ಕಂಚಿನ ಪದಕ ಗೆದ್ದ ರೈಲ್ವೆ ಕಲೆಕ್ಟರ್ – ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಸ್ಪಪ್ನಿಲ್
ಶೂಟಿಂಗ್ ವೀರನಿಗೆ ಧೋನಿಯೇ ಸ್ಪೂರ್ತಿ

ಕಂಚಿನ ಪದಕ ಗೆದ್ದ ರೈಲ್ವೆ ಕಲೆಕ್ಟರ್ – ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಸ್ಪಪ್ನಿಲ್ಶೂಟಿಂಗ್ ವೀರನಿಗೆ ಧೋನಿಯೇ ಸ್ಪೂರ್ತಿ

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಪದಕಗಳ ಸಂಖ್ಯೆ ಮೂರಕ್ಕೇರಿದೆ. ಏರ್​ ಪಿಸ್ತೂಲ್​ ಶೂಟಿಂಗ್​ನಲ್ಲಿ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದರು. ಇದರ ಬೆನ್ನಲ್ಲೇ ಮಿಶ್ರ ಏರ್ ಪಿಸ್ತೂಲ್​ನಲ್ಲೂ ಭಾರತವು ಪದಕ ಗೆದ್ದುಕೊಂಡಿತು. ಪ್ಯಾರಿಸ್ ಒಲಿಂಪಿಕ್ಸ್​ನ ಪುರುಷರ 50 ಮೀ ರೈಫಲ್ 3 ಸುತ್ತಿನಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಗೆದ್ದಿದ್ದಾರೆ. 8 ಮಂದಿ ಒಳಗೊಂಡಿದ್ದ ಫೈನಲ್ ಸುತ್ತಿನಲ್ಲಿ ಒಟ್ಟು 451.4 ಅಂಕಗಳನ್ನು ಕಲೆಹಾಕುವ ಮೂಲಕ ಭಾರತೀಯ ಶೂಟರ್ ಮೂರನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಭಾರತಕ್ಕೆ ಮೂರನೇ ಕಂಚಿನ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ರೋಹಿತ್ & ರಾಹುಲ್ ಟ್ರೇಡ್ ಆಗಲ್ವಾ? – IPLನಲ್ಲಿ ಪಂತ್ & ಸ್ಕೈಗೆ ಸವಾಲೇನು?

ಸ್ವಪ್ನಿಲ್ ಕಂಚು ಕಮಾಲ್  

ಪುರುಷರ 50 ಮೀ ರೈಫಲ್ 3 ಸುತ್ತಿನಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಕಂಚಿಗೆ ಗುರಿಯಿಟ್ಟ ಸ್ವಪ್ನಿಲ್ ಕೆಲವೇ ಪಾಯಿಂಟ್ಸ್ ಅಂತರದಲ್ಲಿ ಬೆಳ್ಳಿ ಪದಕ ಮಿಸ್ ಮಾಡಿಕೊಂಡ್ರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ ಸ್ವಪ್ನಿಲ್. ಬುಧವಾರ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ಸ್ವಪ್ನಿಲ್‌ ಕುಸಾಲೆ 7ನೇ ಸ್ಥಾನಿಯಾಗಿ ಫೈನಲ್‌ ಪ್ರವೇಶಿಸಿದ್ದರು. ಆಗಲೇ ಭಾರತಕ್ಕೆ ಮತ್ತೊಂದು ಪದಕ ಸಿಗೋದು ಖಾತ್ರಿಯಾಗಿತ್ತು. ಜೊತೆಗೆ ಟಿವಿ ಮುಂದೆ ಸ್ವಪ್ನಿಲ್ ಅವರ ಕುಟುಂಬ ಮಗನ ಸಾಧನೆ ನೋಡಿ ಖುಷಿಪಟ್ಟರು. ರೈಲ್ವೆ ಟಿಕೆಟ್ ಕಲೆಕ್ಟರ್ ಆಗಿದ್ದಾರೆ ಸ್ವಪ್ನಿಲ್ ಕುಸಾಲೆ. ಇವರು ಮಹಾರಾಷ್ಟ್ರದ ಕೊಲ್ಹಾಪುರದ ಕಂಬಳವಾಡಿ ಗ್ರಾಮದವರು. 28 ವರ್ಷದ ಸ್ವಪ್ನಿಲ್ ಕುಸಾಲಗೆ ಶೂಟಿಂಗ್‌ನಲ್ಲಿ ಅಪಾರ ಆಸಕ್ತಿಯಿತ್ತು. ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ​ ಅವರ ಅಪಟ್ಟ ಅಭಿಮಾನಿ. ಜತೆಗೆ ಧೋನಿಯಂತೆಯೇ ಇವರು ಕೂಡ ರೇಲ್ವೆ ಟಿಕೆಟ್ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಧೋನಿಯ ಬಯೋಪಿಕ್ ಸಿನೆಮಾವನ್ನು ಪದೇ ಪದೇ ವೀಕ್ಷಣೆ ಮಾಡುತ್ತಿದ್ದರಂತೆ ಸ್ವಪ್ನಿಲ್. ಧೋನಿಯವರಂತೆ ಶಾಂತ ಸ್ವಾಭಾವದವರು ಸ್ವಪ್ನಿಲ್. ಇದೀಗ ಕೂಲ್ ಆಗಿಯೇ ಒಲಿಂಪಿಕ್ಸ್‌ ಪದಕವೊಂದನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ ಸ್ವಪ್ನಿಲ್.

ಇನ್ನು ಒಲಿಂಪಿಕ್ಸ್​ನಲ್ಲಿ ಫೈನಲ್​ ಪ್ರವೇಶಿಸಿದ ಬಳಿಕ ಮಾಧ್ಯಮದವರ ಜೊತೆಯೂ ಸ್ವಪ್ನಿಲ್, ತನ್ನ ಹೀರೋ ಧೋನಿ ಬಗ್ಗೆ ಪ್ಯಾರಿಸ್‌ನಲ್ಲಿ ಮಾತಾಡಿದ್ದರು. ಧೋನಿ ಹಾಗೂ ನನ್ನ ಜೀವನದಲ್ಲಿ ಹಲವು ಸಾಮ್ಯತೆಗಳು ಇವೆ. ನಾನು ಅವರ ಅಪ್ಪಟ ಅಭಿಮಾನಿ. ಅವರ ಬಯೋಪಿಕ್ ನೋಡಿಯೇ ನಾನು ಶೂಟಿಂಗ್​ನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ನಿರ್ಧರಿಸಿದ್ದು ಅಂತಾ ಹೇಳಿದ್ದರು.

Shwetha M