ಬ್ಯಾಟರ್ಸ್​ ಕೈಗೆ ಬಾಲ್.. ಗೆದ್ದ ಗಂಭೀರ್ – ಸೂರ್ಯ & ರಿಂಕು ಹೀರೋ ಆಗಿದ್ದೇಗೆ?
ಗೆಲ್ಲೋ ಮ್ಯಾಚ್.. ಲಂಕಾ ಫೇಲ್

ಬ್ಯಾಟರ್ಸ್​ ಕೈಗೆ ಬಾಲ್.. ಗೆದ್ದ ಗಂಭೀರ್ – ಸೂರ್ಯ & ರಿಂಕು ಹೀರೋ ಆಗಿದ್ದೇಗೆ?ಗೆಲ್ಲೋ ಮ್ಯಾಚ್.. ಲಂಕಾ ಫೇಲ್

ವಾಟ್ ಎ ಮ್ಯಾಚ್. ಕೊನೇ ಓವರ್​ನ ಕೊನೇ ಎಸೆತದವರೆಗೂ ಕೋಟ್ಯಂತರ ಭಾರತೀಯರನ್ನ ತುದಿಗಾಲಲ್ಲಿ ನಿಲ್ಲಿಸಿದ್ದ ಪಂದ್ಯ ಅದು. ಶ್ರೀಲಂಕಾ ವಿರುದ್ಧದ 3ನೇ ಟಿ-20 ಪಂದ್ಯ ಭಾರತದ ಕೈಯಿಂದ ಬಹುತೇಕ ಕೈಜಾರಿಯೇ ಹೋಗಿತ್ತು. ಬಟ್ ಗೆಲುವಿನ ದಡದಲ್ಲಿ ನಿಂತಿದ್ದ ಸಿಂಹಳೀಯರಿಗೆ ಚೋಕ್ ಕೊಟ್ಟ ಭಾರತೀಯ ಆಟಗಾರರು ಕ್ಲೈಮ್ಯಾಕ್ಸ್​ನಲ್ಲಿ ಬಿಗ್ ಟ್ವಿಸ್ಟ್ ಕೊಟ್ಟಿದ್ರು. ಬ್ಯಾಟ್ ಹಿಡಿದು ಹೊಡಿಬಡಿ ಆಟವಾಡ್ತಿದ್ದ ಬ್ಯಾಟರ್ಸ್ ಕೂಡ ಬಾಲ್ ಹಿಡಿದು ಬೆಂಕಿ ಬೌಲಿಂಗ್ ಮಾಡಿದ್ರು. ಪರಿಣಾಮ ಟಿ-20 ಸರಣಿಯಲ್ಲಿ ಲಂಕಾ ಪಡೆ ಮೂರನೇ ಸೋಲಿನೊಂದಿಗೆ ಕ್ವೀನ್ ಸ್ವೀಪ್ ಆಯ್ತು. ಭಾರತ ವರ್ಸಸ್ ಲಂಕಾ ನಡುವಿನ ಮೂರನೇ ಚುಟುಕು ಸಮರದ ಒಂದಷ್ಟು ವಿಶೇಷತೆಗಳು ಹಾಗೇ ಕೋಚ್ ಗಂಭೀರ್ ಪ್ರಯೋಗದ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಿಸೆಪ್ಷನಿಸ್ಟ್ ಈಗ ಪಿಚ್ ಕ್ಯುರೇಟರ್ –  ಭಾರತದ ಮೊದಲ ಮಹಿಳಾ ಪಿಚ್ ಕ್ಯುರೇಟರ್

ಶ್ರೀಲಂಕಾ ವಿರುದ್ಧ ಟಿ-20ಐ ಸರಣಿಯಲ್ಲಿ ಮೂರಕ್ಕೆ ಮೂರೂ ಪಂದ್ಯಗಳನ್ನ ಗೆಲ್ಲುವ ಮೂಲಕ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿದೆ. ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಗೆದ್ದು ಬೀಗಿದ್ದ ಭಾರತ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಸರಣಿ ವಶಪಡಿಸಿಕೊಂಡಿತ್ತು. ಆದ್ರೆ ಕೊನೇ ಮ್ಯಾಚ್​ನಲ್ಲಿ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಬ್ಯಾಟರ್​ಗಳು ಕೈ ಕೊಟ್ರೂ ಬೌಲರ್ಸ್ ಮಾತ್ರ ಬಿರುಗಾಳಿಯನ್ನೇ ಎಬ್ಬಿಸಿದ್ರು. ಪರಿಣಾಮ  ಸೂಪರ್ ಓವರ್‌ನಲ್ಲಿ ರೋಚಕ ಗೆಲುವು ದಾಖಲಿಸುವ ಮೂಲಕ ವೈಟ್‌ವಾಷ್ ಮಾಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತದ ಪರ ಯಾವೊಬ್ಬ ಬ್ಯಾಟ್ಸಮನ್ ಕೂಡ ಹೇಳಿಕೊಳ್ಳುವಂಥ ಪ್ರದರ್ಶನ ನೀಡ್ಲಿಲ್ಲ. ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಕೇವಲ 10 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇನ್ನು ಸಂಜು ಸ್ಯಾಮ್ಸನ್ ಅಂತೂ ಸಿಕ್ಕಿರೋ ಅವಕಾಶ ಬಳಸಿಕೊಳ್ಳುವಲ್ಲಿ ಕಂಪ್ಲೀಟ್ ಫೇಲ್ ಆದ್ರು. ಖಾತೆ ತೆರೆಯದೆಯೇ ಪೆವಿಲಿಯನ್ ಸೇರಿದರು. ರಿಂಕು ಸಿಂಗ್ 1, ಸೂರ್ಯಕುಮಾರ್ ಯಾದವ್ 8, ಆಲ್ರೌಂಡರ್ ಶಿವಂ ದುಬೆ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಸೋ ತಂಡದ ಮೊತ್ತ 30 ಆಗುವಷ್ಟರಲ್ಲಿ ಮೇನ್ 4 ವಿಕೆಟ್​ಗಳು ಉರುಳಿಯಾಗಿತ್ತು. ಇಂಥಾ ಟೈಮಲ್ಲಿ ಶುಭ್​ಮನ್ ಗಿಲ್ 39 ರನ್ ಗಳಿಸುವ ಮೂಲಕ ತಂಡಕ್ಕೆ ಕೊಂಚ ಆಸರೆಯಾದ್ರು. ಗಿಲ್‌ ಜೊತೆ ಸೇರಿದ ರಿಯಾನ್ ಪರಾಗ್ ಉತ್ತಮ ಇನ್ನಿಂಗ್ ಕಟ್ಟುವ ಭರವಸೆ ನೀಡಿದ್ದರಾದ್ರೂ 26 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಬ್ಯಾಟಿಂಗ್ ವೈಫಲ್ಯದಿಂದಾಗಿ ಟೀಂ ಇಂಡಿಯಾ ಸ್ಕೋರ್ 100ರ ಗಡಿ ಕೂಡ ದಾಟಲ್ಲ ಅನ್ನಿಸ್ತಿತ್ತು. ಬಟ್ ಬಳಿಕ ಬಂದ ವಾಷಿಂಗ್ಟನ್ ಸುಂದರ್ 25 ರನ್ ಹಾಗೂ ರವಿ ಬಿಶ್ಣೋಯಿ 8 ರನ್ ಗಳಿಸುವ ಮೂಲಕ ತಂಡದ ಸ್ಕೋರ್ ನಿಗದಿತ 20 ಓವರ್‌ಗಳಲ್ಲಿ 137 ರನ್ ಆಗುವಂತೆ ನೋಡಿಕೊಂಡರು.

ಆರಂಭದಲ್ಲಿ ಅಬ್ಬರಿಸಿ ಕೊನೆಯಲ್ಲಿ ಕೈ ಚೆಲ್ಲಿದ ಲಂಕಾ

ಮೊದಲ ಎರಡು ಪಂದ್ಯಗಳನ್ನ ಸೋತು ಅದಾಗಲೇ ಸರಣಿ ಕೈಚೆಲ್ಲಿಕೊಂಡಿದ್ದ ಶ್ರೀಲಂಕಾ ಆಟಗಾರರು ಮೂರನೇ ಪಂದ್ಯದಲ್ಲಿ ಗೆಲುವಿನ ಮೂಲಕವೇ ಸರಣಿ ಮುಗಿಸೋ ಜೋಶ್​ನಲ್ಲಿದ್ರು. ಅದ್ರಲ್ಲೂ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಕೂಡ ಅದ್ಭುತ ಪ್ರದರ್ಶನ ನೀಡಿದ್ರು. ಶ್ರೀಲಂಕಾ ಪರ ಮಹೀಶ್ ತೀಕ್ಷಣ 3 ವಿಕೆಟ್ ಪಡೆದ್ರೆ, ವನಿಂದು ಹಸರಂಗ 2 ವಿಕೆಟ್ ಪಡೆದು ಮಿಂಚಿದರು. ಹಾಗೇ ಚಮಿಂದು ವಿಕ್ರಮಸಿಂಘೆ, ಅಸಿಥಾ ಫೆರ್ನಾಂಡೋ, ರಮೇಶ್ ಮೆಂಡಿಸ್ ತಲಾ 1 ವಿಕೆಟ್ ಪಡೆದ್ರು. ಇನ್ನು ಬ್ಯಾಟಿಂಗ್​ನಲ್ಲೂ ಕೂಡ ಲಂಕಾಗೇ ಉತ್ತಮ ಆರಂಭ ಸಿಕ್ಕಿತ್ತು. ಲಂಕಾ ಓಪನರ್ಸ್ ಮೊದಲ ವಿಕೆಟ್‌ಗೆ 58 ರನ್‌ಗಳ ಜೊತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿದರು. ಪಥುಮ್ ನಿಸ್ಸಾಂಕ ಹಾಗೂ ಕುಸಾಲ್ ಮೆಂಡಿಸ್ ಒಳ್ಳೆ ಇನ್ನಿಂಗ್ಸ್ ಕಟ್ಟಿದ್ರು. ಆದ್ರೆ ಭಾರತೀಯ ಬೌಲರ್ ರವಿ ಬಿಷ್ಣೋಯ್ ಇಬ್ಬರನ್ನೂ ಕೂಡ ಪೆವಿಲಿಯನ್​ಗೆ ಅಟ್ಟಿದ್ರು. ಸುಲಭದ ಮೊತ್ತ ಬೆನ್ನಟ್ಟಿದ ಶ್ರೀಲಂಕಾ ತಂಡ ಉತ್ತಮ ಆರಂಭ ಪಡೆದ್ರೂ ಕೂಡ ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲಿ ಕಂಪ್ಲೀಟ್ ಫೇಲ್ಯೂರ್ ಆಗಿತ್ತು.

ಪಂದ್ಯದ ದಿಕ್ಕನ್ನೇ ಬದಲಿಸಿದ ಕೊನೆಯ 2 ಓವರ್

30 ಎಸೆತಕ್ಕೆ 30 ರನ್ ಬೇಕಿದ್ದಾಗಲೇ ಕುಸಿತ ಆರಂಭಿಸಿದ ಲಂಕಾ ತಂಡ ಮತ್ತೆ ಮೇಲೆಳಲೇ ಇಲ್ಲ. ಲಂಕಾ ವಿರುದ್ಧದ ಪಂದ್ಯದ ಕೊನೆಯ ಎರಡು ಓವರ್​ಗಳಲ್ಲಿ ನಿಜಕ್ಕೂ ಭಾರತ ಪರ ಮ್ಯಾಜಿಕ್ ನಡೆದಿತ್ತು. ಸತತ ವಿಕೆಟ್‌ ಕಳೆದುಕೊಳ್ಳುತ್ತಲೇ ಸಾಗಿದ ತಂಡ ಕೊನೆ 2 ಓವರ್‌ಗಳಲ್ಲಿ 9 ರನ್‌ ಬೇಕಿದ್ದಾಗಲೂ ಗೆಲ್ಲಲಾಗಲಿಲ್ಲ. ಯಾಕಂದ್ರೆ ಈ ವೇಳೆ ತಂಡದಲ್ಲಿ ಯಾರೂ ನಿರೀಕ್ಷಿಸದ ನಿರ್ಧಾರಗಳನ್ನು ಮಾಡಲಾಗಿತ್ತು. ಕೋಚ್ ಗೌತಮ್ ಗಂಭೀರ್ ಹಾಗೇ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅಚ್ಚರಿಯ ನಿರ್ಧಾರಗಳನ್ನ ಕೈಗೊಂಡಿದ್ರು. 19ನೇ ಓವರ್​ನಲ್ಲಿ ರಿಂಕು ಸಿಂಗ್​ ಕೈಗೆ ಬಾಲ್ ಕೊಡಲಾಗಿತ್ತು. ಬ್ಯಾಟ್ ಹಿಡಿದು ಸೈ ಎನಿಸಿಕೊಂಡಿದ್ದ ರಿಂಕು ಬಾಲಿಂಜ್​ನಲ್ಲೂ ಜಾದೂ ಮಾಡಿದ್ರು. ಕೇವಲ 3 ರನ್ ನೀಡಿ ಪ್ರಮುಖ 2 ವಿಕೆಟ್ ಪಡೆದ್ರು. ಹಾಗೇ 20 ನೇ ಓವರ್​ನಲ್ಲಿ ಸ್ವತಃ ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್ ಬಾಲ್ ಹಿಡಿದು ಫೀಲ್ಡಿಗಿಳಿದಿದ್ರು. ಸೂರ್ಯ ಕೂಡ 2 ವಿಕೆಟ್ ಪಡೆದು ಕೇವಲ 5 ರನ್ ಬಿಟ್ಟುಕೊಟ್ಟರು. ಹೀಗಾಗಿ ಪಂದ್ಯ ಟೈ ಆಗಿ ಸೂಪರ್​ ಓವರ್​ನತ್ತ ಸಾಗಿತು. ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ಕೇವಲ 2 ರನ್ ಕಲೆಹಾಕಿತು. ವಾಟಿಂಗ್ಟನ್ ಸುಂದರ್ ಎಸೆದ ಈ ಓವರ್​ನಲ್ಲಿ 1 ರನ್​ ವೈಡ್​ನಿಂದ ಬಂತು. ಉಳಿದಂತೆ ಮುಂದಿನ ಎರಡು ಎಸೆತಗಳಲ್ಲಿ ಲಂಕಾ ಸತತ 2 ವಿಕೆಟ್ ಕಳೆದುಕೊಂಡಿತು. ಈ ಗುರಿ ಬೆನ್ನಟ್ಟಿದ ಭಾರತದ ಪರ ನಾಯಕ ಸೂರ್ಯ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಬ್ಯಾಟರ್ಸ್ ಕೈಗೆ ಬಾಲ್ ಕೊಟ್ಟು ಗೆದ್ದ ಗಂಭೀರ್!

ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೊಚ್ ಆದಮೇಲೆ ಮೊದಲ ಟಿ-20 ಸರಣಿ ಇದಾಗಿತ್ತು. ಟೀಂ ಇಂಡಿಯಾದಲ್ಲಿ ಒಂದಷ್ಟು ಕಂಡೀಷನ್​ಗಳ ಜೊತೆಗೆ ತಂಡಕ್ಕೆ ಎಂಟ್ರಿಯಾಗಿದ್ದ ಗಂಭೀರ್​ ಅದರಲ್ಲಿ ಯಶಸ್ವಿ ಆದಂತೆಯೂ ಕಾಣ್ತಿದೆ. ಐಪಿಎಲ್​ನಲ್ಲಿ ಕೆಕೆಆರ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಅಲ್ಲೂ ಕೂಡ ಸಾಕಷ್ಟು ಬದಲಾವಣೆ ತಂದಿದ್ರು. ಸುನಿಲ್ ನರೈನ್ ಕೈಗೆ ಬ್ಯಾಟ್ ಕೊಟ್ಟು ಕ್ರಿಕೆಟ್ ಜಗತ್ತೇ ಹುಬ್ಬೇರುವಂತೆ ಮಾಡಿದ್ರು. ಇದೀಗ ಲಂಕಾ ಸರಣಿಯಲ್ಲೂ ಮೂರನೇ ಪಂದ್ಯದಲ್ಲಿ ಒಂದಷ್ಟು ಪ್ರಯೋಗ ಮಾಡಿ ಸಕ್ಸಸ್ ಕೂಡ ಕಂಡಿದ್ದಾರೆ. ಕೆಲ ಆಟಗಾರರು ಅದನ್ನು ನಿರೂಪಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಮಂಗಳವಾರದ ಪಂದ್ಯದಲ್ಲಿ ಕೂಡ ಯಾರೂ ನಿರೀಕ್ಷೆ ಮಾಡಿರದ ಅಚ್ಚರಿಗಳು ನಡೆದವು. ರಿಂಕು ಸಿಂಗ್ ಗಾಗೂ ಸೂರ್ಯಕುಮಾರ್ ಯಾದವ್ ಸ್ಟಾರ್ ಬ್ಯಾಟರ್ಸ್. ಟಿ-20 ಪಂದ್ಯಗಳಲ್ಲಿ ಹೊಡಿಬಡಿ ಆಟದಿಂದಲೇ ಸದ್ದು ಮಾಡಿದ್ದವ್ರು. ಬಟ್ ಇವ್ರ ಕೈಗೂ ಬಾಲ್ ಕೊಟ್ಟು ಎದುರಾಳಿ ಪಡೆಯನ್ನ ಬೇಟೆಯಾಡಿದ್ದಾರೆ. ಯಾವ ಬೌಲರ್ಸ್​​ಗೂ ಕಮ್ಮಿ ಇಲ್ಲದ ರೀತಿಯಲ್ಲಿ ಬೌಲಿಂಗ್ ಮಾಡಿದ ರಿಂಕು ಹಾಗೇ ಸೂರ್ಯ 4 ವಿಕೆಟ್ ಪಡೆದು ಮಿಂಚಿದ್ರು.

ಇನ್ನು ಲಂಕಾ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಅಕ್ಸರ್ ಪಟೇಲ್ ಮತ್ತು ರಿಷಬ್ ಪಂತ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಅವರ ಬದಲಿಗೆ ಶುಭ್​ಮನ್ ಗಿಲ್, ಖಲೀಲ್ ಅಹ್ಮದ್, ವಾಷಿಂಗ್ಟನ್ ಸುಂದರ್, ಶಿವಂ ದುಬೆಗೆ ಚಾನ್ಸ್ ನೀಡಲಾಗಿತ್ತು. ಪಂದ್ಯದಲ್ಲಿ ಅಮೋಘ ಪ್ರದರ್ಶನದ ಮೂಲಕ ಗೆಲುವಿಗೆ ಕಾರಣರಾದ ಸ್ಪಿನ್ನರ್ ವಾಷಿಂಗ್‌ಟನ್ ಸುಂದರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ್ರು. ಹಾಗೇ  ಸರಣಿಯುದ್ದಕ್ಕೂ ಅಮೋಘ ಪ್ರದರ್ಶನ ತೋರಿದ ನಾಯಕ ಸೂರ್ಯಕುಮಾರ್ ಯಾದವ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು. ಒಟ್ನಲ್ಲಿ ಟೀಂ ಇಂಡಿಯಾದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೀತಿತ್ತು ಸಕ್ಸಸ್ ಕೂಡ ಆಗ್ತಿದೆ. ಆಟಗಾರರ ಆಲ್​ರೌಂಡ್ ಪ್ರದರ್ಶನ ಸೋಲುವ ಪಂದ್ಯವನ್ನ ಗೆಲ್ಲಿಸಿಕೊಟ್ಟಿದೆ.

Shwetha M

Leave a Reply

Your email address will not be published. Required fields are marked *