ವಾಲ್ಮೀಕಿ ಹಗರಣ ಕೇಸ್‌ ನ ದೋಷಾರೋಪ ಪಟ್ಟಿ ರೆಡಿ- ಎಸ್‌ಐಟಿ ಸಲ್ಲಿಸಿದ ಪಟ್ಟಿಯಲ್ಲಿ ನಾಗೇಂದ್ರ, ಬಸನಗೌಡ ದದ್ದಲ್ ಹೆಸರು ಮಿಸ್!

ವಾಲ್ಮೀಕಿ ಹಗರಣ ಕೇಸ್‌ ನ ದೋಷಾರೋಪ ಪಟ್ಟಿ ರೆಡಿ- ಎಸ್‌ಐಟಿ ಸಲ್ಲಿಸಿದ ಪಟ್ಟಿಯಲ್ಲಿ ನಾಗೇಂದ್ರ, ಬಸನಗೌಡ ದದ್ದಲ್ ಹೆಸರು ಮಿಸ್!

ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ 89.63 ಕೋಟಿ ಅಕ್ರಮ ವರ್ಗಾವಣೆ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿ ಸಿದ್ದ ಪಡಿಸಿದೆ.

ಎಸ್‌ಐಟಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3,072 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ಆದ್ರೆ ಈ ಪಟ್ಟಿಯಲ್ಲಿ ನಾಗೇಂದ್ರ ಮತ್ತು ಬಸನಗೌಡ ದದ್ದಲ್ ಅವರ ಹೆಸರಿಲ್ಲದೇ ಇರುವುದು ಕಂಡು ಬಂದಿದೆ. ಅಷ್ಟೇ ಅಲ್ಲದೇ ದೋಷಾರೋಪ ಪಟ್ಟಿಯಲ್ಲಿ ಇಬ್ಬರ ಹೇಳಿಕೆಗಳನ್ನು ದಾಖಲಿಸಿಲ್ಲ. ಪ್ರಕರಣದಲ್ಲಿ ಈ 12 ಜನ ಆರೋಪಿಗಳು ಮತ್ಯಾರ ಮೇಲೂ ಅನುಮಾನ ಇಲ್ಲ ಎಂದಿದ್ದಾರೆಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ದುಲೀಪ್ ಟ್ರೋಫಿಯಲ್ಲಿ ರೋಹಿತ್ & ಕೊಹ್ಲಿ ಫೈಟ್? – ಸ್ಟಾರ್‌ ಪ್ಲೇಯರ್ಸ್‌.. ಟೂರ್ನಿ ಟ್ವಿಸ್ಟ್‌ ಏನು?

ವಾಲ್ಮೀಕಿ ನಿಗಮದ ಹಣ ಕೊಳ್ಳೆ ಹೊಡೆಯಲು ಅಕ್ಟೋಬರ್ 2023ರಲ್ಲೇ ಪ್ಲಾನ್ ನಡೆದಿತ್ತು. ಮಾನ್ಯತಾ ಟೆಕ್ ಪಾರ್ಕ್ನ ಫ್ಲಾಟ್‌ನಲ್ಲಿ ಮೊದಲ ಡೀಲಿಂಗ್ ಆಗಿತ್ತು. 89 ಕೋಟಿ ಹೇಗೆಲ್ಲಾ ಹೊಡೆಯಬೇಕು, ನಕಲಿ ದಾಖಲಾತಿ ಸೃಷ್ಟಿಸಲು ಯೋಜನೆ ರೂಪಿಸಲಾಗಿತ್ತು. ನಾಗೇಂದ್ರ ಆಪ್ತ ನೆಕ್ಕುಂಟಿ ನಾಗಾರಾಜ್ ಬಳಸಿ ಹಣ ಹೊಡೆಯಲು ಚಿಂತನೆ ಮಾಡಲಾಗಿತ್ತು.

ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ್ ಪರಿಚಯ ಮಾಡಿಕೊಂಡ ಸತ್ಯನಾರಾಯಣ ವರ್ಮ, ಪರ್ಸೆಂಟೇಜ್ ಲೆಕ್ಕದಲ್ಲಿ ಕೋಟಿ ಕೋಟಿ ಹಣ ಕೊಡಿಸೋದಾಗಿ ವಂಚನೆ ಮಾಡಲಾಗಿದೆ. ಸಾಯಿತೇಜ @ ಶಿವಕುಮಾರ್ ವ್ಯಕ್ತಿಯನ್ನು ನಕಲಿ ಬ್ಯಾಂಕ್ ಸಿಬ್ಬಂದಿಯ ಹಾಗೇ ಬಿಂಬಿಸಲಾಗಿದೆ. ಪದ್ಮನಾಭ್, ಪರುಶರಾಮ್ ನಕಲಿ ಸಿಬ್ಬಂದಿಗೆ ಸಹಾಯ ಮಾಡಿದ್ದಾರೆ.

94.73 ಕೋಟಿ ಹಣವನ್ನು ಕೂಡ ಫಸ್ಟ್ ಫೈನಾನ್ಸ್ ಬ್ಯಾಂಕ್‌ಗೆ ವರ್ಗಾಯಿಸಲಾಗಿದೆ. ಫಸ್ಟ್ ಫಿನಾನ್ಸ್ ಬ್ಯಾಂಕ್‌ನಿಂದ 18 ನಕಲಿ ಕಂಪನಿ ಅಕೌಂಟ್‌ಗೆ ವರ್ಗಾವಣೆಯಾಗಿದೆ. ಆರೋಪಿಗಳು 94 ಕೋಟಿ ಹಣ ವರ್ಗಾವಣೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

Shwetha M

Leave a Reply

Your email address will not be published. Required fields are marked *