ರೋಹಿತ್ & ರಾಹುಲ್ ಟ್ರೇಡ್ ಆಗಲ್ವಾ? – IPLನಲ್ಲಿ ಪಂತ್ & ಸ್ಕೈಗೆ ಸವಾಲೇನು?
GT ಬಿಟ್ಟು MI ಸೇರಿದ ಪಾಂಡ್ಯದ್ದೇ ಲಕ್!

ರೋಹಿತ್ & ರಾಹುಲ್ ಟ್ರೇಡ್ ಆಗಲ್ವಾ? – IPLನಲ್ಲಿ ಪಂತ್ & ಸ್ಕೈಗೆ ಸವಾಲೇನು?GT ಬಿಟ್ಟು MI ಸೇರಿದ ಪಾಂಡ್ಯದ್ದೇ ಲಕ್!

ಕ್ರಿಕೆಟ್ ಲೋಕದಲ್ಲಿ ಐಪಿಎಲ್ ಸುದ್ದಿಗಳು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿವೆ. ಈಗಾಗ್ಲೇ ಹರಾಜು ಪ್ರಕ್ರಿಯೆಯಲ್ಲಿ ಒಂದಷ್ಟು ಬದಲಾವಣೆ ತರೋಕೆ ಮುಂದಾಗಿರೋ ಬಿಸಿಸಿಐ ಫ್ರಾಂಚೈಸಿ ಮಾಲೀಕರ ಜೊತೆ ಸಭೆ ಕೂಡ ನಡೆಸಿದೆ. ಇದ್ರ ನಡುವೆ ಹಲವು ಫ್ರಾಂಚೈಸಿಗಳಲ್ಲಿ ತಂಡದ ಐಕಾನ್ ಎನಿಸಿಕೊಂಡಿದ್ದ ಸ್ಟಾರ್ ಆಟಗಾರರೇ ಗುಡ್ ಬೈ ಹೇಳೋಕೆ ರೆಡಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್​ನ ಹಿಟ್​ಮ್ಯಾನ್ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಲಕ್ನೋ ಸೂಪರ್ ಜೇಂಟ್ಸ್ ತಂಡದ ಕೆ.ಎಲ್ ರಾಹುಲ್, ಡೆಲ್ಲಿ ಕ್ಯಾಪಿಟಲ್ಸ್​​ನ ರಿಷಬ್ ಪಂತ್ ಬೇರೆ ಫ್ರಾಂಚೈಸಿಗಳನ್ನ ಸೇರಿಕೊಳ್ಳೋದು ಕನ್ಫರ್ಮ್ ಆಗಿದೆ. ಬಟ್ ಈ ಆಟಗಾರರು ತಂಡ ಬಿಡೋಕೆ ರೆಡಿ ಇದ್ರೂ ಕೂಡ ಡೈರೆಕ್ಟ್ ಆಗಿ ಟ್ರೇಟ್ ಆಗೋಕೆ ಸಾಧ್ಯ ಇಲ್ಲ. ಅಂದ್ರೆ ಗುಜರಾತ್ ಟೈಟನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್​ಗೆ ಟ್ರೇಡ್ ಆದಂತೆ ಈ ಪ್ಲೇಯರ್ಸ್ ಟ್ರೇಡ್ ಆಗೋಕೆ ಆಗಲ್ಲ. ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಶಕುಂತಲಾ ಮನೆ ಹಾಳು ಪ್ಲ್ಯಾನ್‌ ಸಕ್ಸಸ್‌ – ಎಲ್ಲರೆದುರು ಕೆಟ್ಟವಳಾದ ಭೂಮಿಕಾ

2025ರ ಐಪಿಎಲ್​ಗೆ ಇನ್ನೂ ಸಾಕಷ್ಟು ಟೈಂ ಇದೆ. ಆದ್ರೆ ಈಗಿನಿಂದಲೇ ತಂಡಗಳಲ್ಲಿ ಬದಲಾವಣೆ ಪರ್ವ ಶುರುವಾಗಿದ್ದು, ದಿನಕ್ಕೊಂದು ಅಪ್​ಡೇಟ್ಸ್ ಹೊರ ಬೀಳ್ತಿವೆ. ಭಾರತದ ಏಕದಿನ ಹಾಗೂ ಟೆಸ್ಟ್ ನಾಯಕ ರೋಹಿತ್ ಶರ್ಮಾ ಮತ್ತು ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್  ಫ್ರಾಂಚೈಸಿ ತೊರೆಯಲು ಸಿದ್ಧರಾಗಿದ್ದಾರೆ. ಹಾಗೇ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಕೂಡ ಬೇರೆ ಫ್ರಾಂಚೈಸಿ ಸೇರ್ತಾರೆ ಎನ್ನಲಾಗಿದೆ. ರಿಷಬ್ ಪಂತ್ ಚೆನ್ನೈ ಸೂಪರ್ ಕಿಂಗ್ಸ್, ಕೆ.ಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರ್ತಾರೆ ಅನ್ನೋ ಸುದ್ದಿ ಇದೆ. ಅದ್ರಲ್ಲೂ ಈ ಸ್ಟಾರ್ ಆಟಗಾರರು ಟ್ರೇಡಿಂಗ್ ಮೂಲಕ ಮತ್ತೊಂದು ಫ್ರಾಂಚೈಸಿ ಸೇರುತ್ತಾರೆ ಎಂದು ವರದಿಗಳು ಹೇಳುತ್ತಿವೆ. ಅತ್ತ ಫ್ಯಾನ್ಸ್ ಕೂಡ ತಮ್ಮ ನೆಚ್ಚಿನ ಆಟಗಾರ ಯಾವ ತಂಡವನ್ನು ಸೇರುತ್ತಾರೆ ಅಂತಾ ಬಾರೀ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ಜಿಟಿಯಿಂದ ಎಮ್​ಐಗೆ ಟ್ರೇಡ್ ಆದಂತೆ ನೇರವಾಗಿ ಟ್ರೇಡ್ ಆಗುವುದು ಅಸಾಧ್ಯವಾಗಿದೆ.

ಟ್ರೇಡ್ ಆಗಲ್ವಾ ಸ್ಟಾರ್ ಆಟಗಾರರು?   

ಐಪಿಎಲ್​ 2024ರ ಆರಂಭಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯಿಂದ ಹಾರ್ದಿಕ್ ಪಾಂಡ್ಯ ಟ್ರೇಡ್​ ಮೂಲಕ ಮುಂಬೈ ಇಂಡಿಯನ್ಸ್​​ ಸೇರಿದ್ದರು. ಅವರಷ್ಟೆ ಅಲ್ಲದೆ, ಕ್ಯಾಮರೂನ್ ಗ್ರೀನ್, ದೇವದತ್ ಪಡಿಕ್ಕಲ್ ಸಹ ಟ್ರೇಡ್​ ಆಗಿದ್ದರು. ಅದರಂತೆಯೇ ರೋಹಿತ್​​ ಶರ್ಮಾ, ಸೂರ್ಯಕುಮಾರ್, ಕೆಎಲ್ ರಾಹುಲ್, ರಿಷಭ್ ಪಂತ್ ಅವರೂ 2025ರ ಐಪಿಎಲ್​​ಗೂ ಮುನ್ನ ಬೇರೊಂದು ತಂಡಕ್ಕೆ ಟ್ರೇಡ್ ಆಗುತ್ತಾರೆ ಎನ್ನಲಾಗ್ತಿದೆ. ಆದ್ರೆ ಇದು ಈ ಸೀಸನ್​ನಲ್ಲಿ ಸಾಧ್ಯವಾಗಲ್ಲ. ಯಾಕಂದ್ರೆ 2025ರ ಐಪಿಎಲ್​​​ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಒಂದು ಫ್ರಾಂಚೈಸಿ 3 ಅಥವಾ ನಾಲ್ವರನ್ನು ಉಳಿಸಿಕೊಳ್ಳಲು ಅವಕಾಶ ಇರಲಿದೆ. ಉಳಿದ ಆಟಗಾರರನ್ನು ಬಿಡುಗಡೆ ಮಾಡಲೇಬೇಕಾಗುತ್ತದೆ. ಹಾಗೇ ಇಲ್ಲಿ ಯಾವುದೇ ಟ್ರೇಡ್​ಗೆ ಅವಕಾಶ ಇರುವುದಿಲ್ಲ. ಫ್ರಾಂಚೈಸಿ ಬೆರಳೆಣಿಕೆ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಇರುವ ಕಾರಣ ಉಳಿದ ಆಟಗಾರರು ಮೆಗಾ ಹರಾಜಿಗೆ ಪ್ರವೇಶಿಸಬೇಕಾಗುತ್ತದೆ. ಐಪಿಎಲ್​ನಲ್ಲಿ ಹರಾಜಿಗೆ ಬರುವ ಆಟಗಾರರ ಮೇಲೆ ಫ್ರಾಂಚೈಸಿಗಳು ಎಷ್ಟು ಬಿಡ್ ಬೇಕಾದರೂ ಮಾಡಬಹುದು. ಹರಾಜಿನಲ್ಲಿ ಯಾವ ಫ್ರಾಂಚೈಸಿ ಹೆಚ್ಚು ಬಿಡ್ ಮಾಡುತ್ತದೋ ಆ ತಂಡವನ್ನು ಸೇರಲಿದ್ದಾರೆ. ಅಷ್ಟೇ ಯಾಕೆ ಬಿಡುಗಡೆ ಮಾಡಿದ ತಂಡವೇ ಮತ್ತೊಮ್ಮೆ ಅವರನ್ನು ಖರೀದಿಸಬಹುದು. ಒಂದು ವೇಳೆ ಖರೀದಿಯಾಗದೆಯೇ ಉಳಿಯಬಹುದು. ಫ್ರಾಂಚೈಸಿಯಲ್ಲಿ ಉಳಿದ ಸ್ಲಾಟ್​​ಗಳಿಗೆ ತಕ್ಕಂತೆ ಆಟಗಾರರ ಖರೀದಿಯೂ ಆಗಬಹುದು. ಹಾಗಾಗಿ ಈ ಬಾರಿ ಆಟಗಾರರ ಟ್ರೇಡ್​ಗೆ ಅವಕಾಶ ಇರುವುದಿಲ್ಲ. ತಮ್ಮ ಆಯ್ಕೆಯ ತಂಡಕ್ಕೆ ಟ್ರೇಡ್​​ ಆಗಲು ಯಾವುದೇ ಆಟಗಾರನು 2026ರ ಋತುವಿನವರೆಗೆ ಕಾಯಬೇಕಾಗುತ್ತದೆ. ಇನ್ನು ಫ್ರಾಂಚೈಸಿಗಳು ಪರಸ್ಪರ ಆಟಗಾರರನ್ನು ವಿನಿಮಯ ಮಾಡಿಕೊಳ್ಳಬಹುದು ಅಥವಾ ನಗದು ವ್ಯವಹಾರಗಳಲ್ಲಿ ಆಟಗಾರರನ್ನು ಖರೀದಿಸಬಹುದು. ಈ ಸಂಪೂರ್ಣ ವಿಷಯದಲ್ಲಿ ಐಪಿಎಲ್ ಆಡಳಿತ ಮಂಡಳಿಯು ಅಂತಿಮ ಅಧಿಕಾರವನ್ನು ನೀಡಿದೆ. ಹೆಚ್ಚಿನ ಫ್ರಾಂಚೈಸಿಗಳು ಒಂದೇ ಆಟಗಾರನನ್ನು ಖರೀದಿಸಲು ಬಯಸಿದರೆ. ಈ ಸಂದರ್ಭದಲ್ಲಿ ಫ್ರಾಂಚೈಸಿ ತನ್ನ ಆಟಗಾರ ಯಾವ ತಂಡಕ್ಕೆ ಹೋಗಬೇಕೆಂದು ನಿರ್ಧರಿಸುವ ಅಧಿಕಾರವನ್ನು ಹೊಂದಿರುತ್ತದೆ. ಆದರೆ ಆಟಗಾರನ ವ್ಯಾಪಾರ ಅಥವಾ ವರ್ಗಾವಣೆಯ ಮೊದಲು ಆಟಗಾರನ ಒಪ್ಪಿಗೆ ಕೂಡ ಅಗತ್ಯ. ಆಟಗಾರನು ನಿರಾಕರಿಸಿದರೆ, ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ. ಫ್ರಾಂಚೈಸಿಗಳು ತಮ್ಮ ಐಕಾನ್ ಆಟಗಾರರನ್ನು ವ್ಯಾಪಾರ ಮಾಡುವಂತಿಲ್ಲ.

2025ರ ಐಪಿಎಲ್​ ವೇಳೆಗೆ ಹಲವು ತಂಡಗಳಲ್ಲಿ ಮೇಜರ್ ಬದಲಾವಣೆಗಳಾಗಲಿವೆ. ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಸಿದ್ದತೆಗಳು ಆರಂಭವಾಗಿವೆ. ಡಿಸೆಂಬರ್‌ ತಿಂಗಳಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಉಳಿಸಿಕೊಳ್ಳಬಲ್ಲ ಮತ್ತು ಬಿಡುಗಡೆಗೊಳಿಸಬಲ್ಲ ಆಟಗಾರರ ಪಟ್ಟಿಯನ್ನು ಸಿದ್ದಪಡಿಸುತ್ತಿವೆ. ಆದ್ರೆ ಅಂತಿಮವಾಗಿ ಯಾರು ಯಾವ ತಂಡ ಸೇರ್ತಾರೆ ಅನ್ನೋದೇ ಈಗಿರುವ ಪ್ರಶ್ನೆ.

Shwetha M