Hitman ಫಾರ್ಮ್ ಮುಂಬೈಗೆ ಟೆನ್ಷನ್ – ಕೆಟ್ಟ ಮೇಲೆ ಬುದ್ಧಿ ಕಲಿತಾ ಅಂಬಾನಿ ಬ್ರಿಗೇಡ್?
ಸ್ವಾಭಿಮಾನಿ ಶರ್ಮಾ ನಾಯಕತ್ವ ಒಪ್ಪಿಕೊಳ್ತಾರಾ?

Hitman ಫಾರ್ಮ್ ಮುಂಬೈಗೆ ಟೆನ್ಷನ್ – ಕೆಟ್ಟ ಮೇಲೆ ಬುದ್ಧಿ ಕಲಿತಾ ಅಂಬಾನಿ ಬ್ರಿಗೇಡ್?ಸ್ವಾಭಿಮಾನಿ ಶರ್ಮಾ ನಾಯಕತ್ವ ಒಪ್ಪಿಕೊಳ್ತಾರಾ?

ಈ ಬಾರಿ ಐಪಿಎಲ್ ಸೌಂಡ್ ಮಾಡ್ತಿರುವಷ್ಟು ಬೇರೆ ಯಾವ ಸೀಸನ್ನಲ್ಲೂ ಇಷ್ಟು ಸೌಂಡ್ ಮಾಡಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಮೆಗಾ ಆಕ್ಷನ್ ಶುರುವಾಗಲಿದೆ. ಇದ್ರಲ್ಲಿ ಯಾವ ತಂಡ ಯಾರನ್ನ ಉಳಿಸಿಕೊಳ್ಳಲಿದೆ ಎಂಬ ಕ್ಯೂರಿಯಾಸಿಟಿ ಫ್ಯಾನ್ಸ್ ಗಿದೆ. ಇದ್ರ ಮಧ್ಯೆ ಮುಂಬೈ ಇಂಡಿಯನ್ಸ್ ಸಿಕ್ಕಾಪಟ್ಟೆ ಟೆನ್ಷನ್ನಲ್ಲಿದೆ. ಒಂದೆಡೆ ಟೀಮ್ ನ ಚಾರ್ಮ್ ಉಳಿಸಿಕೊಳ್ಳಬೇಕು. ಮತ್ತೊಂದೆಡೆ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲೇಬೇಕಿದೆ. ಇದ್ರ ಮಧ್ಯೆ ಕಳೆದ ಸಾಲಿನ ಹೀನಾಯ ಸೋಲನ್ನ ಮೆಟ್ಟಿ ಗ್ರೇಟ್ ಕಮ್ ಬ್ಯಾಕ್ ಮಾಡಿಕೊಂಡ್ರೆ ಮಾತ್ರ ಅಂಬಾನಿ ಬ್ರ್ಯಾಂಡ್ ಗೆ ವ್ಯಾಲ್ಯೂ ಬರೋಕೆ ಸಾಧ್ಯ. ಹೀಗಾಗಿ ಮುಂಬೈ ಇಂಡಿಯನ್ಸ್ ಹೇಗಾದ್ರೂ ಸರಿಯೇ ರೋಹಿತ್ ಶರ್ಮಾ ತಂಡದಲ್ಲೇ ಇರಬೇಕು ಎಂಬ ಹಠಕ್ಕೆ ಬಿದ್ದಿದೆ. ಇದನ್ನ ಸ್ವಾಭಿಮಾನಿ ರೋಹಿತ್ ಶರ್ಮಾ ಒಪ್ಪಿಕೊಳ್ತಾರಾ?, ಹಿಟ್ ಮ್ಯಾನ್ ಈ ಬಾರಿ ಕೇವಲ ಆಟಗಾರನಾಗಿ ಮುಂಬೈ ಟೀಮ್ ನಲ್ಲಿ ಇರಲು ಸಾಧ್ಯಾನಾ? ರೋಹಿತ್ ಶರ್ಮಾಗೆ ಪಟ್ಟ ಕಟ್ಟದೇ ಇದ್ರೆ ಅಂಬಾನಿ ಬ್ರಿಗೇಡ್ ಬ್ರ್ಯಾಂಡ್ ವ್ಯಾಲ್ಯೂ ಕುಸಿದು ಹೋಗುತ್ತಾ? ಈ ಎಲ್ಲಾ ವಿಚಾರದ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಗ್ಯಾರಂಟಿ ಪರಿಷ್ಕರಣೆಗೆ ಮುಂದಾದ ರಾಜ್ಯ ಸರ್ಕಾರ! – ಮಹತ್ವದ ನಿರ್ಧಾರಕ್ಕೆ ಹೈಕಮಾಂಡ್‌ ಅಸ್ತು?

5 ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ಈ ಬಾರಿ ಮಾಡಿದ ಒಂದೇ ಒಂದು ಎಡವಟ್ಟು, ತಂಡದ ಜನಪ್ರಿಯತೆಯನ್ನೇ ಪಾತಾಳಕ್ಕೆ ಬೀಳುವಂತೆ ಮಾಡಿದೆ. ಇದು ಮುಂಬೈ ಟೀಮ್ ತಾನೇ ಮಾಡಿಕೊಂಡ ಸ್ವಯಂಕೃತ ಅಪರಾಧವೆಂದ್ರೂ ತಪ್ಪಲ್ಲ. ಮಾಡಿದ ತಪ್ಪು ಮತ್ತೆ ಮತ್ತೆ ಮಾಡೋಕೆ ಅದು ಅಂಬಾನಿ ಬ್ರಿಗೇಡ್.. ಏನ್ ಮಾಡಿದ್ರೂ ಬ್ಯುಸಿನೆಸ್ ಅನ್ನೋದೇ ಇಂಪಾರ್ಟೆಂಟ್. ಹೀಗಾಗಿ ಮತ್ತೆ ಮುಂಬೈ ಇಂಡಿಯನ್ಸ್ ಬ್ರಾಂಡ್ ವ್ಯಾಲ್ಯೂ ಹೆಚ್ಚಿಸಬೇಕೆಂದ್ರೆ, ಕಳೆದ ಬಾರಿ ತಗೊಂಡ ರಾಂಗ್ ಡಿಸಿಷನ್ ನನ್ನ ಈ ಬಾರಿ ರೈಟ್ ಡಿಸಿಷನ್ ಆಗಿ ಮಾಡ್ಬೇಕು. ಜೊತೆಗೆ ಮುಂಬೈ ಫ್ಯಾನ್ಸ್ ಮತ್ತೆ ಬಹುಪರಾಕ್ ಹೇಳುವಂತೆ ಮಾಡ್ಬೇಕು. ಅದಕ್ಕೆ ಮುಂಬೈ ಮ್ಯಾನೇಜ್ ಮೆಂಟ್ ಗ್ರೇಟ್ ಪ್ಲಾನ್ ಮಾಡ್ತಿದೆ. ಅದೆಂಥಾ ಸ್ಟಾರ್ ಆಟಗಾರರೇ ಇರಲಿ, ಟೀಮ್ ಕ್ಯಾಪ್ಟನ್ ಮಾತ್ರ ರೋಹಿತ್ ಶರ್ಮಾ ಬೆಸ್ಟ್ ಎಂಬ ತೀರ್ಮಾನಕ್ಕೆ ಬಂದಿದೆ. ಒಂದ್ಸಲ ನೀನ್ ಕ್ಯಾಪ್ಟನ್, ಇನ್ನೊಂದ್ಸಲ ನೀನ್ ಕ್ಯಾಪ್ಟನ್ ಅಂತಾ ಚಾಯ್ಸ್ ಇಟ್ಕೊಂಡ್ ಕೂರೂಕೆ ಆಟಗಾರರೇನು ಬಿಟ್ಟಿಯಾಗಿಯಂತೂ ಸಿಗಲ್ಲ. ಅವ್ರಲ್ಲೂ ಸ್ವಾಭಿಮಾನವಿರುತ್ತೆ. ಅದಕ್ಕೆ ಈಗ ಎದ್ದಿರೋ ಪ್ರಶ್ನೆಯೇ ಸ್ವಾಭಿಮಾನಿ ರೋಹಿತ್ ಶರ್ಮಾ ಮುಂಬೈ ಮ್ಯಾನೇಜ್ಮೆಂಟ್ ನ ಮಾತು ಕೇಳ್ತಾರಾ ಅನ್ನೋದು. ಒಂದ್ಸಲ ಆಗಿರೋ ಅವಮಾನವೇ ಬೆಟ್ಟದಷ್ಟು. ಇದನ್ನ ರೋಹಿತ್ ಶರ್ಮಾ ಸಹಿಸಿಕೊಂಡಿರಬಹುದು. ಆದ್ರೆ, ಈ ಬಾರಿ ಹಾಗಿಲ್ಲ. ಮೆಗಾ ಹರಾಜು ಆಟಗಾರರಿಗೆ ಪ್ಲಸ್ ಆಗಿದೆ. ಜೊತೆಗೆ ಬೇರೆ ಬೇರೆ ಟೀಮ್ ಗಳಿಗೂ ತಮ್ಮ ಟೀಮ್ ನ್ನ ಬಲಿಷ್ಠಗೊಳಿಸಲು ಇದೇ ರೈಟ್ ಟೈಮ್. ಹೀಗಿರುವಾಗ ಹಿಟ್ ಮ್ಯಾನ್ ಗೆ ಭರ್ಜರಿ ಆಫರ್ ಈಗಾಗಲೇ ಬರ್ತಿದೆ. ಜೊತೆಗೆ ಕಳೆದ ಸೀಸನ್ ನಲ್ಲಿಯೇ ಮುಂಬೈ ಟೀಮ್ ನಿಂದ ಒಂದು ಹೆಜ್ಜೆ ಆಲ್ರೆಡಿ ಹೊರಗಿಟ್ಟಂತೆ ಕಂಡುಬಂದಿತ್ತು. ಆಪ್ತರ ಜೊತೆಯೂ ತಂಡ ತೊರೆಯೋ ಬಗ್ಗೆ ಮಾತಾಡಿದ್ದರು. ಇದ್ರ ನಡುವೆ ತನ್ನನ್ನ ಅವಮಾನ ಮಾಡಿದ ಟೀಮ್ ನಲ್ಲೇ ಮತ್ತೆ ಕಂಟಿನ್ಯೂ ಆಗ್ತಾರಾ ಅನ್ನೋ ಪ್ರಶ್ನೆ ಈಗ ಎದುರಾಗಿದೆ.

ಸದ್ಯ 2025 ಐಪಿಎಲ್ನಲ್ಲಿ ಮುಂಬೈ ಫ್ರಾಂಚೈಸಿ ರೋಹಿತ್ ಶರ್ಮಾರನ್ನ ಉಳಿಸಿಕೊಳ್ಳಲು ಶತಪ್ರಯತ್ನ ನಡೆಸ್ತಿದೆ. ಬಿಸಿಸಿಐ ಪ್ರಕಾರ ಐಪಿಎಲ್ನ ಪ್ರತಿ ತಂಡ 6 ಆಟಗಾರರನ್ನ ಉಳಿಸಿಕೊಳ್ಳಬಹುದು. ಹೀಗಾಗಿ ಮುಂಬೈ ಇಂಡಿಯನ್ಸ್ ತನ್ನ ಫಸ್ಟ್ ಹಾಗೂ ಬೆಸ್ಟ್ ಚಾಯ್ಸ್ ಆಗಿ ರಿಟೈನ್ ಪ್ಲೇಯರ್ ಆಗಿ ರೋಹಿತ್ ಶರ್ಮಾರನ್ನ ಆಯ್ಕೆ ಮಾಡಿಕೊಳ್ಳುತ್ತದೆ. ಸೂರ್ಯಕುಮಾರ್, ಬೂಮ್ರಾ, ಹಾರ್ದಿಕ್ ಪಾಂಡ್ಯ ಇವರಿಗಿಂತ ರೋಹಿತ್‌ ಗೆ ಹೆಚ್ಚಿನ ಹಣ ಪಾವತಿ ಮಾಡೋಕೂ ರೆಡಿಯಾಗಿದೆ. ಇನ್ನು ರೋಹಿತ್ ಶರ್ಮಾ ಅತ್ಯಂತ ಅನುಭವ ಹೊಂದಿರುವ ಸ್ಟಾರ್ ಪ್ಲೇಯರ್. ದೊಡ್ಡ ದೊಡ್ಡ ಟೂರ್ನಿಗಳಲ್ಲಿ ಆಡಿ ಪಂದ್ಯವನ್ನ ಗೆಲ್ಲಿಸಿದ ಕ್ಯಾಪ್ಟನ್. ಹೀಗಾಗಿ ಮುಂಬೈ ಮತ್ತೆ ರಿಟೈನ್ ಮಾಡಿಕೊಳ್ಳದೆ ಬಿಡಲ್ಲ ಮುಂಬೈ.  ಈಗಂತೂ ರೋಹಿತ್ ಬ್ಯಾಟಿಂಗ್ ಶೈಲಿಯಲ್ಲಿ ಯಾವುದೇ ಚೇಂಜ್ ಆಗಿಲ್ಲ. ಮೊದಲಿನಂತೆ ಹೊಡಿಬಡಿ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಮುಂಬೈ ಫ್ರಾಂಚೈಸಿಯು ಯಾವುದೆ ಕಾರಣಕ್ಕೂ ಹಿಟ್ಮ್ಯಾನ್ ವಿಚಾರದಲ್ಲಿ ಬಿಟ್ಟುಕೊಡೋ ಮಾತೇ ಇಲ್ಲ. ನೋ ವೇ.. ಚಾನ್ಸೇ ಇಲ್ಲ ಅನ್ನೋ ತೀರ್ಮಾನಕ್ಕೆ ಬಂದಿದೆ ಮುಂಬೈ ಪ್ರಾಂಚೈಸಿ.

ಚಾಂಪಿಯನ್ ಕ್ಯಾಪ್ಟನ್ ರೋಹಿತ್ ಶರ್ಮಾನ ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿದ್ದ ಮೇಲೆ ಮುಂಬೈ ಇಂಡಿಯನ್ಸ್ನ ಬ್ರ್ಯಾಂಡ್ ವ್ಯಾಲ್ಯೂಗೂ ಹೊಡೆತ ಕೊಟ್ಟಿತ್ತು. ಮುಂದಿನ ಸೀಸನ್ಗೂ ಮುನ್ನ ರೋಹಿತ್ ಏನಾದ್ರೂ, ಬೇರೆ ತಂಡ ಸೇರಿದ್ರೆ, ಮುಂಬೈ ಜನಪ್ರೀಯತೆಗೆ ದೊಡ್ಡ ಹೊಡೆತ ಬೀಳಲಿದೆ. ಬ್ರ್ಯಾಂಡ್ ವ್ಯಾಲ್ಯೂ ಬಿದ್ದೋಗೊ ಭಯ ಅಂಬಾನಿ ಬ್ರಿಗೇಡ್ನ ಕಾಡ್ತಿದೆ. ಅದೇ ರೋಹಿತ್ ತಂಡದಲ್ಲಿ ಉಳಿದ್ರೆ, ಫ್ರಾಂಚೈಸಿಗೆ ಹಳೆ ಚಾರ್ಮ್ ಬರುತ್ತೆ. ಇದ್ರ ಜೊತೆಗೆ ಈ ವರ್ಷದಲ್ಲಿ ಹಿಟ್ಮ್ಯಾನ್ ರೋಹಿತ್ ಶರ್ಮಾ ಭಯಂಕರ ಫಾರ್ಮ್ನಲ್ಲಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಆರ್ಭಟಿಸಿದ್ದ ರೋಹಿತ್, ಕಳೆದ ಶ್ರೀಲಂಕಾ ಪ್ರವಾಸದಲ್ಲೂ ಬೌಂಡರಿ, ಸಿಕ್ಸರ್ಗಳ ಸುರಿಮಳೆ ಸುರಿಸಿದ್ದಾರೆ. 37ರ ವಯಸ್ಸಿನಲ್ಲೂ ಬೌಲರ್ಗಳ ಬೆಂಡೆತ್ತಿ ಘರ್ಜಿಸಿದ್ದಾರೆ. ರೋಹಿತ್ ಶರ್ಮಾರ ಸಾಲಿಡ್ ಫಾರ್ಮ್, ಅಗ್ರೆಸ್ಸಿವ್ ಆಟ ಮುಂಬೈ ಫ್ರಾಂಚೈಸಿಯ ಕಣ್ಣು ತೆರೆಸಿದೆ. ರೋಹಿತ್ ಶರ್ಮಾಗಿರೋ ಅನುಭವ ಸದ್ಯ ಮುಂಬೈ ತಂಡದಲ್ಲಿರೋ ಯಾರಿಗೂ ಇಲ್ಲ. ಕಳೆದ ಸೀಸನ್ ನಲ್ಲಿ ಒಡೆದ ಮನೆಯಾಗಿದ್ದ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಒನ್ ಫ್ಯಾಮಿಲಿ ಒನ್ ಟೀಮ್ ಆಗಬೇಕೆಂದ್ರೆ, ರೋಹಿತ್ ಶರ್ಮಾ ನಾಯಕ ಆಗಲೇಬೇಕು.

ಕಳೆದ ಸೀಸನ್ಗೂ ಮುನ್ನ ಹಾರ್ದಿಕ್ ಪಾಂಡ್ಯನ ಕರೆ ತಂದು ಪಟ್ಟಕಟ್ಟಿ ಯಡವಟ್ಟು ಮಾಡಿಕೊಂಡಿದ್ದ ಫ್ರಾಂಚೈಸಿ ಈ ಸೀಸನ್ಗೂ ಮುನ್ನವೇ ಪಾಂಡ್ಯಗೆ ಗೇಟ್ಪಾಸ್ ನೀಡಲು ಸಿದ್ಧತೆ ನಡೆಸಿಕೊಂಡಿದೆ. ಪಾಂಡ್ಯ ನಾಯಕನಾಗಿ ಫ್ಲಾಪ್ ಆಗಿರೋದು ಮಾತ್ರವೇ ಕಾರಣವಲ್ಲ. ರೋಹಿತ್ ಶರ್ಮಾರನ್ನ  ತಂಡದಲ್ಲೇ ಉಳಿಸಿಕೊಳ್ಳಬೇಕು ಅನ್ನೋದೇ ಇದ್ರ ಹಿಂದಿರೋ ಉದ್ದೇಶ. ಕಳೆದ ಸಲ ಕೈ ಸುಟ್ಟು ಕೊಂಡಿರೋ ಫ್ರಾಂಚೈಸಿಗೆ ಕೆಟ್ಟ ಮೇಲೆ ಬುದ್ಧಿ ಬಂದಂತಿದೆ. ಒಂದು ವೇಳೆ ರೋಹಿತ್ ಶರ್ಮಾ ಮತ್ತೆ ಮುಂಬೈ ಕ್ಯಾಪ್ಟನ್ ಆದ್ರೆ ಚಾಂಪಿಯನ್ ಲಕ್ ಅಂತೂ ಇದೆ. ಆದ್ರೆ, ಸ್ವಾಭಿಮಾನಿ ರೋಹಿತ್ ಶರ್ಮಾರನ್ನ ಕಟ್ಟಿಹಾಕಿಕೊಂಡು ಇರಲು ಮುಂಬೈ ಟೀಮ್ ಗೆ ಸಾಧ್ಯವೇ.. ಇದೇ ಸದ್ಯದ ಕುತೂಹಲ.

Shwetha M