IPLನಲ್ಲಿ ಅರ್ಧಕ್ಕೆ ಕೈ ಕೊಟ್ರೆ ಹುಷಾರ್ – ವಿದೇಶಿಗರಿಗೆ ಪಾಠ ಕಲಿಸುತ್ತಾ BCCI?
ಫ್ರಾಂಚೈಸಿಗಳಿಗೆ ಕಾಡ್ತಿರೋ ಟೆನ್ಷನ್ ಏನು?

IPLನಲ್ಲಿ ಅರ್ಧಕ್ಕೆ ಕೈ ಕೊಟ್ರೆ ಹುಷಾರ್ – ವಿದೇಶಿಗರಿಗೆ ಪಾಠ ಕಲಿಸುತ್ತಾ BCCI?ಫ್ರಾಂಚೈಸಿಗಳಿಗೆ ಕಾಡ್ತಿರೋ ಟೆನ್ಷನ್ ಏನು?

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​​ ರೀಟೈನ್​​​​ ಆಟಗಾರರ ಸಂಖ್ಯೆ ಇನ್ನೇನು ಫೈನಲ್ ಆಗಲಿದೆ. ಇಷ್ಟು ದಿನ ಎಷ್ಟು ಆಟಗಾರರು, ಯಾರು ಇನ್, ಯಾರೆಲ್ಲಾ ಔಟ್ ಆಗ್ತಾರೆ ಎಂಬ ಬಗ್ಗೆ ಕೇವಲ ಚರ್ಚೆ ಮಾತ್ರ ನಡೀತಾ ಇತ್ತು. ಇನ್ನೇನು ಕೆಲವೇ ಹೊತ್ತಲ್ಲಿ ಐಪಿಎಲ್​ ತಂಡಗಳು ಎಷ್ಟು ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದು ಎಂಬ ಬಗ್ಗೆ ಸ್ಪಷ್ಟತೆ ಸಿಗಲಿದೆ. ಬಿಸಿಸಿಐ ಅಧಿಕಾರಿಗಳು ಐಪಿಎಲ್​ ತಂಡಗಳ ಮಾಲೀಕರ ಜೊತೆ ಸಭೆ ನಡೆಸಿ, ಸದ್ಯದಲ್ಲೇ ಮಾಹಿತಿ ನೀಡಲಿದ್ದಾರೆ. ಇದ್ರ ಮಧ್ಯೆ ಐಪಿಎಲ್ ಪ್ರಾಂಚೈಸಿಗಳ ನಿರ್ಧಾರವನ್ನು ಬಿಸಿಸಿಐ ತಳ್ಳಿ ಹಾಕಿದೆ ಅನ್ನೋ ವಿಚಾರವೂ ಹೊರಬಿದ್ದಿದೆ. 8 ಆಟಗಾರರನ್ನು ರಿಟೈನ್ ಮಾಡಿಕೊಳ್ಳೋ ಐಪಿಎಲ್ ಪ್ರಾಂಚೈಸಿಗಳ ಬೇಡಿಕೆಗೆ ಬಿಸಿಸಿಐ ಬಿಲ್‌ಕುಲ್ ಒಪ್ತಿಲ್ಲ.

ಇದನ್ನೂ ಓದಿ: ರೋಹಿತ್ & ರಾಹುಲ್ ಟ್ರೇಡ್ ಆಗಲ್ವಾ? – IPLನಲ್ಲಿ ಪಂತ್ & ಸ್ಕೈಗೆ ಸವಾಲೇನು?

ರೀಟೈನ್ ಟೆನ್ಷನ್

ಮೆಗಾ ಹರಾಜಿಗೂ ಮುನ್ನ ಎಷ್ಟು ಆಟಗಾರರನ್ನು ರೀಟೈನ್​ ಮಾಡಿಕೊಳ್ಳಬೇಕು? ಅನ್ನೋದರ ಬಗ್ಗೆ ಐಪಿಎಲ್​ ತಂಡಗಳು ತಮ್ಮ ಅಭಿಪ್ರಾಯ ಮುಂದಿಟ್ಟಿವೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಒಂದು ತಂಡಕ್ಕೆ 5-6 ಮಂದಿ ಆಟಗಾರರನ್ನು ರೀಟೈನ್​ ಮಾಡಿಕೊಳ್ಳಲು ಅವಕಾಶ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಅಂತಿಮ ನಿಲುವು ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆಯೋ ಸಭೆಯಲ್ಲಿ ಕೈಗೊಳ್ಳಲಾಗುವುದು. ಐಪಿಎಲ್ ಮೆಗಾ ಹರಾಜಿನ ಮೊದಲು 8 ಆಟಗಾರರನ್ನು ರೀಟೈನ್​ ಮಾಡಿಕೊಳ್ಳಲು ಹೆಚ್ಚಿನ ಐಪಿಎಲ್​ ತಂಡಗಳ ಮಾಲೀಕರು ಬಿಸಿಸಿಐಗೆ ಪ್ರಸ್ತಾಪಿಸಿದ್ದರು. ಆದರೆ, ಐಪಿಎಲ್​ ತಂಡಗಳ ಪ್ರಸ್ತಾಪಕ್ಕೆ ಬಿಸಿಸಿಐ ಡೋಂಟ್ ಕೇರ್ ಅಂತಿದೆ. ಜೊತೆಗೆ ತನ್ನ ನಿಲುವಿಗೆ ಅಂಟಿಕೊಂಡಿದೆ. ಯಾವುದೇ ಕಾರಣಕ್ಕೂ ಒಳ್ಳೆಯ ಆಟಗಾರರು ಅವಕಾಶ ಕಳೆದುಕೊಳ್ಳಬಾರದು. ಹಾಗಾಗಿ ಕೇವಲ 5-6 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅನುಮತಿ ನೀಡಲು ಬಿಸಿಸಿಐ ಮುಂದಾಗಿದೆ. ಬಿಸಿಸಿಐ ತನ್ನ ಗಟ್ಟಿ ನಿಲುವಿನ ಮೂಲಕ ಎಲ್ಲಾ ತಂಡಗಳಿಗೂ ಶಾಕ್​ ಕೊಟ್ಟಿದೆ. ಸೀಸನ್​ ಕೊನೆ ಕ್ಷಣದಲ್ಲಿ ತಂಡ ಬಿಟ್ಟು ಹೋಗುವ ವಿದೇಶಿ ಆಟಗಾರರಿಗೆ ಸೂಚನೆ ನೀಡಿ ಎಂದು ಎಲ್ಲಾ ಐಪಿಎಲ್​​ ಫ್ರಾಂಚೈಸಿಗಳು ಬಿಸಿಸಿಐ ಮುಂದೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಬಿಸಿಸಿಐ ವಿದೇಶಿ ಆಟಗಾರರಿಗೆ ಸ್ಟ್ರಿಕ್ಟ್​​ ರೂಲ್ಸ್​ ಜಾರಿ ಮಾಡಲಿದೆ. ಮತ್ತೊಂದೆಡೆ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಕೂಡಾ ಕೆಲವೊಂದು ವಿಚಾರಗಳನ್ನ ಬಿಸಿಸಿಐ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಈ ಬಾರಿ ವಿದೇಶಿ, ಭಾರತೀಯ ಹಾಗೂ ಅನ್​ಕ್ಯಾಪ್ಡ್​ ಎಂಬಂತೆ ಆಟಗಾರರ ಪ್ರಯಾಣವನ್ನು ನಿಗದಿ ಮಾಡುವುದನ್ನು ಕೈ ಬಿಡಬೇಕೆಂದು ಎಸ್​ಆರ್​ಹೆಚ್ ಫ್ರಾಂಚೈಸಿ ಆಗ್ರಹಿಸಿದೆ. ಇನ್ನು ರಿಟೈನ್​ಗೂ ಮುನ್ನ ಆಟಗಾರರೊಂದಿಗೆ ಫ್ರಾಂಚೈಸಿಗಳು ಚರ್ಚಿಸಲು ಮುಕ್ತ ಅವಕಾಶ ನೀಡಬೇಕೆಂದು ಸನ್​ರೈಸರ್ಸ್​ ಹೈದರಾಬಾದ್ ಮಾಲೀಕರು ಒತ್ತಾಯಿಸಿದ್ದಾರೆ.

ಒಟ್ಟಾರೆ ಹರಾಜು ಪ್ರಕ್ರಿಯೆಯಲ್ಲಿ ಆಟಗಾರರ ಜೊತೆ ಚರ್ಚೆಗೆ ಅವಕಾಶ ಸಿಕ್ಕಿದ್ರೆ ಕೆಲ ಸ್ಟಾರ್ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದರೂ ಅವರನ್ನು ಮನವೊಲಿಸಿ ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶ ಸಿಗುತ್ತದೆ. ಹೀಗಾಗಿಯೇ ಎಸ್​ಆರ್​ಹೆಚ್ ಫ್ರಾಂಚೈಸಿಯು ಈ ವಿಶೇಷ ಬೇಡಿಕೆಯನ್ನು ಬಿಸಿಸಿಐ ಮುಂದಿಟ್ಟಿದೆ.

Shwetha M