ರಾಜಕೀಯ ನಂಟಿಲ್ಲದ ಲಕ್ಷ ಯುವಕರಿಗೆ ನಾಯಕತ್ವ | ಏನಿದು ಪ್ರಧಾನಿ ಮೋದಿ ಪ್ಲ್ಯಾನ್?

ರಾಜಕೀಯ ನಂಟಿಲ್ಲದ ಲಕ್ಷ ಯುವಕರಿಗೆ ನಾಯಕತ್ವ | ಏನಿದು ಪ್ರಧಾನಿ ಮೋದಿ ಪ್ಲ್ಯಾನ್?

ದೇಶದೆಲ್ಲೆಡೆ ಸ್ವಾರಂತ್ರ್ಯ ಸಂಭ್ರಮ  78ನೇ ಸ್ವಾತಂತ್ರ್ಯೋತ್ಸವ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಸತತ 11ನೇ ಬಾರಿಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ರು. ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಬಳಿಕ ಮೊದಲ ಸ್ವಾತಂತ್ರ್ಯ ದಿನದ ಭಾಷಣ ಇದು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಿಂಗ್ ಅವರು 10 ಬಾರಿ ಕೆಂಪುಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ್ದರು. ಜವಾಹರ್ಲಾಲ್ ನೆಹರು ಹಾಗೂ ಇಂದಿರಾ ಗಂಧಿ ಅವರು ಕ್ರಮಮಾಗಿ 17 ಹಾಗೂ 16 ಬಾರಿ ಧ್ವಜಾರೋಹಣ ಮಾಡಿದ್ದರು. ಇನ್ನು ಧ್ವಜಾರೋಹಣ ಬಳಿಕ ಮಾತನಾಡಿದ ಪ್ರಧಾನಿ, ಹಲವು ಸಂಕಲ್ಪಗಳನ್ನ ಕೈಗೊಂಡಿದ್ದಾರೆ. ಅಷ್ಟಕ್ಕೂ ಪ್ರಧಾನಿ ಮೋದಿ ಪ್ರಸ್ತಾಪಿಸಿದ ಪ್ರಮುಖ ವಿಚಾರಗಳು ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂಓದಿ: 2 ಸೋಲು.. 3ನೇ ಪರೀಕ್ಷೆಗೆ ನಿಖಿಲ್ ರೆಡಿ – HDKಗೆ ಮೈತ್ರಿಯೇ ಮುಳ್ಳು?

78ನೇ ಸ್ವಾತಂತ್ರ್ಯೋತ್ಸವವನ್ನು ಇಂದು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ದೇಶದೆಲ್ಲೆಡೆಯರೂ ತ್ರಿವರ್ಣ ಧ್ವಜ ರಾರಾಜಿಸುತ್ತಿತ್ತು.. ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಧ್ವಜಾರೋಹಣ ಮಾಡಿ, ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ರು.. ಸತತ 11ನೇ ಬಾರಿ ರಾಷ್ಟ್ರಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ ಬರೋಬ್ಬರಿ 98 ನಿಮಿಷಗಳ ಕಾಲ ಭಾಷಣ ಮಾಡಿದ್ರು.. ಈ ವೇಳೆ ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದ ಮೋದಿ, 2047ಕ್ಕೆ ವಿಕಸಿತ ಭಾರತ ನಿರ್ಮಾಣದ ಗುರಿ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ರು.. ಇದಕ್ಕಾಗಿ ತಾನು ಹಗಲಿರುಳೂ ಶ್ರಮಿಸುವುದಾಗಿ ಪ್ರಧಾನಿ ಹೇಳಿದ್ರು.. ಇನ್ನು ಮೋದಿಯವರ ಸ್ವಾತಂತ್ರ್ಯ ಭಾಷಣದಲ್ಲಿ ಎರಡು ವಿಷಯಗಳನ್ನು ಮುಖ್ಯವಾಗಿ ಪ್ರಸ್ತಾಪಿಸಿದ್ದರು.. ಅದರಲ್ಲಿ ಮೊದಲನೆಯದ್ದು ಯುನಿಫಾರ್ಮ್ ಸಿವಿಲ್ ಕೋಡ್..

ಜಾತ್ಯಾತೀತ’ ಸಿವಿಲ್ ಕೋಡ್!  

ಏಕರೂಪ ನಾಗರಿಕ ಸಂಹಿತೆಯನ್ನು ಜಾತ್ಯಾತೀತ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಯುನಿಫಾರ್ಮ್ ಸಿವಿಲ್ ಕೋಡ್ ಜಾರಿಯ ಅವಶ್ಯಕತೆಯನ್ನು ಪ್ರತಿಪಾದಿಸಿದರು. ಅಲ್ಲದೆ ಈಗಿರುವ ಸಿವಿಲ್ ಕೋಡ್ ಕೋಮು ಆಧಾರಿತವಾಗಿದೆ ಎಂದು ಟೀಕಾಪ್ರಹಾರ ಮಾಡಿದ್ರು.. ಇದೇ ಕಾರಣಕ್ಕಾಗಿ  ಕೋಮು ಆಧಾರಿತದ ನಾಗರಿಕ ಸಂಹಿತೆಯ ಬದಲು ಜಾತ್ಯಾತೀತ ಸಿವಿಲ್ ಕೋಡ್ ಜಾರಿಯಾಗಬೇಕು ಎಂದು ಪ್ರಧಾನಿ ಹೇಳಿದ್ರು.. ಜೊತೆಗೆ  ಮುಂದಿನ ವರ್ಷಕ್ಕೆ ಸಂವಿಧಾನ ಜಾರಿಯಾಗಿ 75 ವರ್ಷಗಳು ತುಂಬುತ್ತವೆ.. ಸಂವಿಧಾನದ 75ನೇ ವರ್ಷಕ್ಕೆ ಕಾಲಿಡುವ ವೇಳೆಗೆ ಜಾತ್ಯಾತೀತ ಸಿವಿಲ್ ಕೋಡ್ ಜಾರಿಯಾಗುವುದು ಸಂವಿಧಾನದ ಆಶಯಗಳಿಗೆ ಪೂರಕವಾಗಲಿದೆ ಎಂದರು.. ಹಾಗಂತ ಏಕಾಏಕಿ ಏಕರೂಪ ನಾಗರಿಕ ಸಂಹಿತೆಯ ಜಾರಿಯ ಬದಲು  ಇದರ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆ ನಡೆಯಬೇಕು ಎಂದು ಪ್ರತಿಪಾದಿಸಿದ್ರು.

ಇನ್ನು ಪ್ರಧಾನಿ ಮೋದಿ ಪ್ರತಿಪಾದಿಸಿದ ಎರಡನೇ ವಿಷಯ, ಒಂದು ಲಕ್ಷ ಯುವಜನರಿಗೆ ರಾಜಕೀಯದಲ್ಲಿ ಪ್ರಾತಿನಿಧ್ಯ ಕೊಡಿಸುವುದು.. ಇದನ್ನು ಕುಟುಂಬ ರಾಜಕಾರಣದ ಹೊರತಾಗಿ ದೇಶವನ್ನು ಕಟ್ಟುವ ದೂರದೃಷ್ಟಿಯ ಉದ್ದೇಶ ಎಂದು ಪ್ರಧಾನಿ ಮೋದಿ ಹೇಳಿಕೊಂಡಿದ್ದಾರೆ..

1 ಲಕ್ಷ ಯುವ ನಾಯಕತ್ವ!

ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲದವರಿಗೆ ರಾಜಕೀಯ ಪ್ರಾತಿನಿಧ್ಯ ಒದಗಿಸುವುದಾಗಿ ಮೋದಿ ಹೇಳಇದ್ದಾರೆ.. ಇದಕ್ಕಾಗಿ ದೇಶದಲ್ಲಿ 1 ಲಕ್ಷ ಯುವಜನತೆಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಹೀಗೆ ಆಯ್ಕೆ ಮಾಡುವ ಯುವಕರ-ಅಮ್ಮ-ಮಾವ-ಚಿಕ್ಕಪ್ಪ ಸೇರಿದಂತೆ ಯಾವುದೇ ಸ್ವರೂಪದ ರಾಜಕೀಯ ನಂಟು ಇರಬಾರದು. ರಾಜಕೀಯದಲ್ಲಿ ರಕ್ತ ಸಂಬಂಧಿಗಳು ಇಲ್ಲದವರಿಗೆ ಪ್ರಾತಿನಿಧ್ಯ ನೀಡೋದಾಗಿ ಹೇಳಿದ್ದಾರೆ.. ಗ್ರಾಮ ಪಂಚಾಯತ್ನಿಂದ ಲೋಕಸಭೆವರೆಗೂ ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದಾರೆ.

ಇನ್ನು ದೇಶದಲ್ಲಿ ಮಹಿಳೆಯ ಸುರಕ್ಷತೆಗೆ ಆದ್ಯತೆ ನೀಡುವುದರ ಜೊತೆಗೆ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರಿಗೆ ಸಾರ್ವಜನಿಕವಾಗಿ ಶಿಕ್ಷೆ ವಿಧಿಸುವ ವಿಚಾರವನ್ನೂ ಮೋದಿ ಪ್ರಸ್ತಾಪಿಸಿದ್ದಾರೆ. ಅಲ್ಲದೆ ಬಾಂಗ್ಲಾದೇಶದಲ್ಲಿ ಆಗುತ್ತಿರುವ ಗಲಭೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಮೋದಿ, ನೆರೆಯ ದೇಶದಲ್ಲಿ ಆದಷ್ಟು ಬೇಗ ಶಾಂತಿ ನೆಲೆಸಲಿ ಎಂದು ಆಶಿಸಿದ್ದಾರೆ.

Shwetha M