ರಿಸೆಪ್ಷನಿಸ್ಟ್ ಈಗ ಪಿಚ್ ಕ್ಯುರೇಟರ್ –  ಭಾರತದ ಮೊದಲ ಮಹಿಳಾ ಪಿಚ್ ಕ್ಯುರೇಟರ್
30 ವರ್ಷದ ರೋಚಕ ಜರ್ನಿ ಹೇಗಿತ್ತು?

ರಿಸೆಪ್ಷನಿಸ್ಟ್ ಈಗ ಪಿಚ್ ಕ್ಯುರೇಟರ್ –  ಭಾರತದ ಮೊದಲ ಮಹಿಳಾ ಪಿಚ್ ಕ್ಯುರೇಟರ್30 ವರ್ಷದ ರೋಚಕ ಜರ್ನಿ ಹೇಗಿತ್ತು?

ಮೈದಾನದಲ್ಲಿ ಕ್ರಿಕರ್ಟ್‌ ಮಿಂಚಿತ್ತಾರೆ ಅಂದ್ರೆ ಅದ್ರ ಹಿಂದೆ ಅದೆಷ್ಟೋ ಮಂದಿಯ ಪರಿಶ್ರಮ ಇದ್ದೇ ಇರುತ್ತೆ. ಕಾಣದ ಕೈಗಳು ಕೆಲ್ಸ ಮಾಡಿರ್ತಾವೆ.. ಹೌದು. ಕ್ರಿಕೆಟ್‌ ಈಗ ಅಂತಾರಾಷ್ಟೀಯ ಮಟ್ಟದಲ್ಲಿ ಖ್ಯಾತಿ ಪಡ್ಕೊಂಡಿದೆ. ಕ್ರಿಕೆಟ್‌ ಲೋಕದಲ್ಲಿ ಅನೇಕರು ಮಿಂಚಿದ್ದಾರೆ. ಮೈದಾನಕ್ಕೆ ಬಂದು ಬ್ಯಾಟ್‌ ಬೀಸಿದ್ರೆ ಸಾಕು.. ಸಲೀಸಾಗಿ ಆಡ್ಬೋದು ಅಂತಾ ಅನೇಕರು ಅಂದುಕೊಂಡಿದ್ದಾರೆ. ಅದ್ರೆ ಬ್ಯಾಟ್‌, ಬಾಲ್‌ ನಷ್ಟೇ ಪಿಚ್‌ಕೂಡ ತುಂಬಾ ಮುಖ್ಯ ಆಗಿರುತ್ತೆ.. ಇದೀಗ ಇಲ್ಲೊಬ್ಬರು ಪಿಚ್ ಕ್ಯುರೇಟರ್ ಆಗಿ ರಾಷ್ಟೀಯ ಮನ್ನಣೆ ಗಳಿಸಿದ್ದಾರೆ. ಹಲವು ಪಂದ್ಯಗಳಿಗೆ ಪಿಚ್‌ ಸಿದ್ಧಪಡಿಸಿದ್ದಾರೆ. ಅವರು ಬೇರೆ ಯಾರು ಅಲ್ಲ.. ನಮ್ಮ ರಾಜ್ಯದ ಹೆಮ್ಮೆಯ ಮಗಳು ಜೆಸಿಂತಾ ಕಲ್ಯಾಣ್‌ ಅವರು. ಈಕೆ ಪಿಚ್ ಕ್ಯುರೇಟರ್ ಆಗಿದ್ದು ಒಂದು ರೋಚಕ. ಕ್ರಿಕೆಟ್ ಸಂಸ್ಥೆಗೆ ರಿಸೆಪ್ಷನಿಸ್ಟ್ ಆಗಿ ಸೇರಿಕೊಂಡವರು ಬಳಿಕ ಆಗಿದ್ದು ಪಿಚ್ ಕ್ಯುರೇಟರ್ ಆಗಿ. ಈಗ ಭಾರತದ ಮೊದಲನೇ ಪಿಚ್ ಕ್ಯುರೇಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಷ್ಟಕ್ಕೂ ಜೆಸಿಂತಾ ಕಲ್ಯಾಣ್ ಯಾರು? ರೆಸೆಪ್ಷನಿಸ್ಟ್ ಆಗಿದ್ದವರು ಪಿಚ್ ಕ್ಯುರೇಟರ್ ಆಗಿದ್ದು ಹೇಗೆ? ಜೆಸಿಂತಾರ 30 ವರ್ಷಗಳ ರೋಚಕ ಜರ್ನಿ ಹೇಗಿತ್ತು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕ್ಯಾಪ್ಟನ್ಸಿ ತಪ್ಪಿದ್ರೂ PANDYA ಕಿಂಗ್ – ಬ್ರ್ಯಾಂಡ್ ವ್ಯಾಲ್ಯೂನಲ್ಲಿ ಸಖತ್ ಡಿಮ್ಯಾಂಡ್

ಜೆಸಿಂತಾ ಕಲ್ಯಾಣ್‌ ಅವರು ಬೆಂಗಳೂರಿನಿಂದ 80 ಕಿ.ಮೀ ದೂರದಲ್ಲಿರುವ ಕನಕಪುರದವರು. ರೈತ ಕುಟುಂಬದಲ್ಲಿ ಜನಿಸಿದ ಜೆಸಿಂತಾ ಹುಟ್ಟೂರಿನಲ್ಲಿಯೇ 10ನೇ ತರಗತಿ ವರೆಗೆ ಓದಿದ್ರು. ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಿಲಿಕಾನ್‌ ಸಿಟಿ ಬೆಂಗಳೂರಿನತ್ತ ಮುಖ ಮಾಡಿದ್ರು.. ಬಡ ಕುಟುಂಬದಲ್ಲಿ ಬೆಳೆದ ಜೆಸಿಂತಾಗೆ ಓದಿನ ಜೊತೆಗೆ ಕೆಲಸವೂ ಅನಿವಾರ್ಯ ಆಯ್ತು. ಹೀಗಾಗಿ ಜೆಸಿಂತಾ 1993 ರಲ್ಲಿ ಕ್ರಿಕೆಟ್‌ ಸಂಸ್ಥೆಯೊಂದ್ರಲ್ಲಿ ರಿಸೆಪ್ಷನಿಸ್ಟ್‌ ಆಗಿ ಕೆಲಸಕ್ಕೆ ಸೇರ್ತಾರೆ.. ಬೆಳಗ್ಗಿಂದ ಸಂಜೆ ತನಕ ಕೆಲಸಕ್ಕೆ ಹೋದ್ರೆ, ಸಂಜೆ 6 ರಿಂದ 9 ಗಂಟೆ ವರೆಗೆ ಕಾಲೇಜಿಗೆ ಹೋಗ್ತಾ ಇದ್ರು.. ಕ್ರಿಕೆಟ್‌ ಸಂಸ್ಥೆಯಲ್ಲೇ ಸುಮಾರು ವರ್ಷಗಳ ಕಾಲ ಕೆಲಸ ಮಾಡ್ತಾ ಇದ್ರು. ತನ್ನ ಕೆಲಸ, ಓದು ಬಿಟ್ರೆ ಜೆಸಿಂತಾಗೆ ಕ್ರಿಕೆಟ್‌ ಬಗ್ಗೆ ಗಂಧಗಾಳಿಯೇ ಗೊತ್ತಿರ್ಲಿಲ್ಲ. ಅಲ್ಲಿಂದ ಕೆಲ ವರ್ಷಗಳಲ್ಲಿ KSCA admistration sectionಗೆ ಪ್ರಮೋಷನ್ ಸಿಗುತ್ತೆ. ಅದ್ರಲ್ಲೇ ಕೆಲ್ಸ ಮಾಡ್ತಾ ಮುಂದುವರಿದ್ರು.. ಆದ್ರೆ  ತಾನು ಕೆಲ್ಸ ಮಾಡ್ತಿದ್ದ ಸಂಸ್ಥೆಯ ಅದೊಂದು ನಿರ್ಧಾರ ಜೆಸಿಂತಾ ಅವ್ರ ಲೈಫ್ ಅನ್ನೇ ಬದಲಾಯಿಸ್ತು.. 2014ರಲ್ಲಿ ಆಗಿನ KSCA ಸೆಕ್ರೆಟರಿ ಬ್ರಿಜೇಶ್ ಪಟೇಲ್, ಜೆಸಿಂತಾ ಅವರನ್ನು ಕರೆದು ಒಂದು ಮಾತು ಹೇಳುತ್ತಾರೆ.

ನಾಲ್ಕು ಗೋಡೆಗಳ ಮಧ್ಯೆ ಕೆಲಸ ಮಾಡಿದ್ದು ಸಾಕು, ಮೈದಾನದಲ್ಲಿ ಕೆಲಸ ಮಾಡುವ ಗ್ರೌಂಡ್ಸ್  ಮನ್ ಗಳ  management ಜವಾಬ್ದಾರಿ ನೋಡಿಕೋ  ಎಂದು ಆ ಸಂಸ್ಥೆ ಜೆಸಿಂತಾಗೆ ಹೊಸ ಜವಬ್ದಾರಿ ನೀಡುತ್ತೆ.  ಆ ದಿನ ಒಲ್ಲದ ಮನಸ್ಸಿನಿಂದಲೇ ಚಿನ್ನಸ್ವಾಮಿ ಮೈದಾನಕ್ಕೆ ಹೆಜ್ಜೆ ಇಡುತ್ತಾರೆ ಜೆಸಿಂತಾ.  ಯಾಕಂದ್ರೆ ಅವ್ರಿಗೆ ಕ್ರಿಕೆಟ್ ಬಗ್ಗೆ ಗಂಧಗಾಳಿಯೂ ಗೊತ್ತಿರ್ಲಿಲ್ಲ..‌‌ ಅದರ ಬಗ್ಗೆ ಆಸಕ್ತಿಯೂ ಇರ್ಲಿಲ್ಲ.. ಸಿಕ್ಸ್‌, ಫೋರ್‌, ಔಟ್‌, ಬೌಂಡರಿ ಇಷ್ಟು ಮಾತ್ರ ಗೊತ್ತಿತ್ತು. ಅದ್ರೆ ಅವತ್ತು ಇಟ್ಟ ಹೆಜ್ಜೆ ಅವ್ರ ಲೈಫ್ ಜೇಂಜ್ ಮಾಡ್ತು..‌

ಆರಂಭದಲ್ಲಿ ಈಕೆ ಗೆ ಈ ಕೆಲ್ಸ ತುಂಬಾನೆ ಕಷ್ಟಕರವಾಗಿತ್ತು.. ಯಾಕಂದ್ರೆ ಚಿನ್ನಸ್ವಾಮಿ ಮೈದಾನದ ಗ್ರೌಂಡ್ಸ್ ಮನ್ ಗಳನ್ನು ನೋಡಿಕೊಳ್ಳುವ ಕೆಲಸ ಅದು. AC ರೂಮ್’ನಲ್ಲಿ ಕೆಲಸ ಮಾಡುತ್ತಿದ್ದವರು, ಬಿರು ಬಿಸಿಲಿನಲ್ಲಿ ಕೆಲಸ ಮಾಡಬೇಕಾದ ಜವಾಬ್ದಾರಿಗೆ ಒಗ್ಗಿಕೊಳ್ಳಲು ಸರಿ ಸುಮಾರು  6 ತಿಂಗಳೇ ಬೇಕಾಯ್ತು. ಕೆಲಸ ಮಾಡುತ್ತಾ ಮಾಡುತ್ತಾ ಚಿನ್ನಸ್ವಾಮಿ ಕ್ರೀಡಾಂಗಣದ ಆಗಿನ ಮುಖ್ಯ ಪಿಚ್ ಕ್ಯುರೇಟರ್ ಪ್ರಶಾಂತ್ ರಾವ್ ಅವರ ಬಳಿ ಪಿಚ್ ಸಿದ್ಧಗೊಳಿಸುವ ಕಲೆ ಮತ್ತು ಕೌಶಲ್ಯಗಳನ್ನು ಕಲಿಯಲಾಂಭಿಸಿದರು ಜೆಸಿಂತಾ.

ಜೆಸಿಂತಾಗೆ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಸುಲಭಕ್ಕೆ ಸಿಕ್ಕಿಲ್ಲ.   ಸುಮಾರು ಆರು ವರ್ಷಗಳ ನಿರಂತರ ಪರಿಶ್ರಮ ಹಾಕಿದ್ದಾರೆ. ಪಿಚ್ ಸಿದ್ಧ ಪಡಿಸುವ ಕೆಲಸವೆಂದರೆ ಅದೊಂದು ತಪಸ್ಸು. ಪ್ರತೀ ದಿನ ಗಂಟೆಗಟ್ಟಲೆ ಶ್ರಮ ಕೇಳುವ ಕೆಲಸವದು. ಜೆಸಿಂತಾ ಶ್ರಮಜೀವಿಯಾಗಿ ಬಿಟ್ಟರು. ಬಿಸಿಸಿಐ ಗ್ರೌಂಡ್‌ ಪಿಚ್‌ ಕಮಿಟಿಯ ಮುಖ್ಯಸ್ಥರ ನೇತೃತ್ವದಲ್ಲಿ ಬರವಣಿಗೆ, ಪ್ರಾಯೋಗಿಕ, ಮೌಖಿಕ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳುತ್ತಾರೆ.  2018ರಲ್ಲಿ ಬಿಸಿಸಿಐ ಕ್ಯುರೆಟರ್ ಶಿಪ್ exam ಬರೆದು ಅಧಿಕೃತವಾಗಿ ಪಿಚ್ ಕ್ಯುರೇಟರ್ ಎನಿಸಿದರು. ಅದರೊಂದಿಗೆ ಭಾರತದ ಮೊದಲ ಪಿಚ್‌ ಕ್ಯುರೇಟರ್‌ ಎಂಬ ಹೆಗ್ಗಳಿಕೆಗೂ ಪಾತ್ರರಾದ್ರು. ಇದೇ ವರ್ಷ ಬೆಂಗಳೂರಿನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಗೆ ಅಷ್ಟೂ ಪಿಚ್ ಗಳನ್ನು ಸಿದ್ಧಪಡಿಸಿದವರು ಇವರೇ. ಮಧ್ಯೆ ಒಂದಷ್ಟು ರಣಜಿ ಟ್ರೋಫಿ ಪಂದ್ಯಗಳಿಗೆ ಕ್ಯುರೇಟರ್ ಆಗಿ ಕೆಲಸ ಮಾಡಿದ ಅನುಭವವೂ ಸಿಕ್ಕಿತ್ತು.  ದೇಶದ ಮೊದಲ ಮಹಿಳಾ ಪಿಚ್ ಕ್ಯುರೇಟರ್ ಎಂದು ಕರೆಸಿಕೊಂಡವರು ಈಗ National Cricket Academyಯ ಕ್ಯುರೇಟರ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪುರುಷರಿಗಷ್ಟೇ ಮೀಸಲು ಎಂಬಂತಿದ್ದ ಪಿಚ್ ರೆಡಿ ಮಾಡುವ ಕೆಲಸವನ್ನ ಹೆಣ್ಣು ಮನಸು ಮಾಡಿದ್ರೆ ತಾನು ಸಾಧಿಸಿ ತೋರಿಸ ಬಲ್ಲೇ ಎನ್ನುವುದಕ್ಕೆ ಜೆಸಿಂತಾ ಒಳ್ಳೆಯ ಉದಾಹರಣೆ..

Shwetha M

Leave a Reply

Your email address will not be published. Required fields are marked *