KLಗೆ RCB ಬಾಗಿಲು ಬಂದ್? – ಫಾಫ್ OUT.. ಪಾಂಡ್ಯ CAPTAIN?
ಲಂಕಾ ಗೆದ್ದ ಸೂರ್ಯ MI ಸಾರಥಿ?

KLಗೆ RCB ಬಾಗಿಲು ಬಂದ್? – ಫಾಫ್ OUT.. ಪಾಂಡ್ಯ CAPTAIN?ಲಂಕಾ ಗೆದ್ದ ಸೂರ್ಯ MI ಸಾರಥಿ?

2025ರ ಇಂಡಿಯನ್​ ಪ್ರೀಮಿಯರ್​ ಲೀಗ್ ಟೂರ್ನಿಯ​​ ಮೆಗಾ ಆಕ್ಷನ್ ಈ ಬಾರಿ ಸೌಂಡ್ ಮಾಡಿದಷ್ಟು ಯಾವತ್ತೂ ಮಾಡಿಲ್ಲ ಅನ್ಸುತ್ತೆ. ಅದ್ರಲ್ಲೂ ಆರ್‌ಸಿಬಿ, ಲಕ್ನೋ, ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್ ತಂಡದ ಬಗ್ಗೆ ಫ್ಯಾನ್ಸ್ ಕ್ಯೂರಿಯಾಸಿಟಿ ಇನ್ನೂ ಹೆಚ್ಚಾಗಿದೆ. ಆರ್‌ಸಿಬಿ ಮತ್ತು ಮುಂಬೈ ಟೀಮ್‌ನಲ್ಲಿ ಏನೆಲ್ಲಾ ಬೆಳವಣಿಗೆಯಾಗ್ತಿದೆ ಅನ್ನೋ ಅಪ್‌ಡೇಟ್ಸ್‌ಗೋಸ್ಕರ ಫ್ಯಾನ್ಸ್ ಕಾಯ್ತಿದ್ದಾರೆ. ಇದ್ರ ಮಧ್ಯೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದು ಕೂಡಾ ಶ್ರೀಲಂಕಾ ಪಂದ್ಯದೆದುರು ಇಂಡಿಯಾ ಸೋತ ಮೇಲೆ ಮತ್ತೊಮ್ಮೆ ಐಪಿಎಲ್ ಪ್ರಾಂಚೈಸಿಗಳು ತಮ್ಮ ಲೆಕ್ಕಾಚಾರ ಬದಲು ಮಾಡ್ತಿವೆ. ಆರ್‌ಸಿಬಿ, ಮುಂಬೈ ಇಂಡಿಯನ್ಸ್ ಟೀಮ್‌ಗೂ, ಶ್ರೀಲಂಕಾ ಎದುರು ಟೀಮ್ ಇಂಡಿಯಾ ಸೋತಿದ್ದಕ್ಕೂ ಏನ್ ಸಂಬಂಧ, ಮತ್ತೊಮ್ಮೆ ಐಪಿಎಲ್ ಪ್ರಾಂಚೈಸಿಗಳ ಟಾರ್ಗೆಟ್ ಮಿಸ್ ಆಗ್ತಿರೋದು ಯಾಕೆ?, ಯಾರಿಗೆ ಲಕ್, ಯಾರು ಔಟ್ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: IND Vs SL.. 3ನೇ ಪಂದ್ಯಕ್ಕೆ 3 ಶಾಕ್! – ಕೆಎಲ್ & ದುಬೆ ಔಟ್.. ಯಾರು IN?

ವರ್ಷದ ಕೊನೆಗೆ ನಡೆಯಲಿರೋ ಮೆಗಾ ಆಕ್ಷನ್​​ನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡಬೇಕು ಎಂದು ಎಲ್ಲಾ ಐಪಿಎಲ್​ ಫ್ರಾಂಚೈಸಿಗಳು ಈಗ್ಲೇ ತಯಾರಿ ನಡೆಸಿಕೊಂಡಿವೆ. ಇದ್ರಲ್ಲಿ ಜಾಸ್ತಿ ತಲೆಕೆಡಿಸಿಕೊಂಡಿರೋ ಟೀಮ್ ಗಳೆಂದರೆ ಆರ್​​ಸಿಬಿ ಮತ್ತು ಮುಂಬೈ ಇಂಡಿಯನ್ಸ್. ಈಗಾಗಲೇ ಆರ್‌ಸಿಬಿ ಕಿಂಗ್ ಕೊಹ್ಲಿಗಾಗಿ ಕಪ್ ಗೆಲ್ಲಲೇಬೇಕು ಎಂಬ ಹಠಕ್ಕೆ ಬಿದ್ದಿದೆ. ಅದಕ್ಕೆ ಎಷ್ಟೇ ಕೋಟಿ ಸುರಿದ್ರೂ ಸರಿಯೇ ಕಪ್ ನಮ್ಮದಾಗಲೇಬೇಕು ಅಂತಾ ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದೆ. ಇದ್ರ ಮಧ್ಯೆ ಕನ್ನಡಿಗ ಕೆ.ಎಲ್ ರಾಹುಲ್ ಟೀಮ್ ಜಾಯ್ನ್ ಆಗೋದು ಕನ್‌ಫರ್ಮ್ ಅಂತಾನೂ ಹೇಳಲಾಗ್ತಿದೆ. ಈ ಬಗ್ಗೆ ಕೆ.ಎಲ್ ಕೂಡಾ ಆರ್‌ಸಿಬಿಗೆ ಕಮ್ ಬ್ಯಾಕ್ ಮಾಡೋದಾಗಿ ಇಂಡೈರೆಕ್ಟ್ ಆಗಿ ಹೇಳಿಯೂ ಆಗಿದೆ. ಇದ್ರ ಮಧ್ಯೆ ಇನ್ನೊಂದು ಬಿಸಿ ಬಿಸಿ ಸುದ್ದಿ ಸೌಂಡ್ ಮಾಡ್ತಿದೆ. ಆರ್​​ಸಿಬಿ ಹೊಸ ಕ್ಯಾಪ್ಟನ್​​ಗಾಗಿ ಹುಡುಕಾಟ ಶುರು ಮಾಡಿದೆ. ಕೆ.ಎಲ್​ ರಾಹುಲ್​ ಕ್ಯಾಪ್ಟನ್ ಆಗ್ತಾರೆ ಅಂದುಕೊಂಡಿದ್ದ ಫ್ಯಾನ್ಸ್ ಮತ್ತೊಂದು ಬೆಳವಣಿಗೆಯಿಂದ ಶಾಕ್ ಆಗಿದ್ದಾರೆ. ಯೆಸ್.. ಇದೀಗ ಸ್ಟಾರ್​ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯ ಆರ್‌ಸಿಬಿಗೆ ಕ್ಯಾಪ್ಟನ್ ಆಗಿ ಬರ್ತಾರೆ ಎನ್ನಲಾಗ್ತಿದೆ. ಇವರನ್ನು ಖರೀದಿ ಮಾಡಬಹುದು ಎಂಬ ನಿರ್ಧಾರಕ್ಕೆ ಆರ್​ಸಿಬಿ ಬಂದಿದೆಯಂತೆ.

ಮುಂಬೈ ಇಂಡಿಯನ್ಸ್​ ಟೀಮ್ ಹಾರ್ದಿಕ್​ ಪಾಂಡ್ಯ ಅವರನ್ನು ರಿಲೀಸ್​ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಭಾರತ ಟಿ20 ಕ್ರಿಕೆಟ್​ ತಂಡದ ಹೊಸ ಕ್ಯಾಪ್ಟನ್​ ಆಗಿ ಸೂರ್ಯಕುಮಾರ್​ ಯಾದವ್​ ಅವರನ್ನು ನೇಮಕ ಮಾಡಲಾಯ್ತು. ತನ್ನ ಮೊದಲ ಕ್ಯಾಪ್ಟನ್ಸಿಯಲ್ಲೇ ಸೂರ್ಯಕುಮಾರ್ ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನ ಕೈವಶ ಮಾಡಿಕೊಂಡಿದ್ದಾರೆ. ಸೂರ್ಯನ ಈ ಸಾಮರ್ಥ್ಯ ಕಂಡು ಮುಂಬೈ ಟೀಮ್ ಪ್ರಾಂಚೈಸಿ ಐಪಿಎಲ್‌ಗೂ ಸೂರ್ಯನೇ ಕ್ಯಾಪ್ಟನ್ ಆಗೋದು ಬೆಟರ್ ಅನ್ನೋ ನಿರ್ಧಾರಕ್ಕೆ ಬಂದಿದೆ. ಹೀಗಾಗಿ ಹಾರ್ದಿಕ್​ ಪಾಂಡ್ಯ ಕ್ಯಾಪ್ಟನ್ ಬಿಡಿ, ಟೀಮ್ ನಲ್ಲೂ ಕಂಟಿನ್ಯೂ ಆಗೋದು ಡೌಟ್ ಎನ್ನಲಾಗ್ತಿದೆ. ಇತ್ತ ಟೀಮ್ ಇಂಡಿಯಾದ ಟಿ20ಯಲ್ಲಿ ಕ್ಯಾಪ್ಟನ್ ಶಿಪ್ ಸಿಗುತ್ತೆ ಅಂತಾ ಕಾಯ್ತಿದ್ದ ಹಾರ್ದಿಕ್​ ಪಾಂಡ್ಯಗೆ ಸೂರ್ಯಕುಮಾರ್​ ಯಾದವ್​ ವಿಲನ್​ ಆಗಿ ಕಾಡಿದ್ದರು. ಈಗ ಮುಂಬೈ ಇಂಡಿಯನ್ಸ್ ನಲ್ಲಾದ್ರೂ ಕ್ಯಾಪ್ಟನ್ ಶಿಪ್ ಉಳಿದಿದ್ಯಲ್ಲ ಅಂತಾ ಸಮಾಧಾನ ಮಾಡಿಕೊಂಡಿದ್ದ ಪಾಂಡ್ಯಗೆ ಮತ್ತೊಮ್ಮೆ ಇದೇ ಸ್ಕೈ ನಿರಾಶೆ ಮಾಡ್ತಿದ್ದಾರೆ. ಬಹುತೇಕ ಸೂರ್ಯ mi ಟೀಮ್ ಕ್ಯಾಪ್ಟನ್ ಆಗೋದು ಕನ್‌ಫರ್ಮ್ ಆಗ್ತಿದೆ.

ಈಗ ಆರ್‌ಸಿಬಿ ವಿಚಾರಕ್ಕೆ ಬರೋಣ. ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್ಸಿಯಿಂದ ಹಾರ್ದಿಕ್​ ಪಾಂಡ್ಯ ಔಟ್ ಆಗೋದು ಪಕ್ಕಾ ಅನ್ನೋ ವಿಚಾರ ಗೊತ್ತಾಗ್ತಿದ್ದಂತೆ ಆರ್‌ಸಿಬಿ ಪಾಳಯ ಅಲರ್ಟ್ ಆಗಿದೆ. ಯಾಕೆಂದ್ರೆ, ಕೆ.ಎಲ್ ರಾಹುಲ್ ನೆಟ್ ಪ್ರಾಕ್ಟೀಸ್ ನಲ್ಲಿ ಮಾತ್ರ ಅಬ್ಬರಿಸ್ತಿದ್ದಾರೆ. ಆದ್ರೆ, ಫೀಲ್ಡಿಗೆ ಎಂಟ್ರಿ ಕೊಟ್ರೆ ಮತ್ತದೇ ಫೇಲ್ಯೂರ್. ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ನಂಬಿಕೆಯನ್ನೂ ಕೆ.ಎಲ್  ರಾಹುಲ್ ಉಳಿಸಿಕೊಳ್ತಿಲ್ಲ. ಕೆ.ಎಲ್ ಮತ್ತೆ ಮತ್ತೆ ಕಳಪೆ ಆಟ ಪ್ರದರ್ಶನ ತೋರುತ್ತಿರೋದು ಬರೀ ಟೀಮ್ ಇಂಡಿಯಾಕ್ಕೆ ಟೆನ್ಷನ್ ಆಗಿಲ್ಲ. ಕನ್ನಡಿಗ ಕೆ.ಎಲ್ ರಾಹುಲ್ ಆರ್‌ಸಿಬಿಗೆ ಕರೆತರಲು ವೇದಿಕೆ ರೆಡಿಮಾಡಿಕೊಂಡಿರುವ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಗೂ ಈಗ ಟೆನ್ಷನ್ ಶುರುವಾಗಿದೆ. ಮುಂಬೈ ಟೀಮ್ ನಿಂದ ಹಾರ್ದಿಕ್ ಹೊರಬಿದ್ರೆ, ಬೆಂಗಳೂರು ಟೀಮ್ ಗೆ ಪಾಂಡ್ಯನೇ ಬೆಟರ್ ಚಾಯ್ಸ್ ಎಂಬ ಮಾತು ಆರ್‌ಸಿಬಿ ಮೂಲಗಳಿಂದ ಕೇಳಿಬರ್ತಿದೆ. ಹೀಗಾಗಿ ಕೆ.ಎಲ್ ಶ್ರೀಲಂಕಾ ಎದುರು ಸೈಲೆಂಟ್ ಆದ್ರೆ, ಯಾವ ಐಪಿಎಲ್ ಟೀಮ್‌ಗಳೂ ಕೂಡಾ ಕೆ.ಎಲ್ ಬಗ್ಗೆ ಇಂಟ್ರೆಸ್ಟ್ ಕೂಡಾ ತೋರಿಸಲ್ಲ ಅನ್ನೋದೇ ಆತಂಕದ ವಿಚಾರ.

Shwetha M

Leave a Reply

Your email address will not be published. Required fields are marked *