ದಿನಕ್ಕೊಬ್ಬರ ಜೊತೆ ಪಾಂಡ್ಯ ರೊಮ್ಯಾನ್ಸ್ – ಹಾರ್ದಿಕ್ ಗೆ ಬೇಕಿರಲಿಲ್ವಾ ಒಬ್ಬಳೇ ಹೆಂಡ್ತಿ?
ನಂಬಿಕೆ ದ್ರೋಹಕ್ಕೆ ದೂರಾದ ನತಾಶಾ

ದಿನಕ್ಕೊಬ್ಬರ ಜೊತೆ ಪಾಂಡ್ಯ ರೊಮ್ಯಾನ್ಸ್ – ಹಾರ್ದಿಕ್ ಗೆ ಬೇಕಿರಲಿಲ್ವಾ ಒಬ್ಬಳೇ ಹೆಂಡ್ತಿ?ನಂಬಿಕೆ ದ್ರೋಹಕ್ಕೆ ದೂರಾದ ನತಾಶಾ

ಆ ಒಂದು ಕಣ್ಣೀರಿಗೆ ಹಾರ್ದಿಕ್ ಪಾಂಡ್ಯ ಮೇಲೆ ಅದೆಷ್ಟು ಸಿಂಪತಿ ಉಕ್ಕಿತ್ತು. ಟಿ20 ವಿಶ್ವಕಪ್ ಗೆದ್ದಾಗ ಹಾರ್ದಿಕ್ ಪಾಂಡ್ಯ ಒಂಟಿಯಾಗಿ ಕುಳಿತು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದರು. ಆಗ ಫ್ಯಾನ್ಸ್ ಸಿಟ್ಟು ಯಾರ ಮೇಲಿತ್ತು ಗೊತ್ತಾ. ನಿಮ್ಮ ಗೆಸ್ ಕರೆಕ್ಟ್. ಎಲ್ರೂ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾಗೆ ಬೈದು ಬೈದು ಪೋಸ್ಟ್ ಹಾಕಿದ್ರು. ಎಲ್ರೂ ಫ್ಯಾಮಿಲಿ ಜೊತೆ ವಿಶ್ವಕಪ್ ಗೆಲುವನ್ನ ಎಂಜಾಯ್ ಮಾಡ್ತಿದ್ದಾರೆ. ಪಾಪ.. ಪಾಂಡ್ಯ ಮಾತ್ರ ಒಂಟಿಯಾಗಿ ಕೂತು ಕಣ್ಣೀರು ಹಾಕ್ತಿದ್ದಾರೆ ಅಂತಾ. ನಂತರ ವಿಶ್ವಕಪ್ ಗೆದ್ದು ತವರಿಗೆ ಬಂದಾಗಲೂ ಅಷ್ಟೇ. ಎಲ್ರೂ ಫ್ಯಾಮಿಲಿ ಜೊತೆ ಕೇಕ್ ಕಟ್ ಮಾಡಿ ಸೆಲೆಬ್ರೇಷನ್ ಮಾಡ್ತಿದ್ರೆ ಪಾಂಡ್ಯ ಮಾತ್ರ ಮಗನ ಜೊತೆ ಸೆಲೆಬ್ರೇಷನ್ ಮಾಡಿದ್ದರು. ಇಲ್ಲೇ ಒಂದು ಟ್ವಿಸ್ಟ್ ಬೇರೆ ಇತ್ತು. ತವರಿಗೆ ಬಂದು ಮಗನ ಜೊತೆ ಕೇಕ್ ಕಟ್ ಮಾಡಿದ ಪಾಂಡ್ಯ ಮಗನ ಜೊತೆಗಿರೋ ಫೋಟೋ ಮಾತ್ರ ಹಂಚಿಕೊಂಡಿದ್ದರು. ಆದ್ರೆ, ಅದೇ ಜಾಗದಲ್ಲಿ, ಅದೇ ಪಾಂಡ್ಯ ಮನೆಯಲ್ಲಿ ಇನ್ನೊಬ್ಬ ಸೆಲೆಬ್ರಿಟಿ ಯುವತಿ ಪಾಂಡ್ಯ ಜೊತೆಗೆ ಅಂಟಿಕೊಂಡು ನಿಂತಿರೋ ಫೋಟೋ ಪೋಸ್ಟ್ ಮಾಡಿದ್ದರು. ಆಗ್ಲೂ ಪಾಂಡ್ಯ ಮೇಲೆ ಯಾರಿಗೂ ಡೌಟ್ ಕೂಡಾ ಬಂದಿರಲಿಲ್ಲ. ಅಯ್ಯೋ ಪಾಪ, ಹೆಂಡ್ತಿ ಬಿಟ್ಟೋದ್ಲು. ಒಂಟಿಯಾದ್ರು  ಪಾಂಡ್ಯ ಅಂತಾ ಕನಿಕರ ಬೇರೆ ತೋರಿಸಿದ್ರು. ಆದ್ರೆ, ಯಾರೂ ಕೂಡಾ ನತಾಶಾ ಬಗ್ಗೆ ಪಾಸಿಟಿವ್ ಆಗಿ ಕಾಮೆಂಟ್ ಮಾಡಿದ್ದೇ ಇಲ್ಲ. ಇದೀಗ ಪಾಂಡ್ಯ ಮತ್ತು ನತಾಶಾ ಡೈವೋರ್ಸ್ ಗೆ ರಿಯಲ್ ಕಾರಣ ರಿವೀಲ್ ಆಗಿದೆ. ಅದೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮರ್ಡರ್‌ ಕೇಸ್‌.. ಡಿ ಗ್ಯಾಂಗ್‌ ವಿರುದ್ಧ ಮತ್ತೊಂದು ಸಾಕ್ಷಿ! – ಕಾರಿನಲ್ಲಿ ನಡೆದಿದ್ದು ಏನು?

ಈ ಜಗತ್ತಲ್ಲಿ ನಮ್ಮ ಮೂಗಿನ ನೇರಕ್ಕೆ ಏನ್ ನಡೀತಿದೆ ಅದನ್ನೇ ನಂಬೋದು ಜಾಸ್ತಿ. ಹಿಂದೆ ಮುಂದೆ ಯೋಚನೆ ಮಾಡದೇ ಒಬ್ರ ಬಗ್ಗೆ ನಮ್ಮದೇ ತೀರ್ಪು ಕೂಡಾ ಕೊಟ್ಟಿರ್ತೀವಿ. ಈಗ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಪರಿಸ್ಥಿತಿ ಕೂಡಾ ಹೀಗೆ ಆಗಿತ್ತು. ಗಂಡ ದಿನಕ್ಕೊಬ್ಬಳ ಜೊತೆ ಸುತ್ತಾಟ ನಡೆಸ್ತಿದ್ದ. ಈಕೆ ಶೂಟಿಂಗ್ ಅಂತಾ ಬೇರೆಯವರ ಜೊತೆ ಫೋಟೋ ತಗೊಂಡ್ರೂ ಕೂಡಾ ಈಕೆಯದ್ದೇ ತಪ್ಪು. ಇದೀಗ ನತಾಶಾ ಯಾಕೆ ಪಾಂಡ್ಯಾ ಲೈಫ್ ಇಂದ ದೂರಾಗಿದ್ದು ಅನ್ನೋದನ್ನ ನೋಡೋಣ,

ಹಾರ್ದಿಕ್ ಪಾಂಡ್ಯ, ನತಾಶಾಗೆ ಮೋಸ ಮಾಡಿದ್ರಾ, ಪ್ರೀತಿಸಿ ಮದ್ವೆಯಾದ ಹೆಣ್ಣಿಗೆ ನಂಬಿಕೆ ದ್ರೋಹ ಮಾಡಿದ್ರಾ ಎಂಬ ಅನುಮಾನ ಶುರುವಾಗಿದೆ. ಹಾರ್ದಿಕ್ ಮದ್ವೆ ಕೂಡಾ ಒಂದು ರೀತಿ ಡಿಫರೆಂಟ್. ಮದುವೆಗೆ ಮೊದಲೇ ಈ ಜೋಡಿ ಮಗುವನ್ನ ಬರಮಾಡಿಕೊಂಡಿತ್ತು. ಮಗುವಿನ ಎದುರಲ್ಲೇ ಮದುವೆ ಕೂಡಾ ಆಯ್ತು. ಈಗ ಮಗ ಅಗಸ್ತ್ಯನಿಗೆ 4 ವರ್ಷ. ಅಷ್ಟರಲ್ಲಾಗಲೇ ಅಮ್ಮ ಅಪ್ಪ ದೂರಾದ ನೋವು ಅನುಭವಿಸಬೇಕಾಯ್ತು ಪುಟ್ಟ ಕಂದ. ಜುಲೈ 18ರಂದು ಅಧಿಕೃತವಾಗಿ ಡಿವೋರ್ಸ್ ಸುದ್ದಿ ಅನೌನ್ಸ್ ಮಾಡಿದ್ರು ಪಾಂಡ್ಯ ಮತ್ತು ನತಾಶಾ. ಭಾರತ ತೊರೆದಿರೋ ನತಾಶಾ ಮಗನ ಜೊತೆ ಸರ್ಬಿಯಾ ಸೇರಿಯೂ ಆಗಿದೆ. ಡಿವೋರ್ಸ್ಗೆ ಕಾರಣ ಏನು ಅನ್ನೋದು ಮಾತ್ರ ನಿಗೂಢವಾಗೇ ಉಳಿದಿತ್ತು. ಇದೀಗ ಮತ್ತೆ ಈ ವಿಚಾರ ಚರ್ಚೆಗೆ ಬಂದಿದೆ. ಡಿವೋರ್ಸ್ ಗೆ ಹಾರ್ದಿಕ್ ಪಾಂಡ್ಯಾ ಕಾರಣ ಎನ್ನಲಾಗ್ತಿದೆ. ಪಾಂಡ್ಯ ಮೋಸ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ. ಮೋಸ, ನಂಬಿಕೆ ದ್ರೋಹದ ಪೋಸ್ಟ್ಗಳಿಗೆ ನತಾಶ ಪದೇ ಪದೇ ಲೈಕ್ ಕೊಡ್ತಿದ್ರು. ಇನ್ಸ್ಸ್ಟಾಗ್ರಾಂನಲ್ಲಿ ಹಲವು ರೀಲ್ಸ್ಗಳನ್ನ ನತಾಶಾ ಲೈಕ್ ಮಾಡಿದ್ದಾರೆ. ಆ ಎಲ್ಲಾ ರೀಲ್ಸ್ಗಳು ನಂಬಿಕೆ ದ್ರೋಹ, ದಾಂಪತ್ಯ ಜೀವನದ ಮೋಸದ ಕುರಿತಾದ ಪೋಸ್ಟ್ಗಳಾಗಿವೆ. ಇದನ್ನ ನೋಡಿದ ಮೇಲೆಯೇ ಎಲ್ಲರೂ ಹಾರ್ದಿಕ್ ಮೋಸ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ. ಇದರ ಜೊತೆ ಹಾರ್ದಿಕ್ ಪಾಂಡ್ಯ ದಿನಕ್ಕೊಬ್ಬರ ಜೊತೆ ಡೇಟಿಂಗ್ ನಡೆಸೋ ವಿಚಾರ ಕೂಡಾ ಗುಟ್ಟಾಗಿ ಉಳಿದಿಲ್ಲ.

ನತಾಶಾ ಜೊತೆ ಡಿವೋರ್ಸ್ ರೂಮರ್ಸ್ ನಡುವೆಯೇ ಹಾರ್ದಿಕ್ ಪಾಂಡ್ಯ, ನಟಿ ಪ್ರಾಚಿ ಸಿಂಗ್ ಜೊತೆ ಕಾಣಿಸಿಕೊಂಡಿದ್ದರು. ಇಬ್ಬರೂ ಕೂಡಾ ಡೇಟಿಂಗ್ ನಲ್ಲಿದ್ದಾರೆ ಅನ್ನೋ ವಿಚಾರಕ್ಕೆ ಫ್ರೂಫ್ ಕೂಡಾ ಸಿಕ್ಕಿತ್ತು. ವಿಶ್ವಕಪ್ ಗೆಲುವಿನ ಬಳಿಕ ಹಾರ್ದಿಕ್ ಮಗನ ಜೊತೆಗಿದ್ದ ಫೋಟೋ ಮಾತ್ರ ಶೇರ್ ಮಾಡಿ ನಾನಿನ್ನೂ ಒಂಟಿ ಎಂಬಂತೆ ಬರೆದುಕೊಂಡಿದ್ದರು. ಆದ್ರೆ, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಲೋಕಕ್ಕೆ ಗೊತ್ತಾಗಲ್ವಾ.. ಇತ್ತ ಅದೇ ದಿನ ಪಾಂಡ್ಯ ಜೊತೆಗಿದ್ದ ಪ್ರಾಚಿಸಿಂಗ್ ಫೋಟೋ ಶೇರ್ ಮಾಡಿಕೊಂಡಿದ್ದರು. ಅದ್ರಲ್ಲೂ ಅದೇ ದಿನ ಪಾಂಡ್ಯ ಮತ್ತು ಪ್ರಾಚಿ ಮ್ಯಾಚಿಂಗ್ ಡ್ರೆಸ್ ಹಾಕಿಕೊಂಡು ಒಬ್ಬರಿಗೊಬ್ಬರು ಅಂಟಿಕೊಂಡೇ ಇದ್ರು. ಯಾವಾಗ ಪ್ರಾಚಿ ಸಿಂಗ್-ಹಾರ್ದಿಕ್ ವಿಡಿಯೋ ವೈರಲ್ ಆಯ್ತೋ, ಆಗ ನತಾಶಾ ಕೂಡಾ ತನಗಾದ ನಂಬಿಕೆ ದ್ರೋಹವನ್ನ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇಷ್ಟಕ್ಕೆ ನಿಂತಿಲ್ಲ ಹಾರ್ದಿಕ್ ಪಾಂಡ್ಯ ಸುತ್ತಾಟ. ಬಾಲಿವುಡ್ ನಟಿ ಅನನ್ಯಾ ಪಾಂಡೆ ಜೊತೆಗೂ ಹಾರ್ದಿಕ್ ಹೆಸರು ತಳುಕು ಹಾಕಿಕೊಂಡಿತ್ತು.  ಇದೀಗ ಗ್ರೀಸ್ ನಲ್ಲಿ ರೆಸಾರ್ಟ್ ವೊಂದರಲ್ಲಿ ಬ್ರಿಟನ್ ಸಿಂಗರ್ ಜೊತೆ ರಾತ್ರಿ ಕಳೆದಿದ್ದಾರೆ ಹಾರ್ದಿಕ್ ಪಾಂಡ್ಯ.  ಬ್ರಿಟನ್ ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ರೆಸಾರ್ಟ್ನಲ್ಲಿ ಸಮಯ ಕಳೆದಿದ್ದಾರೆ.  ಹಾರ್ದಿಕ್ ಪಾಂಡ್ಯಾ ಹಾಗೂ ಜಾಸ್ಮಿನ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಗ್ರೀಸ್ನ ರೆಸಾರ್ಟ್ನಲ್ಲಿ ಇಬ್ಬರೂ ಡೇಟಿಂಗ್ ನಡೆಸಿದ್ದಾರೆ. ಇಬ್ಬರೂ ಪ್ರತ್ಯೇಕವಾಗಿ ಫೋಟೋ ಕ್ಲಿಕ್ಕಿಸಿ ಪೋಸ್ಟ್ ಮಾಡಿದ್ದು, ಬ್ಯಾಕ್ಗ್ರೌಂಡ್ ಒಂದೇ ರೀತಿ ಇದೆ. ಬಿಕಿನಿ ತೊಟ್ಟು ಜಾಸ್ಮಿನ್ ಬೋಲ್ಡ್ ಲುಕ್ ಕೊಟ್ಟಿದ್ದಾರೆ. ಈ ಮಧ್ಯೆ ಇನ್ಸ್ಟಾಗ್ರಾಮ್ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಜಾಸ್ಮಿನ್ ಪರಸ್ಪರ ಫಾಲೋ ಮಾಡಿಕೊಳ್ಳುತ್ತಿದ್ದಾರೆ. ಹಾರ್ದಿಕ್ ಪೋಸ್ಟ್ ಮಾಡಿರುವ ವಿಡಿಯೋನ ಅವರು ಲೈಕ್ ಮಾಡಿದ್ದಾರೆ. ಜಾಸ್ಮಿನ್ ವಾಲಿಯಾ ಬ್ರಿಟಿನ್ ಸಿಂಗರ್ ಮಾತ್ರವಲ್ಲದೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಮೂಲಕ ಫೇಮಸ್ ಆಗಿದ್ದಾರೆ.

ಪಾಂಡ್ಯ ಮತ್ತು ಜಾಸ್ಮಿನ್ ರೆಸಾರ್ಟ್ ನೈಟ್ ಔಟ್ ಬೆನ್ನಲ್ಲೇ ನತಾಶಾ ನೋವಿನ ಮಾತುಗಳು ಮತ್ತೆ ವೈರಲ್ ಆಗ್ತಿದೆ. ಯಾರಾದ್ರೂ ನಮ್ಮಿಷ್ಟದಂತೆ ನಡೆದುಕೊಳ್ಳದಿದ್ರೆ ಜನರು ಎಷ್ಟು ವೇಗವಾಗಿ ನಿರ್ಧರಿಸಿಬಿಡ್ತಾರೆ. ಅವರಿಗೆ ಏನಾಗ್ತಿದೆ ಎಂದು ಯೋಚಿಸಲ್ಲ. ಇದರ ಹಿಂದೆ ಏನಾಗಿದೆ? ಸಂದರ್ಭ ಹೇಗಿತ್ತು? ಎಂದು ಚಿಂತಿಸಲ್ಲ. ಇಡೀ ಘಟನೆಯ ಹಿಂದೆ ನಡೆದಿರೋದು ಯಾರಿಗೂ ಗೊತ್ತಿರಲ್ಲ. ನಿರ್ಣಯಕ್ಕೆ ಬರೋದನ್ನ ನಿಲ್ಲಿಸಿ, ತಾಳ್ಮೆ ಬೆಳೆಸಿಕೊಳ್ಳಿ ಅಂತಾ ಹಿಂದೊಮ್ಮೆ ಹೇಳಿದ್ದರು ನತಾಶಾ. ಈಗ ನತಾಶಾ ಮಾತಿನ ಅರ್ಥ ಗೊತ್ತಾಗ್ತಿದೆ. ಆದ್ರೆ, ಪಾಂಡ್ಯ ಇರೋದೇ ಹೀಗೆ. ಯಾವಾಗಲೂ ಚಿಲ್ ಮೂಡ್.. ಡಿವೋರ್ಸ್ ಬೆನ್ನಲ್ಲೇ ಡೇಟಿಂಗ್.. ಪಾಂಡ್ಯ ಲೈಫ್ ಸ್ಟೈಲ್ ಬದಲಾಗಲ್ಲ. ಈ ಜೋಡಿ ಮತ್ತೆ ಒಂದಾಗಲು ಸಾಧ್ಯವೂ ಇಲ್ಲ.

Shwetha M

Leave a Reply

Your email address will not be published. Required fields are marked *