಮಾತಲ್ಲೇ ಬುದ್ದಿ ಮಾತು ಹೇಳಿದ್ದರು. ಆದ್ರೂ, ದ್ರಾವಿಡ್ ಕೊಟ್ಟ ಸೂಚನೆಯನ್ನ ಕೂಡ ಇಶಾನ್ ಕಿಶನ್ ಲೆಕ್ಕಕ್ಕೇ ತೆಗೆದುಕೊಂಡಿರಲಿಲ್ಲ. ತನ್ನ ಜೊತೆಗಾರರೆಲ್ಲಾ ಟೀಮ್ ಇಂಡಿಯಾದಲ್ಲಿ ಮಿಂಚುತ್ತಿರೋದು ನೋಡಿದ್ಮೇಲೆ ತಾನ್ಯಾರು ಅಂತಾ ತೋರಿಸೋದು ಅಹಂಕಾರದಿಂದ ಅಲ್ಲ, ಆಟದಿಂದ ಅನ್ನೋದು ಕೊನೆಗೂ ಜ್ಞಾನೋದಯವಾಗಿದೆ. ಹೀಗಾಗಿ ಕಿಶನ್, ದೇಶಿಯ ಕ್ರಿಕೆಟ್‌ನಲ್ಲಿ ಸೆಂಚೂರಿ ಬಾರಿಸೋ ಮೂಲಕ ನನ್ನ ತೋಳಲ್ಲಿ, ನನ್ನ ಬ್ಯಾಟಿಂಗ್‌ನಲ್ಲಿ ಸ್ಟ್ರೆಂಥ್ ಇದೆ ಅನ್ನೋ ಸಂದೇಶ ಸಾರಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಗಿಲ್ ಗಿಂತ ಜೈಸ್ವಾಲ್ ಬೆಸ್ಟ್ – ರೋಹಿತ್ ನಿಲುವೇನು?

ಕ್ರಿಕೆಟ್‌ನಲ್ಲಿ ಇಂಟರ್​​ನ್ಯಾಷನಲ್​ ಮ್ಯಾಚ್ ಆಡಿದ ಮಾತ್ರಕ್ಕೆ ಡೊಮೆಸ್ಟಿಕ್ ಕ್ರಿಕೆಟ್ ಆಡಬಾರದು ಅಂತೇನಿಲ್ಲ. ಇದ್ರಿಂದ ಯಾವ ಪ್ಲೇಯರ್​​ನ ಪ್ರತಿಷ್ಠೆಗೂ ಡ್ಯಾಮೇಜ್ ಆಗೋದಿಲ್ಲ. ಕೊನೆಗೂ ಈ ವಿಚಾರದ ಬಗ್ಗೆ ಇಶಾನ್ ಕಿಶನ್ ಗೆ ಬುದ್ದಿ ಬಂದಿದೆ. ಹೀಗಾಗಿ ಇಶಾನ್ ಕಿಶನ್​ ಡೊಮೆಸ್ಟಿಕ್​ ಮ್ಯಾಚ್​​ಗಳನ್ನ ಆಡೋಕೆ ಗ್ರೌಂಡ್​ಗೆ ಇಳಿದಿದ್ದಾರೆ. ಅಂದು ರಣಜಿ ಆಡಲು ನಿರಾಕರಿಸಿ ಟೀಮ್​ ಇಂಡಿಯಾದಿಂದ ದೂರಾದ ಇಶಾನ್, ಇಂದು ದೇಶೀಯ ರೆಡ್​ ಬಾಲ್​ ಟೂರ್ನಿಯಲ್ಲಿ ​ ತಮ್ಮ ಬ್ಯಾಟಿಂಗ್​ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಜಾರ್ಖಂಡ್​ ತಂಡದ ನಾಯಕನಾಗಿರುವ ಇಶಾನ್ ಕಿಶನ್​ ಮಧ್ಯಪ್ರದೇಶ ವಿರುದ್ಧ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದು ತಮ್ಮ ಬಿರುಸಿನ ಬ್ಯಾಟಿಂಗ್​ ಮೂಲಕ 86 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿದ್ದಾರೆ. ಅಚ್ಚರಿ ಎಂದರೆ ಸತತ 2 ಸಿಕ್ಸರ್​ ಬಾರಿಸುವ ಮೂಲಕ ಅವರು ಈ ಶತಕ ಪೂರ್ತಿಗೊಳಿಸಿದ್ದು ಟೀಕಾಕಾರರಿಗೆ ಬ್ಯಾಟಿಂಗ್ ಮೂಲಕರೇ ಸರಿಯಾಗಿಯೇ ಉತ್ತರ ನೀಡಿದ್ದಾರೆ. ಇನ್ನೂ ವಿಶೇಷವೆಂದ್ರೆ, ಬರೋಬ್ಬರಿ 10 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಸಿ 114 ರನ್​ ಬಾರಿಸಿ ಗೆಲುವಿನ ರೂವಾರಿಯೆನೆಸಿಕೊಂಡಿದ್ದಾರೆ.

ಕಳೆದ ವರ್ಷ ನವೆಂಬರ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯ ಮೂರನೇ ಟಿ20 ಸಂದರ್ಭದಲ್ಲಿ ಕಿಶನ್ ಕೊನೆಯದಾಗಿ ಭಾರತಕ್ಕಾಗಿ ಆಡಿದ್ದರು. ನಂತರ ಇಶಾನ್ ಕಿಶನ್ ರನ್ನ ಸೈಡ್‌ಲೈನ್ ಮಾಡಲಾಗಿತ್ತು. ಸೈಡ್‌ಲೈನ್ ಮಾಡಿದ್ರು ಅನ್ನೋದಕ್ಕಿಂತ ಮಾಡಿಸಿಕೊಂಡಿದ್ದು ಅಂದ್ರೂ ತಪ್ಪಾಗಲ್ಲ. ಅಂದಿನ ಕೋಚ್​ ದ್ರಾವಿಡ್​ ಮತ್ತು ಆಯ್ಕೆ ಸಮಿತಿ ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡುವಂತೆ ಇಸಾನ್ ಗೆ ಸೂಚನೆ ನೀಡಿತ್ತು. ಆದರೆ ಇದನ್ನು ಇಶಾನ್​ ಕಡೆಗಣಿಸಿದ್ದರಿಂದ ಬಿಸಿಸಿಐ ಅವರನ್ನು ಕೇಂದ್ರೀಯ ಗುತ್ತಿಗೆಯಿಂದಲೂ ಕೈಬಿಟ್ಟಿತ್ತು. ಕೊನೆಗೂ ಇಶಾನ್ ಬುಚ್ಚಿಬಾಬು ಟೂರ್ನಿಯಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಹುಂಬತನ ತೋರಿಸಿದ್ರೆ ಏನೋ ನಡೆಯಲ್ಲ ಅನ್ನೋದು ಗೊತ್ತಾದ ಮೇಲೆ ತನ್ನ ರಟ್ಟೆಯ ಶಕ್ತಿಯನ್ನ ಪ್ರದರ್ಶಿಸಿದ್ದಾರೆ.

ಬುಚ್ಚಿ ಬಾಬು ಟೂರ್ನಿಯಲ್ಲಿ ಜಾರ್ಖಂಡ್ ತಂಡವನ್ನು ನಾಯಕನಾಗಿ ಮೊದಲ ಪಂದ್ಯದಲ್ಲೇ ಅದ್ಭುತ ಶತಕ ಬಾರಿಸಿದ್ದಾರೆ ಇಶಾನ್ ಕಿಶನ್. ಜೊತೆಗೆ ಮುಂಬರುವ ದುಲೀಪ್ ಟ್ರೋಫಿಯಲ್ಲೂ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಟೀಮ್ ಇಂಡಿಯಾಕ್ಕೆ ಗ್ರೇಟ್ ಕಮ್ ಬ್ಯಾಕ್ ಮಾಡೋ ತವಕದಲ್ಲಿದ್ದಾರೆ ಇಶಾನ್ ಕಿಶನ್. ಅದಕ್ಕೆ ಹೇಳೋದು.. ಕೆಟ್ಟ ಮೇಲೆ ಬುದ್ದಿ ಬಂತು ಅಂತಾ.

Sulekha

Leave a Reply

Your email address will not be published. Required fields are marked *