ದರ್ಶನ್ ಶಾಪ ವಿಮೋಚನೆಗೆ ಯಾಗ – ಪೂಜಾ ಫಲ ಬಿಡುಗಡೆ ಭಾಗ್ಯ ನೀಡುತ್ತಾ?

ದರ್ಶನ್ ಶಾಪ ವಿಮೋಚನೆಗೆ ಯಾಗ – ಪೂಜಾ ಫಲ ಬಿಡುಗಡೆ ಭಾಗ್ಯ ನೀಡುತ್ತಾ?

ಕನ್ನಡ ಚಿತ್ರರಂಗಕ್ಕೆ ಈಗ ಸಂಕಷ್ಟಕಾಲ ಬಂದಿದ್ಯಾ?, ಕನ್ನಡ ಚಿತ್ರರಂಗದಲ್ಲಿ ಕತ್ತಲೆ ಆವರಿಸಿದ್ಯಾ? ಕಾಟೇರ ಜೈಲಿಗೆ ಹೋದ ಮೇಲೆ ಈ ಸ್ಥಿತಿ ಬಂದಿದ್ದಾ? ದರ್ಶನ್ ಜೈಲು ಸೇರಿದ ಮೇಲೆ ಸ್ಯಾಂಡಲ್ವುಡ್ ಸೊರಗಿದ್ದಾ? ಈ ಎಲ್ಲಾ ಪ್ರಶ್ನೆಗಳು ಚರ್ಚೆಗೆ ಬರಲು ಕಾರಣ ಕಲಾವಿದರ ಸಂಘದಿಂದ ನಡೆಯುತ್ತಿರೋ ಮೃತ್ಯುಂಜಯ ಹೋಮ ಮತ್ತು ಆಶ್ಲೇಷ ಬಲಿ. ಸಾಮಾನ್ಯವಾಗಿ ಸಂಕಷ್ಟದಲ್ಲಿದ್ದಾಗ ಮೃತ್ಯುಂಜಯ ಹೋಮ ಮಾಡುತ್ತಾರೆ. ಜೊತೆಗೆ ಇವತ್ತು ನಾಗದೇವರ ಆರಾಧನೆಯೂ ನಡೆಯುತ್ತಿದೆ. ಆಶ್ಲೇಷ ಬಲಿ ಮತ್ತು ಸರ್ಪಶಾಂತಿ ಕೂಡಾ ನಡೆಯುತ್ತಿದೆ. ಕಲಾವಿದರ ಸಂಘದವರು ಈ ಟೈಮ್ನಲ್ಲಿ ಇಷ್ಟು ದೊಡ್ಡ ಪೂಜೆ ಮಾಡಿಸ್ತಿರೋದು ಯಾಕೆ?, ದರ್ಶನ್ ಸಾಥ್ ನೀಡಿದ್ರೆ ಮಾತ್ರ ಸ್ಯಾಂಡಲ್ವುಡ್ ಉಳಿಯುತ್ತಾ? ಕಲಾವಿದರಿಗೆ ಎದುರಾದ ಅಂಥಾ ಕಷ್ಟವೇನು? ಈ ಮಹಾಯಾಗದಿಂದ ಪ್ರಯೋಜನವೇನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ – ಇದ್ದಕ್ಕಿದ್ದಂತೆ ಹಿರಿಯ ನಟಿ ಮೈ ಮೇಲೆ ಬಂದ ದೇವರು!
ಕಾಟೇರ.. ನಿಮಗೆಲ್ಲಾ ಗೊತ್ತಿರ ಬಹುದು. ಕನ್ನಡದಲ್ಲೇ ರಿಲೀಸ್ ಆಗಿ, ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ತಂದ ಚಿತ್ರವೇ ಕಾಟೇರ. ಈ ಸಿನಿಮಾದ ಸಕ್ಸಸ್ ಗೆ ಕಾರಣರಾದ ನಟ ದರ್ಶನ್ ಸ್ಯಾಂಡಲ್ವುಡ್ ನ ಮಹಾನ್ ಶಕ್ತಿ. ಇನ್ನು ದರ್ಶನ್ ಯಾವತ್ತೂ ಪ್ಯಾನ್ ಇಂಡಿಯಾ ಸಹವಾಸಕ್ಕೆ ಹೋದವರೇ ಅಲ್ಲ. ಕನ್ನಡದಲ್ಲೇ ನಟಿಸಿ, ಕನ್ನಡ ಚಿತ್ರರಂಗವನ್ನ ಮೇಲೆತ್ತಲು ಶ್ರಮ ಹಾಕುವ ಚಾಲೆಂಜಿಂಗ್ ಸ್ಟಾರ್, ಎಲ್ಲವೂ ಸರಿ ಹೋಗಿದ್ದರೆ ಮತ್ತೊಂದು ಸಿನಿಮಾ ಈ ವರ್ಷದ ಕೊನೆಯಲ್ಲಿ ಕೊಡಬೇಕಿತ್ತು. ಡೆವಿಲ್ ಸಿನಿಮಾದ ಮೇಲೂ ಕನ್ನಡ ಚಿತ್ರರಂಗ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿತ್ತು. ಈ ಸಿನಿಮಾ ಕೂಡಾ ಸಕ್ಸಸ್ ಆಗಿದ್ರೆ ಕನ್ನಡ ಚಿತ್ರರಂಗಕ್ಕೆ ಒಂದು ರೇಂಜಿಗೆ ಚೈತನ್ಯ ಬರ್ತಿತ್ತು. ಕಾಟೇರ ಸಿನಿಮಾ ಯಶಸ್ಸಿನ ನಂತರ ಯಾವ ಸಿನಿಮಾ ಕೂಡಾ ಸಕ್ಸಸ್ ಕಂಡಿಲ್ಲ. ಇದ್ರ ಮಧ್ಯೆ ಸ್ಯಾಂಡಲ್ವುಡ್ ಗೆ ಬರೆ ಎಳೆದಂತೆ ದರ್ಶನ್ ಜೈಲು ಸೇರಿದ್ದಾರೆ. ಇತ್ತ ಕನ್ನಡ ಚಿತ್ರರಂಗದಲ್ಲಿ ಸಂಕಷ್ಟ ದಿನೇ ದಿನೇ ಜಾಸ್ತಿಯಾಗ್ತಿದೆ. ಸಿನಿಮಾಗಳು ಸೋಲುತ್ತಿವೆ. ನಿರ್ದೇಶಕರು, ನಿರ್ಮಾಪಕರು ಸೋಲುತ್ತಿದ್ದಾರೆ. ಇದಕ್ಕಾಗಿಯೇ ಕಲಾವಿದರ ಸಂಘ ಹಿಂದೆಂದೂ ಕೇಳರಿಯದ ರೀತಿಯಲ್ಲಿ ದೇವರ ಮೊರೆ ಹೋಗಿದ್ದಾರೆ. ಸಿನಿಮಾರಂಗಕ್ಕೆ ಒಳಿತಾಗಬೇಕು. ರಾಹು ಹಾಗೂ ಕೇತುವಿನಿಂದ ಪಾರಾಗಬೇಕು ಎಂಬ ಕಾರಣಕ್ಕೆ ಕಲಾವಿದರ ಸಂಘದ ವತಿಯಿಂದ ಯಾಗ ನಡೆಯುತ್ತಿದೆ. ಗಣ ಹೋಮ, ಮೃತ್ಯುಂಜಯ ಹೋಮ, ಆಶ್ಲೇಷ ಬಲಿ ಹಾಗೂ ಸರ್ಪಶಾಂತಿ ನಡೆಯುತ್ತಿದೆ.
ಸ್ಯಾಂಡಲ್ವುಡ್ ಹಿರಿಯ ನಟ ದೊಡ್ಡಣ್ಣ ದಂಪತಿ ಪೂಜೆಗೆ ಕೂತಿದ್ದಾರೆ. ಸುಮಾರು ಏಳೆಂಟು ಮಂದಿ ಪುರೋಹಿತರಿಂದ ಹೋಮ ನಡೆಯುತ್ತಿದೆ. ಚಿತ್ರರಂಗದ ಏಳಿಗೆಗೋಸ್ಕರ, ನಾವು ಹೋಮ, ಪೂಜೆ ಮಾಡಬೇಕು ಎಂದುಕೊಂಡಿದ್ದೇವೆ. ಚಿತ್ರರಂಗದ ಅಭಿವೃದ್ಧಿಗಾಗಿ ಈ ಯಾಗ ನಡೆಯುತ್ತಿದೆ ಎಂದು ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್ ಮಾಹಿತಿ ನೀಡಿದ್ದಾರೆ. ಈ ಪೂಜೆ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ನೇತೃತ್ವದಲ್ಲಿ ನಡೆಯುತ್ತಿದೆ. ‘ಚಲನಚಿತ್ರ ರಂಗವು ಚೈತನ್ಯವನ್ನು ಕಳೆದುಕೊಂಡಂತೆ ಆಗಿದೆ. ಅದಕ್ಕೆ ಮತ್ತೆ ಜೀವ ಚೈತನ್ಯ ಬರಬೇಕು. ಹಾಗೆ ಬರಬೇಕು ಅಂತಾದರೆ ಆ ಉದ್ಯಮಕ್ಕೆ ಅಧಿ ದೇವತೆಯಾದಂಥ ನಾಗದೇವರ ಆರಾಧನೆ ಆಗಬೇಕು. ಇದಕ್ಕಾಗಿ ಕಲಾವಿದರ ಸಂಘದಿಂದ ಹೋಮ ಹಾಗೂ ದೇವತಾರಾಧನೆಯನ್ನು ಮಾಡಲಾಗುತ್ತಿದೆ ಎಂದು ಪ್ರಕಾಶ್ ಅಮ್ಮಣ್ಣಾಯ ತಿಳಿಸಿದ್ದಾರೆ.
ಇನ್ನು ಚಿತ್ರರಂಗದ ಗಣ್ಯರು ಇದು ಸ್ಯಾಂಡಲ್ವುಡ್ಗೆ ಸಂಕಷ್ಟದ ಕಾಲ. ಇದಕ್ಕಾಗಿಯೇ ಈ ಯಾಗ, ಪೂಜೆಯೆಲ್ಲಾ ಅಂತಾ ಹೇಳ್ತಿದ್ದಾರೆ. ಸ್ಯಾಂಡಲ್ವುಡ್ಗೆ ಸಂಕಷ್ಟ ಬರಲು ಒಂದು ಕಾರಣ ದರ್ಶನ್ ಜೈಲು ಪ್ರಕರಣ ಅನ್ನೋದು ಎಲ್ಲರಿಗೂ ಗೊತ್ತು. ದರ್ಶನ್ ಈ ಪ್ರಕರಣದಿಂದ ಬಿಡುಗಡೆಯಾಗಿ ಬರಬೇಕು. ದರ್ಶನ್ ಕನ್ನಡ ಚಿತ್ರರಂಗದ ಜೊತೆಗೆ ನಿಂತರೆ ಮಾತ್ರ ಅದೊಂಥರಾ ಪವರ್. ಹೀಗಾಗಿಯೇ ದರ್ಶನ್ಗಾಗಿಯೇ ಇಲ್ಲಿ ಪೂಜೆ ನಡೆಯುತ್ತಿದೆ ಅನ್ನೋದು ಇನ್ಸೈಡ್ ಸ್ಟೋರಿ. ಜೊತೆಗೆ ಪೂಜೆ ಶುರುವಾಗುತ್ತಿದ್ದಂತೆ ಅಭಿಷೇಕ್ ಅಂಬರೀಶ್ ಆಗಮಿಸಿದ್ದರು. ಜೊತೆಗೆ ದರ್ಶನ್ ಅಣ್ಣನ ಸ್ಥಾನದಲ್ಲಿ ನಿಂತು ಪೂಜಾ ಕಾರ್ಯಕ್ರಮ ನೋಡಿಕೊಳ್ತಿದ್ದಾರೆ ರಾಕ್ಲೈನ್ ವೆಂಕಟೇಶ್. ಲವ್ಲಿ ಸ್ಟಾರ್ ಪ್ರೇಮ್ ದಂಪತಿ ಕೂಡಾ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ದರ್ಶನ್ಗಾಗಿ ಪೂಜೆ ಮಾಡಿಸಿದ್ರೆ ತಪ್ಪೇನು ಅಂತಾ ಕಲಾವಿದರು ಹೇಳ್ತಿದ್ದಾರೆ. ಅಂದ್ರೆ, ದರ್ಶನ್ ಈ ಸಂಕಷ್ಟದಿಂದ ಪಾರಾಗಲಿ ಅಂತಾ ಪೂಜೆ ಮಾಡಿಸ್ತಿದ್ದೀವಿ ಅನ್ನೋದನ್ನ ಪರೋಕ್ಷವಾಗಿ ಹೇಳ್ತಿದ್ದಾರೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು. ಹಿರಿಯ ನಟಿ ಸರೋಜಾ ದೇವಿಯೇ ದರ್ಶನ್ ಗಾಗಿ ಕಲಾವಿದರು ಹರಕೆ ತೀರಿಸಲಿ ಅಂತಾ ಹೇಳಿದ್ದಾರೆ. ಹೀಗಾಗಿಯೇ ಕಾಟೇರನಿಗಾಗಿ ಕಲಾವಿದರು ಮೃತ್ಯುಂಜಯ ಯಾಗ ನಡೆಸೋ ಮೂಲಕ ಆದಷ್ಟು ಬೇಗ ಜೈಲಿಂದ ಹೊರಬರಲಿ ಎಂದು ಪ್ರಾರ್ಥಿಸಿಕೊಳ್ತಿದ್ದಾರೆ. ಮೇಲ್ನೋಟಕ್ಕೆ ಇದು ಚಿತ್ರರಂಗದ ಏಳ್ಗೆಗೆ ಮಾಡುತ್ತಿರುವ ಪೂಜೆ ಅಂತಾ ಕಂಡುಬಂದ್ರೂ, ಸಂಕಷ್ಟದಲ್ಲಿರುವ ದರ್ಶನ್ಗಾಗಿಯೇ ಈ ಮಹತ್ವದ ಪೂಜೆ ಎನ್ನಲಾಗ್ತಿದೆ. ಇದಕ್ಕೆ ಸರಿಯಾಗಿ ದರ್ಶನ್ ಗೆ ಆಪ್ತರಾದವರೆಲ್ಲಾ ಈ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ಯಾವುದೇ ವ್ಯಕ್ತಿಗೆ ದಕ್ಕೆಯಾದ ಸಂದರ್ಭದಲ್ಲಿ, ಯಾವುದೇ ವ್ಯಕ್ತಿ ಸಂಕಷ್ಟದಲ್ಲಿ ಇದ್ದಾಗ ಮಾತ್ರ ಮೃತ್ಯುಂಜಯ ಹೋಮ ಮಾಡ್ತಾರೆ. ಸದ್ಯಕ್ಕೆ ಇಂಥಾ ಸ್ಥಿತಿಯಲ್ಲಿರೋ ನಟ ದರ್ಶನ್ ಮಾತ್ರ. ಆದ್ರೆ, ಕಲಾವಿದರ ಸಂಘ ಇದು ದರ್ಶನ್ಗಾಗಿ ನಡೆಯುತ್ತಿರೋ ಪೂಜೆ ಅಂತಾ ನೇರವಾಗಿ ಹೇಳಲು ರೆಡಿಯಿಲ್ಲ. ಆದ್ರೆ, ಕಾಟೇರನಿಗಾಗಿ ಕಲಾವಿದರು ಹರಕೆ ತೀರಿಸಿದ್ದು ಮಾತ್ರ ಸುಳ್ಳಲ್ಲ.
ನಮಸ್ಕಾರ

Shwetha M