ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಏಡೆನ್ ಮಾರ್ಕ್ರಮ್ ಆಯ್ಕೆ ಸಾಧ್ಯತೆ
ಪ್ರಮುಖ ಆಟಗಾರರಿಗೆ ಕೊಕ್-ಟ್ರೋಫಿ ಗೆಲ್ಲೋದೇ ಸನ್‌ರೈಸರ್ಸ್ ಹೈದರಾಬಾದ್ ಟಾರ್ಗೆಟ್

ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಏಡೆನ್ ಮಾರ್ಕ್ರಮ್ ಆಯ್ಕೆ ಸಾಧ್ಯತೆಪ್ರಮುಖ ಆಟಗಾರರಿಗೆ ಕೊಕ್-ಟ್ರೋಫಿ ಗೆಲ್ಲೋದೇ ಸನ್‌ರೈಸರ್ಸ್ ಹೈದರಾಬಾದ್ ಟಾರ್ಗೆಟ್

ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಂಬರುವ ಐಪಿಎಲ್ ಟಿ20 ಪಂದ್ಯಕ್ಕೆ ಸಜ್ಜಾಗುತ್ತಿದೆ. ಇದಕ್ಕಾಗಿ ತನ್ನ ತಂಡದ ಸಾರಥಿಯನ್ನು ಬದಲಿಸುವ ಸೂಚನೆಯನ್ನ ಆಡಳಿತ ಮಂಡಳಿ ನೀಡಿದೆ. ಸನ್‌ರೈಸರ್ಸ್ ಹೈದರಾಬಾದ್ ಮಿನಿ ಹರಾಜಿಗೂ ಮುನ್ನವೇ ಕೆಲ ಪ್ರಮುಖ ಆಟಗಾರರನ್ನು ಕೈಬಿಟ್ಟು ಅಚ್ಚರಿ ನೀಡಿತ್ತು. ಇದೀಗ ನಾಯಕ ಪಟ್ಟ ಕೂಡಾ ಬದಲಾಗುವ ಸೂಚನೆ ನೀಡಿದೆ. ಮುಂಬರುವ ಸೀಸನ್​ನಲ್ಲಿ ಹೈದರಾಬಾದ್ ತಂಡದ ನಾಯಕನ ಜವಾಬ್ದಾರಿಯನ್ನು ವಿದೇಶಿ ಆಟಗಾರನಿಗೆ ನೀಡುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ :  ಮೂರನೇ ಪಂದ್ಯಕ್ಕೂ ಮಳೆ ಅಡ್ಡಿ – ಟಿ20 ಕ್ರಿಕೆಟ್ ಸರಣಿ ಗೆದ್ದ ಟೀಮ್ ಇಂಡಿಯಾ

ಸನ್‌ರೈಸರ್ಸ್ ಹೈದರಾಬಾದ್ ಮುಂದಿನ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳೋ ಹಠಕ್ಕೆ ಬಿದ್ದಿದೆ. ಇದಕ್ಕಾಗಿಯೇ ಮಿನಿ ಹರಾಜಿಗೂ ಮೊದಲು ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ ಪ್ರಮುಖ ಆಟಗಾರರನ್ನು ತಂಡ ಕೈಬಿಟ್ಟಿತ್ತು. ಹೀಗಾಗಿಯೇ ಮುಂಬರುವ ಸೀಸನ್​ನಲ್ಲಿ ಹೈದರಾಬಾದ್ ತಂಡದ ನಾಯಕ ಯಾರು ಅನ್ನೋ ಪ್ರಶ್ನೆ ಮೂಡಿತ್ತು. ಮೊದಲು ಈ ಸ್ಥಾನಕ್ಕೆ ಭುವನೇಶ್ವರ್ ಕುಮಾರ್ ಹೆಸರು ಕೇಳಿ ಬಂದಿತ್ತು. ಆದರೆ, ಮುಂದಿನ ವರ್ಷ ನಡೆಯಲಿರುವ ಐಪಿಎಲ್ 16ನೇ ಆವೃತ್ತಿಗೆ ಸನ್ ರೈಸರ್ಸ್ ತಂಡದ ನಾಯಕನಾಗಿ ದಕ್ಷಿಣ ಆಫ್ರಿಕಾದ ಆಟಗಾರ ಏಡೆನ್ ಮಾರ್ಕ್ರಮ್ ಅವರನ್ನು ನೇಮಿಸುವುದು ಬಹುತೇಕ ಖಚಿತವಾಗಿದೆ. ತಂಡದ ನಾಯಕ ಯಾರು ಎಂದು ನಿರ್ಧರಿಸಲು ಸಾಕಷ್ಟು ಸಮಯವಿದೆ. ಅಭಿಮಾನಿಗಳು ಕೂಡ ಅದಕ್ಕಾಗಿ ಕಾಯುತ್ತಿದ್ದಾರೆ. ನಾಯಕತ್ವವು ದೊಡ್ಡ ಜವಾಬ್ದಾರಿಯಾಗಿದೆ. ಇದೀಗ ನಮ್ಮ ದೃಷ್ಟಿಯಲ್ಲಿ ಮಾರ್ಕ್ರಾಮ್ ಇದ್ದಾರೆ.  ಅವರನ್ನು ನಮ್ಮ ತಂಡದ ನಾಯಕರನ್ನಾಗಿ ತೆಗೆದುಕೊಳ್ಳಲು ನಾವು ಬಯಸುತ್ತೇವೆ. ನಾವು ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು SRH ಫ್ರಾಂಚೈಸಿಯ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ. ಎಸ್‌ಆರ್‌ಹೆಚ್ ನ ಆಡಳಿತ ಮಂಡಳಿ ಈ ಬಗ್ಗೆ ಅಧಿಕೃತ ಘೋಷಣೆ ಯಾವಾಗ ಮಾಡಲಿದೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

suddiyaana