ಡೆಲ್ಲಿ ಬಿಟ್ಟು ಹಾರಲ್ಲ ರಿಷಭ್ ಪಂತ್ – ಗಂಗೂಲಿ ಸೂತ್ರ ಏನು?

ಡೆಲ್ಲಿ ಬಿಟ್ಟು ಹಾರಲ್ಲ ರಿಷಭ್ ಪಂತ್ – ಗಂಗೂಲಿ ಸೂತ್ರ ಏನು?

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಸಿಗೋ ಅಪ್ಡೇಟ್ಸ್ ಕೆಲವೊಂದು ರೂಮರ್ಸ್ ಆದ್ರೆ, ಕೆಲವೊಂದನ್ನ ಪ್ರ್ಯಾಂಚೈಸಿಗಳೇ ನ್ಯೂಸ್ ಮಾಡ್ತಿವೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಪ್ರಾಂಚೈಸಿ ವಿಚಾರದಲ್ಲಿ ಬಿಗ್ ಅಪ್ಡೇಟ್ ಸಿಕ್ಕಿದೆ. ಡಿಸಿ ಫ್ರಾಂಚೈಸಿಯ ನಿರ್ದೇಶಕ ಸೌರವ್ ಗಂಗೂಲಿ ರಿಷಭ್ ಪಂತ್ ವಿಚಾರದಲ್ಲಿ ಎದ್ದಿರೋ ರೂಮರ್ಸ್ ಗೆ ಬ್ರೇಕ್ ಹಾಕಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಈ ವರ್ಷ ಸಿಕ್ಕಾಪಟ್ಟೆ ಅಲರ್ಟ್ ಆಗಿದೆ. ಕೋಚ್ ವಿಚಾರದಲ್ಲೂ, ಕ್ಯಾಪ್ಟನ್ ವಿಚಾರದಲ್ಲೂ ಡಿಸಿ ಟೀಮ್ ಸ್ಟ್ರಾಂಗ್ ಆಗಿಯೇ ಡಿಸಿಷನ್ ತಗೊಳ್ತಿದೆ. ಇದೀಗ ರಿಷಭ್ ಪಂತ್ ಡಿಸಿ ಟೀಮ್ ನಿಂದ ಔಟ್ ಆಗ್ತಾರೆ ಎಂಬ ವಿಚಾರಕ್ಕೂ ದಾದಾ ಫುಲ್ ಸ್ಟಾಪ್ ಇಟ್ಟಿದ್ದಾರೆ. ಸೌರವ್ ಗಂಗೂಲಿ ಹೇಳಿದ್ದೇನು, ಡಿಸಿ ಪ್ರಾಂಚೈಸಿ ನಿರ್ಧಾರವೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:‌ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಲೆಕ್ಕಕ್ಕಿಲ್ವಾ? – BCCI ಎಡವಟ್ಟೇನು?

ಡಿಸಿ ಸ್ಟಾರ್ ರಿಷಭ್ ಪಂತ್

ಈ ಬಾರಿಯ ಐಪಿಎಲ್ ಹರಾಜಿಗೂ ಮೊದಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮೆಗಾ ಆಪರೇಷನ್ ನಡೆದಿತ್ತು. ಮೊದಲಿಗೆ ಮುಖ್ಯ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್ ಅವ್ರನ್ನ ಕೆಳಗಿಳಿಸಲಾಗಿತ್ತು. ಇದರ ಬೆನ್ನಲ್ಲೇ ಶುರುವಾಗಿದ್ದು ರಿಷಭ್ ಪಂತ್ ತಂಡ ತೊರೆಯಲ್ಲಿದ್ದಾರೆ ಎಂಬ ಸುದ್ದಿ. ಯಾಕೆಂದ್ರೆ, ರಿಷಫ್ ಮತ್ತು ರಿಕಿ ಪಾಂಟಿಂಗ್ ಜೊತೆ ಬಾಂಧವ್ಯ ಚೆನ್ನಾಗಿತ್ತು. ಇದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರಿಷಭ್ ಎಂಟ್ರಿ ಕೊಡ್ತಾರೆ ಎನ್ನಲಾಗ್ತಿತ್ತು. ಅದು ಕೂಡಾ ತನ್ನ ಗುರು ಮಹೇಂದ್ರ ಸಿಂಗ್ ಧೋನಿಗಾಗಿ ಸಿಎಸ್ಕೆ ತಂಡವನ್ನ ರಿಷಭ್ ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿತ್ತು. ಪಂಥ್ ರನ್ನ ಸಿಎಸ್ಕೆಗೆ ತರಲು ಧೋನಿ ಮೆಗಾ ಪ್ಲ್ಯಾನ್ ಮಾಡ್ತಿದ್ದಾರೆ. ಜೊತೆಗೆ CSK ಕ್ಯಾಪ್ಟನ್ ಆಗಿ ರಿಷಭ್ ಆಯ್ಕೆಯಾಗ್ತಾರೆ ಎಂದೇ ಹೇಳಲಾಗ್ತಿತ್ತು. ಅದ್ರ ಜೊತೆಗೆ ಧೋನಿ ಸಿಎಸ್ಕೆ ಟೀಮ್ ತೊರೆದ್ರೆ, CSK ವಿಕೆಟ್ ಕೀಪರ್ ಆಗಿ ರಿಷಭ್ ಬೆಸ್ಟ್ ಚಾಯ್ಸ್ ಅಂತಾನೇ ಹೇಳಲಾಗ್ತಿತ್ತು. ಹೀಗಾಗಿ ಇಷ್ಟು ದಿನ ರಿಷಭ್ ಪಂತ್ ಡೆಲ್ಲಿ ಬಿಡ್ತಾರೆ ಅನ್ನೋ ವಿಚಾರವೇ ಹೈಲೆಟ್ ಆಗಿತ್ತು. ಇದೀಗ ಈ ವಿಚಾರದ ಬಗ್ಗೆ ದೊಡ್ಡ ತೀರ್ಮಾನಕ್ಕೆ ಬಂದಿದ್ದಾರೆ ದಾದಾ. ಈ ಬಗ್ಗೆ ಸೌರವ್ ಗಂಗೂಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಡಿಸಿ ಫ್ರಾಂಚೈಸಿ ನಿರ್ದೇಶಕರೂ ಆಗಿರುವ ಸೌರವ್ ಗಂಗೂಲಿ ರಿಷಭ್ ಪಂತ್ ಬಗ್ಗೆ ಎದ್ದಿರೋ ರೂಮರ್ಸ್ಗೆ ಬ್ರೇಕ್ ಹಾಕಿದ್ದಾರೆ. ಡಿಸಿ ಫ್ರಾಂಚೈಸಿ ರಿಷಭ್ ಪಂಥ್ ಕೈ ಬಿಡುವುದಿಲ್ಲ. ಚಾನ್ಸೇ ಇಲ್ಲ ಎಂದು ದಾದಾ ಸ್ಪಷ್ಟನೆ ನೀಡಿದ್ದಾರೆ.

2021 ರಲ್ಲಿ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆಗಿ ನೇಮಕವಾಗಿದ್ದರು. ಪಂತ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಒಮ್ಮೆಯೂ ಫೈನಲ್ಗೆ ಪ್ರವೇಶಿಸಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೂಡ 2025ರ ಮೆಗಾ ಹರಾಜಿನ ಮೂಲಕ ಹೊಸ ತಂಡ ಕಟ್ಟುವ ಪ್ಲ್ಯಾನ್ನಲ್ಲಿದೆ. ಮತ್ತೊಂದೆಡೆ ಮಹೇಂದ್ರ ಸಿಂಗ್ ಧೋನಿ ಮುಂದಿನ ವರ್ಷ ಐಪಿಎಲ್ ಆಡ್ತಾರೋ ಇಲ್ವೋ ಕನ್ಫರ್ಮ್ ಇಲ್ಲ. ಧೋನಿ ಸ್ಥಾನಕ್ಕೆ ಪಂತ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂಬ ಬಗ್ಗೆ ಚರ್ಚೆಯಾಗ್ತಿದೆ. ಅಲ್ದೇ ಧೋನಿಯವ್ರಿಗೆ ರಿಷಭ್ ಪಂತ್ ಫೆವರೇಟ್. ಧೋನಿ ಪರಿವಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿಯೇ ಪಂತ್ ಡಿಸಿಯಿಂದ ಔಟ್ ಆಗ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ಇದಕ್ಕೆಲ್ಲಾ ಈಗ ಸ್ವತಃ ದಾದಾ ಸೌರವ್ ಗಂಗೂಲಿಯೇ ಫುಲ್ ಸ್ಟಾಪ್ ಹಾಕಿದ್ದಾರೆ.

Shwetha M

Leave a Reply

Your email address will not be published. Required fields are marked *