6 ಪಂದ್ಯ.. 3 ಸೊನ್ನೆ.. ಸ್ಯಾಮ್ಸನ್ ಸಾಧನೆ – ಸಂಜುಗೆ ಟೀಮ್ ಇಂಡಿಯಾ ಬಾಗಿಲು ಬಂದ್
ಅನ್ ಲಕ್ಕಿ ಪ್ಲೇಯರ್ ಸಾಬೀತಾಯ್ತಾ?

6 ಪಂದ್ಯ.. 3 ಸೊನ್ನೆ.. ಸ್ಯಾಮ್ಸನ್ ಸಾಧನೆ – ಸಂಜುಗೆ ಟೀಮ್ ಇಂಡಿಯಾ ಬಾಗಿಲು ಬಂದ್ಅನ್ ಲಕ್ಕಿ ಪ್ಲೇಯರ್ ಸಾಬೀತಾಯ್ತಾ?

ಇಂಡಿಯನ್​ ಕ್ರಿಕೆಟ್​​ನ ಅತ್ಯಂತ ಅನ್​ಲಕ್ಕಿ ಪ್ಲೇಯರ್ ಅಂದ್ರೆ ಅದು ಸಂಜು ಸ್ಯಾಮ್ಸನ್. ಹೈಲಿ ಟ್ಯಾಲೆಂಟೆಡ್ ಕ್ರಿಕೆಟರ್ ಆದ್ರೂ ಕೂಡಾ ಟೀಂ ಇಂಡಿಯಾದಲ್ಲಿ ಪರ್ಮನೆಂಟ್ ಪ್ಲೇಸ್​​ಮೆಂಟ್ ಅಂತೂ ಸಿಕ್ಕಿಲ್ಲ. ಈಗ ಸಿಕ್ಕಿದ್ರೂ ಅದನ್ನ ಉಳಿಸಿಕೊಳ್ಳೋ ತಾಕತ್ತು ಮತ್ತು ಅದೃಷ್ಟ ಸಂಜುಗೆ ಇಲ್ಲ. ಹೀಗಾಗಿ ಸಂಜು ಸ್ಯಾಮ್ಸನ್ ಎಂಬ ಪ್ರತಿಭಾವಂತ ಕ್ರಿಕೆಟರ್‌ಗೆ ಟೀಮ್ ಇಂಡಿಯಾ ಬಾಗಿಲು ಪರ್ಮನೆಂಟ್ ಆಗಿ ಕ್ಲೋಸ್ ಆದ್ರೂ ಅಚ್ಚರಿಯೇನಿಲ್ಲ. ಹೇಳಿಕೇಳಿ ಸಂಜು ಸ್ಯಾಮ್ಸನ್ ಟಿ-20 ಫಾರ್ಮೆಟ್​ನಲ್ಲಿ ಎಕ್ಸ್​ಪರ್ಟ್ ಬ್ಯಾಟ್ಸಮನ್. ವಂಡೇಗಿಂತ ಟಿ-20ಯಲ್ಲೇ ಹೆಚ್ಚು ಹೈಲೈಟ್ ಆದವರು ಸಂಜು. ಆದ್ರೆ, ಸ್ವತಃ ತನ್ನದೇ ಝೀರೋ ಫರ್ಮಾಮೆನ್ಸ್‌ನಿಂದಾಗಿಯೇ ಟೀಮ್ ಇಂಡಿಯಾದಿಂದ ಸಂಜು ಆಲ್‌ಮೋಸ್ಟ್ ಹೊರಬಿದ್ರೂ ಬೀಳಬಹುದು. ಬಹುಶಃ ಟೀಮ್ ಇಂಡಿಯಾ ಎಂಬ ಮಹತ್ವದ ವೇದಿಕೆ ಸಂಜು ಸ್ಯಾಮ್ಸನ್ ಎಂಬ ಪ್ರತಿಭಾವಂತ ಕ್ರಿಕೆಟರ್ ಗೆ ಮುಗಿದ ಅಧ್ಯಾಯವೇ ಆಗಬಹುದು. ಜೊತೆಗೆ ಕೋಚ್ ಗೌತಮ್ ಗಂಭೀರ್ ಕೂಡಾ ತಾನಿಟ್ಟ ನಂಬಿಕೆಯನ್ನ ಸಂಜು ಉಳಿಸಿಕೊಂಡಿಲ್ಲ ಎಂಬ ಬೇಸರದಲ್ಲೂ ಇಂಥಾ ಮೇಜರ್ ಡಿಸಿಶನ್ ತೆಗೆದುಕೊಳ್ಳಲೂಬಹುದು. ಸಿಕ್ಕಿರೋ ಅವಕಾಶವನ್ನ ಕೈ ಚೆಲ್ಲಿ ಈಗ ಅಡಕತ್ತಡರಿಯಲ್ಲಿ ಸಿಲುಕಿರೋ ಸಂಜು ಸ್ಯಾಮ್ಸನ್ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬೌಲಿಂಗ್ ಬ್ರಹ್ಮಾಸ್ತ್ರವಾಗ್ತಾರಾ ಸೂರ್ಯ? – ಬ್ಯಾಟಿಂಗ್ ಸ್ಪೆಷಲಿಸ್ಟ್ ವಿಕೆಟ್ ಕಿತ್ತಿದ್ದೇಗೆ?

ಸಂಜು ಝೀರೋ ಸಾಧನೆ  

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಕೋಚ್ ಗೌತಮ್ ಗಂಭೀರ ಇಟ್ಟ ಭರವಸೆಗಳೆಲ್ಲಾ ನೀರ ಮೇಲೆ ಹೋಮ ಮಾಡಿ ನೀರಸ ಪ್ರದರ್ಶನ ತೋರಿದ್ದಾರೆ ಸಂಜು ಸ್ಯಾಮ್ಸನ್‌. ಈ ರೀತಿಯ ಕಳಪೆ ಫಾರ್ಮ್ ಸಂಜು ಅವರ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ ವೃತ್ತಿಬದುಕಿಗೂ ಕಂಟಕವಾಗಲಿದೆ. ಕಳೆದ 6 ಪಂದ್ಯಗಳಲ್ಲಿ ಸಂಜು ಮೂರು ಬಾರಿ ಖಾತೆ ತೆರೆಯದೆ ಔಟಾಗಿದ್ದಾರೆ. ಒಂದು ಇನ್ನಿಂಗ್ಸ್​ನಲ್ಲಿ ಮಾತ್ರ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ಅದ್ರಲ್ಲೂ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಯಶಸ್ವಿ ಜೈಸ್ವಾಲ್ ವಿಕೆಟ್ ಪತನದ ಬಳಿಕ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಸಂಜು ಸ್ಯಾಮ್ಸನ್ 4 ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆ ಪೆವಿಲಿಯನ್ ಗೆ ಮರಳಿದ್ರು. ಇಲ್ಲೂ ಕೂಡಾ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಸಂಜು ಸ್ಯಾಮ್ಸನ್‌ ಎಡವಿದ್ರು. ಸಂಜು ತಮ್ಮ ಹೆಸರಿನಲ್ಲಿ ಬೇಡದ ದಾಖಲೆಯನ್ನೂ ನಿರ್ಮಿಸಿದರು. ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವರ್ಷದಲ್ಲಿ ಮೂರು ಬಾರಿ ಡಕ್‌ಗೆ ಬಲಿಯಾದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಕುಖ್ಯಾತಿಗೆ ಸಂಜು ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ, ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಡಕ್‌ಗೆ ಔಟಾದ ಭಾರತೀಯ ವಿಕೆಟ್‌ಕೀಪರ್ ಎಂಬ ಮತ್ತೊಂದು ಬೇಡದ ದಾಖಲೆಗೂ ಕಾರಣರಾದರು. ಇದೀಗ ಸಂಜು ಸ್ಯಾಮ್ಸನ್‌ಗೆ ಫ್ಯಾನ್ಸ್ ಕೂಡಾ ನಾನಾ ರೀತಿಯ ಕಾಮೆಂಟ್ ಮಾಡ್ತಿದ್ದಾರೆ. ಎಷ್ಟೇ ಚಾನ್ಸ್ ಕೊಟ್ರೂ ಕೂಡಾ ಅದೇ ರಾಗ ಅದೇ ಹಾಡು ಅನ್ನೋ ರೀತಿ ಆಡ್ತಿರಲ್ಲ, ನಾಚಿಕೆ ಆಗಬೇಕು ಅಂತಿದ್ದಾರೆ.

ಒಂದೆಡೆ ರಿಷಬ್ ಪಂತ್ ರೀ ಎಂಟ್ರಿ, ಇನ್ನೊಂದೆಡೆ ಧ್ರುವ್ ಜುರೆಲ್ ಹಾಗೂ ಜಿತೇಶ್ ಶರ್ಮಾ ಜೊತೆ ಪೈಪೋಟಿ ನಡುವೆ ರಿಯಾನ್ ಪರಾಗ್ ಆಲ್ ರೌಂಡರ್ ಆಗಿ ಬೆಳೆಯುತ್ತಿದ್ದಂತೆ ತಂಡದಲ್ಲಿ ಸಂಜು ಸ್ಯಾಮ್ಸನ್ ಹಾದಿ ಮುಚ್ಚಿದಂತಾಗಿದೆ. ವಿಕೆಟ್ ಕೀಪರ್ ಆಗಿ ಅಲ್ಲದಿದ್ದರೂ, ಟಿ20 ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅವರ ಕಳಪೆ ಪ್ರದರ್ಶನದಿಂದ ಟೀಂ ಇಂಡಿಯಾ ಮೇಲೂ ಎಫೆಕ್ಟ್ ಆಗ್ತಿದೆ. ಇದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ಸಂಜುಗೆ ಚಾನ್ಸ್ ಸಿಗುತ್ತೋ ಇಲ್ವೋ ಎಂಬ ಅನುಮಾನ ಶುರುವಾಗಿದೆ. ಸಿಕ್ಕಿರೋ ಅವಕಾಶದಲ್ಲಿ ತನ್ನ ಸಾಮರ್ಥ್ಯ ತೋರದೆ ಫೇಲ್ಯೂರ್ ಆದ ಸಂಜು ಸ್ಯಾಮ್ಸನ್ ನಿಜಕ್ಕೂ ಅನ್‌ಲಕ್ಕಿ ಪ್ಲೇಯರ್.

Shwetha M

Leave a Reply

Your email address will not be published. Required fields are marked *