ರಾಜ್ಯದ ನಿರುದ್ಯೋಗಿಗಳಿಗೆ ಸರ್ಕಾರದಿಂದ ಗುಡ್‌ನ್ಯೂಸ್‌ – ಇನ್ನುಮುಂದೆ ಭತ್ಯೆ ಜೊತೆ ಉದ್ಯೋಗ !

ರಾಜ್ಯದ ನಿರುದ್ಯೋಗಿಗಳಿಗೆ ಸರ್ಕಾರದಿಂದ ಗುಡ್‌ನ್ಯೂಸ್‌ – ಇನ್ನುಮುಂದೆ ಭತ್ಯೆ ಜೊತೆ ಉದ್ಯೋಗ !

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿದೆ. ಇದೀಗ ರಾಜ್ಯ ಸರ್ಕಾರ ಮತ್ತೊಂದು ಭಾಗ್ಯ ನೀಡಲು ಮುಂದಾಗಿದೆ. ನಿರುದ್ಯೋಗಿ ಯುವಕರಿಗೆ ಕೌಶಲ್ಯ ಹಾಗೂ ಉದ್ಯೋಗ ನೀಡುವ ನಿಟ್ಟಿನಲ್ಲಿ ಹೊಸ ಯೋಜನೆಯೊದನ್ನ  ನೀಡಲು ಮುಂದಾಗಿದೆ.

ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಆಯ್ಕೆಗೆ ದೆಹಲಿಯಲ್ಲಿ ಕಸರತ್ತು – ಟಿಕೆಟ್‌ ಗೊಂದಲಕ್ಕೆ ಇಂದೇ ತೆರೆ?

ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಯುವನಿಧಿ ಯೋಜನೆ ಘೋಷಣೆ ಮಾಡಿತ್ತು.. ನಿರುದ್ಯೋಗಿಗಳಿಗೆ ಪ್ರತಿ ತಿಂಗಳೂ 1500 ರೂ. ಹಾಗೂ ಪದವೀಧರರಿಗೆ 3000 ರೂ. ನೀಡುತ್ತಿದೆ. ಡಿಪ್ಲೊಮಾ ಇಲ್ಲವೇ ಪದವಿಯನ್ನು ಪೂರೈಸಿದ್ದು, ಇನ್ನೂ ಯಾವುದೇ ಉದ್ಯೋಗ ಸಿಗದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿತ್ತು ಡಿಪ್ಲೋಮಾ ಹೋಲ್ಡರ್‌ಗಳಿಗೆ ಮುಂದಿನ ಎರಡು ವರ್ಷಗಳ ಕಾಲ ತಿಂಗಳಿಗೆ 1500 ರೂ. ಹಾಗೂ ಪದವೀಧರರಿಗೆ 3000 ರೂ. ನೀಡುವ ನಿರುದ್ಯೋಗ ಭತ್ಯೆ ನೀಡುವ ಯೋಜನೆ ಇದಾಗಿತ್ತು. ಆದ್ರೆ ಇದೀಗ ರಾಜ್ಯ ಸರ್ಕಾರ ನಿರುದ್ಯೋಗಳಿಗೆ ಭತ್ಯಯ ಜೊತೆ ಉದ್ಯೋಗ ನೀಡುವ ಬಗ್ಗೆ ಚಿಂತನೆ ಮಾಡಿದೆ. ಹೀಗಾಗಿ ಯುವನಿಧಿ ಪ್ಲಸ್​ ಜಾರಿಗೆ ಮುಂದಾಗಿದೆ.

ಈ ಯೋಜನೆಯಲ್ಲಿ ನಿರದ್ಯೋಗ ಯುವಕರಿಗೆ ಉದ್ಯೋಗ ನೀಡುವ ಹಾಗೂ ಕೌಶಲ್ಯ ತರಬೇತಿ ನೀಡಲು ಜೀವನೋಪಾಯ, ಕೌಶಲ್ಯಾಭಿವೃದ್ಧಿ ಇಲಾಖೆ ಮುಂದಾಗಿದೆ. ಯುವನಿಧಿಯಿಂದ ಹಣ ಮಾತ್ರ ನೀಡಲಾಗುತ್ತಿತ್ತು. ಕೆಲಸ ಸಿಗುತ್ತಿರಲಿಲ್ಲ ಹೀಗಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಯುವನಿಧಿ ಯೋಜನೆಯಡಿ ಯಾರೆಲ್ಲ ಹಣ ಪಡೆಯುತ್ತಿದ್ದಾರೋ ಫಲಾನುಭವಿಗಳಿಗೆ ಉದ್ಯೋಗ ನೀಡುವ ಯೋಜನೆಯಾಗಿದೆ. ಯುವನಿಧಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ ಕೆಲಸ ನೀಡುವತ್ತ ಸರ್ಕಾರ ಚಿಂತನೆ ಮಾಡುತ್ತಿದೆ. ಈಗಾಗಲೇ ಕೆಲವು ಕೈಗಾರಿಕೆ, ಕಾರ್ಪೋರೇಟ್ ಕಂಪನಿಗಳು ಐಟಿಬಿಟಿ ಕಂಪನಿಗಳ ಜೊತೆ ಮಾತುಕಥೆಗೆ ಮುಂದಾಗಿದ್ದು ಸರ್ಕಾರದ ಸಹಾಭಾಗಿತ್ವದಲ್ಲಿ ತರಬೇತಿ ಜೊತೆಗೆ ಉದ್ಯೋಗ ನೀಡಲು ಸಹಕಾರಿಯಾಗಲಿದೆ.

ಯಾವ್ಯಾವ ತಿಂಗಳು ಎಷ್ಟು ಮಂದಿಗೆ ಎಷ್ಟು ಹಣ ವರ್ಗಾವಣೆ?

  • 2023 ಡಿಸೆಂಬರ್ – 2,623 – ₹78.64 ಲಕ್ಷ ರೂ.
  • 2024 ಜನವರಿ – 21,858 – ₹6.55 ಕೋಟಿ ರೂ.
  • ಫೆಬ್ರವರಿ – 28,926 – ₹8.55 ಕೋಟಿ ರೂ.
  • ಮಾರ್ಚ್ – 16,051 – ₹4.77 ಕೋಟಿ ರೂ.
  • ಏಪ್ರಿಲ್ – 37,573 – ₹11.24 ಕೋಟಿ ರೂ.
  • ಮೇ – 32,664 – ₹9.76 ಕೋಟಿ ರೂ.
  • ಜೂನ್ – 89,981 – ₹27.16 ಕೋಟಿ ರೂ. (ಗರಿಷ್ಠ ಮೊತ್ತ ವರ್ಗಾವಣೆ)
  • ಜುಲೈ – 72,697 – ₹21.70 ಕೋಟಿ ರೂ.

Shwetha M

Leave a Reply

Your email address will not be published. Required fields are marked *