ಬೌಲಿಂಗ್ ಬ್ರಹ್ಮಾಸ್ತ್ರವಾಗ್ತಾರಾ ಸೂರ್ಯ? – ಬ್ಯಾಟಿಂಗ್ ಸ್ಪೆಷಲಿಸ್ಟ್ ವಿಕೆಟ್ ಕಿತ್ತಿದ್ದೇಗೆ?
ಕೊಹ್ಲಿ ದಾಖಲೆ ಬ್ರೇಕ್.. SKY ಅದೃಷ್ಟನಾ?

ಬೌಲಿಂಗ್ ಬ್ರಹ್ಮಾಸ್ತ್ರವಾಗ್ತಾರಾ ಸೂರ್ಯ? – ಬ್ಯಾಟಿಂಗ್ ಸ್ಪೆಷಲಿಸ್ಟ್ ವಿಕೆಟ್ ಕಿತ್ತಿದ್ದೇಗೆ?ಕೊಹ್ಲಿ ದಾಖಲೆ ಬ್ರೇಕ್.. SKY ಅದೃಷ್ಟನಾ?

ಭಾರತ ಟಿ-20 ವಿಶ್ವಕಪ್ ಗೆದ್ದಾಗ ಸಿಕ್ಕಾಪಟ್ಟೆ ಸದ್ದು ಮಾಡಿದ ಹೆಸ್ರು ಅಂದ್ರೆ ಅದು ಸೂರ್ಯಕುಮಾರ್ ಯಾದವ್. ಇದೀಗ ಲಂಕಾ ವಿರುದ್ಧದ ಟಿ-20 ಸರಣಿಯನ್ನ ಭಾರತ ಕ್ಲೀನ್ ಸ್ವೀಪ್ ಮಾಡಿದ ಮೇಲೂ ಸೂರ್ಯ ಕುಮಾರ್ ಯಾದವ್ ಹೆಸರು ಟ್ರೆಂಡಿಂಗ್​ನಲ್ಲಿದೆ. ಬ್ಯಾಟ್ ಹಿಡಿದು ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಸೂರ್ಯ ಮಿಸ್ಟರ್ 360 ಅಂತಾನೇ ಫೇಮಸ್ ಆದವ್ರು. ಅದ್ರಲ್ಲೂ ಟಿ-20 ಸ್ಪೆಷಲಿಸ್ಟ್ ಅಂತಾ ಕರೆಸಿಕೊಳ್ಳೋ ಸೂರ್ಯ ಇದೀಗ ಬೌಲಿಂಗ್​ನಲ್ಲೂ ಹೊಸ ಭಾಷ್ಯ ಬರೆದಿದ್ದಾರೆ. ಬ್ಯಾಟಿಂಗ್, ಫೀಲ್ಡಿಂಗ್​ನಲ್ಲಿ ತನ್ನ ತಾಕತ್ತು ತೋರಿಸಿದ್ದ ಸ್ಕೈ ಖ್ಯಾತಿಯ ಆಟಗಾರ ಟೀಂ ಇಂಡಿಯಾದಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಸೂರ್ಯ ಕುಮಾರ್ ಯಾದವ್ ಬಗೆಗಿನ ರೋಚಕ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪದಕ ಬೇಟೆಗಿಳಿದ 7 ತಿಂಗಳ ಗರ್ಭಿಣಿ – ಒಲಿಂಪಿಕ್ಸ್‌ನಲ್ಲಿ ಗರ್ಭಿಣಿಯ ದೇಶಪ್ರೇಮ

ಸೂರ್ಯ ಕುಮಾರ್ ಯಾದವ್ ಅಂದ್ರೆ ಥಟ್ ಅಂತಾ ನೆನಪಾಗೋದೇ ಅವ್ರ ಸ್ಫೋಟಕ ಬ್ಯಾಟಿಂಗ್ ಅಬ್ಬರ. ಚ್ಯುಯಿಂಗ್ ಗಮ್ ಜಗಿಯುತ್ತಲೇ ಕ್ರೀಸ್​ನಲ್ಲಿ ಬ್ಯಾಟ್ ಹಿಡಿದು ನಿಲ್ಲೋ ಸೂರ್ಯ ಒಂದ್ಸಲ ಸೆಟಲ್ ಆದ್ರೂ ಅಂದ್ರೆ ಎದುರಾಳಿ ಬೌಲರ್​ಗಳನ್ನ ಬೆಂಡೆತ್ತಿ ಬಿಡ್ತಾರೆ. ಫೀಲ್ಡರ್ಸ್ ಅಂತೂ ಮೈದಾನದ ಮೂಲೆ ಮೂಲೆಗೂ ಓಡಿ ಸುಸ್ತಾಗಿ ಬಿಡ್ತಾರೆ. 360 ಡಿಗ್ರಿ ಬ್ಯಾಟರ್ ಅಂತಾನೇ ಕರೆಸಿಕೊಳ್ಳೋ ಸೂರ್ಯ ಫೀಲ್ಡಿಂಗ್​ನಲ್ಲೂ ಕೂಡ ಅಸಮಾನ್ಯ ಆಟಗಾರ. ಹೀಗೆ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಸದ್ದು ಮಾಡ್ತಿದ್ದ ಸೂರ್ಯ ಇದೀಗ ಬೌಲಿಂಗ್​ನಲ್ಲೂ ಥೂಫಾನ್​ನಂಥ ಪ್ರದರ್ಶನ ನೀಡಿದ್ದಾರೆ. ಲಂಕಾ ವಿರುದ್ಧದ ಟಿ-20 ಸರಣಿಯ ಕೊನೇ ಪಂದ್ಯದಲ್ಲಿ ತನ್ನೊಳಗೆ ಒಬ್ಬ ಬೌಲರ್ ಕೂಡ ಇದ್ದಾನೆ ಅನ್ನೋದನ್ನ ಇಡೀ ಜಗತ್ತಿಗೆ ತೋರಿಸಿ ಕೊಟ್ಟಿದ್ದಾರೆ. ಟಿ-20ಐ ತಂಡಕ್ಕೆ ಅಚ್ಚರಿಯ ರೀತಿಯಲ್ಲಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಸೂರ್ಯಕುಮಾರ್ ಯಾದವ್ ಮಾಡಿರೋ ಜಾದೂ ಬಗ್ಗೆಯೇ ಹೇಳ್ತೇನೆ ನೋಡಿ.

ಆಲ್ ರೌಂಡರ್ ಸೂರ್ಯಕುಮಾರ್!  

ಸೂರ್ಯಕುಮಾರ್ ಯಾದವ್ ಒಬ್ಬ ಅದ್ಭುತ ಬ್ಯಾಟರ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಹಾಗೇ ಅತ್ಯುತ್ತಮ ಫೀಲ್ಡರ್ ಕೂಡ ಹೌದು. ಈ ಬಾರಿಯ ಟಿ20 ವಿಶ್ವಕಪ್ ಫೈನಲ್​ನಲ್ಲಿ ಸೂರ್ಯ ಕುಮಾರ್ ಹಿಡಿದ ಕ್ಯಾಚ್​ನ ಮರೆಯೋಕೆ ಸಾಧ್ಯನೇ ಇಲ್ಲ. ಸಿಕ್ಸ್​ ಹೋಗಬೇಕಿದ್ದ ಬಾಲ್​ನ ಚಿಂಗನೆ ಜಿಗಿದು ಕ್ಯಾಚ್ ಹಿಡಿದಿದ್ದ ಸೂರ್ಯ ಭಾರತದ ಗೆಲುವಿಗೆ ಬಹುದೊಡ್ಡ ಕಾಣಿಕೆ ನೀಡಿದ್ರು. ಈ ಮೂಲಕ ತಾನೊಬ್ಬ ಅತ್ಯುತ್ತಮ ಫೀಲ್ಡರ್ ಎಂಬುದನ್ನು ನಿರೂಪಿಸಿದ್ದರು. ಇದೀಗ ತಾನೊಬ್ಬ ಆಲ್​ರೌಂಡರ್ ಎಂಬುದನ್ನು ಪ್ರೂವ್ ಮಾಡಲು ಹೊರಟಿದ್ದಾರೆ. ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ರುವಾರಿಗಳೆಂದರೆ ಸೂರ್ಯಕುಮಾರ್ ಯಾದವ್ ಹಾಗೂ ರಿಂಕು ಸಿಂಗ್. ಕೊನೆಯ ಓವರ್​ನಲ್ಲಿ ಲಂಕಾ ತಂಡಕ್ಕೆ ಕೇವಲ 6 ರನ್​ಗಳ ಅವಶ್ಯಕತೆಯಿತ್ತು. ಎಲ್ಲರೂ ಮೊಹಮ್ಮದ್ ಸಿರಾಜ್ ಅಥವಾ ಖಲೀಲ್ ಅಹ್ಮದ್​ಗೆ ಚೆಂಡು ನೀಡುತ್ತಾರೆ ಎಂದು ಭಾವಿಸಿದ್ದರು. ಆದರೆ ಕೊನೆಯ ಓವರ್​ನ ಸಂಪೂರ್ಣ ಹೊಣೆಯನ್ನು ತಾನೇ ಹೊತ್ತುಕೊಂಡ ಸೂರ್ಯ ಬಾಲ್ ಹಿಡಿದು ಫೀಲ್ಡಿಗಿಳಿದಿದ್ರು. ಅದ್ಭುತ ಸ್ಪಿನ್ ಮೋಡಿ ಮಾಡಿದ ಸೂರ್ಯ ಮೊದಲ ಎಸೆತದಲ್ಲಿ ಯಾವುದೇ ರನ್ ನೀಡದೇ ಲಂಕಾ ಬ್ಯಾಟರ್​ಗಳ ಮೇಲೆ ಒತ್ತ ಹೇರಿದರು. ಇನ್ನು 2ನೇ ಮತ್ತು 3ನೇ ಎಸೆತಗಳಲ್ಲಿ ವಿಕೆಟ್ ಕಬಳಿಸಿದರು. 4ನೇ ಎಸೆತದಲ್ಲಿ ಒಂದು ರನ್​. 5ನೇ ಎಸೆತದಲ್ಲಿ ಲಂಕಾ ಬ್ಯಾಟರ್​ಗಳು 2 ರನ್ ಓಡಿದರು. ಕೊನೆಯ ಎಸೆತದಲ್ಲಿ 3 ರನ್​ಗಳು ಬೇಕಿತ್ತು. ಈ ವೇಳೆ ಕೇವಲ 2 ರನ್ ಮಾತ್ರ ನೀಡುವ ಮೂಲಕ ಸೂರ್ಯಕುಮಾರ್ ಯಾದವ್ ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ನಾನು ಬ್ಯಾಟರ್, ಫೀಲ್ಡರ್ ಮಾತ್ರವಲ್ಲ ಬೌಲರ್ ಕೂಡ ಎಂಬುದನ್ನು ಸೂರ್ಯಕುಮಾರ್ ಯಾದವ್ ಸಾರಿ ಹೇಳಿದ್ದಾರೆ.

ಸದ್ಯ ಭಾರತ ಟಿ20 ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಅದ್ಭುತ ಪ್ರದರ್ಶನ ನಿಡ್ತಿದ್ದಾರೆ. ಈ ಮೂಲಕ ಸಾಲು ಸಾಲು ದಾಖಲೆಗಳನ್ನೂ ಬರೆಯುತ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಸೂರ್ಯ ಅಮೋಘ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ರು.    ಇದರೊಂದಿಗೆ ಅಂತರಾಷ್ಟ್ರೀಯ ಟಿ20 ಪಂದ್ಯಗಳ ಇತಿಹಾಸದಲ್ಲೇ ಅತೀ ಹೆಚ್ಚು ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಪಡೆದುಕೊಂಡ ಆಟಗಾರನಾಗಿ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ರು. 125 ಪಂದ್ಯಗಳಲ್ಲಿ ಕೊಹ್ಲಿ 16 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರೆ, ಸೂರ್ಯ ಕೇವಲ 69 ಪಂದ್ಯಗಳಿಂದ 16ನೇ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Shwetha M

Leave a Reply

Your email address will not be published. Required fields are marked *