ಕ್ಯಾಪ್ಟನ್ಸಿ ತಪ್ಪಿದ್ರೂ PANDYA ಕಿಂಗ್ – ಬ್ರ್ಯಾಂಡ್ ವ್ಯಾಲ್ಯೂನಲ್ಲಿ ಸಖತ್ ಡಿಮ್ಯಾಂಡ್
ವಿಶ್ವ ಗೆದ್ದ ಹೀರೋಗೆ ಅದೆಂಥಾ ಅದೃಷ್ಟ?

ಕ್ಯಾಪ್ಟನ್ಸಿ ತಪ್ಪಿದ್ರೂ PANDYA ಕಿಂಗ್ – ಬ್ರ್ಯಾಂಡ್ ವ್ಯಾಲ್ಯೂನಲ್ಲಿ ಸಖತ್ ಡಿಮ್ಯಾಂಡ್ವಿಶ್ವ ಗೆದ್ದ ಹೀರೋಗೆ ಅದೆಂಥಾ ಅದೃಷ್ಟ?

ಗೆದ್ದಾಗ ಖುಷಿ ಪಡೋ ಮಂದಿ ಸೋತಾಗ ಅಷ್ಟೇ ಟ್ರೋಲ್ ಮಾಡ್ತಾರೆ ಅನ್ನೋದಕ್ಕೆ ಕಣ್ಣೆದುರೇ ಸಾಕ್ಷಿಯಾಗಿ ನಿಂತವರು ಹಾರ್ದಿಕ್ ಪಾಂಡ್ಯ. ಬರೋಬ್ಬರಿ 6 ತಿಂಗಳು ಹಾರ್ದಿಕ್ ಪಾಂಡ್ಯ ಫೇಸ್ ಮಾಡಿರೋ ಮಾನಸಿಕ ಯಾತನೆ ಅವರಿಗೇ ಗೊತ್ತು. ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಆದಮೇಲಂತೂ ರೋಹಿತ್ ಶರ್ಮಾ ಫ್ಯಾನ್ಸ್ ಪಾಲಿಗೆ ವಿಲನ್ ಆದ್ರು. ಅತ್ತ ಪತ್ನಿ ನತಾಶಾ ದೂರಾದ ನೋವು, ಇತ್ತ ಐಪಿಎಲ್ ಅಂಗಳದಲ್ಲಿ ಅಭಿಮಾನಿಗಳು ಹೀನಾಯವಾಗಿ ಟೀಕಿಸುತ್ತಿದ್ದ ರೀತಿಗೆ ಪಾಂಡ್ಯ ಕುಗ್ಗಿ ಹೋಗಿದ್ರು. ಪ್ರೆಷರ್ ತಾಳಲಾರದೇ ಒದ್ದಾಡುತ್ತಿದ್ದರು. ಆದ್ರೆ, ಎಷ್ಟೇ ಸೋಲು, ನೋವು ಎದುರಾದರೂ ಕೂಡಾ ಗೆಲುವಿನ ದಾರಿ ಸಿಕ್ಕೇ ಸಿಗುತ್ತೆ ಅನ್ನೋದನ್ನ ಬಲವಾಗಿ ನಂಬಿದವರು ಹಾರ್ದಿಕ್ ಪಾಂಡ್ಯ. ಟಿ20 ವಿಶ್ವಕಪ್ ಟೀಮ್ ಇಂಡಿಯಾ ಗೆದ್ದಿದ್ದು ಮಾತ್ರವಲ್ಲ, ಇದ್ರಲ್ಲಿ ಗೆದ್ದು ಹೀರೋ ಆದವರು ಹಾರ್ದಿಕ್ ಪಾಂಡ್ಯ. ವಿಶ್ವಗೆದ್ದ ಹಾರ್ದಿಕ್ ಪಾಂಡ್ಯ ಲೈಫ್ ಈಗ ಚೇಂಜ್ ಆಗಿದೆ. ಬ್ಯಾಡ್ ಟೈಮ್ ದೂರವಾಗಿ ಪಾಂಡ್ಯ ಗೆಲುವಿನ ಕ್ಷಣಗಳನ್ನ ಎಂಜಾಯ್ ಮಾಡ್ತಿದ್ದಾರೆ. ಇದೇ ಹೊತ್ತಲ್ಲಿ ಹಾರ್ದಿಕ್ ಪಾಂಡ್ಯ ಕಾರ್ಪೋರೇಟ್ ದುನಿಯಾದ ಕಿಂಗ್ ಆಗಿ ಮೆರೆಯುತ್ತಿದ್ದಾರೆ.

ಇದನ್ನೂ ಓದಿ: ಲಂಕಾ ಗೆಲ್ಲೋದು RO-KOಗೆ ಕಷ್ಟನಾ? -ಸರಣಿಗೂ ಮುನ್ನವೇ KL ವಾರ್ನಿಂಗ್

ಕಾರ್ಪೋರೇಟ್ ದುನಿಯಾ ಕಿಂಗ್ ಪಾಂಡ್ಯ  

ಹಾರ್ದಿಕ್​ ಪಾಂಡ್ಯ ಬ್ರ್ಯಾಂಡ್​​ ವ್ಯಾಲ್ಯೂ ಮಾತ್ರ ಗಗನದೆತ್ತರಕ್ಕೆ ಏರ್ತಿದೆ. ಟಿ20 ವಿಶ್ವಕಪ್ ಗೆದ್ದ ಮೇಲಂತೂ​ ಹಾರ್ದಿಕ್​ ಪಾಂಡ್ಯಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಶುರುವಾಗಿದೆ. ಬ್ರ್ಯಾಂಡ್​ವ್ಯಾಲ್ಯೂ ಡಬಲ್​ ಆಗಿದೆ. ಜಾಹೀರಾತುದಾರರಂತೂ ಹಾರ್ದಿಕ್ ಪಾಂಡ್ಯರನ್ನೇ ​ಹುಡುಕಿಕೊಂಡು ಬರ್ತಿದ್ದಾರೆ. ಇದೀಗ ಪಾಂಡ್ಯ ಕಾರ್ಪೊರೇಟ್​ ದುನಿಯಾದ ಹೊಸ ಕಿಂಗ್​ ಆಗುವತ್ತ ​ ಹೆಜ್ಜೆ ಹಾಕ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹಾರ್ದಿಕ್​ ಪಾಂಡ್ಯ ಬ್ಯುಸಿನೆಸ್​ ವಿಚಾರದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದರು. ಕೆಲ ಆನ್​ಲೈನ್​ ಶಾಪಿಂಗ್​ ಸ್ಟೋರ್​ಗಳ ಜೊತೆ ಟೈ ಅಪ್​ ಆಗಿ ಪರ್ಫಾಮೆನ್ಸ್​ ವೇರ್​ ಕಂಪನಿ ಲಾಂಚ್​ ಮಾಡಿದ್ರು. ಅದಾಗಿ ಕೆಲವೇ ದಿನಕ್ಕೆ ಮತ್ತೊಂದು ಪ್ರಾಡಕ್ಟ್​ ಲಾಂಚ್​ ಮಾಡಲು ಹಾರ್ದಿಕ್​ ಮುಂದಾಗಿದ್ದಾರೆ. 20 ಬ್ರ್ಯಾಂಡ್​ಗಳಿಗೆ ಹಾರ್ದಿಕ್​ ಪಾಂಡ್ಯ ಅಂಬಾಸಿಡರ್​ ಆಗಿದ್ದಾರೆ. ಹೀಗಿದ್ದರೂ ಕೂಡಾ​ ಹಲವು ಪ್ರತಿಷ್ಠಿತ ಕಂಪನಿಗಳು ಪಾಂಡ್ಯ ಬೆನ್ನುಬಿದ್ದಿವೆ. ತಮ್ಮ ಬ್ರ್ಯಾಂಡ್​ನ ಪ್ರಮೋಟ್​ ಮಾಡುವಂತೆ ಪಾಂಡ್ಯಗೆ ಕೋಟಿ, ಕೋಟಿ ಹಣ ಸುರಿಯಲು ರೆಡಿಯಾಗಿವೆ. ಖ್ಯಾತಿ ಹೆಚ್ಚಾದಂತೆ ಹಾರ್ದಿಕ್​ ಪಾಂಡ್ಯ ಗಳಿಕೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿದೆ. 2022ರಲ್ಲಿ 34.8 ಮಿಲಿಯನ್​ ಇದ್ದ ಬ್ರ್ಯಾಂಡ್​ ವ್ಯಾಲ್ಯೂ, 2023ರಲ್ಲಿ 38.4 ಮಿಲಿಯನ್​ಗೆ ಏರಿಕೆಯಾಗಿತ್ತು. ಈ ವರ್ಷ ಹಾರ್ದಿಕ್​ ಪಾಂಡ್ಯ ಕ್ರೇಜ್​ ಇನ್ನಷ್ಟು ಹೆಚ್ಚಾಗಿದೆ. 2024ರ ಅಂತ್ಯಕ್ಕೆ ಹಾರ್ದಿಕ್​ ಬ್ರ್ಯಾಂಡ್​ವ್ಯಾಲ್ಯೂ 40 ಮಿಲಿಯನ್​ನ ಗಡಿ ದಾಟೋದು ಪಕ್ಕಾ ಅನ್ನೋ ಮಾರ್ಕೆಟ್​ನ ಲೆಕ್ಕಾಚಾರವಾಗಿದೆ.

ಅದೇನೇ ಇದ್ರೂ ಹಾರ್ದಿಕ್ ಪಾಂಡ್ಯ ಸೋತ್ರೂ ಸುದ್ದಿ. ಗೆದ್ದರೂ ಸುದ್ದಿ. ಒಟ್ನಲ್ಲಿ ಕಾರ್ಪೋರೇಟಿಂಗ್ ದುನಿಯಾದಲ್ಲೂ ಹಾರ್ದಿಕ್ ಪಾಂಡ್ಯ ಇನ್ನಿಂಗ್ಸ್ ಮೇಲೆ ಇನ್ನಿಂಗ್ಸ್ ಕಟ್ತಿದ್ದಾರೆ. ಈ ಮೂಲಕ ಕಾರ್ಪೋರೆಟ್​ ದುನಿಯಾದ ಕಿಂಗ್ ಆಗಲು ಹೊರಟಿದ್ದಾರೆ.

Shwetha M

Leave a Reply

Your email address will not be published. Required fields are marked *