ವಿನೇಶ್ ಫೋಗಟ್ ಗೆ ಅನ್ಯಾಯ – ತೆರೆಮೇಲೆ ಬರುತ್ತಾ ದಂಗಲ್-2 ಸಿನಿಮಾ
2016ರಲ್ಲಿ ಬಂದಿರೋ ದಂಗಲ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಆಮಿರ್ ಖಾನ್ ನಟನೆಗೆ ಶಹಬ್ಬಾಸ್ ಗಿರಿ ಸಿಕ್ಕಿತ್ತು. ಈ ಚಿತ್ರ ಕ್ರೀಡಾಜಗತ್ತಿನಲ್ಲಿ ಸಾಕಷ್ಟು ಸೆನ್ಸೇಷನಲ್ ಕ್ರಿಯೆಟ್ ಮಾಡಿತ್ತು. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಸಾಮಾನ್ಯ ಹುಡುಗಿ ಚಿನ್ನದ ಪದಕ ಗೆಲ್ಲುವ ಕಥೆ ಈ ಚಿತ್ರದಲ್ಲಿ ಇತ್ತು. ಇದೀಗ ದಂಗಲ್ 2 ಸಿನಿಮಾ ಮಾಡಿ ಅಂತಾ ನಟ ಆಮೀರ್ ಖಾನ್ ಬೆನ್ನು ಹತ್ತಿದ್ದಾರೆ ಫ್ಯಾನ್ಸ್. ದಿಢೀರ್ ಅಂತಾ ದಂಗಲ್ 2 ಸಿನಿಮಾ ಬೇಕು ಅಂತಾ ಫ್ಯಾನ್ಸ್ ಹಠ ಮಾಡಿದ್ದೇಕೆ ಎಂಬ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ತೂಕ ಇಳಿಸಲು ಕೂದಲು, ಉಗುರು ಕಟ್ – ರಕ್ತ ಬಸಿದ್ರೂ 100 ಗ್ರಾಂ ಹೆಚ್ಚಿದ್ದೇಗೆ?
ದಂಗಲ್ ಸಿನಿಮಾ ಮತ್ತೆ ಟ್ರೆಂಡಿಂಗ್ ನಲ್ಲಿರೋಕೆ ಕಾರಣ ವಿನೇಶ್ ಫೋಗಟ್. ಭಾರತದ ಹೆಮ್ಮೆಯ ಕುಸ್ತಿ ಪಟು ವಿನೇಶ್ ಫೋಗಟ್ ನಡೆದು ಬಂದ ರೋಚಕ ಕಥೆಯನ್ನೇ ಸಿನಿಮಾ ಮಾಡಿ ತೆರೆಗೆ ತರಲಾಗಿತ್ತು. 2016ರಲ್ಲಿ ‘ದಂಗಲ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ವಿನೇಶ್ ಫೋಗಟ್ ಸವೆಸಿದ ದುರ್ಗಮ ಹಾದಿ ಅನಾವರಣಗೊಂಡಿತ್ತು. ‘ದಂಗಲ್’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಸಾವಿರಾರು ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಇದೀಗ ಮತ್ತೆ ಇದೇ ಸಿನಿಮಾ ದಂಗಲ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.
ದಂಗಲ್ 2 ಸಿನಿಮಾ ಮಾಡಿ ಅಂತಾ ಫ್ಯಾನ್ಸ್ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಕಾರಣ ವಿನೇಶ್ ಪೋಗಟ್ ಎಂಬ ಕೆರಳಿದ ಹೆಣ್ಣು ಹುಲಿ. ಹೌದು ಸ್ನೇಹಿತರೇ, ಒಂದೇ ಒಂದು ದಿನದಲ್ಲಿ ವಿನೇಶ್ ಫೋಗಟ್ ಇಂಡಿಯಾದ ಸೆನ್ಸೇಷನಲ್ ಸ್ಟಾರ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿನೇಶ್ ಫೋಗಟ್ ಪರ ಅದೆಷ್ಟು ಪೋಸ್ಟ್ ಗಳು ಶೇರ್ ಆಗ್ತಿವೆ ಎಂದ್ರೆ ಲೆಕ್ಕವಿಡಲು ಸಾಧ್ಯವೇ ಇಲ್ಲ. ವಿನೇಶ್ ಫೋಗಟ್ ದೆಹಲಿಯ ಬೀದಿಯಲ್ಲಿ ನ್ಯಾಯಕ್ಕಾಗಿ ಹೋರಾಡಿದ ಫೋಟೋ, ಇದಾದ ಮೇಲೆ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನಂಬರ್ ಒನ್ ಕುಸ್ತಿಪಟುವನ್ನ ಸೋಲಿಸಿ ಗೆದ್ದ ಕ್ಷಣದ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇಲ್ಲೂ ಅಷ್ಟೇ ವಿನೇಶ್ ಫೋಗಟ್ ಗೆ ಸುಲಭವಾಗಿ ಜಯ ಸಿಕ್ಕಿರಲಿಲ್ಲ. ಈ ಗೆಲುವಿಗಾಗಿ ವಿನೇಶ್ ಪಟ್ಟ ಕಷ್ಟ ವಿವರಿಸಿ ಹೇಳಬೇಕಿಲ್ಲ. ಈಕೆ ಒಲಿಂಪಿಕ್ಸ್ ರಿಂಗ್ ಗೆ ಬರಲು ಕೂಡಾ ತುಂಬಾ ಕಷ್ಟಪಟ್ಟಿದ್ದಳು. ಜೊತೆಗೆ ತನಗಾದ ಅನ್ಯಾಯಕ್ಕೆ ದೆಹಲಿ ಬೀದಿಯಲ್ಲಿ ಅದೆಷ್ಟೋ ಅವಮಾನ ಎದುರಿಸಿದ್ದಳು. ಇನ್ನೇನು ವಿನೇಶ್ ಸೆಮಿಫೈನಲ್‌ನಲ್ಲಿ ಗೆದ್ದು ಫೈನಲ್‌ಗೂ ಎಂಟ್ರಿಕೊಟ್ಟಿದ್ದಳು. ಅದಾಗಲೇ ಮತ್ತೊಂದು ಅನ್ಯಾಯ ವಿನೇಶ್ ಗಾಗಿ ಕಾದು ಕುಳಿತಿತ್ತು.
ವಿನೇಶ್ ಬೆಳ್ಳಿ ಅಥವಾ ಚಿನ್ನದ ಪದಕವನ್ನ ಭಾರತಕ್ಕೆ ತಂದುಕೊಡಲು ಸಿದ್ಧತೆ ನಡೆಸುತ್ತಿರುವಾಗಲೇ ಅನರ್ಹ ಆಗಿದ್ದಾಳೆ. ಇದು ಕೂಡಾ ಒಂದು ರೀತಿಯಲ್ಲಿ ಫೋಗಟ್ ಪಾಲಿಗೆ ಅನ್ಯಾಯವೇ. ಇದೆಲ್ಲಾ ಇಟ್ಟುಕೊಂಡು ಮತ್ತೊಂದು ಸಿನಿಮಾ ಕಥೆ ಹೊರಬರಬೇಕು ಅನ್ನೋದು ಅಭಿಮಾನಿಗಳ ಒತ್ತಾಯ. ಇದು ‘ದಂಗಲ್ 2 ಸಿನಿಮಾ ಮಾಡುವ ಸಮಯ. ಆಮಿರ್ ಖಾನ್ ಅವರು ಇದಕ್ಕೆ ರೆಡಿ ಆಗಬೇಕು ಅನ್ನೋದು ಫ್ಯಾನ್ಸ್ ಆಗ್ರಹ.