ಪವಿತ್ರ ಕತೆ ಅಷ್ಟೇ!! – ಜೈಲಲ್ಲಿ ಹಿಂಗೇಕಾಯ್ತ?
ದರ್ಶನ್ ಮಾಡಿದ್ದು ಸರೀನಾ?

ತಾನು ಇಷ್ಟ ಪಡ್ತಿದ್ದ ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿಯನ್ನು ಓಲೈಸಬೇಕು ಎನ್ನುವ ಒಂದೇ ಒಂದು ಕಾರಣಕ್ಕೆ ದರ್ಶನ್ ಅಂತದ್ದೊಂದು ಕೃತ್ಯ ಎಸಗಿದ್ದರಲ್ಲಿ ಯಾವುದೇ ಅನುಮಾನವಿಲ್ಲ.. ಬಡವರ ಬಗ್ಗೆ ಕಾಳಜಿ.. ಅಭಿಮಾನಿಗಳ ಪಾಲಿಗೆ ಪ್ರೀತಿ.. ಕಷ್ಟದಲ್ಲಿರುವವರಿಗೆ ಸ್ಪಂದನೆ.. ಇವೆಲ್ಲವನ್ನೂ ದರ್ಶನ್ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬಂದಿದ್ದರು.. ಆದ್ರೆ ಅದೊಂದು ದೌರ್ಬಲ್ಯವೇ ದರ್ಶನ್ ಪಾಲಿನ ದೌರ್ಭಾಗ್ಯವಾಗಿದೆ.. ಅದೊಂದು ದೌರ್ಬಲ್ಯದಿಂದಲೇ ದರ್ಶನ್ ಎರಡೆರಡು ಬಾರಿ ಜೈಲು ಸೇರುವಂತಾಗಿದೆ.. ಈಗ ಆಗಿರೋ ಕೇಸ್‌ನಿಂದಾಗಿ ಶಾಶ್ವತವಾಗಿ ಪವಿತ್ರಗೌಡಳ ಜೊತೆಗಿನ ಅಪವಿತ್ರ ಸಂಬಂಧಕ್ಕೆ ಗುಡ್ ಬೈ ಹೇಳಲು ದರ್ಶನ್ ನಿರ್ಧರಿಸಿದ್ದಾರಂತೆ.. ಅದನ್ನು ಖುದ್ದು ಪತ್ನಿಯ ಎದುರೇ ಹೇಳಿ ಕಣ್ಣೀರಿಟ್ಟಿದ್ದಾರೆ ದರ್ಶನ್.. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: RCB, LSG, MI ಕ್ಯಾಪ್ಟನ್ಸ್ ಚೇಂಜ್ – 6 ತಂಡಗಳಿಗೆ ಹೊಸ ಸಾರಥಿಗಳು?
ದರ್ಶನ್ ಆಗಲೂ ಈಗಲೂ ಅವರ ಅಭಿಮಾನಿಗಳ ಪಾಲಿಗೆ ಡಿ ಬಾಸ್.. ದರ್ಶನ್ ಮಾಡಿರೋದು ತಪ್ಪೇ ಆಗಿದ್ದರೂ ಅವರ ಅಭಿಮಾನಿಗಳು ತಮ್ಮ ಆರಾಧ್ಯ ದೈವ ಮಾಡಿದ್ದೆಲ್ಲಾ ಸರಿ ಅಂತಿದ್ದಾರೆ.. ಇದಕ್ಕೆ ಮುಖ್ಯ ಕಾರಣ, ಅವರ ಅಭಿಮಾನಿಗಳ ಕಡೆಗೆ ದರ್ಶನ್ ತೋರುತ್ತಾ ಬಂದಿದ್ದ ಪ್ರೀತಿ.. ತಾನು ದೊಡ್ಡ ಸೆಲೆಬ್ರಿಟಿ ಆಗಿದ್ದರೂ,, ಹೋದಲ್ಲೆಲ್ಲಾ ಜನ ಮುತ್ತಿಕೊಳ್ತಾ ಇದ್ರೂ.. ದರ್ಶನ್ ತನ್ನ ಅಭಿಮಾನಿಗಳ ಮನಸ್ಸನ್ನು ಎಂದೂ ನೋಯಿಸಿದವರಲ್ಲ.. ಅಭಿಮಾನಿಗಳನ್ನು ಕೇವಲ ತನ್ನ ಸೆಲೆಬ್ರಿಟಿಗಳು ಅಂತ ಕರೆದಿದ್ದು ಮಾತ್ರವಲ್ಲ.. ಕಷ್ಟ ಎಂದು ಬಂದ ಅಭಿಮಾನಿಗಳಿಗೆ ಸಹಾಯ ಮಾಡಿದ್ದಾರೆ.. ವಿಕಲ ಚೇತನರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ.. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬಂತೆ, ದರ್ಶನ್ ತನ್ನ ಅಭಿಮಾನಿಗಳನ್ನು ನೋಡಿಕೊಂಡಿದ್ದಾರೆ.. ಇದೇ ಕಾರಣದಿಂದಲೇ, ರಾಜ್ಯದ ಉದ್ದಗಲಕ್ಕೂ ಲಕ್ಷಾಂತರ ಅಭಿಮಾನಿಗಳ ಬಳಗವನ್ನೇ ದರ್ಶನ್ ಕಟ್ಟಿಕೊಂಡಿದ್ದಾರೆ..
ದರ್ಶನ್ ಇದುವರೆಗೆ ಮಾಡಿದ್ದೆಲ್ಲವನ್ನೂ ಖುಷಿ ಖುಷಿಯಿಂದಲೇ ಒಪ್ಪಿಕೊಂಡಿರುವ ಅಭಿಮಾನಿಗಳು ಈ ಬಾರಿ ದರ್ಶನ್ ಮಾಡಿದ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಹೋಗಿ, ಟೀಕೆಗೂ ಗುರಿಯಾಗಿದ್ದಾರೆ.. ಆದ್ರೆ ಅದಕ್ಕೆಲ್ಲಾ ಅವರು ತಲೆಕೆಡಿಸಿಕೊಂಡಿಲ್ಲ.. ಹೋದಲ್ಲಿ ಬಂದಲ್ಲಿ ಡಿ ಬಾಸ್‌ಗೆ ಒಳ್ಳೇದಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.. ಆದ್ರೆ ದರ್ಶನ್‌ಗೆ ಒಳ್ಳೇದಾಗೋದು ಅಷ್ಟು ಸುಲಭವಿಲ್ಲ.. ಯಾಕಂದ್ರೆ ದರ್ಶನ್ ಗೆ ಯಾವುದೋ ಪವಾಡದ ಮೂಲಕ ಹೊರಗೆ ಬರೋದಿಕ್ಕೆ ಆಗೋದಿಲ್ಲ.. ಈಗ ಸಿಲುಕಿರೋದು ಕಾನೂನಿನ ಕುಣಿಕೆಯಲ್ಲಿ.. ಅದು ಬಿಡಿಸಿಕೊಳ್ಳಲು ಒದ್ದಾಡಿದಷ್ಟೂ ಬಿಗಿಯಾಗುತ್ತಾ ಹೋಗುವ ಕುಣಿಕೆ.. ಹೀಗಾಗಿ ಈಗೇನಿದ್ದರೂ ಜೈಲಿನಲ್ಲಿ ಕುಳಿತು, ಸಮಯಕ್ಕಾಗಿ ಕಾಯಬೇಕಾದ ಅನಿವಾರ್ಯತೆಯಿದೆ.. ಹೊರಗಿದ್ದಾಗ, ಬೇಕೆನಿಸಿದಾಗ, ಬೇಕಾದ್ದನ್ನು ತಿನ್ನುವ ಅವಕಾಶವಿತ್ತು. ಆದ್ರೀಗ ಮನೆಯೂಟ ಕೇಳಿದ್ರೂ ಕೋರ್ಟ್‌ನವರು ಬಿಡುತ್ತಿಲ್ಲ..
ಇಷ್ಟೆಲ್ಲಾ ಆಗಿದ್ದು ಅವಳಿಗಾಗಿ.. ಅವಳಿಂದಾಗಿ.. ಅವಳಿಗೋಸ್ಕರ ಅನ್ನೋದರಲ್ಲಿ ಎರಡು ಮಾತೇ ಇಲ್ಲ.. ಒಂದು ಅಪವಿತ್ರ ಸಂಬಂಧ ಉಳಿಸಿಕೊಳ್ಳಲು.. ಪವಿತ್ರಾ ಗೌಡಳನ್ನು ಮೆಚ್ಚಿಸಲೆಂದೇ ನಡೆದ ಕೃತ್ಯವಿದು.. ಹೃದಯದಿಂದ ಯೋಚಿಸುವ ಬದಲು ಒಂದು ನಿಮಿಷ ತಲೆಯಿಂದ ಯೋಚಿಸುತ್ತಿದ್ದರೂ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ.. ಒಂದೇ ಒಂದು ಫೋನ್ ಕಾಲ್ ಚಿತ್ರದುರ್ಗದ ಶಾಸಕನಿಗೋ.. ಅಲ್ಲಿಯ ಎಸ್‌ಪಿಗೋ ಮಾಡಿದ್ದರೂ ಸಾಕಿತ್ತು.. ರೇಣುಕಾಸ್ವಾಮಿ ನಿಜಕ್ಕೂ ಕೆಟ್ಟ ಮೆಸೇಜ್‌ಗಳನ್ನು ಪವಿತ್ರಾ ಗೌಡಗೆ ಕಳಿಸುತ್ತಿದ್ದ ಅಂತಿದ್ದರೆ, ಅವರೇ ಮುಂದಿನ ಕ್ರಮಗಳನ್ನು ಕಾನೂನು ಪ್ರಕಾರ ಕೈಗೊಳ್ತಾ ಇದ್ರು.. ಆದ್ರೆ ಉಗುರಲ್ಲಿ ಹೋಗೋದಕ್ಕೆ ಕೊಡಲಿ ಎತ್ತುವಂತೆ ಮಾಡಿದ್ದು ಆ ಪವಿತ್ರಗೌಡಳ ಪ್ರೀತಿ.. ಅದನ್ನು ಉಳಿಸಿಕೊಳ್ಳಬೇಕು.. ಅವಳನ್ನು ಮೆಚ್ಚಿಸಬೇಕು.. ಎಂಬ ಒಂದೇ ಒಂದು ಮನೋಭಾವ, ದರ್ಶನ್ ಅವರನ್ನು ಈ ಸ್ಥಿತಿಗೆ ತಳ್ಳಿದೆ.. ಸಿನಿಮಾದಲ್ಲಿ ಡೈರೆಕ್ಟರ್ ಹೇಗೆ ಹೇಳ್ತಾರೋ.. ಹಾಗೆಯೇ ಸ್ಕ್ರೀನ್ ಪ್ಲೇ ಆಗುತ್ತೆ.. ಆದ್ರೆ ರಿಯಲ್ ಲೈಫ್‌ನಲ್ಲಿ ಸ್ಕ್ರೀನ್ ಪ್ಲೇ ಇರೋದಿಲ್ಲ.. ಇಲ್ಲಿ ನಡೆದ ಘಟನೆಯನ್ನು ಅಳಿಸಿ ಹಾಕಲು ಸಾಧ್ಯವಿಲ್ಲ.. ಅದೇ ಈಗ ದರ್ಶನ್ ಪಾಲಿಗೆ ಆಗಿರೋದು.. ದರ್ಶನ್ ತಲೆಯ ಬದಲು ಹೃದಯದಿಂದ ಯೋಚಿಸಿದ ಕಾರಣದಿಂದಲೇ ಕಂಬಿ ಎಣಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ತು.. ಆದ್ರೆ ಈಗ ಹೃದಯಕ್ಕಿಂತ ಜಾಸ್ತಿ ದರ್ಶನ್ ಅವರ ತಲೆ ಯೋಚನೆ ಮಾಡ್ತಿದೆಯಂತೆ..
ಹೀಗೆ ದರ್ಶನ್ ತಲೆಯಿಂದ ಯೋಚಿಸಲು ಶುರು ಮಾಡಿದ್ಮೇಲೆ ಜೈಲಿನಲ್ಲೂ ದೊಡ್ಡ ಬದಲಾವಣೆಯಾಗಿದೆ.. ಇದೇ ಕಾರಣದಿಂದ ಪವಿತ್ರ ಗೌಡ, ಜೈಲು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವಂತಾಗಿದೆ.. ಇಷ್ಟಕ್ಕೂ ಜೈಲಿನಲ್ಲಿ ಆಗ್ತಿರೋದೇನು ಗೊತ್ತಾ? ದರ್ಶನ್ ಕಳೆದ ಒಂದು ತಿಂಗಳಿನಿಂದ ಜೈಲಿನಲ್ಲಿದ್ದರೂ ಒಂದೇ ಒಂದು ಬಾರಿಯೂ ಪವಿತ್ರ ಗೌಡ ಬಗ್ಗೆ ಕೇಳಿಲ್ಲ.. ಆಕೆಯ ಯೋಗಕ್ಷೇಮ ವಿಚಾರಿಸಿಲ್ಲ.. ಅಷ್ಟೇ ಏಕೆ ಮುಖಾಮುಖಿ ಆದಾಗ್ಲೂ ಕಣ್ಣೆತ್ತಿಯೂ ಪವಿತ್ರಾ ಗೌಡಳನ್ನು ನೋಡಿಲ್ಲ.. ಒಂದು ನಗುವಿಲ್ಲ.. ಒಂದು ಸಾಂತ್ವನದ ಮಾತಿಲ್ಲ.. ಯಾವುದೋ ಕೆಟ್ಟ ಗಳಿಕೆಯಲ್ಲಿ ಹೃದಯಕ್ಕೆ ಲಗ್ಗೆ ಇಟ್ಟವಳನ್ನು ಈಗ ಸಂಪೂರ್ಣ ದೂರವಿಟ್ಟಿದ್ದಾರೆ ದರ್ಶನ್.. ಎರಡು ಬಾರಿ ದರ್ಶನ್ ಹಾಗೂ ಪವಿತ್ರಾ ಗೌಡ, ಇತರೆ ಆರೋಪಿಗಳ ಜೊತೆಗೆ ಜೈಲಿನ ಕೋಣೆಯಲ್ಲಿ ಭೇಟಿಯಾಗಿದ್ದರು.. ಅದು ಕೋರ್ಟ್‌ಗೆ ಇವರೆನ್ನೆಲ್ಲಾ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸುವ ಪ್ರಕ್ರಿಯೆಯ ವೇಳೆ.. ಆದ್ರೆ ಆ ಕೋಣೆಯಲ್ಲಿದ್ದಾಗ ದರ್ಶನ್ ಯಾವುದೇ ಕಾರಣಕ್ಕೂ ಪವಿತ್ರಾ ಗೌಡಳ ಕಡೆಗೆ ಕಣ್ಣೆತ್ತಿಯೋ ನೋಡಿಲ್ಲ.. ಪವಿತ್ರಾ ಗೌಡ, ದರ್ಶನ್ ಅವರ ಒಂದೇ ಒಂದು ನೋಟಕ್ಕಾಗಿ ಕಾದರೂ ಅದು ಫಲ ಕೊಟ್ಟಿಲ್ಲ.. ಇದರಿಂದಾಗಿಯೇ ಪವಿತ್ರಾ ಗೌಡ ಕುಸಿದು ಹೋಗಿದ್ದಾಳೆ.. ತಿಂದ ಅನ್ನವೂ ಮೈಗೆ ಸೇರುತ್ತಿಲ್ಲ.. ಮಾನಸಿಕ ಆಘಾತದಿಂದಾಗಿಯೇ ನಿತ್ರಾಣಕ್ಕೆ ಒಳಗಾಗಿದ್ದಾಳೆ.. ಇದ್ರಿಂದಾಗಿಯೇ ಜೈಲಿನ ಆಸ್ಪತ್ರೆಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆದಿದ್ದಾಳೆ.. ಇದುವರೆಗೆ ಈ ಪವಿತ್ರಾ ಗೌಡಳ ಪಾಲಿಗೆ ದರ್ಶನ್ ಒಂದು ರೀತಿಯಲ್ಲಿ ಎಟಿಎಂ ಆಗಿದ್ರು.. ದರ್ಶನ್ ತನ್ನ ಪತ್ನಿಗೆ ಏನನ್ನೇ ಕೊಡಿಸಿದ್ರೂ ಈ ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ, ಕಾಡಿ ಬೇಡಿ ಅದೆಲ್ಲವನ್ನೂ ತನಗೂ ಕೊಡಿಸುವಂತೆ ಮಾಡುತ್ತಿದ್ದಳು.. ಅದಕ್ಕಾಗಿ ದರ್ಶನ್ ಜೊತೆ ಹಟ ಮಾಡ್ತಿದ್ದಳಂತೆ.. ಇಷ್ಟೆಲ್ಲಾ ಮಾಡ್ತಿದ್ದ ಪವಿತ್ರಾ ಗೌಡಗೆ ಈಗ ದರ್ಶನ್ ತನ್ನನ್ನು ಕ್ಯಾರೇ ಅನ್ನದಿದ್ರೆ ಗತಿಯೇನು ಎಂಬ ಚಿಂತೆ ಶುರುವಾಗಿದೆ.. ಜೈಲಿಂದ ಆಕಸ್ಮಾತ್ತಾಗಿ ಬಿಡುಗಡೆಯಾಗಿ ಹೊರಗೆ ಬಂದ್ರೂ ದರ್ಶನ್ ಇಲ್ಲದಿದ್ರೆ ತನ್ನ ಪಾಡೇನು ಎಂದು ಯೋಚಿಸಿಯೇ ಆಕೆಯ ತಲೆ ಕೆಟ್ಟು ಹೋದಂತಿದೆ..
ಇಷ್ಟಕ್ಕೂ ಈ ಪವಿತ್ರಾ ಗೌಡ, ತನ್ನ ಹಾಗೂ ದರ್ಶನ್ ಸಂಬಂಧಕ್ಕೊಂದು ಅಧಿಕೃತ ಪಟ್ಟ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದರು.. ಈ ವರ್ಷದ ಆರಂಭದಲ್ಲಿ ನಮ್ಮಿಬ್ಬರ ಸಂಬಂಧಕ್ಕೆ ಹತ್ತು ವರ್ಷ ಎಂದು ಇನ್‌ಸ್ಟಾ ಗ್ರಾಂನಲ್ಲಿ ಪೋಸ್ಟ್ ಹಾಕಿ, ಮೆರೆದಿದ್ದಳು. ಈಕೆಯ ಅಹಂಕಾರವನ್ನು ಒಂದೇ ಒಂದು ಪೋಸ್ಟ್ ಮೂಲಕ ವಿಜಯಲಕ್ಷ್ಮಿ ಇಳಿಸಿದ್ದರು.. ಬೇರೆಯವರ ಗಂಡನ ಜೊತೆ ಫೋಟೋ ಹಾಕ್ಕೊಳ್ಳೋರಿಗೆ ಏನು ಹೇಳ್ಬೇಕು ಎಂದು ಪ್ರಶ್ನಿಸುವ ಮೂಲಕ ಪವಿತ್ರಾ ಗೌಡಳ ಸ್ಥಾನ ಏನು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದರು.. ಆದ್ರೆ ಪವಿತ್ರಾ ಗೌಡ ಮಾತ್ರ, ತನ್ನ ಚಾಳಿ ಬಿಟ್ಟಿರಲಿಲ್ಲ.. ಇದ್ರಿಂದಾಗಿಯೇ ರೇಣುಕಾಸ್ವಾಮಿ ಪ್ರಕರಣ ಇಲ್ಲಿವರೆಗೆ ಬಂದು ನಿಂತಿದೆ.. ದೊಡ್ಡ ದೊಡ್ಡ ಸಾಮ್ರಾಜ್ಯಗಳ ಪತನ ಕೂಡ ಹೆಣ್ಣು ಹೊನ್ನು ಮಣ್ಣಿಗಾಗಿ ಎಂಬ ಮಾತಿದೆ.. ದರ್ಶನ್ ವಿಚಾರದಲ್ಲೂ ಆ ಹೆಣ್ಣೇ ಪತನಕ್ಕೆ ಕಾರಣವಾಗಿದೆ.. ಈಗ್ಲಾದ್ರೂ ಆ ಹೆಣ್ಣಿಂದ ದೂರವಾಗ್ತಾರಾ? ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸೋದು ಅನಿವಾರ್ಯ.. ಆದ್ರೆ ಅದಕ್ಕಿಂತ ಮುಖ್ಯವಾಗಿರೋದು ತನ್ನ ತಪ್ಪುಗಳಿಂದ ಪಾಠ ಕಲಿಯೋದು.. ಈ ವಿಚಾರದಲ್ಲಿ ದರ್ಶನ್ ಮುಂದೆ ಹೇಗೆ ಬದಲಾಗ್ತಾರೆ ಎಂಬುದನ್ನು ಕೇವಲ ಅವರ ಅಭಿಮಾನಿಗಳಷ್ಟೇ ಅಲ್ಲ. ಕನ್ನಡಿಗರೆಲ್ಲರೂ ಕುತೂಹಲದಿಂದ ನೋಡ್ತಿದ್ದಾರೆ..