ಭಾರತ ಕರೆಸಿಕೊಳ್ಳಲು ಪಾಕ್ ಹೊಸ ಟ್ರಿಕ್ಸ್! – ಟೂರ್ನಿ ಪೋಸ್ಟ್ ಪೋನ್.. IPLಗೆ ಶಾಕ್
ಚಾಂಪಿಯನ್ಸ್ ಟ್ರೋಫಿಗೆ ಇದೆಂಥಾ ಟ್ವಿಸ್ಟ್?
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಭರ್ಜರಿಯಾಗೇ ಸಿದ್ಧತೆ ಮಾಡಿಕೊಳ್ತಿದೆ. ಹಾಗೇ ದಶಕದ ಬಳಿಕ ಭಾರತವನ್ನ ತನ್ನ ನೆಲಕ್ಕೆ ಕರೆಸಿಕೊಳ್ಳೋಕೆ ಇನ್ನಿಲದ ಕಸರತ್ತು ನಡೆಸ್ತಿದೆ. ಭದ್ರತೆಯ ಬಗ್ಗೆ ಯಾವುದೇ ಸಮಸ್ಯೆ ಇಲ್ಲ, ಟೀಂ ಇಂಡಿಯಾ ಪ್ಲೇಯರ್ಸ್ ಪಾಕಿಸ್ತಾನಕ್ಕೆ ಬಂದು ಆಡ್ಬೇಕು ಅಂತಾ ಮನವಿ ಮಾಡಿದೆ. ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಕೂಡ ಬಿಸಿಸಿಐ ಈ ವಿಚಾರದಲ್ಲಿ ರಾಜಕೀಯ ಮಾಡಬಾರದು, ಭಾರತ ತಂಡ ಪಾಕಿಸ್ತಾನಕ್ಕೆ ಬರಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದ್ರೆ ಟೂರ್ನಿಗಾಗಿ ಭಾರತ ಈವರೆಗೂ ಕೂಡ ಪಾಕಿಸ್ತಾನಕ್ಕೆ ಕಾಲಿಡಲ್ಲ ಅಂತಾನೇ ಪಟ್ಟು ಹಿಡಿದಿದೆ. ಬಿಸಿಸಿಐ ಮತ್ತು ಪಿಸಿಬಿ ನಡುವಿನ ಈ ತಿಕ್ಕಾಟ ಐಸಿಸಿಗೆ ನುಂಗಲಾರದ ತುತ್ತಾಗಿದೆ. ಒಂದ್ಕಡೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಚಾಂಪಿಯನ್ಸ್ ಟ್ರೋಫಿಯ ಎಲ್ಲಾ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಬೇಕು ಎಂದು ಹಠ ಹಿಡಿದಿದ್ರೆ ಬಿಸಿಸಿಐ ಮಾತ್ರ ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ತಂಡವನ್ನು ಕಳಿಸಲ್ಲ, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಿ ಎಂದು ಪಟ್ಟು ಹಿಡಿದಿದೆ. ಇದೀಗ ಪಾಕಿಸ್ತಾನಕ್ಕೆ ಕಾಲಿಡಲ್ಲ ಅಂತಿರೋ ಭಾರತಕ್ಕೆ ಐಪಿಎಲ್ನಲ್ಲಿ ಶಾಕ್ ಕೊಡೋಕೆ ಪಾಕ್ ಕ್ರಿಕೆಟ್ ಮಂಡಳಿ ಪ್ಲ್ಯಾನ್ ಮಾಡಿಕೊಳ್ತಿದೆ.
ಇದನ್ನೂ ಓದಿ: ರೋಹಿತ್, ಕೊಹ್ಲಿಗೆ ರೆಸ್ಟ್ ನೀಡ್ಬೇಕಿತ್ತಾ? – ಜಿದ್ದಿಗೆ ಬಿದ್ದು ಮುಗ್ಗರಿಸಿದ್ರಾ ಗಂಭೀರ್?
ಐಪಿಎಲ್ ಗೆ ಶಾಕ್ ಪ್ಲ್ಯಾನ್!
ಜಗತ್ತಿನಲ್ಲೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಆಗಿದೆ. ಜೊತೆಗೆ ಕ್ರಿಕೆಟ್ನಲ್ಲಿ ಸಾಲು ಸಾಲು ಇತಿಹಾಸಗಳನ್ನೇ ಸೃಷ್ಟಿಸಿದೆ. ಇದೇ ಕಾರಣಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೇ ಅಲ್ಲಿನ ಆಟಗಾರರು ಭಾರತದ ಬಗ್ಗೆ ಹೊಟ್ಟೆ ಕಿಚ್ಚು ಪಡ್ತಾರೆ. ಇತ್ತೀಚೆಗಂತೂ ಟೀಂ ಇಂಡಿಯಾ ಸಾಧನೆಗಳ ಬಗ್ಗೆ ಪಾಕಿಸ್ತಾನ ಆಟಗಾರರಿಗೆ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಅದ್ರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ತಮ್ಮ ಪಾಕಿಸ್ತಾನ ಸೂಪರ್ ಲೀಗ್ ನೊಂದಿಗೆ ಹೋಲಿಕೆ ಮಾಡಿಕೊಳ್ತಿದೆ. ಐಪಿಎಲ್‌ಗಿಂತ ಪಿಎಸ್‌ಎಲ್ ಉತ್ತಮವಾಗಿದೆ ಅನ್ನೋದು ಪಾಕಿಸ್ತಾನಿಗಳ ಮೊಂಡು ವಾದ. ಆದರೆ, ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರೋ ಐಪಿಎಲ್ ಮುಂದೆ ಪಿಎಸ್‌ಎಲ್ ಏನೇನು ಅಲ್ಲ ಅನ್ನೋದು ಗೊತ್ತಿರೋ ವಿಚಾರವೇ. ಈಗ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ 2025ರ ಐಸಿಸಿ ಚಾಂಪಿಯನ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಭದ್ರತಾ ಕಾರಣಗಳಿಂದ ಭಾರತ ತಂಡ ಪಾಕಿಸ್ತಾನ ಪ್ರವಾಸ ಮಾಡುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಡಬೇಕೆಂದು ಮನವಿ ಇಟ್ಟಿದೆ. ಇದಕ್ಕೆ ಒಪ್ಪದ ಪಿಸಿಬಿ ಬಿಸಿಸಿಐಯನ್ನು ಎದುರಿಸೋ ಹುಚ್ಚು ಯೋಚನೆಯಲ್ಲಿದೆ. ಅದೂ ಕೂಡ ಪಿಎಸ್‌ಎಲ್‌ನ ವೇಳಾಪಟ್ಟಿಯನ್ನು ಬದಲಾಯಿಸೋ ಮೂಲಕ. ಪ್ರತೀ ವರ್ಷ ಫೆಬ್ರವರಿ ಮಾರ್ಚ್ ನಲ್ಲಿ ಪಿಎಸ್‌ಎಲ್ ಆಯೋಜನೆ ಮಾಡಲಾಗುತ್ತೆ. ಆದ್ರೆ 2025ಕ್ಕೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಅದೇ ತಿಂಗಳಲ್ಲಿ ಬರೋದ್ರಿಂದ ಮುಂದಿನ ಪಿಎಸ್‌ಎಲ್ ಅನ್ನು ಏಪ್ರಿಲ್ 10 ರಿಂದ ಮೇ 25 ರ ನಡುವೆ ಆಯೋಜಿಸೋ ಚಿಂತನೆಯಲ್ಲಿದೆ. ಈ ವೇಳೆ ಭಾರತದಲ್ಲಿ ಐಪಿಎಲ್ ಕೂಡ ನಡೆಯೋದ್ರಿಂದ ಇದ್ರಿಂದ ಭಾರತಕ್ಕೆ ಎಫೆಕ್ಟ್ ಆಗುತ್ತೆ ಅನ್ನೋದು ಪಿಸಿಬಿ ಲೆಕ್ಕಾಚಾರ. ವಿದೇಶಿ ಆಟಗಾರರು ಪಾಕಿಸ್ತಾನಕ್ಕೆ ಆಡಲು ಬರ್ತಾರೆ, ಇದ್ರಿಂದ ಐಪಿಎಲ್ಗೆ ವಿದೇಶಿಗರು ಹೋಗಲ್ಲ. ಎರಡೂ ಲೀಗ್ಗಳು ಸೇಮ್ ಟೈಮ್ನಲ್ಲಿ ನಡೆಯೋದ್ರಿಂದ ಘರ್ಷಣೆ ಉಂಟಾಗುತ್ತೆ ಅನ್ನೋ ಭ್ರಮೆಯಲ್ಲಿದೆ.
ಪಾಕಿಸ್ತಾನ ಭಾರತಕ್ಕೆ ಅದೆಷ್ಟೇ ತೊಂದರೆ ಕೊಡ್ಬೇಕು ಅಂತಾ ಯೋಚಿಸಿದ್ರೂ ಕೂಡ ಅದೆಲ್ಲ ಬರೀ ಹಗಲು ಗನಸು ಅಷ್ಟೇ. ಅದ್ರಲ್ಲೂ ಐಪಿಎಲ್ಗೆ ಟಕ್ಕರ್ ಕೊಡೋದು ಕನಸಿನ ಮಾತು. ಯಾಕಂದ್ರೆ ನಮ್ಮ ಒಂದು ಐಪಿಎಲ್ನ ವಹಿವಾಟು ಪಾಕಿಸ್ತಾನದ ಇಡೀ ವರ್ಷದ ಬಜೆಟ್ಗಿಂತಲೂ ಹೆಚ್ಚು ಅಂದ್ರೆ ಪಾಕಿಸ್ತಾನದ ಪರಿಸ್ಥಿತಿ ಅದ್ಯಾವ ಮಟ್ಟಿಗಿದೆ ಅನ್ನೋದನ್ನ ನೀವೇ ಊಹೆ ಮಾಡಿ. ಯಾಕಂದ್ರೆ ಐಪಿಎಲ್ನಲ್ಲಿ ಹಣದ ಹೊಳೆಯೂ ಹರಿಯುತ್ತೆ. ಇತ್ತೀಚೆಗಷ್ಟೇ 17ನೇ ಸೀಸನ್ ಮುಕ್ತಾಯಗೊಂಡಿದ್ದು, ಐಪಿಎಲ್ನ ಮೌಲ್ಯ 16.4 ಬಿಲಿಯನ್ ಡಾಲರ್ ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ ಸುಮಾರು 1.3 ಲಕ್ಷ ಕೋಟಿ ರೂಪಾಯಿಗಳು. ಕಳೆದ ವರ್ಷ 15.4 ಬಿಲಿಯನ್ ಡಾಲರ್ ಇದ್ದ ಮೌಲ್ಯ ಈ ವರ್ಷ ಶೇ. 6.5 ರಷ್ಟು ಹೆಚ್ಚಾಗಿತ್ತು. ಹೀಗೆ ವರ್ಷದಿಂದ ವರ್ಷಕ್ಕೆ ಐಪಿಎಲ್ ಮೌಲ್ಯ ಹೆಚ್ಚುತ್ತಲೇ ಹೋಗ್ತಿದೆ. ಅಂಥಾದ್ರಲ್ಲಿ ಪಾಕಿಸ್ತಾನ ತನ್ನ ಲೀಗ್ನ ಐಪಿಎಲ್ಗೆ ಹೋಲಿಕೆ ಮಾಡಿಕೊಳ್ತಿರೋದು ನಿಜಕ್ಕೂ ಹುಚ್ಚುತನ. ಇದೇ ಕಾರಣಕ್ಕೆ ಐಸಿಸಿ ಯಾವಾಗ್ಲೂ ಕೂಡ ಕ್ರಿಕೆಟ್ ಲೋಕದ ದೊಡ್ಡಣ್ಣ ಅಂತಾ ಕರೆಸಿಕೊಳ್ಳೋ ಬಿಸಿಸಿಐಗೆ ಮಣೆ ಹಾಕುತ್ತೆ. ಸೋ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕ್ಗೆ ಭಾರತ ಹೋಗದಿದ್ದರೆ ಅದಕ್ಕಾಗಿ ಪ್ಲ್ಯಾನ್ ಬಿ ಕೂಡ ರೆಡಿ ಮಾಡಿಕೊಂಡಿದೆ. ಪಾಕಿಸ್ತಾನದ ಹೊರಗೆ ಕೆಲವು ಪಂದ್ಯಗಳನ್ನು ಆಡುವ ಅಗತ್ಯವನ್ನು ಪರಿಗಣಿಸಿ, ಹೆಚ್ಚುವರಿ ಬಜೆಟ್‌ಗೆ ಅನುಮೋದನೆ ಕೊಡಲಾಗಿದೆ. ಹಣ ಮೀಸಲಿಡುವ ಮೂಲಕ ಐಸಿಸಿ ಸಿದ್ಧತೆ ಮಾಡಿಕೊಂಡಿದೆ. ಆದ್ರೆ ಪಾಕಿಗಳ ದಡ್ಡತನಕ್ಕೆ ಇದು ಅರ್ಥವಾಗ್ತಿಲ್ಲ ಅಷ್ಟೇ.