ಕನ್ನಡಿಗ ರಾಹುಲ್ ಅಂತ್ಯಕ್ಕೆ ಷಡ್ಯಂತ್ರ? – ಪಂತ್ಗೆ ಚಾನ್ಸ್ ನೀಡಲು KLಗೆ ಮೋಸ?
HITಮ್ಯಾನ್ ರೋಹಿತ್ಗೆ ಯಾಕಿಂಥಾ ಶಿಕ್ಷೆ?
ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದ ಹೀನಾಯ ಸೋಲಿನ ಮೂಲಕ ಟೀಂ ಇಂಡಿಯಾ ಬರೋಬ್ಬರಿ 27 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸರಣಿ ಸೋತಿದೆ. ಮೊದಲ ಎರಡು ಪಂದ್ಯಗಳಲ್ಲಿ ಪ್ಲೇಯಿಂಗ್ 11 ಆರ್ಡರ್ ಚೇಂಜ್ ಮಾಡಿ ಫೇಲ್ಯೂರ್ ಆಗಿದ್ದ ಕೋಚ್ ಗೌತಮ್ ಗಂಭೀರ್ ಮೂರನೇ ಪಂದ್ಯಕ್ಕೆ ಇಬ್ಬರು ಆಟಗಾರರನ್ನ ರಿಪ್ಲೇಸ್ ಮಾಡಿ ಇನ್ನೂ ಹೀನಾಯವಾಗಿ ಸೋತಿದ್ದಾರೆ. ಕೊನೇ ಮ್ಯಾಚ್ಗೆ ಕೆಎಲ್ ರಾಹುಲ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ತಂಡದಿಂದ ಕೈ ಬಿಟ್ಟು ರಿಷಬ್ ಪಂತ್ ಮತ್ತು ರಿಯಾನ್ ಪರಾಗ್ ಅವರಿಗೆ ಚಾನ್ಸ್ ನೀಡಿದ್ರು. ಆದ್ರೀಗ ಈ ಫಾರ್ಮೂಲ ಕೂಡ ಪಲ್ಟಿ ಹೊಡೆದಿದ್ದು ಕ್ರಿಕೆಟ್ ಫ್ಯಾನ್ಸ್, ಕೋಚ್ ಮತ್ತು ಮ್ಯಾನೇಜ್ಮೆಂಟ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕ್ಷಮಿಸಿ ಬಿಡಿ ರೋಹಿತ್ ಮತ್ತು ರಾಹುಲ್ ಅಂತಿದ್ದಾರೆ. ಅಷ್ಟಕ್ಕೂ ಯಾರದ್ದೋ ತಪ್ಪಿಗೆ ಶಿಕ್ಷೆ ಅನುಭವಿಸ್ತಿರೋ ರೋಹಿತ್ ಮತ್ತು ರಾಹುಲ್ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ನಾಗರ ಪಂಚಮಿ ನಾಡಿಗೆ ದೊಡ್ಡದು – ಶ್ರಾವಣ ಮಾಸದ ಮೊದಲ ಹಬ್ಬದ ವಿಶೇಷತೆಯೇನು?
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ಒಂದೂ ಪಂದ್ಯ ಗೆಲ್ಲದೆ ವೈಟ್ ವಾಶ್ ಆಗಿದೆ. ಆದ್ರೆ ಭಾರತದ ಸೋಲಿಗಿಂತ ಕರ್ನಾಟಕದಲ್ಲಿ ಹೆಚ್ಚು ಚರ್ಚೆಯಾಗಿದ್ದು ಕೆ.ಎಲ್ ರಾಹುಲ್ ಹೆಸರು. ಲಾಂಗ್ ಗ್ಯಾಪ್ ಬಳಿಕ ಟೀಂ ಇಂಡಿಯಾಗೆ ಮರಳಿದ್ದ ರಾಹುಲ್ ಮೂರನೇ ಪಂದ್ಯದಲ್ಲಿ ಉತ್ತಮ ಇನ್ನಿಂಗ್ಸ್ ಆಡ್ತಾರೆ ಅಂತಾನೇ ಎಲ್ರೂ ಅನ್ಕೊಂಡಿದ್ರು. ಆದ್ರೆ ಅದಕ್ಕೆ ಮ್ಯಾನೇಜ್ಮೆಂಟ್ ಅವಕಾಶವನ್ನೇ ಕೊಡ್ಲಿಲ್ಲ. ಪ್ಲೇಯಿಂಗ್ 11ನಿಂದ ಕೈ ಬಿಟ್ಟು ನಿರಾಸೆ ಮೂಡಿಸಿದ್ರು. ಇದು ಕರ್ನಾಟಕದ ಫ್ಯಾನ್ಸ್ಗೆ ಸಿಕ್ಕಾಪಟ್ಟೆ ಬೇಸರ ಮೂಡಿಸಿತ್ತು. ಮತ್ತೊಂದ್ಕಡೆ ಎಷ್ಟೋ ಜನ ಹಿಟ್ಮ್ಯಾನ್ ರೋಹಿತ್ ಶರ್ಮಾಗಾಗಿ ಮರುಕ ಪಡ್ತಿದ್ದಾರೆ. ತಂಡಕ್ಕಾಗಿ ನೀವು ಇಷ್ಟೆಲ್ಲಾ ಮಾಡಿದ್ರೂ ಗೆಲ್ಲೋಕೆ ಆಗ್ಲಿಲ್ವಲ್ಲ ಅಂತಾ ಬೇಸರ ಪಟ್ಟುಕೊಂಡಿದ್ದಾರೆ.
ರೋಹಿತ್ ಮತ್ತು ರಾಹುಲ್ ಗೆ ಅನ್ಯಾಯ!
ಟೀಂ ಮ್ಯಾನೇಜ್ಮೆಂಟ್ ಹಾಗೂ ಕೋಚ್ ಎಕ್ಸ್ಪೆರಿಮೆಂಟ್ಗೆ ಕನ್ನಡಿಗ ಕೆ.ಎಲ್ ರಾಹುಲ್ ಹರಕೆಯ ಕುರಿ ಆಗ್ತಿದ್ದಾರಾ ಅನ್ನೋ ಪ್ರಶ್ನೆ ಮೂಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಬುಧವಾರ ಕೆಎಲ್ ರಾಹುಲ್ ತಮ್ಮ 200ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಬೇಕಿತ್ತು. ಆದ್ರೆ ಪ್ಲೇಯಿಂಗ್ 11ನಲ್ಲಿ ಡ್ರಾಪ್ ಮಾಡಿ ಮೈದಾನದಿಂದ ದೂರ ಇಡಲಾಗಿತ್ತು. ಏಕದಿನ ತಂಡದ ಮಿಡಲ್ ಆರ್ಡರ್ನ ಬಲವಾಗಿದ್ದ ರಾಹುಲ್, ವಿಕೆಟ್ ಕೀಪರ್ ಆಗಿ ಅಲ್ಲದಿದ್ರೂ, ಬ್ಯಾಟ್ಸ್‌ಮನ್ ಆಗಿಯಾದ್ರೂ ಪ್ಲೇಯಿಂಗ್ ಇಲೆವೆನ್ನಲ್ಲಿ ಇರಬೇಕಾಗಿತ್ತು. ಆದ್ರೆ, ರಾಹುಲ್ ಬೆಂಚ್ಗೆ ಸೀಮಿತವಾಗಿ ಬಿಟ್ರು. ಸದ್ಯ ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗ್ತಿರುವ ವಿಷ್ಯ ಅಂದ್ರೆ ಕೆ.ಎಲ್.ರಾಹುಲ್ಗೆ ವಿಶ್ರಾಂತಿ ನೀಡಿದ್ರಾ? ಅಥವಾ ಡ್ರಾಪ್ ಮಾಡಿದ್ರಾ? ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿದೆ. 7 ತಿಂಗಳ ಬಳಿಕ ಏಕದಿನ ಸರಣಿಯನ್ನಾಡ್ತಿದ್ದ ಕನ್ನಡಿಗ ರಾಹುಲ್ ಇತರರಿಗಿಂತ ಕಳಪೆ ಪ್ರದರ್ಶನವನ್ನೇನು ನೀಡಿರಲಿಲ್ಲ. ಈ ಸರಣಿ ಟೀಮ್ ಇಂಡಿಯಾಗೆ ಈ ವರ್ಷದ ಕೊನೆ ಏಕದಿನ ಸರಣಿಯಾಗಿತ್ತು. ಇದಾದ ಬಳಿಕ ಈ ವರ್ಷ ಯಾವುದೇ ಒನ್ ಡೇ ಗೇಮ್ ಆಡಲ್ಲ. ಹೀಗಾಗಿ ಕೆ.ಎಲ್.ರಾಹುಲ್ರನ್ನ ಕೇವಲ ವಿಶ್ರಾಂತಿಯನ್ನ ನೀಡಲಾಗಿದ್ಯಾ? ಅಥವಾ ತಂಡದಿಂದಲೇ ಡ್ರಾಪ್ ಮಾಡಲಿಗಿದ್ಯಾ ಎಂಬ ಚರ್ಚೆ ನಡೆದಿದೆ. ಅಲ್ದೇ ಲಂಕಾ ಎದುರಿನ 2 ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಶಿವಂ ದುಬೆ ಆಟವೂ ಅಷ್ಟಕ್ಕೆ ಅಷ್ಟೇ. ಆದ್ರೂ ಕೂಡ ರಾಹುಲ್ರನ್ನೇ ಟಾರ್ಗೆಟ್ ಮಾಡಲಾಗಿದೆ. ಕಳೆದ ಕೆಲ ವರ್ಷಗಳಿಂದ ರಾಹುಲ್ ವಿಶ್ವ ಕ್ರಿಕೆಟ್ನಲ್ಲೇ ಬೆಸ್ಟ್ ಮಿಡಲ್ ಆರ್ಡರ್ ಬ್ಯಾಟರ್ ಎನಿಸಿಕೊಂಡಿದ್ದಾರೆ. 5 ವರ್ಷಗಳ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ ಗರಿಷ್ಠ ಮಿಡಲ್ ಆರ್ಡರ್ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಹೀಗಿದ್ರೂ ರಾಹುಲ್ರನ್ನ 4 ಹಾಗೂ 5ನೇ ಕ್ರಮಾಂಕದ ಬದಲಿಗೆ 6 ಹಾಗೂ 7ನೇ ಕ್ರಮಾಂಕದಲ್ಲಿ ಪ್ರಯೋಗ ಮಾಡಿ ಕೊನೆಗೆ ಬೆಂಚ್ಗೆ ಫಿಕ್ಸ್ ಮಾಡಿದ್ದು ಅನುಮಾನ ಮೂಡಿಸಿದೆ. ಅದೂ ಅಲ್ದೇ ರಾಹುಲ್ರನ್ನ ಕೈ ಬಿಟ್ಟು ರಿಷಬ್ ಪಂತ್ಗೆ ಚಾನ್ಸ್ ನೀಡಿ ಟೀಂ ಮ್ಯಾನೇಜ್ಮೆಂಟ್ ಸಾಧಿಸಿದ್ದು ಏನೇನೂ ಇಲ್ಲ. ಚಾನ್ಸ್ ಗಿಟ್ಟಿಸಿಕೊಂಡ ಪಂತ್ ಜಸ್ಟ್ 6 ರನ್ಗಳಿಸಿ ಔಟಾದ್ರು. ರಾಹುಲ್ರನ್ನ ಕೈ ಬಿಟ್ಟವರ ಮುಖಕ್ಕೆ ಹೊಡೆದಂತಿತ್ತು ಪಂತ್ ಆಟ. ಮತ್ತೊಂದೆಡೆ ತನ್ನದಲ್ಲದ ತಪ್ಪಿಗೆ ನಾಯಕ ರೋಹಿತ್ ಶರ್ಮಾ ಕೂಡ ಸೋಲಿನ ಹೊಣೆ ಹೊರಬೇಕಾಗಿದೆ. 3 ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಬಿಟ್ಟರೆ ಟೀಂ ಇಂಡಿಯಾ ಪರ ಯಾವ ಬ್ಯಾಟ್ಸ್‌ಮನ್ ಬ್ಯಾಟೂ ಸದ್ದು ಮಾಡ್ತಿಲ್ಲ. ರೋಹಿತ್ ಇಡೀ ಸರಣಿಯಲ್ಲಿ 157 ರನ್ ಕಲೆಹಾಕಿ ಭಾರತದ ಪರ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ರೂ ತಂಡ ಗೆಲ್ಲಿಸೋಕೆ ಆಗ್ಲಿಲ್ಲ. ಇದೇ ಕಾರಣಕ್ಕೆ ರೋಹಿತ್ ಮತ್ತು ರಾಹುಲ್ರನ್ನ ಕ್ಷಮಿಸಿಬಿಡಿ ಅಂತಿದ್ದಾರೆ ಫ್ಯಾನ್ಸ್.
2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಲಂಕಾ ಸರಣಿ ದಿಕ್ಸೂಚಿ ಎಂದೇ ಹೇಳಲಾಗಿತ್ತು. ಇಲ್ಲಿಂದಲೇ ಮುಂದಿನ ಐಸಿಸಿ ಟೂರ್ನಿಗೆ ಟೀಂ ಫೈನಲ್ ಮಾಡೋಕೆ ಬಿಸಿಸಿಐ ಪ್ಲ್ಯಾನ್ ಮಾಡಿತ್ತು. ಅದ್ರಲ್ಲೂ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಪಂತ್ ಮತ್ತು ಕೆ.ಎಲ್ ರಾಹುಲ್ ಮಧ್ಯೆ ಪೈಪೋಟಿ ನಡೆಯುತ್ತಿದೆ. ದೀರ್ಘ ಸಮಯದ ಬಳಿಕ ಭಾರತದ ಒಡಿಐ ಕ್ರಿಕೆಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಲಯ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ರಿಷಬ್ ಪಂತ್ ಕೂಡ ಸ್ಥಿರ ಪ್ರದರ್ಶನ ನೀಡ್ತಿಲ್ಲ. ಸಿಕ್ಕ ಅವಕಾಶಗಳಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಬ್ಯಾಟ್ ಬೀಸ್ತಿಲ್ಲ. ಹೀಗಾಗಿ ಅಂತಿಮವಾಗಿ ಒಡಿಐ ಪಂದ್ಯಗಳಿಗೆ ಯಾರು ಉಳ್ಕೊಳ್ತಾರೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.