ಅಬ್ಬಬ್ಬಾ.. ತಾಪ್ಸಿಗೆ ಇಷ್ಟೊಂದು ಧಿಮಾಕು? – ಸೆಲ್ಫಿ ಕೇಳಲು ಬಂದವರ ಮೇಲೆ ಒರಟಾಗಿ ನಡೆದುಕೊಂಡ ನಟಿ

ಅಬ್ಬಬ್ಬಾ.. ತಾಪ್ಸಿಗೆ ಇಷ್ಟೊಂದು ಧಿಮಾಕು? – ಸೆಲ್ಫಿ ಕೇಳಲು ಬಂದವರ ಮೇಲೆ ಒರಟಾಗಿ ನಡೆದುಕೊಂಡ ನಟಿ

ಬಾಲಿವುಡ್ ನಟಿ ತಾಪ್ಸಿ ಪನ್ನು ಸದಾ ಸುದ್ದಿಯಲ್ಲಿ ಇರ್ತಾರೆ. ಏನಾದರೂ ಕಿರಿಕ್​ ಮಾಡಿಕೊಂಡು ಕೆಲವೊಮ್ಮೆ ಅವರು ಟ್ರೋಲ್​ ಆಗುತ್ತಾರೆ. ಆದ್ರೀಗ ತಾಪ್ಸಿ ಇನ್ನೊಂದು ಕಾರಣದಿಂದ ನೆಟ್ಟಿಗರ ಅಸಮಾಧಾನಕ್ಕೆ ಕಾರಣ ಆಗಿದ್ದಾರೆ. ಅಭಿಮಾನದಿಂದ ಸೆಲ್ಫಿ ಕೇಳಲು ಬಂದವರ ಮೇಲೆ ತಾಪ್ಸಿ ಒರಟಾಗಿ ನಡೆದುಕೊಂಡಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ.

ಇದನ್ನೂ ಓದಿ: DK, ಧವನ್, ಶಮಿ ಬಾಳಲ್ಲಿ ಬಿರುಗಾಳಿ! – ಡಿವೋರ್ಸ್‌ಗೆ ಇಂಥ ಕಾರಣನೇ ಬೇಕಾ?

ತಾಪ್ಸಿ ಪನ್ನು ನಟಿಸಿರುವ ಖೇಲ್​ ಖೇಲ್ ಮೇ ಸಿನಿಮಾದ ಹೊಸ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಮುಂಬೈನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಅನೇಕರನ್ನು ಆಹ್ವಾನಿಸಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಅನನ್ಯಾ ದ್ವಿವೇದಿ ಕೂಡ ಬಂದಿದ್ದರು. ಅನನ್ಯಾ ಜೊತೆ ತಾಪ್ಸಿ ಪನ್ನು ಅವರು ಧಿಮಾಕು ಪ್ರದರ್ಶಿಸಿದ್ದಾರೆ.

ಅನನ್ಯಾ ದ್ವಿವೇದಿ ಅಭಿಮಾನದಿಂದ ಬಂದು ಸೆಲ್ಫಿ ಕೇಳಿದ್ದರು. ಈ ವೇಳೆ ತಾಪ್ಸಿ ಒರಟಾಗಿ ನಡೆದುಕೊಂಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಜನರು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ. ನಟಿಯ ವರ್ತನೆ ಸರಿಯಿಲ್ಲ ಎಂದು ಅನೇಕರು ಟೀಕೆ ಮಾಡಿದ್ದಾರೆ.

Shwetha M

Leave a Reply

Your email address will not be published. Required fields are marked *