DK, ಧವನ್, ಶಮಿ ಬಾಳಲ್ಲಿ ಬಿರುಗಾಳಿ! – ಡಿವೋರ್ಸ್‌ಗೆ ಇಂಥ ಕಾರಣನೇ ಬೇಕಾ?
ವಿಚ್ಛೇದನ ಪಡೆದ ಸ್ಟಾರ್ ಕ್ರಿಕೆಟಿಗರು
ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಡಿವೋರ್ಸ್ ದೊಡ್ಡ ಮಟ್ಟದಲ್ಲೇ ಚರ್ಚೆಯಾಗಿತ್ತು. ಮೊದ್ಲು ಇದು ಗಾಳಿ ಸುದ್ದಿಯಂತೆ ಕಂಡು ಬಂದರೂ ಬಳಿಕ ನತಾಶ ಹಾಗೂ ಪಾಂಡ್ಯ ಡಿವೋರ್ಸ್ ಪಡಿತಾ ಇರೋದಾಗಿ ಅನೌನ್ಸ್ ಮಾಡಿದ್ರು.. ಕ್ರಿಕೆಟ್ ಲೋಕದಲ್ಲಿ ಪಾಂಡ್ಯ ದಂಪತಿ ಸೇರಿ ಹಲವರು ಇತ್ತೀಚೆಗೆ ವಿಚ್ಚೇದನ ಪಡ್ಕೊಂಡಿದ್ದಾರೆ. ಯಾವ್ಯಾವ ಕ್ರಿಕೆಟರ್ಸ್ ದಾಂಪತ್ಯ ಜೀವನ ಮುರಿದುಬಿದ್ದಿದೆ..
ಇದನ್ನೂ ಓದಿ: ತವರಿನಲ್ಲೇ ಮುಗ್ಗರಿಸಿದ ಲಂಕಾ – ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ, ಸರಣಿ ಕೈವಶ
ಸೆಲೆಬ್ರಿಟಿಗಳೆಂದ ಮೇಲೆ ಅವರ ವೈಯಕ್ತಿಕ ಜೀವನ ಸದಾ ಚರ್ಚೆಯಲ್ಲಿರುತ್ತೆ. ವೈಯಕ್ತಿಕ ಜೀವನದಲ್ಲಿ ಸ್ವಲ್ಪ ಏರುಪೇರಾದ್ರೂ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತೆ. ಇತ್ತೀಚೆಗಂತೂ ಸೆಲೆಬ್ರಿಟಿಗಳು ಡಿವೋರ್ಸ್ ಪಡೆಯುತ್ತಿರುವುದು ಸರ್ವೇಸಾಮಾನ್ಯ ಅನ್ನುವಂತಾಗಿ ಬಿಟ್ಟಿದೆ. ಕಳೆದ ಕೆಲವು ತಿಂಗಳಿನಿಂದ ಟೀಮ್ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಡಿವೋರ್ಸ್ ವಿಚಾರ ಹಾಟ್ ಟಾಪಿಕ್ ಆಗಿತ್ತು. ಪಾಂಡ್ಯ ಬಾಳಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ವಿಚಾರ ಪದೇ ಪದೇ ಚರ್ಚೆಯಾಗ್ತಾ ಇತ್ತು. ಬಳಿಕ ನತಾಶ ಹಾಗೂ ಪಾಂಡ್ಯ ಬೇರೆ ಬೇರೆಯಾಗುತ್ತಿದ್ದೇವೆ. 4 ವರ್ಷದ ದಾಂಪತ್ಯ ಜೀವನವನ್ನ ಕೊನೆಗೊಳಿಸುತ್ತಿದ್ದೇವೆ ಎಂದು ವಿಚ್ಚೇದನದ ಸುದ್ದಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕೋರ್ಟ್‌ನಲ್ಲಿ ವಿಚ್ಚೇದನದ ಬದಲು ಸೋಷಿಯಲ್ ಮೀಡಿಯಾದಲ್ಲೇ ಡಿವೋರ್ಸ್ ಸಿಗುವಂತಾಗಿದೆಯೇ ಎಂಬ ಪ್ರಶ್ನೆಯನ್ನೂ ಮೂಡಿಸಿದೆ..ಕ್ರಿಕೆಟ್ ಲೋಕದಲ್ಲಿ ಡಿವೋರ್ಸ್ ಪಡೆದಿರುವ ಕ್ರಿಕೆಟರ್ ಪಾಂಡ್ಯ ಮಾತ್ರ ಅಲ್ಲ. ಹಾರ್ದಿಕ್ ಗೂ ಮುನ್ನ ಕೆಲ ಸ್ಟಾರ್ ಆಟಗಾರರು ತಮ್ಮ ಸಂಗಾತಿಗಳಿಗೆ ವಿಚ್ಛೇದನ ನೀಡೋ ಮೂಲಕ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದರು.
ಸಚಿನ್ ತೆಂಡೂಲ್ಕರ್ ಆಪ್ತ ಸ್ನೇಹಿತನಾಗಿದ್ದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ತಮ್ಮ ಬಾಲ್ಯದ ಗೆಳತಿ ನೋಯೆಲ್ಲಾ ಲೂಯಿಸ್ ಎಂಬವರನ್ನು 1998ರಲ್ಲಿ ಮದುವೆ ಆಗಿದ್ರು. ಆದರೆ, ಕೆಲವೇ ವರ್ಷಗಳಲ್ಲಿ ಪತ್ನಿಯಿಂದ ನಿಂದನೆಯ ಆರೋಪಕ್ಕೆ ಗುರಿಯಾದ್ರು.. ದಿನದಿಂದ ದಿನಕ್ಕೆ ಅವರಿಬ್ಬರ ಮಧ್ಯೆ ಮನಸ್ತಾಪ ಹೆಚ್ಚಾಗ್ತಾ ಹೋಯ್ತು.. ಹೀಗಾಗಿ ವಿನೋಸ್ ಕಾಂಬ್ಳಿ ಹಾಗೂ ನೋಯೆಲ್ಲಾ ಡಿವೋರ್ಸ್ ಪಡ್ಕೊಂಡ್ರು..
ಇನ್ನು ಟೀಮ್ ಇಂಡಿಯಾದ ಮತ್ತೊಬ್ಬ ಆಟಗಾರ ದಿನೇಶ್ ಕಾರ್ತಿಕ್ ಕೂಡ ಮೊದಲ ಪತ್ನಿಯಿಂದ ಬೇರ್ಪಟ್ಟಿದ್ದಾರೆ. ಹೌದು, ದಿನೇಶ್ ಕಾರ್ತಿಕ್ ತನ್ನ ಬಾಲ್ಯದ ಗೆಳತಿ ನಿಕಿತಾ ವಂಜಾರಾ ಅವರನ್ನು 2007ರಲ್ಲಿ ಮದ್ವೆಯಾದ್ರು.. 5 ವರ್ಷಗಳ ನಂತರ ಇವರಿಬ್ಬರ ದಾಂಪತ್ಯ ಜೀವನ ಮುರಿದು ಬಿತ್ತು. ಕ್ರಿಕೆಟಿಗ ಮುರಳಿ ವಿಜಯ್, ಕಾರ್ತಿಕ್ ಅವರ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದರು. ವಿಷಯ ತಿಳಿದ ಡಿಕೆ, ನಿಕಿತಾಗೆ ವಿಚ್ಛೇದನ ನೀಡಿದ್ದರು. ಬಳಿಕ ಡಿಕೆ, 2015ರಲ್ಲಿ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ಪ್ರೀತಿಸಿ ಮದ್ವೆಯಾದ್ರು.. ಈಗ ಡಿಕೆ ಮುದ್ದಿನ ಪತ್ನಿ ಹಾಗೂ ಮಕ್ಕಳೊಂದಿಗೆ ಸುಖವಾಗಿ ಬಾಳ್ತಾ ಇದ್ದಾರೆ..
ಟೀಂ ಇಂಡಿಯಾದ ಗಬ್ಬರ್ ಎಂದೇ ಖ್ಯಾತಿ ಪಡೆದ ಕ್ರಿಕೆಟರ್ ಶಿಖರ್ ಧವನ್ ಕೂಡ ವಿಚ್ಛೇದನ ಪಡೆದಿದ್ದಾರೆ. ತನಗಿಂತ 10 ವರ್ಷ ದೊಡ್ಡವರಾದ ಆಯೇಷಾ ಮುಖರ್ಜಿ ಅವರನ್ನು ಪ್ರೀತಿಸಿ 2012ರಲ್ಲಿ ಮದ್ವೆಯಾಗಿದ್ರು.. ಆದರೆ , 11 ವರ್ಷಗಳ ದಾಂಪತ್ಯ ಜೀವನ ನಡೆಸಿದ ಈ ಜೋಡಿ 2023ರಲ್ಲಿ ಪ್ರತ್ಯೇಕಗೊಂಡರು.
ಇನ್ನು, ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ 2014ರಲ್ಲಿ ಹಸಿನ್ ಜಾನ್ ರನ್ನು ಮದ್ವೆಯಾಗಿದ್ರು.. ಆದರೆ 4 ವರ್ಷಗಳ ನಂತರ ಹಸಿನ್ ವಿಚ್ಛೇದನ ನೀಡಿದರು. ಹಸಿನ್ ಅವರು ಶಮಿ ವಿರುದ್ಧ ಅಕ್ರಮ ಸಂಬಂಧ ಹಾಗೂ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ. ಈ ಪ್ರಕರಣ ಇನ್ನೂ ಕೋರ್ಟ್ ನಲ್ಲಿದೆ.
ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಇಬ್ಬರನ್ನು ಮದುವೆಯಾಗಿ, ಇಬ್ಬರಿಗೂ ವಿಚ್ಛೇದನ ನೀಡಿದ್ದಾರೆ. 1996ರಲ್ಲಿ ತಮ್ಮ ಮೊದಲ ಪತ್ನಿ ನೌರೀನ್ ಗೆ ವಿಚ್ಛೇದನ ನೀಡಿದರು. ನಂತರ ಬಾಲಿವುಡ್ ನಟಿ ಸಂಗೀತಾ ಬಿಜ್ಲಾನಿ ಅವರನ್ನು ವಿವಾಹವಾದರು. ಕೆಲವೇ ವರ್ಷಗಳಲ್ಲಿ ಅವರಿಂದಲೂ ದೂರವಾದರು.
ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರೆಟ್ ಲೀ ಅವ್ರು ಎಲಿಜಬೆತ್ ಕ್ಯಾಂಪ್ ಅವರನ್ನ ಮದ್ವೆ ಆದ್ರು.. ಆದ್ರೆ ಮದುವೆಯಾದ ಒಂದು ವರ್ಷಕ್ಕೆ ಸಂಬಂಧ ಮುರಿದುಬಿತ್ತು.
ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರು ಸುಮುಧು ಕರುಣನಾಯಕೆ ಅವರನ್ನ ಮದ್ವೆ ಆಗಿದ್ರು.. ಅವರಿಬ್ಬರ ಮಧ್ಯೆ ಹೊಂದಾಣಿಕೆ ಇಲ್ಲದ ಕಾರಣ ಪರಸ್ಪರ ವಿಚ್ಛೇದನ ಪಡ್ಕೊಂಡ್ರು.. ಬಳಿಕ ಜಯಸೂರ್ಯ ಸಾಂಡ್ರಾ ಜೊತೆ ಎರಡನೇ ಮದ್ವೆ ಆದ್ರೂ.. ಆದ್ರೆ ಈ ಸಂಬಂಧ ಕೂಡ ಹೆಚ್ಚು ಕಾಲ ಉಳಿಲಿಲ್ಲ.. ಜಯಸೂರ್ಯ ಎರಡನೆ ಪತ್ನಿ ಸಾಂಡ್ರಾ ಅವರಿಂದ ವಿಚ್ಛೇದನ ಪಡೆದಿದ್ದಾರೆ.
ಇನ್ನು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ ಬಗ್ಗೆ ನಿಮ್ಗೆಲ್ಲಾ ಗೊತ್ತೇ ಇದೆ. ಶೋಯೆಬ್ ಆಯೇಷಾ ಸಿದ್ಧಿಕಿ ಅವರನ್ನ ಮದ್ವೆ ಆದ್ರು.. ಬಳಿಕ ಆಕೆಗೆ ವಿಚ್ಚೇಧನ ನೀಡಿದ್ರು.. ಬಳಿಕ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನ ಮದ್ವೆ ಆದ್ರು.. ಬಳಿಕ ಸಾನಿಯಾಳಿಂದಲೂ ಡಿವೋರ್ಸ್ ಪಡೆದಿದ್ದಾರೆ. ಇತ್ತೀಚೆಗೆ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ರನ್ನು ವಿವಾಹವಾಗಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅವರು ತಮ್ಮ ಪತ್ನಿ ಕೈಲಿ ಅವರನ್ನು ಮದುವೆಯಾಗಿದ್ರು.. ಆದ್ರೆ ಈ ದಂಪತಿ ಕೂಡ ವಿಚ್ಛೇದನ ಪಡೆದು 8 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.
ಶ್ರೀಲಂಕಾದ ಮಾಜಿ ಆರಂಭಿಕ ಆಟಗಾರ ದಿಲ್ಶನ್ ಅವರು ನೀಲಂಕಾ ಅವರನ್ನ ಮದ್ವೆಯಾಗಿದ್ರು.. ಆದ್ರೆ 2008ರಲ್ಲಿ ಪತ್ನಿ ನೀಲಂಕಾ ಅವರಿಂದ ಬೇರ್ಪಟ್ಟರು.
ಇನ್ನು ಭಾರತದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಜ್ಯೋತ್ಸ್ನಾ ಜೊತೆ ಮದ್ವೆಯಾಗಿದ್ರು.. ಕೆಲಕಾಲ ಒಟ್ಟಿಗೆ ಜೀವನ ನಡೆದ ಈ ಜೋಡಿ ಬಳಿಕ ಡಿವೋರ್ಸ್ ಪಡ್ಕೊಂಡ್ರು.. 2008ರಲ್ಲಿ ಪತ್ರಕರ್ತೆ ಮಾಧವಿ ಪತ್ರಾವಳಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹೀಗೆ ಕ್ರಿಕೆಟರ್ಸ್ ನಾನಾ ಕಾರಣಗಳಿಂದಾಗಿ ತಮ್ಮ ಪತ್ನಿಗೆ ಡಿವೋರ್ಸ್ ನೀಡಿದ್ದಾರೆ.