ಲಂಕಾದ ಮುಂದೆ ಮಂಕಾದ ಟೀಮ್‌ ಇಂಡಿಯಾ – 32 ರನ್‌ಗಳಿಂದ ಶ್ರೀಲಂಕಾ ಗೆಲುವು

ಲಂಕಾದ ಮುಂದೆ ಮಂಕಾದ ಟೀಮ್‌ ಇಂಡಿಯಾ – 32 ರನ್‌ಗಳಿಂದ ಶ್ರೀಲಂಕಾ ಗೆಲುವು

ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ 32 ರನ್‌ಗಳಿಂದ ಭಾರತ ತಂಡವನ್ನು ಸೋಲಿಸಿದೆ. ಬ್ಯಾಟ್ಸ್​​​ಮನ್​ಗಳ ಕೆಟ್ಟ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ.

ಭಾನುವಾರ ನಡೆದ 2ನೇ ಏಕದಿನ ಸರಣಿಯ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ 50 ಓವರ್‌ಗೆ 9 ವಿಕೆಟ್‌ ನಷ್ಟಕ್ಕೆ 240 ರನ್‌ ಗಳಿಸಿತು. 241 ರನ್‌ ಗುರಿ ಬೆನ್ನತ್ತಿದ ಟೀಂ ಇಂಡಿಯಾ 42.2 ಓವರ್‌ಗೆ 208 ರನ್‌ ಗಳಿಸಿ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮಾ, ಅಕ್ಷರ್‌ ಪಟೇಲ್‌ ಹೊರತುಪಡಿಸಿ ಟೀಂ ಇಂಡಿಯಾ ಬ್ಯಾಟಿಂಗ್‌ ವೈಫಲ್ಯ ಕಂಡುಬಂತು.

ಇದನ್ನೂ ಓದಿ:All Good ಎಂದ ಐಶ್ವರ್ಯ – ಡಿವೋರ್ಸ್‌ ವದಂತಿಗೆ ಬ್ರೇಕ್‌?

ಲಂಕಾ ಪರ ಅವಿಷ್ಕಾ ಫರ್ನಾಂಡೋ 40, ಕಾಮಿಂದು ಮೆಂಡಿಸ್ 40, ದುನಿತ್ ವೆಲ್ಲಲಾಗೆ 39, ಕುಸಾಲ್ ಮೆಂಡಿಸ್ 30, ಚರಿತ್ ಅಸಲಂಕಾ 25 ಗಳಿಸಿ ತಂಡದ ಮೊತ್ತ 200 ರ ಗಡಿ ದಾಟಲು ನೆರವಾದರು. ಟೀಂ ಇಂಡಿಯಾ ಪರ ವಾಷಿಂಗ್ಟನ್‌ ಸುಂದರ್‌ 3 ವಿಕೆಟ್‌ ಕಿತ್ತರು. ಉಳಿದಂತೆ ಕುಲದೀಪ್‌ ಯಾದವ್‌ 2, ಮೊಹಮ್ಮದ್‌ ಸಿರಾಜ್‌, ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಭಾರತ ತಂಡದ ಪರವಾಗಿ ನಾಯಕ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಉತ್ತಮ ಆರಂಭ ಪಡೆದುಕೊಂಡರು. ಶರ್ಮಾ ಅರ್ಧಶತಕ ಬಾರಿಸಿ (64 ರನ್‌, 44 ಬಾಲ್‌, 5 ಫೋರ್‌, 4 ಸಿಕ್ಸರ್‌) ದೊಡ್ಡ ಹೊಡೆತಕ್ಕೆ ಮುಂದಾಗಿ ಔಟಾದರು. ಗಿಲ್‌ 35 ಹಾಗೂ ಅಕ್ಷರ್‌ ಪಟೇಲ್‌ 44 ರನ್‌ ಗಳಿಸಿದ್ದು ಬಿಟ್ಟರೆ ಭಾರತದ ಯಾವೊಬ್ಬ ಬ್ಯಾಟರ್‌ ಕೂಡ ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಈ ಪಂದ್ಯದಲ್ಲೂ ಕೊಹ್ಲಿ ಮತ್ತೆ ವೈಫಲ್ಯ ಅನುಭವಿಸಿದರು. ಕೆ.ಎಲ್‌.ರಾಹುಲ್‌ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಪರಿಣಾಮವಾಗಿ ಟೀಂ ಇಂಡಿಯಾ 208 ರನ್‌ಗಳಿಗೆ ಆಲೌಟ್‌ ಆಯಿತು. ಜೆಫ್ರಿ ವಾಂಡರ್ಸೆ (6 ವಿಕೆಟ್‌), ಚರಿತ್ ಅಸಲಂಕಾ (3 ವಿಕೆಟ್‌) ಅಮೋಘ ಕೈಚಳಕದಿಂದ ಶ್ರೀಲಂಕಾ ಗೆಲುವು ದಾಖಲಿಸಿತು.

Shwetha M

Leave a Reply

Your email address will not be published. Required fields are marked *