RCB, LSG, MI ಕ್ಯಾಪ್ಟನ್ಸ್ ಚೇಂಜ್ – 6 ತಂಡಗಳಿಗೆ ಹೊಸ ಸಾರಥಿಗಳು?
ರೋಹಿತ್ & ರಾಹುಲ್ ಯಾವ ಟೀಂ?
ಐಪಿಎಲ್ ಸೀಸನ್ 17 ಮುಗಿದು 2 ತಿಂಗಳಷ್ಟೇ ಆಗಿದೆ. ಬಟ್ 2025 ರ ಟೂರ್ನಿಗೆ ಈಗಿನಿಂದಲೇ ಪ್ರಿಪರೇಷನ್ ಶುರುವಾಗಿದೆ. ಅದ್ರಲ್ಲೂ ಕೆಲ ಫ್ರಾಂಚೈಸಿಗಳು ಈಗಾಗ್ಲೇ ಕೋಚ್, ಮೆಂಟರ್ ಸೇರಿದಂತೆ ಕೆಲವರಿಗೆ ಕೊಕ್ ಕೊಟ್ಟು ಹೊಸಬರನ್ನ ನೇಮಕ ಮಾಡಿಕೊಳ್ತಿವೆ. ಬಟ್ ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಸೀಸನ್ 18 ಐಪಿಎಲ್ಗೆ ಒಂದಷ್ಟು ಟೀಮ್ಗಳಲ್ಲಿ ಕ್ಯಾಪ್ಟನ್ನೇ ಬದಲಾವಣೆ ಆಗಲಿದೆ. ಅದ್ರಲ್ಲಿ ನಮ್ಮ ಆರ್ಸಿಬಿ ಟೀಮ್ ಕೂಡ ಒಂದು. ಹಾಗಾದ್ರೆ ಯಾವೆಲ್ಲಾ ಟೀಮ್ಗಳಿಗೆ ಹೊಸ ಸಾರಥಿಗಳ ನೇಮಕ ಆಗುತ್ತೆ..? ಯಾರೆಲ್ಲಾ ರೇಸ್ನಲ್ಲಿದ್ದಾರೆ? ಯಾವ ಕಾರಣಕ್ಕಾಗಿ ಈ ಬದಲಾವಣೆ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಐಶ್ ಗೆ ಅಭಿ ಕಾರು ಗಿಫ್ಟ್ - ಡಿವೋರ್ಸ್ ವದಂತಿಗೆ ಬಚ್ಚನ್ ಫ್ಯಾಮಿಲಿ ಬ್ರೇಕ್
ಪ್ರತೀ ವರ್ಷ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಅದ್ರಂತೆ ಈ ವರ್ಷಾಂತ್ಯದಲ್ಲಿ ಅಂದ್ರೆ ಡಿಸೆಂಬರ್ನಲ್ಲಿ ಆಕ್ಷನ್ ನಡೆಯಲಿದ್ದು, ಆ ಬಳಿಕ ಹಲವು ತಂಡಗಳಲ್ಲಿ ಸಾಕಷ್ಟು ಚೇಂಜಸ್ ಆಗುತ್ತೆ. ಒಂದಷ್ಟು ಆಟಗಾರರು ರಿಶಫಲ್ ಆಗ್ತಾರೆ. ಬಟ್ ಈಗಿರೋ ಬ್ರೇಕಿಂಗ್ ನ್ಯೂಸ್ ಅಂದ್ರೆ 6 ತಂಡಗಳ ನಾಯಕರು ಬದಲಾಗುವ ಸಾಧ್ಯತೆಗಳು ಜಾಸ್ತಿಯಾಗಿದೆ. ಇರೋ 10 ಟೀಮ್ಗಳಲ್ಲಿ 6 ಕ್ಯಾಪ್ಟನ್ಸ್ ಚೇಂಜ್ ಆಗೋ ಎಲ್ಲಾ ಚಾನ್ಸಸ್ ಇದೆ. ಅದಕ್ಕೂ ಕಾರಣನೂ ಇದೆ. ಯಾವೆಲ್ಲಾ ಟೀಮ್ ಮತ್ತು ಯಾಕೆ ಅನ್ನೋದನ್ನ ಒಂದೊಂದಾಗೇ ಹೇಳ್ತೇನೆ ನೋಡಿ.
RCBಯಿಂದ ಫಾಫ್ ಔಟ್.. ಯಾರಿಗೆ ಕ್ಯಾಪ್ಟನ್ಸಿ?
ಯೆಸ್. ಐಪಿಎಲ್ ಫ್ರಾಂಚೈಸಿಗಳ ಪೈಕಿ ಮೋಸ್ಟ್ ಪಾಪ್ಯುಲರ್ ಟೀಂ ಅಂದ್ರೆ ಅದು ಆರ್ಸಿಬಿ. ಇದು ನಿಮ್ಗೆಲ್ಲಾ ಗೊತ್ತಿರೋ ವಿಚಾರನೇ. ಸತತ 17 ವರ್ಷಗಳಿಂದ ಒಂದೂ ಸಲವೂ ಕಪ್ ಗೆದ್ದಿಲ್ಲ ಅಂದ್ರೂ ಈ ತಂಡಕ್ಕಿರೋ ಫ್ಯಾನ್ಬೇಸ್ನ ಯಾರೂ ಬೀಟ್ ಮಾಡೋಕೆ ಚಾನ್ಸೇ ಇಲ್ಲ. ಇದೀಗ 2025ರ ಟೂರ್ನಿಗೆ ಒಂದಷ್ಟು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಹಾಲಿ ನಾಯಕ ಫಾಫ್ ಡು ಪ್ಲೆಸಿಸ್ ಈಗಾಗ್ಲೇ ಆಟಗಾರನಾಗಿ ಮತ್ತು ನಾಯಕನಾಗಿ ಫ್ರಾಂಚೈಸಿಗೆ ಸಾಕಷ್ಟು ಉತ್ತಮ ಕೆಲಸಗಳನ್ನ ಮಾಡಿದ್ದಾರೆ. 2024ರ ಟೂರ್ನಿಯಲ್ಲೂ ಸೆಕೆಂಡ್ ಆಫ್ನಲ್ಲಿ ಥೂಫಾನ್ನಂತೆ ಕಮ್ ಬ್ಯಾಕ್ ಮಾಡಿದ್ರು. ಬಟ್ ಬ್ಯಾಡ್ಲಕ್ ಇವ್ರ ನಾಯಕತ್ವದಲ್ಲೂ ಟ್ರೋಫಿ ಗೆಲ್ಲಲು ತಂಡಕ್ಕೆ ಸಾಧ್ಯವಾಗಿಲ್ಲ. ಅಲ್ದೇ ಮುಂದಿನ ವರ್ಷದ ಐಪಿಎಲ್ ವೇಳೆಗೆ ಫಾಫ್ಗೆ 40 ವರ್ಷ ವಯಸ್ಸಾಗಲಿದೆ. ನೆಕ್ಸ್ಟ್ ಇಯರ್ ಟೂರ್ನಿಗೆ ವಿದಾಯ ಹೇಳೋ ಸಾಧ್ಯತೆ ಹೆಚ್ಚಾಗಿರೋದ್ರಿಂದ ಆರ್ಸಿಬಿ ಮೆಗಾ ಹರಾಜಿನಲ್ಲಿ ಹೊಸ ನಾಯಕನನ್ನು ಹುಡುಕಬಹುದು. ಬಟ್ ಆರ್ಸಿಬಿ ಫ್ಯಾನ್ಸ್ ಅಂತೂ ಸದ್ಯ ಕನ್ನಡಿಗ ಕೆ.ಎಲ್ ರಾಹುಲ್ ಅಥವಾ ರೋಹಿತ್ ಶರ್ಮಾರನ್ನ ತಂಡಕ್ಕೆ ಕರೆತಂಡು ಕ್ಯಾಪ್ಟನ್ಸಿ ನೀಡಿ ಅಂತಾ ಫ್ರಾಂಚೈಸಿಗೆ ಮನವಿ ಮಾಡ್ತಿದ್ದಾರೆ.
LSG ತಂಡದಿಂದ ಹೊರ ಬರ್ತಾರಾ ಕನ್ನಡಿಗ ರಾಹುಲ್?
ಕನ್ನಡಿಗ ಕೆ.ಎಲ್ ರಾಹುಲ್ ಕಳೆದ ಮೂರು ಸೀಸನ್ಗಳಿಂದ ಲಕ್ನೋ ತಂಡವನ್ನ ಲೀಡ್ ಮಾಡ್ತಿದ್ದಾರೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಎಲ್ಎಸ್ಜಿ ತಂಡದಲ್ಲಿ ಏನೆಲ್ಲಾ ಆಯ್ತು ಅಂತಾ ನಿಮ್ಗೆಲ್ಲಾ ಗೊತ್ತೇ ಇದೆ. ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಜೊತೆ ನಡೆದ ಕೆಲ ಮನಸ್ಥಾಪಗಳಿಂದ ಕೆಎಲ್ ರಾಹುಲ್ ತಂಡದಿಂದ ಹೊರ ಬರೋಕೆ ಮುಂದಾಗಿದ್ದಾರೆ. ಅಲ್ದೇ ಫ್ರಾಂಚೈಸಿ ಕೂಡ ಈಗಾಗ್ಲೇ ಹೊಸ ನಾಯಕನ ಅನ್ವೇಷಣೆಯಲ್ಲಿದೆ ಅಂತಾ ಎಲ್ಎಸ್ಜಿಯ ಆಟಗಾರ ಅಮಿತ್ ಮಿಶ್ರಾ ಅವ್ರೇ ಹೇಳಿಕೊಂಡಿದ್ದಾರೆ. ಸೋ 2025ರ ಟೂರ್ನಿಗೆ ಲಕ್ನೋ ತಂಡ ಹೊಸ ನಾಯಕನ ಸಾರಥ್ಯದಲ್ಲಿ ಅಖಾಡಕ್ಕಿಳಿಯೋದು ಕನ್ಫರ್ಮ್ ಆಗಿದೆ. ಇನ್ನು ರಾಹುಲ್ ಏನಾದ್ರೂ ಹರಾಜು ಪ್ರಕ್ರಿಯೆಗೆ ಬಂದ್ರೆ ಆರ್ಸಿಬಿ ಖರೀದಿ ಮಾಡಬಹುದು. ಯಾಕಂದ್ರೆ ರಾಹುಲ್ ಆಗಮನದಿಂದ ಆರ್ಸಿಬಿಗೆ ದೊಡ್ಡ ಲಾಭವೇ ಇದೆ. ಯಾಕಂದ್ರೆ ಫಾಫ್ ಕ್ಯಾಪ್ಟನ್ಸಿಯಿಂದ ಇಳಿದ್ರೆ ರಾಹುಲ್ಗೆ ನಾಯಕನ ಪಟ್ಟ ಕಟ್ಟಬಹುದು. ಯಾಕಂದ್ರೆ ವಿರಾಟ್ ಕೊಹ್ಲಿ ಈಗಾಗ್ಲೇ ನಾಯಕ ಆಗೋದಿಲ್ಲ ಎಂದಿದ್ದಾರೆ. ಹೀಗಾಗಿ ರಾಹುಲ್ ಸಾರಥ್ಯ ವಹಿಸಬಹುದು. ಅಲ್ದೇ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸೋ ರಾಹುಲ್ ಬಂದ್ರೆ ವಿಕೆಟ್ ಕೀಪರ್ ಸ್ಥಾನವನ್ನೂ ಸಮರ್ಥವಾಗಿ ನಿಭಾಯಿಸ್ತಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕೆಎಲ್ ಕರ್ನಾಟಕದವರೇ ಆಗಿರೋದ್ರಿಂದ ಅಭಿಮಾನಿಗಳಿಗೂ ಹೊಸ ಜಶ್ ಬಂದಳಾಗುತ್ತೆ.
ರೋಹಿತ್ Vs ಹಾರ್ದಿಕ್.. ಯಾರಿಗೆ ಮುಂಬೈ ಸಾರಥ್ಯ?
2024ರ ಟೂರ್ನಿಯಲ್ಲಿ ಭಾರತ ಮಾತ್ರವಲ್ಲದೆ ಇಡೀ ಕ್ರಿಕೆಟ್ ಜಗತ್ತಿನಲ್ಲೇ ಮುಂಬೈ ಕ್ಯಾಪ್ಟನ್ಸಿ ವಿಚಾರ ಸದ್ದು ಮಾಡಿತ್ತು. ಬರೋಬ್ಬರಿ 10 ವರ್ಷಗಳ ಕಾಲ ಮುಂಬೈ ತಂಡವನ್ನ ಲೀಡ್ ಮಾಡಿದ್ದ ಹಾಗೇ 5 ಸಲ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಯಶಸ್ವೀ ನಾಯಕ ಅಂದ್ರೆ ರೋಹಿತ್ ಶರ್ಮಾರಿಂದ ನಾಯಕತ್ವ ಕಿತ್ತುಕೊಂಡು ಹಾರ್ದಿಕ್ ಪಾಂಡ್ಯಗೆ ಕಟ್ಟಲಾಗಿತ್ತು. ಗುಜರಾತ್ ಟೈಟನ್ಸ್ ತಂಡದ ಸಾರಥ್ಯ ವಹಿಸಿದ್ದ ಪಾಂಡ್ಯರನ್ನ ಕರ್ಕೊಂಡು ಬಂದು ಮುಂಬೈ ತಂಡಕ್ಕೆ ಪಟ್ಟಾಭಿಷೇಕ ಮಾಡಿದ್ರು. ಬಟ್ ಮುಂಬೈ ತಂಡ ಅತೀ ಕೆಟ್ಟ ಪ್ರದರ್ಶನ ನೀಡಿ ಪಾಯಿಂಟ್ಸ್ ಟೇಬಲ್ನಲ್ಲಿ 10ನೇ ಸ್ಥಾನದೊಂದಿಗೆ ಟೂರ್ನಿಯಿಂದ ಮೊದಲ ತಂಡವಾಗಿ ಹೊರ ಬಿತ್ತು. ಆದ್ರೆ ಎಂಐ ತಂಡದಲ್ಲಿ ಕಡೆಗಣಿಸಲ್ಪಟ್ಟಿದ್ದ ಅದೇ ರೋಹಿತ್ ಶರ್ಮಾ 2024 ರ T20 ವಿಶ್ವಕಪ್ ತಂಡದ ನಾಯಕನಾಗಿದ್ರು. ಒಂದೂ ಪಂದ್ಯ ಸೋಲದೆ ಕೆರೆಬಿಯನ್ ನಾಡಲ್ಲಿ 17 ವರ್ಷಗಳ ಬಳಿಕ ಭಾರತಕ್ಕೆ ಚಾಂಪಿಯನ್ ಕಿರೀಟ ತೊಡಿಸಿದ್ರು. ಇದಾದ್ಮೇಲೆ ಮುಂಬೈ ತಂಡದ ಮಾಲೀಕರಾದ ನೀತಾ ಅಂಬಾನಿ ಹಾಗೇ ಆಕಾಶ್ ಅಂಬಾನಿ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಹಾಗೇ ಸೂರ್ಯಕುಮಾರ್ ಯಾದವ್ರನ್ನ ಕರೆಸಿ ಸನ್ಮಾನ ಕೂಡ ಮಾಡಿದ್ರು. ಈ ವೇಳೆ ನೀತಾ ಅಂಬಾನಿ ಕಣ್ಣೀರು ಕೂಡ ಹಾಕಿದ್ರು. ಬಟ್ ವಿಷ್ಯ ಅಂದ್ರೆ ಒಂದು ಮಾತೂ ಕೇಳದೆ ಕ್ಯಾಪ್ಟನ್ಸಿಯಿಂದ ಇಳಿಸಿದ್ದಕ್ಕೆ ರೋಹಿತ್ ಶರ್ಮಾ ಮುಂಬೈ ತಂಡ ತೊರೆಯಲಿದ್ದಾರೆ ಅನ್ನೋ ಸುದ್ದಿ ಇದೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ವಿಶ್ವ ಚಾಂಪಿಯನ್ ಕ್ಯಾಪ್ಟನ್ ಹಿಟ್ಮ್ಯಾನ್ಗೆ ಮರಳಿ ಹಸ್ತಾಂತರಿಸಬಹುದು ಅನ್ನೋ ಬಗ್ಗೆಯೂ ಚರ್ಚೆಯಾಗ್ತಿದೆ. ಬಟ್ ಅಂತಿಮವಾಗಿ ಮುಂಬೈ ತಂಡದಲ್ಲಿ ಕ್ಯಾಪ್ಟನ್ ಬದಲಾವಣೆಯಂತೂ ಫಿಕ್ಸ್ ಎನ್ನಲಾಗಿದೆ.
ಧೋನಿ ಶಿಷ್ಯನಿಗೆ ಕೈ ತಪ್ಪುತ್ತಾ CSK ಸಾರಥ್ಯ?
ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಒನ್ ಆಫ್ ದಿ ಮೋಸ್ಟ್ ಸಕ್ಸಸ್ ಫುಲ್ ಫ್ರಾಂಚೈಸಿ. ಕಳೆದ 17 ಸೀಸನ್ಗಳಲ್ಲಿ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಎಮ್ಎಸ್ ಧೋನಿ ಸಾರಥ್ಯದಲ್ಲಿ ಯಶಸ್ವೀ ತಂಡ ಎನಿಸಿಕೊಂಡಿದೆ. ಬಟ್ ಈಗಾಗ್ಲೇ ಧೋನಿಗೆ 42 ವರ್ಷ ಆಗಿರೋದ್ರಿಂದ ಐಪಿಎಲ್ಗೂ ಗುಡ್ಬೈ ಹೇಳ್ತಾರೆ ಎನ್ನಲಾಗಿದೆ. ಈ ರಿಟೈರ್ಮೆಂಟ್ ವಿಚಾರ ಕಳೆದು ಮೂರ್ನಾಲ್ಕು ವರ್ಷಗಳಿಂದಲೂ ಚರ್ಚೆಯಲ್ಲಿದೆ.ಆದ್ರೆ ಧೋನಿ ಇನ್ನೂ ನಿವೃತ್ತಿ ಘೋಷಣೆ ಮಾಡಿಲ್ಲ. ಸೋ 2024ರ ಟೂರ್ನಿಯೇ ಕೊನೇ ಸೀಸನ್ ಅನ್ನೋ ಇಂಟೆನ್ಷನ್ ಇಟ್ಟುಕ್ಕೊಂಡೇ ರುತುರಾಜ್ ಗಾಯಕ್ವಾಡ್ಗೆ ಪಟ್ಟ ಕಟ್ಟಲಾಗಿತ್ತು. ಬಟ್ ಗಾಯಕ್ವಾಡ್ ಕ್ಯಾಪ್ಟನ್ಸಿಯಲ್ಲಿ ತಂಡ ಹೇಳಿಕೊಳ್ಳುವಂಥ ಸಕ್ಸಸ್ ಕಾಣೋಕೆ ಆಗಲಿಲ್ಲ. ಚೆನ್ನೈ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ ಮತ್ತು 5 ನೇ ಸ್ಥಾನ ಪಡೆಯುವ ಮೂಲಕ ಪಂದ್ಯಾವಳಿಯಿಂದ ಹೊರಬಿತ್ತು. ಹೀಗಾಗಿ ಈ ಸಲ ಹೊಸಬರಿಗೆ ಚಾನ್ಸ್ ನೀಡ್ತಾರೆ ಅನ್ನೋ ಚರ್ಚೆಯಾಗ್ತಾ ಇದೆ.
ಡೆಲ್ಲಿ ತಂಡದಿಂದ ಹೊರ ಬರ್ತಾರೆ ರಿಷಬ್ ಪಂತ್?
2025 ಸೀಸನ್‌ಗೆ ಮುಂಚಿತವಾಗಿಯೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಬಹುದೊಡ್ಡ ಹೆಜ್ಜೆ ಇಡುತ್ತಿದೆ. ಈಗಾಗಲೇ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವ್ರನ್ನ ತೆಗೆದು ಹಾಕಲಾಗಿದೆ. ಅಲ್ದೇ ಹೊಸ ಕೋಚ್ ಹುಡುಕಾಟದಲ್ಲಿದೆ. ಇನ್ನೊಂದು ಬ್ರೇಕಿಂಗ್ ವಿಚಾರ ಅಂಧ್ರೆ ಡೆಲ್ಲಿ ಕ್ಯಾಪಿಟಲ್ಸ್ ಇದೀಗ ನಾಯಕ ರಿಷಬ್ ಪಂತ್ ಅವರನ್ನೂ ಕೈಬಿಡಲು ನಿರ್ಧರಿಸಿದೆ. ರಿಕಿ ಪಾಂಟಿಂಗ್ ಹಾಗೇ ರಿಷಬ್ ಪಂತ್ ನಡುವೆ ಒಳ್ಳೆ ಬಾಂಡಿಂಗ್ ಇತ್ತು. ಸೋ ಪಾಂಟಿಂಗ್ ಚೇಂಜ್ ಆದ ಬೆನ್ನಲ್ಲೇ ಪಂತ್ ಕೂಡ ತಂಡವನ್ನ ತೊರೆಯೋ ನಿರ್ಧಾರ ಮಾಡಿದ್ದಾರೆ. ಸ್ವತಃ ಪಂತ್ ಅವರೇ ಡೆಲ್ಲಿ ತಂಡವನ್ನು ತೊರೆಯುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಪಂತ್ ಡೆಲ್ಲಿ ತಂಡವನ್ನು ತೊರೆದರೆ, ಐಪಿಎಲ್ 2025 ರಲ್ಲಿ ಅಕ್ಷರ್ ಪಟೇಲ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಬಹುದು. ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಪಂತ್ ಹೊರ ಬಂದ್ರೆ ಚೆನ್ನೈ ಸೂಪರ್ ಕಿಂಗ್ಸ್ ಸೇರುತ್ತಾರೆ ಎಂಬ ಚರ್ಚೆ ನಡೀತಿದೆ. ಎಂಎಸ್ ಧೋನಿ ಮತ್ತು ರಿಷಬ್ ಪಂತ್ ನಡುವೆ ಒಳ್ಳೆ ಬಾಂಧವ್ಯ ಇದೆ. ಇದೇ ಕಾರಣಕ್ಕೆ ಧೋನಿ ಸೂಚನೆಯಂತೆ ಪಂತ್ ಡೆಲ್ಲಿ ತಂಡ ಬಿಡೋಕೆ ರೆಡಿಯಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಇನ್ನೊಂದು ಕಾರಣವೂ ಇದೆ. ಸಿಎಸ್‌ಕೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂಎಸ್ ಧೋನಿ ಮುಂದಿನ ಆವೃತ್ತಿಯಲ್ಲಿ ಆಡುವುದು ಅನುಮಾನ. ಒಂದು ವೇಳೆ ಆಡಿದರೂ ಸಂಪೂರ್ಣ ಆವೃತ್ತಿಯಲ್ಲಿ ಆಡುವುದಿಲ್ಲ ಎನ್ನಲಾಗುತ್ತಿದೆ. ಈ ಕ್ರಮಾಂಕದಲ್ಲಿ ಭಾರತದ ವಿಕೆಟ್‌ಕೀಪರ್ ಬ್ಯಾಟ್ಸ್ಮನ್ನನ್ನ ತಂಡಕ್ಕೆ ಸೇರಿಸಿಕೊಳ್ಳಲು ಸಿಎಸ್‌ಕೆ ಆಸಕ್ತಿ ಹೊಂದಿದೆ.
ಪಂಜಾಬ್ ಕಿಂಗ್ಸ್ ನಿಂದ ಶಿಖರ್ ಧವನ್ ಔಟ್?
ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಕಿಂಗ್ಸ್ ಕೂಡ ಈವರೆಗೂ ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಅಲ್ದೇ ಹಾಲಿ ಕ್ಯಾಪ್ಟನ್ ಶಿಖರ್ ಧವನ್‌ಗೆ ಫಿಟ್ನೆಸ್ ಕೈಕೊಡ್ತಿದ್ದು ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ. 2022 ರಲ್ಲಿ ಪಂಜಾಬ್ ಫ್ರಾಂಚೈಸಿಯ ಕಮಾಂಡ್ ಅನ್ನು ಧವನ್‌ಗೆ ಹಸ್ತಾಂತರಿಸಿತ್ತು. ಆದರೆ, ಅವರ ನಾಯಕತ್ವದಲ್ಲಿ ತಂಡವು ವಿಶೇಷವಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಮತ್ತು ಪ್ಲೇಆಫ್ ತಲುಪಲು ಕೂಡ ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ, ಕಳೆದ ಸೀಸನ್ನಲ್ಲಿ ಧವನ್ ಫಿಟ್ನೆಸ್ ಸಂಬಂಧಿತ ಸಮಸ್ಯೆಗಳಿಂದ ಕೇವಲ 5 ಪಂದ್ಯಗಳನ್ನು ಮಾತ್ರ ಆಡಲು ಸಾಧ್ಯವಾಯಿತು. ಉಳಿದ ಪಂದ್ಯಗಳಲ್ಲಿ ಸ್ಯಾಮ್ ಕರನ್ ತಂಡವನ್ನು ಮುನ್ನಡೆಸಿದ್ದರು. ಹೀಗಾಗಿ ಮುಂದಿನ ಐಪಿಎಲ್ನಲ್ಲಿ ಶಿಖರ್ ಧವನ್ ಆಡೋದೇ ಡೌಟ್ ಇದೆ. ಇದೇ ಕಾರಣಕ್ಕೆ ಪ್ರೀತಿ ಜಿಂಟಾ ಒಡೆತನದ ಫ್ರಾಂಚೈಸಿಯು ಹೊಸ ನಾಯಕನ ಹುಡುಕಾಟದಲ್ಲಿದೆ. ಇಲ್ಲದಿದ್ರೆ ಸ್ಯಾಮ್ ಕರ್ರನ್ಗೆ ಪಟ್ಟ ಕಟ್ಟಿದ್ರೂ ಅಚ್ಚರಿ ಇಲ್ಲ.
ಇನ್ನು ಉಳಿದಂತೆ ಹಾಲಿ ಚಾಂಪಿಯನ್ ಕೆಕೆಆರ್ ತಂಡವನ್ನ ಶ್ರೇಯಸ್ ಅಯ್ಯರ್ ಮುನ್ನಡೆಸ್ತಿದ್ದಾರೆ. ಹಾಗೇ ರನ್ನರ್ ಅಪ್ ಆಗಿದ್ದ ಸನ್ ರೈಸರ್ಸ್ ಹೈದ್ರಾಬಾದ್ ತಂಡದಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಬದಲಾವಣೆ ಇರೋದಿಲ್ಲ. ಇನ್ನು ರಾಜಸ್ಥಾನ್ ರಾಯಲ್ಸ್ ತಂಡವನ್ನ ಸಂಜು ಸ್ಯಾಮ್ಸನ್ ಲೀಡ್ ಮಾಡ್ತಾರೆ. ಗುಜರಾತ್ ಟೈಟಾನ್ಸ್ ತಂಡಕ್ಕೆ ಶುಭ್ಮನ್ ಗಿಲ್ ನಾಯಕನಾಗಿ ಮುಂದುವರಿಯಬಹುದು.