ಹೆಣ್ಣುಹುಲಿಯ ಬೇಟೆ ಆಡಿದ್ಯಾರು? – ಮೋದಿ ಕರೆ ಮಾಡಿದ್ಯಾರಿಗೆ?

ಹೆಣ್ಣುಹುಲಿಯ ಬೇಟೆ ಆಡಿದ್ಯಾರು? – ಮೋದಿ ಕರೆ ಮಾಡಿದ್ಯಾರಿಗೆ?

ಘರ್ಜಿಸುತ್ತಿದ್ದ ಹೆಣ್ಣುಹುಲಿಯನ್ನು ಈ ರೀತಿಯಲ್ಲಿ ಬೇಟೆಯಾಡಬಹುದು ಅಂತ ಯಾರೂ ಅಂದುಕೊಂಡಿರಲಿಲ್ಲ.. ಆದ್ರೆ ಕೇವಲ ನೂರೇ ನೂರು ಗ್ರಾಂ ತೂಕವನ್ನು ಮುಂದಿಟ್ಟು ಫೈನಲ್‌ ಪಂದ್ಯದಿಂದಲೇ ಅನರ್ಹ ಮಾಡುತ್ತಾರೆ ಅಂತಾದ್ರೆ ಇಂತಹ ನಿಯಮಗಳನ್ನು ರೂಪಿಸಿದ್ದು ಯಾಕೆ ಎಂಬ ಪ್ರಶ್ನೆ ಮೂಡುತ್ತದೆ.. ಯಾವುದೇ ಆಹಾರ ತೆಗೆದುಕೊಳ್ಳದೆ ವೇಯ್ಟ್‌ ಚೆಕಪ್‌ ಮಾಡ್ತಾರೆ.. ಆದ್ರೆ 50 ಕೆಜಿಗಿಂತ ನೂರೈವತ್ತು ಗ್ರಾಮ್‌ ಮಾತ್ರ ಹೆಚ್ಚಿದ್ದರು ಅನ್ನೋ ಒಂದೇ ಒಂದು ಕಾರಣಕ್ಕೆ ಒಲಿಂಪಿಕ್ಸ್‌ ಫೈನಲ್‌ನಿಂದಲೇ ಅನರ್ಹಗೊಳಿಸಿದ್ದಾರೆ.. ಹಾಗಿದ್ದರೆ ಇಲ್ಲಿ ಯಾರ ತಪ್ಪು ಏನು? ಪ್ರಧಾನಿ ಮೋದಿಯವರು ಈ ವಿಷಯದಲ್ಲಿ ಮಾಡಿದ್ದೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕೆರಳಿದ ಹೆಣ್ಣು ಹುಲಿ – ಅವಮಾನಕ್ಕೆ ಗೆಲುವಿನಲ್ಲೇ ತಕ್ಕ ಉತ್ತರ

ಇದು ನಿಜಕ್ಕೂ ಕೋಟಿ ಕೋಟಿ ಭಾರತೀಯರ ಕನಸನ್ನು ಒಂದೇ ಏಟಿನಲ್ಲಿ ಭಗ್ನ ಮಾಡಿರುವ ಘಟನೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.. ನೂರೈವತ್ತು ಗ್ರಾಂ ತೂಕಕ್ಕೆ ನೂರೈವತ್ತು ಟನ್‌ಗಿಂತ ಹೆಚ್ಚಿನ ಭಾರ ಇರುತ್ತೆ ಎನ್ನುವುದು ಗೊತ್ತಾಗಿದ್ದೇ ವಿನೇಶ್‌ ಪೋಗಟ್‌ ಅವರ ತೂಕದಿಂದಾಗಿ.. ಮಂಗಳವಾರ ಸತತ ಮೂರು ಮ್ಯಾಚ್‌ ಗೆದ್ದು ಫೈನಲ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕುವುದು ಪಕ್ಕಾ ಎಂಬ ರೀತಿಯಲ್ಲಿ ಮೆರೆದಿದ್ದರು ವಿನೇಶ್‌ ಫೋಗಟ್‌.. ಆಕೆಯ ಪಟ್ಟುಗಳು ವಿಶ್ವದ ನಂ.1 ಆಟಗಾರ್ತಿಯನ್ನೂ ಮಕಾಡೆ ಮಲಗಿಸಿತ್ತು.. ಆದ್ರೆ ಸಿಂಹಿಣಿಯಂತೆ ಘರ್ಜಿಸುತ್ತಾ ಫೈನಲ್‌ನಲ್ಲಿ ಚಿನ್ನದ ಪದಕ ಬೇಟೆಯಾಡಲು ಸಿದ್ಧವಾಗಿದ್ದ ಪೋಗಟ್‌ ಅದೇ ವಿಶ್ವಾಸದಲ್ಲೇ ತೂಕ ಅಳೆಯುವ ಮಷಿನ್‌ ಮೇಲೆ ನಿಂತಿದ್ದರು.. ಆದ್ರೆ ಆ ಮಷಿನ್‌ 150 ಗ್ರಾಂ ಹೆಚ್ಚು ತೂಕವನ್ನು ತೋರಿಸಿದ್ದೇ ತಡ.. ಮ್ಯಾಚ್‌ ರೆಫ್ರಿಯವರು ರೆಡ್‌ಕಾರ್ಡ್‌ ತೋರಿಸಿದ್ದಾರೆ.. ಫೋಗಟ್‌ ಟೂರ್ನಮೆಂಟ್‌ನಿಂದ ಔಟ್‌ ಆಗಿದ್ದಾರೆ.. ಒಮ್ಮೆ ಟೂರ್ನಮೆಂಟ್‌ನಿಂದ ಔಟಾದ ನಂತರ ಯಾರು ಏನೇ ಅಪೀಲ್‌ ಮಾಡಿದರೂ ಒಲಿಂಪಿಕ್ಸ್‌ ರೂಲ್ಸ್‌ ಪ್ರಕಾರ ಮತ್ತೆ ಪರಿಗಣನೆಗೆ ತೆಗೆದುಕೊಳ್ಳೋದೇ ಇಲ್ಲ.. ಹೀಗಾಗಿ ವಿನೇಶ್ ಪೊಗಟ್‌ ಪದಕವಿಲ್ಲದೆ ಪ್ಯಾರಿಸ್‌ನಿಂದ ಭಾರತಕ್ಕೆ ವಾಪಸ್ಸಾಗುವಂತಾಗಿದೆ..

ಇಷ್ಟಕ್ಕೂ ಪಂದ್ಯ ಆರಂಭಕ್ಕೂ ಮುಂಚಿತವಾಗಿ ದಿನದ ಮೊದಲ ಅವಧಿಯಲ್ಲೇ ಕುಸ್ತಿಪಟುಗಳು ವೇಯ್ಟ್‌ ಚೆಕ್‌ ಮಾಡ್ತಾರೆ.. ಸಾಮಾನ್ಯವಾಗಿ ಖಾಲಿ ಹೊಟ್ಟೆಯಲ್ಲೇ ಈ ರೀತಿಯಲ್ಲಿ ವೇಯ್ಟ್‌ ಚೆಕಪ್‌ ಮಾಡಲಾಗುತ್ತದೆ.. ಕುಸ್ತಿಪಟುಗಳು ಯಾವುದೇ ಕೆಟಗರಿಯಲ್ಲಿ ಭಾಗವಹಿಸುವಾಗ ತೂಕ ನಿಗದಿಯಷ್ಟೇ ಇರಬೇಕು.. ಅಥವಾ ಅದಕ್ಕಿಂತ ಕೆಲವು ಗ್ರಾಂಗಳಷ್ಟು ಕಡಿಮೆ ಇರಬಹುದು.. ಇಲ್ಲಿ ವೆನೀಶಾ ಪೋಗಟ್ ವಿಚಾರಕ್ಕೆ ಬರೋದಾದ್ರೆ ಅವರು 50 ಕೆಜಿ ಕೆಟಗರಿ ಅಂದ್ರೆ 50 ಕೆಜಿ ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ ತೂಕವನ್ನು ವೇಯ್ಟ್‌ ಚೆಕ್‌ ಮಾಡುವಾಗ ಮೆಂಟೇನ್‌ ಮಾಡ್ಕೋಬೇಕು.. ಆದ್ರೆ ಕುಸ್ತಿಯಂತಹ ಕ್ರೀಡೆಗಳಲ್ಲಿ ದೇಹದ ಸ್ಟೆಮಿನಾ ಬಹಳ ಮುಖ್ಯ.. ಅದಕ್ಕೆ ಬೇಕಾದ ಒಳ್ಳೆಯ ಆಹಾರ ತೆಗೆದುಕೊಳ್ಳಲೇಬೇಕು.. ಹಾಲು ಕುಡಿಯುವುದು, ಹಣ್ಣುಗಳನ್ನು ತಿನ್ನುವುದು ಕಾಮನ್‌.. ಇದ್ರಿಂದಾಗಿ 50 ಕೆಜಿಗಿಂತ ಸ್ವಲ್ಪ ಜಾಸ್ತಿ ತೂಕ ಸಾಮಾನ್ಯವಾಗಿ ರಾತ್ರಿ ಹೊತ್ತಿನಲ್ಲಿ ಇದ್ದೇ ಇರುತ್ತೆ. ಆದ್ರೆ ಬೆಳಗ್ಗೆ ತೂಕ ಚೆಕ್‌ ಮಾಡುವಾಗ ಮತ್ತೆ 50 ಕೆಜಿಯೊಳಗೆ ತೂಕವನ್ನು ಮೆಂಟೇನ್‌ ಮಾಡಿಕೊಳ್ಳಲೇಬೇಕು.. ಹಾಗಂತ 100 ನೂರೈವತ್ತು ಗ್ರಾಮ್‌ಗಳನ್ನು ಇಳಿಸೋದು ದೊಡ್ಡ ಕಷ್ಟವೇನಲ್ಲ.. ವೆನೀಶ್‌ ಪೋಗಟ್‌ ಕೇವಲ ಅರ್ಧ ಮುಕ್ಕಾಲು ಗಂಟೆಗಳಲ್ಲಿ ಅಷ್ಟು ತೂಕ ಇಳಿಸಿಕೊಳ್ಳೋದಿಕ್ಕೆ ಸಮರ್ಥರಿದ್ದಾರೆ.. ಆದ್ರೆ ಅದ್ಯಾಕೆ ಒಲಿಂಪಿಂಕ್ಸ್‌ನಲ್ಲಿ ಅಫೀಷಿಯಲ್‌ ಆಗಿ ತೂಕ ಚೆಕ್‌ ಮಾಡೋದಿಕ್ಕೂ ಮೊದ್ಲು ವೆನೀಶ್‌ ಫೋಗಟ್‌ ಅವರ ಕೋಚ್‌ ಮತ್ತು ಟೀಂ ಮ್ಯಾನೇಜ್‌ಮೆಂಟ್‌ ಮೊದಲೇ ಯಾಕೆ ಅವರ ತೂಕವನ್ನು ಚೆಕ್‌ ಮಾಡಿ ದೃಢಪಡಿಸಿಕೊಂಡಿಲ್ಲ ಎನ್ನುವುದು ಅರ್ಥವಾಗ್ತಿಲ್ಲ.. ಇಲ್ಲಿ ಒಲಿಂಪಿಕ್ಸ್‌ ಕಮಿಟಿಯವರ ಮೇಲೆ ಗೂಬೆ ಕೂರಿಸೋದಿಕ್ಕೂ ಮೊದ್ಲು ವಿನೇಶ್‌ ಪೋಗಟ್‌ ಅವರ ಕೋಚ್‌ ಮತ್ತು ಟೀಂ ಮ್ಯಾನೇಜ್‌ಮೆಂಟ್‌ ನಿರ್ಲಕ್ಷ್ಯವನ್ನೂ ಗಮನಿಸಬೇಕಾಗುತ್ತದೆ.. ಹಾಗೆಯೇ ಒಂದು ವೇಳೆ ಕೇವಲ ನೂರು-ನೂರೈವತ್ತು ಗ್ರಾಂ ಹೆಚ್ಚು ತೂಕವಿದ್ದಾಗ ಅದನ್ನು ಸಂಜೆ ಮ್ಯಾಚ್‌ ನಡೆಯುವ ಅವಧಿಯೊಳಗೆ ಇಳಿಸಿಕೊಳ್ಳಬೇಕಾದ ಸರಳ ಸೂಚನೆಯನ್ನು ಕೊಟ್ಟಿದ್ದರೂ ಸಾಕಿತ್ತು.. ಯಾಕಂದ್ರೆ ಮ್ಯಾಚ್‌ ನಡೆಯಲೂ ಇನ್ನೂ 10 ಗಂಟೆಯಷ್ಟು ಟೈಮಿದ್ದಾಗ ವೇಯ್ಟ್‌ ಚೆಕ್‌ ಮಾಡಲಾಗಿತ್ತು.. ಹೀಗಿರುವಾಗ ವೇಯ್ಟ್‌ ಕೇವಲ ನೂರೈವತ್ತು ಗ್ರಾಮ್‌ ಮಾತ್ರ ಹೆಚ್ಚಿದೆ ಎನ್ನುವ ಕಾರಣಕ್ಕೆ ಒಲಿಂಪಿಕ್ಸ್‌ ಫೈನಲ್‌ ಪಂದ್ಯದಿಂದಲೇ ಔಟ್‌ ಮಾಡಿದ್ದು ಅಮಾನವೀಯ ಅಷ್ಟೇ ಅಲ್ಲದೆ, ಒಲಿಂಪಿಕ್ಸ್‌ನ ಮೂಲ ಧ್ಯೇಯಕ್ಕೆ ಅಪಚಾರ ತಂದಂತಾಗಿದೆ..

ಒಲಿಂಪಿಕ್ಸ್‌ನ ಮೂಲ ಧ್ಯೇಯವೇ ಒಬ್ಬರನ್ನೊಬ್ಬರು ಬೆಸೆಯುವುದು.. ಜಗತ್ತನ್ನು ಬೆಸೆಯುವ ಕ್ರೀಡಾಕೂಟವಿದು.. ಆದ್ರೆ ಒಣ ಕಾನೂನುಗಳಿಗಿಂತ ಹೆಚ್ಚಾಗಿ ಔಚಿತ್ಯಗಳ ಕಡೆಗೂ ಆಯೋಜಕರು ಗಮನಹರಿಸಬೇಕಿತ್ತು.. ಇದೇ ಕಾರಣಕ್ಕಾಗಿ ವಿನೇಶ್‌ ಪೋಗಟ್‌ ಟೂರ್ನಮೆಂಟ್‌ನಿಂದ ಔಟಾಗುವ ಆಘಾತಕಾರಿ ಸುದ್ದಿ ಹೊರಬೀಳುತ್ತಿದ್ದಂತೆಯೇ ಪ್ರಧಾನಿ ಮೋದಿ, ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಸಾಂತ್ವನದ ಮಾತುಗಳನ್ನು ಹೇಳಿದ್ದಾರೆ.. ನೀನು ಚಾಂಪಿಯನ್‌ಗಳ ಚಾಂಪಿಯನ್‌ ಎಂದು ಹೊಗಳಿದ್ದಾರೆ.. ದೇಶದ ಜನರಿಗೆ ನೀನು ಸ್ಪೂರ್ತಿಯೆಂದು ಹುರಿದುಂಬಿಸಿದ್ದಾರೆ.. ಜೊತೆಗೆ ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷೆ ಪಿ ಟಿ ಉಷಾ ಅವರಿಗೆ ಕರೆ ಮಾಡಿ, ಸಾಧ್ಯವಿರುವ ಎಲ್ಲಾ ಮಾರ್ಗಗಳ ಮೂಲಕ ವಿನೇಶ್‌ ಫೋಗಟ್‌ ಆಡಲು ಅವಕಾಶ ಕೋರುವಂತೆ ಸೂಚಿಸಿದ್ದಾರೆ.. ಇಲ್ಲಿ ಮೋದಿಯವರನ್ನು ಆಲ್‌ರೆಡಿ ಸೋಷಿಯಲ್‌ ಮೀಡಿಯಾದಲ್ಲಿ ಟಾರ್ಗೆಟ್‌ ಮಾಡಲಾಗಿತ್ತು.. ಯಾಕಂದ್ರೆ ಕುಸ್ತಿ ಫೆಡರೇಷನ್‌ನ ಹಿಂದಿನ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ಮಹಿಳಾ ಕುಸ್ತಿಪಟುಗಳು ದೊಡ್ಡ ಹೋರಾಟ ನಡೆಸಿದಾಗ ವಿನೇಶ್‌ ಫೋಗಟ್‌ ಅದರ ಮುಂಚೂಣಿಯಲ್ಲಿದ್ದರು.. ಅಂದು ಈ ಆಟಗಾರ್ತಿಯರನ್ನು ಮೋದಿ ಸರ್ಕಾರ ನಿರ್ಲಕ್ಷ್ಯ ಮಾಡಿತ್ತು.. ಇದೇ ಕಾರಣಕ್ಕಾಗಿ ಈಗ ವಿನೇಶ್‌ ಚಿನ್ನ ಗೆದ್ದರೆ, ಆಗ ಮೋದಿ ಏನ್ ಮಾಡ್ತಾರೆ ಎಂಬ ಪ್ರಶ್ನೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಲವರು ಕೇಳ್ತಿದ್ದರು.. ಆದ್ರೀಗ ವಿನೇಶ್‌ ಫೋಗಟ್‌ ಫೈನಲ್‌ನಿಂದ ಅನರ್ಹಳಾಗುತ್ತಿದ್ದಂತೆ ಇದರಲ್ಲಿ ಷಡ್ಯಂತ್ರದ ಗುಮಾನಿಯನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ..

ಆದ್ರೆ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟುಕೊಳ್ಳುವ ಯಾರೊಬ್ಬರೂ ಇಂತಹ ವಿಚಾರದಲ್ಲಿ ಅನುಮಾನಿಸಲು ಸಾಧ್ಯವಿಲ್ಲ..  ಒಲಿಂಪಿಕ್ಸ್‌ನಲ್ಲಿ ತೂಕದ ವಿಚಾರಕ್ಕೆ ಬಂದಾಗ ಕಟ್ಟುನಿಟ್ಟಿನ ನಿಯಮಗಳಿವೆ.. ಅದನ್ನು ಪಾಲಿಸಬೇಕಾದ ಜವಾಬ್ದಾರಿ ಆಟಗಾರರ ಮೇಲಿರುತ್ತದೆ.. ಆದ್ರಿಲ್ಲಿ ಆಗಿರುವ ಸಣ್ಣ ಲೋಪಕ್ಕೆ ಕೊಡಲಿಯಿಂದಲೇ ಕತ್ತರಿಸುವಂತಹ ಶಿಕ್ಷೆ ನೀಡಿರುವುದು ಮಾತ್ರ ಒಲಿಂಪಿಕ್ಸ್‌ನ ಮೂಲ ಉದ್ದೇಶಕ್ಕೇ ಧಕ್ಕೆ ತಂದಂತಾಗಿದೆ.. ಅಶಿಸ್ತು.. ಅಥವಾ ಬೇರಿನ್ಯಾವುದೇ ಕಾರಣಕ್ಕೆ ಅನರ್ಹರಾಗಿರುತ್ತಿದ್ದರೆ ಅದು ಬೇರೆ ಮಾತು.. ಆದ್ರೆ ಕೇವಲ ನೂರೈವತ್ತು ಗ್ರಾಂ ಹೆಚ್ಚಿದ್ದಾರೆಂದು ಮ್ಯಾಚ್‌ಗಿಂತ 10 ಗಂಟೆ ಮೊದಲೇ ಅನರ್ಹ ಮಾಡಿರುವುದನ್ನು ಒಪ್ಪಿಕೊಳ್ಳುವುದು ಕಷ್ಟ.. ನಿಮಗೆಲ್ಲಾ ಗೊತ್ತಿರಲಿ.. ಹಿಂದೆ ಮೇರಿ ಕೋಮ್‌ ಕೇವಲ ಒಂದೇ ಒಂದು ಗಂಟೆಯಲ್ಲಿ ಬರೋಬ್ಬರಿ ಎರಡು ಕೆಜಿ ತೂಕ ಇಳಿಸಿಕೊಂಡಿದ್ದರು.. ವೆನೀಶಾ ಪೋಗಟ್‌ ಗೆ ನೂರೈವತ್ತು ಗ್ರಾಂ ಇಳಿಸಿಕೊಳ್ಳೋದು ಕಷ್ಟವೇನೂ ಆಗಿರಲಿಲ್ಲ..ಇದಕ್ಕೆ ಬ್ಯಾಡ್‌ಲಕ್‌ ಅನ್ನಬೇಕೋ… ಅಥವಾ ವ್ಯವಸ್ಥೆಯಲ್ಲಿನ ಲೋಪ ಅನ್ನಬೇಕೋ ಅಂತಾ ಗೊತ್ತಿಲ್ಲ.

Shwetha M

Leave a Reply

Your email address will not be published. Required fields are marked *