ಆಸಿಸ್ ಮಣಿಸಿದ್ರೆ ಭಾರತಕ್ಕೆ ಚಾಂಪಿಯನ್ ಶಿಪ್? -5 ಮ್ಯಾಚ್‌.. ಹಗಲು ರಾತ್ರಿ ಸೂತ್ರವೇನು?

ಆಸಿಸ್ ಮಣಿಸಿದ್ರೆ ಭಾರತಕ್ಕೆ ಚಾಂಪಿಯನ್ ಶಿಪ್? -5 ಮ್ಯಾಚ್‌.. ಹಗಲು ರಾತ್ರಿ ಸೂತ್ರವೇನು?

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪಂದ್ಯ ಅಂದ್ರೇನೇ ಅದೇನೋ ಕಿಕ್ಕು. ವಿಶ್ವಕ್ರಿಕೆಟ್ನ ಬಲಿಷ್ಠ ತಂಡಗಳಾಗಿರುವ ಟೀಂ ಇಂಡಿಯಾ ಮತ್ತು ಆಸಿಸ್ ತಂಡಗಳು ಇತಿಹಾಸದುದ್ದಕ್ಕೂ ಜಿದ್ದಾಜಿದ್ದಿನ ಪೈಪೋಟಿ ಮಾಡಿಕೊಂಡು ಬಂದಿವೆ. ಇದೀಗ ಉಭಯ ರಾಷ್ಟ್ರಗಳ ನಡುವೆ ಹೈವೋಲ್ಟೇಜ್ ಟೆಸ್ಟ್ ಪಂದ್ಯಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅದೂ ಕೂಡ ಹಗಲುರಾತ್ರಿ ಪಂದ್ಯವೂ ಇರೋದ್ರಿಂದ ಬಾರೀ ಕುತೂಹಲ ಕೆರಳಿಸಿದೆ. ನವೆಂಬರ್ 22ರಂದು ಶುರುವಾಗಲಿರುವ ಟೆಸ್ಟ್ ಸರಣಿ ಹಲವು ಕಾರಣಗಳಿಂದ ವಿಶೇಷವಾಗಿದೆ. ಅಷ್ಟಕ್ಕೂ ಪಂದ್ಯ ನಡೆಯೋದೆಲ್ಲಿ? ಪಿಂಕ್ ಬಾಲ್ನಲ್ಲಿ ಉಭಯ ತಂಡಗಳ ಪ್ಲ್ಯಾನ್ ಹೇಗಿದೆ? ಟೆಸ್ಟ್ ಸರಣಿ ಉಭಯ ತಂಡಗಳಿಗೆ ಅದೆಷ್ಟು ಇಂಪಾರ್ಟೆಂಟ್ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಆಯ್ಕೆಗೆ ದೆಹಲಿಯಲ್ಲಿ ಕಸರತ್ತು – ಟಿಕೆಟ್‌ ಗೊಂದಲಕ್ಕೆ ಇಂದೇ ತೆರೆ?

ಸೆಪ್ಟೆಂಬರ್ ತಿಂಗಳಲ್ಲಿ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಬಳಿಕ ಟೀಂ ಇಂಡಿಯಾ ನಾನ್ಸ್ಟಾಪ್ ಸರಣಿಗಳನ್ನ ಆಡಲಿದೆ. ನ್ಯೂಜಿಲೆಂಡ್, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳ ವಿರುದ್ಧ ಹಲವು ಮಾದರಿಗಳಲ್ಲಿ ಸಿರೀಸ್ ಎದುರಾಗಲಿವೆ. ಈ ಪೈಕಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸಿರೀಸ್ ಅತ್ಯಂತ ಕುತೂಹಲ ಕೆರಳಿಸಿದೆ. ಈಗಾಗ್ಲೇ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬ್ಯಾಕ್ ಟು ಬ್ಯಾಕ್ ಟೆಸ್ಟ್ ಸರಣಿ ಗೆದ್ದ ಹೆಗ್ಗಳಿಕೆ ಭಾರತ ತಂಡದ್ದಾಗಿದೆ. 2019ರ ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಟ್ರೋಫಿಯನ್ನ ಬಿಟ್ಟುಕೊಟ್ಟಿಲ್ಲ. ಇದೀಗ ರೋಹಿತ್ ಶರ್ಮಾ ಸಾರಥ್ಯದಲ್ಲಿ ಮತ್ತೊಮ್ಮೆ ಟ್ರೋಫಿ ಗೆಲ್ಲಲು ಭಾರತ ತಂಡ ಕಾಂಗರೂ ನಾಡಿಗೆ ದಾಂಗುಡಿ ಇಡಲಿದೆ. ಹೊಸ ಕೋಚ್ ಗೌತಮ್ ಗಂಭೀರ್ ಮುಂದಿರುವ ಸರಣಿಗಳ ಪೈಕಿ ಬಹುದೊಡ್ಡ ಸವಾಲು ಇದಾಗಿದ್ದು, ಟೀಮ್ ಇಂಡಿಯಾ ಸಕಲ ತಯಾರಿಯೊಂದಿಗೆ ಕಣಕ್ಕಿಳಿಯೋ ಸಿದ್ಧತೆಯಲ್ಲಿದೆ. ನವೆಂಬರ್ 22ರಂದು ಪರ್ತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಎದುರು 5 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಇದರ ನಡುವೆ ಡಿಸೆಂಬರ್ 6ರಂದು ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಡೇ ನೈಟ್ ಟೆಸ್ಟ್ ಪಂದ್ಯವನ್ನೂ ಆಯೋಜಿಸಲಾಗಿದೆ.

ಭಾರತ & ಆಸಿಸ್ ನಡುವೆ ಟೆಸ್ಟ್ ಸರಣಿ!

ಟೀಂ ಇಂಡಿಯಾ ಈ ವರ್ಷದ ಕೊನೆಯಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಈ ಬಾರ್ಡರ್-ಗವಾಸ್ಕರ್ ಟ್ರೋಫಿ ಅತ್ಯಂತ ಮಹತ್ವದ್ದಾಗಿದೆ. ಇದೀಗ ಐದು ಟೆಸ್ಟ್ ಪಂದ್ಯಗಳ ಸರಣಿಯ ನಡುವೆ ಹೊನಲು ಬೆಳಕಿನ ಪಂದ್ಯವನ್ನೂ ಭಾರತ ತಂಡ ಆಡಲಿದೆ. ಕ್ಯಾನ್ಬೆರಾದಲ್ಲಿ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ವಿರುದ್ಧ ಎರಡು ದಿನಗಳ ಪಿಂಕ್ ಬಾಲ್ ಪಂದ್ಯವನ್ನು ಭಾರತ ತಂಡ ಆಡಲಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಇದು ಹೆಚ್ಚುವರಿ ಪಂದ್ಯವಾಗಿದ್ದು, ಹಗಲು ಮತ್ತು ರಾತ್ರಿ ನಡೆಯಲಿದೆ. ಇಂಡೋ-ಆಸೀಸ್ ಸರಣಿಯಲ್ಲಿ ಈ ಬಾರಿ ಒಟ್ಟು ಐದು ಟೆಸ್ಟ್ ಪಂದ್ಯಗಳು ನಡೆಯಲಿವೆ. ಇದರ ನಡುವೆ 2 ದಿನಗಳ ಡೇ-ನೈಟ್ ಪಂದ್ಯ ನಡೆಯಲಿದೆ. ನವೆಂಬರ್ 30 ಮತ್ತು ಡಿಸೆಂಬರ್ 1ರಂದು ಆಸ್ಟ್ರೇಲಿಯಾ ರಾಜಧಾನಿ ಕ್ಯಾನ್ಬೆರಾದ ಮನುಕಾ ಓವಲ್ನಲ್ಲಿ ಅಭ್ಯಾಸ ಪಂದ್ಯ ನಡೆಯಲಿದೆ. ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಮತ್ತು ಎರಡನೇ ಟೆಸ್ಟ್ ಪಂದ್ಯಗಳ ನಡುವೆ ಪಂದ್ಯ ನಡೆಯಲಿದೆ. ಎರಡು ದಿನಗಳ ಈ ಪಂದ್ಯವು ಹಗಲು-ರಾತ್ರಿ ಪಂದ್ಯವಾಗಿದೆ. ಈ ಪಂದ್ಯ ನಡೆದ ಬಳಿಕ ಅಡಿಲೇಡ್ನಲ್ಲಿ ಸರಣಿಯ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಅಡಿಲೇಡ್ ಟೆಸ್ಟ್ ಕೂಡಾ ಡೇ-ನೈಟ್ ಪಂದ್ಯವಾಗಿದೆ. ಮಹತ್ವದ ಪಂದ್ಯಕ್ಕೂ ಮುನ್ನ ಗುಲಾಬಿ ಚೆಂಡಿನಲ್ಲಿ ಹೊನಲು ಬೆಳಕಿನ ಈ ಪಂದ್ಯವು ಭಾರತಕ್ಕೆ ಅಭ್ಯಾಸ ಪಂದ್ಯದಂತಾಗಲಿದೆ. 2020ರ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಉಭಯ ದೇಶಗಳ ನಡುವೆ ಕೊನೆಯ ಬಾರಿಗೆ ಹಗಲು-ರಾತ್ರಿ ಟೆಸ್ಟ್ ನಡೆದಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾವು ಭಾರತವನ್ನು 8 ವಿಕೆಟ್ಗಳಿಂದ ಸೋಲಿಸಿತ್ತು. ಈ ಬಾರಿಯ ಅಡಿಲೇಡ್ ಓವಲ್ ಪಂದ್ಯದ ಮೂಲಕ ಉಭಯ ತಂಡಗಳು ಗುಲಾಬಿ ಚೆಂಡಿನಲ್ಲಿ ಎರಡನೇ ಬಾರಿ ಆಡಲು ಸಜ್ಜಾಗಿವೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ 30 ವರ್ಷಗಳಲ್ಲಿ, ಇದೇ ಮೊದಲ ಬಾರಿಗೆ ಐದು ಟೆಸ್ಟ್ ಪಂದ್ಯಗಳು ನಡೆಯುತ್ತಿದೆ. ಮುಂದಿನ ವರ್ಷದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸ್ಥಾನವನ್ನು ಭದ್ರಪಡಿಸಲು ಉಭಯ ದೇಶಗಳಿಗೂ ಈ ಸರಣಿ ನಿರ್ಣಾಯಕವಾಗಿದೆ. ಪ್ರಸ್ತುತ, ಭಾರತವು ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷದ ಡಬ್ಲ್ಯುಟಿಸಿ ಫೈನಲ್ನಲ್ಲಿ ಭಾರತವನ್ನು ಮಣಿಸಿದ್ದ ಆಸೀಸ್ ಹಾಲಿ ಟೆಸ್ಟ್ ಚಾಂಪಿಯನ್ ಆಗಿದೆ.

ಇನ್ನು ಟೀಮ್ ಇಂಡಿಯಾ ಈವರೆಗೆ ಮೂರು ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳನ್ನು ಆಡಿದೆ. 2019ರಲ್ಲಿ ಬಾಂಗ್ಲಾದೇಶ, 2021ರಲ್ಲಿ ಇಂಗ್ಲೆಂಡ್, 2022ರಲ್ಲಿ ಶ್ರೀಲಂಕಾ ಎದುರು ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳನ್ನ ಆಡಿದೆ. ಸದ್ಯ ವಿದೇಶಿ ನೆಲದಲ್ಲಿ ಪಿಂಕ್ ಬಾಲ್ ಪಂದ್ಯ ಆಡುವುದು ಬಾಕಿ ಇದೆ. ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಡಿಲೇಡ್ನಲ್ಲಿ ಈ ಹೈ ವೋಲ್ಟೇಜ್ ಪಂದ್ಯ ಆಯೋಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ.  ಆಸ್ಟ್ರೇಲಿಯಾ ನೆಲದಲ್ಲಿ ಡೇ ನೈಟ್ ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ಬರೆಯಲು ಭಾರತ ತಂಡ ಸಕಲ ತಯಾರಿಗೆ ಯೋಜನೆ ಹಾಕಿಕೊಂಡಿದೆ. ಹಾಗೇ ಕಳೆದ 20 ವರ್ಷಗಳಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾದ ಪ್ರೈಮ್ ಮಿನಿಸ್ಟರ್ ಇಲೆವೆನ್ ಎದುರು ನಾಲ್ಕನೇ ಬಾರಿ ಮುಖಾಮುಖಿ ಆಗಲಿದೆ. ಒಟ್ನಲ್ಲಿ ಭಾರತ ವರ್ಸಸ್ ಆಸ್ಟ್ರೇಲಿಯಾ ಮ್ಯಾಚ್ ಅಂದ್ರೇನೇ ಹೈವೋಲ್ಟೇಜ್.. ಇದೀಗ ರಾತ್ರಿ ಹಗಲು ಪಂದ್ಯಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

Shwetha M

Leave a Reply

Your email address will not be published. Required fields are marked *