ಚಿನ್ನ ಗೆದ್ದ ನದೀಮ್‌ಗೆ ಎಮ್ಮೆ ಗಿಫ್ಟ್ – ಪದಕ ಗೆದ್ದಿದ್ದಕ್ಕೆ 3 ಕೋಟಿ ಬರೆ
ನರಿ ಬುದ್ದಿ ಬಿಡಲ್ವಾ PAK?

ಚಿನ್ನ ಗೆದ್ದ ನದೀಮ್‌ಗೆ ಎಮ್ಮೆ ಗಿಫ್ಟ್ – ಪದಕ ಗೆದ್ದಿದ್ದಕ್ಕೆ 3 ಕೋಟಿ ಬರೆನರಿ ಬುದ್ದಿ ಬಿಡಲ್ವಾ PAK?

ಪಾಪರ್ ಪಾಕಿಸ್ತಾನ ಈ ಜನ್ಮಕ್ಕೆ ಬುದ್ದಿ ಕಲಿಯಲ್ಲ ಬಿಡಿ. ಮೂರು ದಶಕಗಳ ನಂತರ ಒಲಿಂಪಿಕ್ಸ್‌ ನಲ್ಲಿ ಪದಕ ತಂದ ಕ್ರೀಡಾಪಟುವನ್ನ ಸನ್ಮಾನಿಸಿ, ಉಡುಗೊರೆ ಕೊಟ್ಟು ಹೆಮ್ಮೆ ಪಡಬೇಕಾದ ಜಾಗದಲ್ಲಿ ಪಾಕ್ ಮಾಡಿದ್ದೇನು ಗೊತ್ತಾ?, ಪಾಕ್ ದೇಶದಲ್ಲಿ ಗಾಯಕರು, ಉದ್ಯಮಿಗಳು ನದೀಮ್ ಗೆ ಬಹುಮಾನ ಘೋಷಣೆ ಮಾಡ್ತಿದ್ರೆ ಇತ್ತ ಪಾಕ್ ಆಡಳಿತ ನರಿ ಬುದ್ದಿ ತೋರಿಸ್ತಿದೆ. ಇದ್ರ ಮಧ್ಯೆ ನದೀಮ್ ಗೆ ತನ್ನ ಮಾವನಿಂದಲೇ ಸ್ಪೆಷಲ್ ಗಿಫ್ಟ್ ಬೇರೆ ಸಿಕ್ಕಿದೆ. ಪಾಕ್ ಅಸಲಿ ಚಿನ್ನ ನದೀಮ್ ಈಗ ಕೋಟ್ಯಾಧಿಪತಿ ಆಗಿರೋ ಬಗ್ಗೆಯೂ ವಿವರಿಸ್ತೀನಿ. ಜೊತೆಗೆ ಪಾಪರ್ ಪಾಕ್ ಈ ಸಾಧನೆಯಲ್ಲೂ ತನ್ನ ಬೇಳೆ ಹೇಗೆ ಬೇಯಿಸಿಕೊಳ್ತಿದೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಎದೆಯ ಮೇಲೆ ಡಿಜಿಟಲ್​ ಬೋರ್ಡ್! – ಉರ್ಫಿ ಮಾನ ಮುಚ್ಚಲು ಎಲ್ಇಡಿ ಡಿಸ್‌ಪ್ಲೇ ಬೇಕಾಯ್ತಾ?

ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಒಲಿಂಪಿಕ್ಸ್​ ದಾಖಲೆ ಮುರಿದು ಬಂಗಾರ ಗೆದ್ದ ನದೀಮ್​ ಸಾಧನೆಯನ್ನ ಇಡೀ ಪಾಕಿಸ್ತಾನವೇ ಕೊಂಡಾಡುತ್ತಿದೆ. ಯಾವುದೇ ಸೌಲಭ್ಯ, ಪ್ರಾಯೋಜಕತ್ವವಿಲ್ಲದೆ ಒಲಿಂಪಿಕ್ಸ್​ಗೆ ಕಾಲಿಟ್ಟಿದ್ದ ನದೀಮ್​ ಚಿನ್ನ ಗೆದ್ದಿದ್ದು ಕೂಡಾ ಕಡಿಮೆ ಸಾಧನೆಯೇನಲ್ಲ. ಅಷ್ಟಕ್ಕೂ ಪಾಕಿಸ್ತಾನದಿಂದ ಪ್ಯಾರಿಸ್ ಒಲಿಂಪಿಕ್ಸ್ ಗೆ ಬಂದಿದ್ದೇ ಏಳು ಮಂದಿ ಅಥ್ಲೀಟ್ಸ್. ಅದ್ರಲ್ಲಿ ಸುಮಾರು 32 ವರ್ಷಗಳ ನಂತರ ನದೀಮ್ ದೇಶಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಬಂದಿರೋ ಮೊದಲ ಚಿನ್ನವೂ ಹೌದು. ಯಾವಾಗ ನದೀಮ್ ಸಾಧನೆಯನ್ನ ಇಡೀ ಜಗತ್ತೇ ಕೊಂಡಾಡಲು ಶುರುಮಾಡ್ತೋ, ಪಾಕಿಸ್ತಾನ ಸರ್ಕಾರ ತಕ್ಷಣವೇ ಅಲರ್ಟ್ ಆಯ್ತು. ಯಾರ್ಯಾರು ನದೀಮ್ ಗೆ ಗಿಫ್ಟ್ ಕೊಡ್ತಾರೆ ಅಂತಾ ಪಾಕ್ ಕಾಯ್ತಾ ಇತ್ತು. ಆಗ್ಲೇ ನದೀಮ್ ಗೆ ಬಹುಮಾನ ಮೇಲೆ ಬಹುಮಾನ ಘೋಷಣೆ ಆಗ್ತಾನೆ ಹೋಯ್ತು. ಪಾಕಿಸ್ತಾನದ ಪಂಜಾಬ್ ಮುಖ್ಯಮಂತ್ರಿ ಮರ್ಯಾಮ್ ನವಾಜ್ ಚಿನ್ನ ಗದ್ದ ಅರ್ಶದ್ ನದೀಮ್‌ಗೆ 10 ಕೋಟಿ ಪಾಕಿಸ್ತಾನ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಸಿಂಧ್ ಸರ್ಕಾರ 5 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಪಾಕಿಸ್ತಾನದ ವಿಶ್ವ ಅಥ್ಲೆಟಿಕ್ಸ್ ಫೆಡರೇಶನ್ 1 ಕೋಟಿ 40 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಸಿಂಧ್ ಗರ್ವರನ್ ಕಮ್ರಾನ್ ತೆಸೊರಿ, ಕ್ರಿಕೆಟಿಗ ಅಹಮ್ಮದ್ ಶೆಹಜಾದ್ ಹಾಗೂ ಪಾಕ್ ಗಾಯಕ ಸೇರಿ ಒಟ್ಟು 30 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಉದ್ಯಮಿ ಸಲ್ಮಾನ್ ಇಕ್ಬಾಲ್ ಮನೆಯೊಂದನ್ನು ಬಹುಮಾನವಾಗಿ ಘೋಷಿಸಿದ್ದಾರೆ. ಇಷ್ಟೆಲ್ಲಾ ಆಗುವಾಗ್ಲೇ ಪಾಕ್ ಸರ್ಕಾರ ಟ್ಯಾಕ್ಸ್ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿತ್ತು. ಆದರೆ ಅರ್ಶದ್ ನದೀಮ್ ಪ್ಯಾರಿಸ್ ಒಲಿಂಪಿಕ್ಸ್‌ಗೆ ತೆರಳಲು, ತಯಾರಿಗೆ ಪಾಕಿಸ್ತಾನ ಸರ್ಕಾರ ನಯಾ ಪೈಸೆ ನೀಡಿಲ್ಲ. ಊರವರು, ಸಂಬಂಧಿಕರು ಹೀಗೆ ಅನೇಕರ  ನೆರವಿನೊಂದಿಗೆ ನದೀಮ್ ಚಿನ್ನದಂತಾ ಸಾಧನೆ ಮಾಡಿದ್ದಾರೆ. ಸರ್ಕಾರದ ನೆರವಿಲ್ಲದೆಯೂ ಚಿನ್ನ ಗೆದ್ದ ನದೀಮ್ ಗೆ ಈಗ ಸರ್ಕಾರವೇ ಬಿಗ್ ಶಾಕ್ ಕೊಟ್ಟಿದೆ. ನದೀಮ್‌ ಇದೀಗ ಪಾಕಿಸ್ತಾನ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಕನಿಷ್ಠ 3 ಕೋಟಿ ರೂಪಾಯಿ ಪಾವತಿ ಮಾಡಬೇಕಿದೆ. ಪಾಕಿಸ್ತಾನದ ಸೆಲೆಬ್ರೆಟಿಗಳು, ಉದ್ಯಮಿಗಳು, ರಾಜ್ಯ ಸರ್ಕಾರಗಳು ಘೋಷಿಸಿದ ಬಹುಮಾನಗಳ ಒಟ್ಟು ಮೊತ್ತದ ಮೇಲೆ ಶೇಕಡಾ 15 ರಿಂದ 30 ರಷ್ಟು ತೆರಿಗೆಯನ್ನು ಅರ್ಶದ್ ನದೀಮ್ ಪಾವತಿಸಬೇಕಿದೆ. ಪಾಕಿಸ್ತಾನದ ಫೆಡರಲ್ ಬೋರ್ಡ್ ಆಫ್ ರೆವನ್ಯೂ ತೆರಿಗೆ ಜವಾಬ್ದಾರಿ ವಹಿಸಿಕೊಂಡಿದೆ. ಅರ್ಶದ್ ನದೀಮ್ ಈಗಾಗಲೇ ತೆರಿಗೆ ಪಾವತಿ ಮಾಡಿದ್ದರೆ ಸರಿಸುಮಾರು 3 ಕೋಟಿ ರೂಪಾಯಿ ಹಣವನ್ನು ಸರ್ಕಾರಕ್ಕೆ ಪಾವತಿಸಬೇಕು, ಒಂದು ವೇಳೆ ಇದುವರೆಗೆ ತೆರಿಗೆ ಪಾವತಿ ಮಾಡದೇ ಇದ್ದ ವ್ಯಕ್ತಿಯಾಗಿದ್ದರೆ ಶೇಕಡಾ 30 ರಷ್ಟು ಮೊತ್ತ ಅಂದರೆ ಸುಮಾರು 6 ಕೋಟಿ ರೂಪಾಯಿಯಷ್ಟು ತೆರಿಗೆ ಪಾವತಿಸಬೇಕು.

ಮತ್ತೊಂದೆಡೆ ನದೀಮ್ ಗೆ ಮಾವನಿಂದ ಸರ್‌ಪ್ರೈಸ್ ಗಿಫ್ಟ್ ವೊಂದು ಸಿಕ್ಕಿದೆ. ​ ಪಾಕಿಸ್ತಾನಕ್ಕೆ ಸ್ಟಾರ್ ​ ನದೀಮ್ ಗೆ ನಗದು ಬಹುಮಾನಗಳು, ಪ್ರಶಸ್ತಿಗಳು ಹಾಗೂ ಅಮೂಲ್ಯ ಉಡುಗೊರೆಗಳು ಹುಡುಕಿಕೊಂಡು ಬರುತ್ತಿರುವಾಗ್ಲೇ ಮಾವ ಡಿಫರೆಂಟ್ ಗಿಫ್ಟ್ ನೀಡಿದ್ದಾರೆ. ನದೀಮ್​ಗೆ ಎಮ್ಮೆಯೊಂದನ್ನ ಗಿಫ್ಟ್​ ಆಗಿ ನೀಡಿದ್ದಾರೆ. ಅಂದಹಾಗೆ ಪಾಕಿಸ್ತಾನದಲ್ಲಿ ಎಮ್ಮೆ ಕೊಡುವುದು ಅವಮಾನವಲ್ಲ. ಇದು ಪಾಕಿಸ್ತಾನದ ಗ್ರಾಮೀಣ ಪ್ರದೇಶದಲ್ಲಿ ಸಂಪ್ರದಾಯವಾಗಿದೆ. ಹಾಲು ಹಾಗೂ ಇತರ ಉತ್ಪನ್ನಗಳ ಆದಾಯ ಮೂಲವಾಗಿರುವ ಎಮ್ಮೆಯನ್ನ ನೀಡುವುದು ಅಲ್ಲಿನ ಪದ್ಧತಿ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಅರ್ಷದ್ ನದೀಮ್ ಅವರ ಸೋದರ ಮಾವ ಮೊಹಮ್ಮದ್ ನವಾಜ್, ಇಲ್ಲಿ ಎಮ್ಮೆಯನ್ನು ಉಡುಗೊರೆಯಾಗಿ ನೀಡುವುದು ಅತ್ಯಂತ ಗೌರವ. 6 ವರ್ಷಗಳ ಹಿಂದೆಯೇ ನನ್ನ ಮಗಳು ಆಯೇಷಾಳನ್ನು ನದೀಮ್​ಗೆ ಕೊಟ್ಟು ಮದುವೆ ಮಾಡುವುದಾಗಿ ನಿಶ್ಚಯ ಮಾಡಲಾಗಿದೆ. ಇದೀಗ ಗೌರವಪೂರ್ವಕವಾಗಿ ನದೀಮ್ ಗೆ ಎಮ್ಮೆಯನ್ನ ನೀಡಿದ್ದಾಗಿ ನದೀಮ್ ಮಾವ ತಿಳಿಸಿದ್ದಾರೆ.

ಚಿನ್ನ ಗೆದ್ದ ನದೀಮ್ ಗೆ ಎಲ್ಲೆಡೆಯಿಂದ ಪ್ರಶಸ್ತಿಗಳ ಸುರಿಮಳೆಯೇ ಘೋಷಣೆಯಾಗ್ತಿದೆ. ಇದ್ರ ಮಧ್ಯೆ ಏನೂ ಕೊಡದಿದ್ರೂ ಸರ್ಕಾರ ಮೂರರಿಂದ 6 ಕೋಟಿ ತೆರಿಗೆ ಸುಲಿಯಲು ಕಾಯ್ತಿದೆ. ಪಾಪರ್ ಪಾಕ್ ತನ್ನ ನರಿಬುದ್ದಿಯಿಂದ ತನ್ನ ದೇಶದ ಸಾಧಕನನ್ನೇ ಬಿಡಲ್ಲ. ಬೇರೆಯವರನ್ನ ಬಿಡುತ್ತಾ.

Shwetha M

Leave a Reply

Your email address will not be published. Required fields are marked *