ಕರೀನಾ ಮಕ್ಕಳಿಗೆ, ಅನಂತ್‌ಗೆ ಈಕೆಯೇ ದಾದಿ – ತೈಮೂರ್ ನಾನಿ ಸಂಬಳ ಇಷ್ಟೊಂದಾ?
ಸೆಲೆಬ್ರಿಟಿಗಳು ಅಂದ ಮೇಲೆ ಕಾಲಿಗೊಬ್ರು, ಕೈಗೊಬ್ರು ಆಳುಗಳು ಇದ್ದೇ ಇರ್ತಾರೆ. ಇನ್ನು ಅವರ ಮಕ್ಕಳನ್ನ ನೋಡಿಕೊಳ್ಳಲು ಕೂಡ ದಾದಿಗಳು ಇರ್ತಾರೆ. ದಿನ 24 ಗಂಟೆಯೂ ಅವರ ಆರೈಕೆ ಮಾಡ್ತಾರೆ. ಇದೀಗ ಇಲ್ಲೊಬ್ರು ದಾದಿ ಭಾರಿ ಸುದ್ದಿಯಲ್ಲಿದ್ದಾರೆ. ಈಕೆ ಸೆಲೆಬ್ರಿಟಿಯ ಮಕ್ಕಳನ್ನ ನೋಡಿಕೊಳ್ಳುತ್ತಿದ್ದಾರೆ.. ಅನಂತ್ ಅಂಬಾನಿ, ಕರೀನಾ ಕಪೂರ್ ಮಕ್ಕಳು ಈಕೆಯೇ ದಾದಿಯಾಗಿದ್ರು.. ಇದೀಗ ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಪುತ್ರಿಯನ್ನ ಈಕೆಯೇ ನೋಡಿಕೊಳ್ಳುತ್ತಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯೊಂದು ಆಗ್ತಾ ಇದೆ. ಈಕೆ ಮಕ್ಕಳನ್ನ ನೋಡಿಕೊಳ್ಳಲು ಲಕ್ಷಾಂತರ ರೂಪಾಯಿ ಪಡಿತಾ ಇದ್ದಾರೆ ಅಂತಾ.. ಅಷ್ಟಕ್ಕೂ ಈ ಫೇಮಸ್ ದಾದಿ ಯಾರು? ಮಕ್ಕಳನ್ನು ನೋಡಿಕೊಳ್ಳಲು ಎಷ್ಟು ಸಂಬಳ ಪಡಿತಾ ಇದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: 6 ಪಂದ್ಯ.. 3 ಸೊನ್ನೆ.. ಸ್ಯಾಮ್ಸನ್ ಸಾಧನೆ – ಸಂಜುಗೆ ಟೀಮ್ ಇಂಡಿಯಾ ಬಾಗಿಲು ಬಂದ್
ಲಲಿತಾ ಡಿಸಿಲ್ವಾ.. ಈಗ ಸೋಶಿಯಲ್ ಮೀಡಿಯಾಗಳಲ್ಲಿ ಈಕೆಯದ್ದೇ ಸುದ್ದಿ. ಮುಂಬೈನಾದ್ಯಂತ ಈಕೆ ತೈಮೂರ್ ನಾನಿ ಅಂತಾನೇ ಫೇಮಸ್ ಆಗಿದ್ದಾರೆ. ಸೆಲೆಬ್ರಿಟಿಗಳ ಮಕ್ಕಳನ್ನು ನೋಡಿಕೊಂಡಿದ್ದ ಈ ದಾದಿ ಟಾಕ್ ಆಫ್ ಟೌನ್ ಆಗಿದ್ದಾರೆ. ಅದಕ್ಕೆ ಕಾರಣ ರಾಮ್ ಚರಣ್ ದಂಪತಿ.
ಹೌದು, ಲಲಿತಾ ಡಿಸಿಲ್ವಾ ಈಗ ರಾಮ್ ಚರಣ್ ಹಾಗೂ ಉಪಾಸನಾ ಪುತ್ರಿ ಕ್ಲಿನ್ ಕಾರಾಗೆ ದಾದಿಯಾಗಿದ್ದಾರೆ. ಇತ್ತೀಚೆಗೆ ಲಿಲಿತಾ ಡಿಸಿಲ್ವಾ, ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನವೊಂದನ್ನ ನೀಡಿದ್ರು.. ಈ ವೇಳೆ ಲಲಿತಾ ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ ಮನೆಯಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಹಾಗೇ ಮೆಗಾ ಕುಟುಂಬದ ಬಗ್ಗೆನೂ ಮಾತಾಡಿದ್ದಾರೆ.
ಹೌದು, ಲಲಿತಾ ದಾದಿ ಇಷ್ಟು ದಿನ ಕರೀನಾ ಹಾಗೂ ಸೈಫ್ ಮಕ್ಕಳಾದ ತೈಮೂರ್ ಅಲಿ ಖಾನ್ ಹಾಗೂ ಜಹಂಗೀರ್ ಅಲಿ ಖಾನ್‌ಗೆ ದಾದಿಯಾಗಿದ್ದರು. ಅವರ ಜೊತೆಗಿರುವ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಈಗ ಟಾಲಿವುಡ್‌ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಪುತ್ರಿಗೆ ದಾದಿಯಾಗಿದ್ದಾರೆ. ಇನ್ನು ಲಲಿತಾ ಅವರು ಕೇವಲ ಬಾಲಿವುಡ್ ಸೆಲೆಬ್ರಿಟಿಗಳಿಗೆ ಅಷ್ಟೇ ಅಲ್ಲ. ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿಗೂ ದಾದಿಯಾಗಿದ್ದರು. ತುಂಬಾ ಟೈಮ್ ವರೆಗೂ ಅನಂತ್ ಅಂಬಾನಿಯನ್ನ ಈಕೆಯೇ ಪಾಲನೆ ಮಾಡಿದ್ರಂತೆ. ಈ ಕಾರಣಕ್ಕೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭಕ್ಕೆ ಲಲಿತಾ ಡಿಸಿಲ್ವಾಗೆ ವಿಶೇಷ ಆಹ್ವಾನವನ್ನ ನೀಡಲಾಗಿತ್ತು. ಈ ಬಗ್ಗೆಯೂ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ಸಂದರ್ಶನದ ಬಳಿಕ ಲಲಿತಾ ಡಿಸಿಲ್ವಾ ಬಗ್ಗೆ ಹುಡುಕಾಡುವವರ ಸಂಖ್ಯೆ ದೊಡ್ಡದಾಗಿದೆ. ಅಷ್ಟೇ ಅಲ್ಲದೇ ಲಲಿತಾ ಡಿಸಿಲ್ವಾ ಬಗ್ಗೆ ಹೊಸ ಚರ್ಚೆಯೊಂದು ಶುರುವಾಗಿದೆ. ಸೆಲೆಬ್ರಿಟಿಗಳ ಮಕ್ಕಳಿಗೆ ದಾದಿಯಾಗಿರುವ ಲಲಿತಾ ಲಕ್ಷಾಂತರ ರೂಪಾಯಿ ಸಂಭಾವನೆ ಪಡಿತಾ ಇದ್ದಾರೆ ಅಂತ. ಶ್ರೀಮಂತ ಉದ್ಯಮಿ ಹಾಗೂ ತಾರೆಯರ ಮಕ್ಕಳ ಲಾಲನೆ ಪಾಲನೆಗೆ ಲಲಿತಾ ಡಿಸಿಲ್ವಾ ತಿಂಗಳಿಗೆ ಎರಡೂವರೆ ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ ಅನ್ನೋ ಸುದ್ದಿ ಕೆಲವು ದಿನಗಳ ಕಾಲ ಹರಿದಾಡಿತ್ತು. ಈ ವೇಳೆ ದುಬಾರಿ ಮಕ್ಕಳ ದಾದಿ ಅಂತಲೂ ಜನಪ್ರಿಯರಾಗಿದ್ದರು.
ಇದೀಗ ಹರಿದಾಡುತ್ತಿರುವ ಗಾಳಿ ಸುದ್ದಿ ಬಗ್ಗೆ ಸಂದರ್ಶನವೊಂದರಲ್ಲಿ ಲಲಿತಾ ಡಿಸಿಲ್ವಾ ಸ್ಪಷ್ಟನೆ ನೀಡಿದ್ದಾರೆ. ಸಂದರ್ಶನಕಾರ ನೀವು ಮಕ್ಕಳನ್ನ ನೋಡಿಕೊಳ್ಳಲು ತಿಂಗಳಿಗೆ 2.5 ಲಕ್ಷ ಸಂಬಳ ಪಡೆಯುತ್ತಿದ್ದೀರಾ ಎಂದು ಕೇಳಿದ್ದಾರೆ. ಈ ವೇಳೆ ಲಲಿತಾ ಡಿಸಿಲ್ವಾ ಅವರು ಸ್ಪಷ್ಟನೆ ನೀಡಿದ್ದಾರೆ. ‘2.5 ಲಕ್ಷ ರೂಪಾಯಿ? ಹಾಗೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ನಿಮ್ಮ ಬಾಯಗೆ ಸಕ್ಕರೆ ಬೀಳಲಿ. ಇವೆಲ್ಲ ಕೇವಲ ವದಂತಿಗಳು. ಇಷ್ಟೊಂದು ಸಂಬಳ ನಾನು ಪಡಿತಾ ಇಲ್ಲ ಎಂದಿದ್ದಾರೆ.
ಮಕ್ಕಳನ್ನ ನೋಡಿಕೊಳ್ಳುವುದು ಸುಲಭದ ಮಾತಲ್ಲ.. ಅದ್ರಲ್ಲೂ ಸೆಲೆಬ್ರಿಟಿ ಮಕ್ಕಳನ್ನು ನೋಡಿಕೊಳ್ಳುವುದು ಸವಾಲಿನ ಕೆಲಸ. ಸದಾ ಮೈಯೆಲ್ಲಾ ಕಣ್ಣಾಗಿರ್ಬೇಕು.. ಮಕ್ಕಳ ಭಾವನೆಗಳನ್ನ ಅರ್ಥಮಾಡಿಕೊಳ್ಳುವುದು ಕೂಡ ತುಂಬಾನೆ ಮುಖ್ಯ ಆಗಿರುತ್ತೆ. ಇತಂಹ ಎಲ್ಲಾ ಸವಾಲುಗಳನ್ನ ಫೇಸ್ ಮಾಡಿಕೊಂಡು ಬಂದಿದ್ದಾರೆ ಲಲಿತಾ ಡಿಸಿಲ್ವಾ.