ಐಶ್ ಗೆ ಅಭಿ ಕಾರು ಗಿಫ್ಟ್ - ಡಿವೋರ್ಸ್ ವದಂತಿಗೆ ಬಚ್ಚನ್ ಫ್ಯಾಮಿಲಿ ಬ್ರೇಕ್

ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಬಿದ್ದಿದೆ. ಶ್ರೀಘ್ರದಲ್ಲೇ ಡಿವೋರ್ಸ್ ಪಡಿತಾ ಇದ್ದಾರೆ ಅನ್ನೋ ವದಂತಿ ಕೇಳಿಬಂದಿತ್ತು. ಅಷ್ಟೇ ಅಲ್ಲದೇ ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬೆಳವಣಿಗೆಗಳು ಕೂಡ ನಡೆದಿದ್ದವು. ಆದ್ರೇ ಇದೀಗ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಅಭಿಷೇಕ್, ಐಶ್‌ಗೆ ದುಬಾರಿ ಗಿಫ್ಟ್‌ವೊಂದನ್ನ ಕೊಟ್ಟಿದ್ದಾರೆ ಅಂತಾ ಹೇಳಲಾಗ್ತಿದೆ. ಅಷ್ಟಕ್ಕೂ ಐಶ್ ಗೆ ಅಭಿಷೇಕ್ ಕೊಟ್ಟ ಗಿಫ್ಟ್ ಏನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕೊಹ್ಲಿಗಾಗಿ RCB ಬಿಗ್ ಬಜೆಟ್ – KING ಫಸ್ಟ್.. ₹20 ಕೋಟಿ ಫಿಕ್ಸ್
ಐಶ್ವರ್ಯ ಹಾಗೂ ಅಭಿಷೇಕ್ ದಾಂಪತ್ಯ ವಿಚಾರ ಸದ್ಯ ಬಿಟೌನ್‌ನಲ್ಲಿ ಭಾರಿ ಸೌಂಡ್ ಮಾಡ್ತಾ ಇದೆ. ಎಲ್ಲೆಡೆ ಇದ್ರ ಬಗ್ಗೆನೇ ಚರ್ಚೆಯಾಗ್ತಾ ಇದೆ. ಈ ಗಾಸಿಪ್ ಇಷ್ಟೊಂದು ಜೋರಾಗಿ ಹಬ್ಬಲು ಕಾರಣ ಅನಂತ್ ಅಂಬಾನಿ ಮದುವೆ ದಿನ ನಡೆದ ಘಟನೆ. ಮದುವೆ ಸಮಾರಂಭಕ್ಕೆ ಅಭಿಷೇಕ್ ಹಾಗೂ ಮನೆಯವರೆಲ್ಲಾ ಒಟ್ಟಾಗಿ ಬಂದಿದ್ರೆ, ಐಶ್ವರ್ಯ ಹಾಗೂ ಮಗಳು ಪ್ರತ್ಯೇಕವಾಗಿ ಬಂದಿದ್ರು. ಅಷ್ಟೇ ಅಲ್ಲದೇ ಮದುವೆಯ ಬಳಿಕ ಮಗಳ ಜೊತೆ ಐಶ್ ಫಾರಿನ್‌ಗೆ ಹೋಗಿದ್ರು. ಇದ್ರಿಂದಾಗಿ ಬಚ್ಚನ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ. ಐಶ್ ಹಾಗೂ ಅಭಿಷೇಕ್ ಡಿವೋರ್ಸ್ ಪಡಿತಾ ಇದ್ದಾರೆ ಅನ್ನೋ ವಿಚಾರ ಮುನ್ನಲೆಗೆ ಬಂತು. ಆದ್ರೀಗ ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ರೈಗೆ ಕಾರು ಗಿಫ್ಟ್ ನೀಡಿದ್ದಾರೆ ಅಂತಾ ಹೇಳಲಾಗುತ್ತಿದೆ. ಇದಕ್ಕೆ ಸಂಬಂಧ ಪಟ್ಟ ಫೋಟೋ ಕೂಡ ವೈರಲ್ ಆಗ್ತಾ ಇದೆ.
ಹೌದು. ಅಭಿಷೇಕ್ ಬಚ್ಚನ್ ಹೊಸ ಕಾರು ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ. ಸೋದರಳಿಯ ಅಗಸ್ತ್ಯ ನಂದಾ, ಸೊಸೆ ನವ್ಯಾ ನವೇಲಿ ನಂದಾ ಮತ್ತು ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅವರನ್ನು ಅಭಿಷೇಕ್ ಹೊಸ ಕಾರಿನಲ್ಲಿ ಡಿನ್ನರ್ಗೆ ಕರೆದುಕೊಂಡು ಹೋಗಿದ್ದಾರೆ. ಆಗ ಹಲವರ ಗಮನ ಅಭಿಷೇಕ್ ಬಚ್ಚನ್ ಅವರ ಹೊಸ ಕಾರಿನ ನಂಬರ್ ಪ್ಲೇಟ್ ಕಡೆಗೆ ಹೋಗಿದೆ. ಐಶ್ವರ್ಯಾ ಅವರ ಫೇವರಿಟ್ ಸಂಖ್ಯೆಯನ್ನೇ ಅಭಿಷೇಕ್ ತಮ್ಮ ಕಾರಿನ ನಂಬರ್ ಪ್ಲೇಟ್ ಮಾಡಿಕೊಂಡಿದ್ದಾರೆ.
ಐಶ್ವರ್ಯಾ ರೈ ಬಳಿ ‘Mercedes-Benz S-Class’ ಕಾರು ಇತ್ತು. ಅದನ್ನು ಈಗ ಮಾರಾಟ ಮಾಡಲಾಗಿದೆ. ಈ ಕಾರಿನ ಸಂಖ್ಯೆ 5050 ಆಗಿತ್ತು. ಈಗ ಅಭಿಷೇಕ್ ಬಚ್ಚನ್ ಅವರ ಹೊಸ ಕಾರಿನ ಸಂಖ್ಯೆ ಕೂಡ 5050 ಆಗಿದೆ. ಹೀಗಾಗಿ, ಕೆಲವರು ಅಭಿಷೇಕ್ ಅವರು ಐಶ್ವರ್ಯಾಗೆ ಕಾರು ಗಿಫ್ಟ್ ಮಾಡಿದ್ದಾರೆ ಎಂದಿದ್ದಾರೆ. ಇನ್ನೂ ಕೆಲವರು ಅಭಿಷೇಕ್ ಅವರು ಐಶ್ವರ್ಯಾ ಅವರ ಫೇವರಿಟ್ ಸಂಖ್ಯೆಯನ್ನು ತಮ್ಮ ಕಾರಿನ ಸಂಖ್ಯೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮಾತನಾಡಿದ್ದಾರೆ. ಆದ್ರೆ ಐಶ್‌ಗೆ ಅಭಿಷೇಕ್ ಗಿಫ್ಟ್ ನೀಡಿರೋ ಬಗ್ಗೆ ಅಭಿಷೇಕ್ ಆಗ್ಲೀ, ಐಶ್ ಆಗ್ಲಿ ಯಾವುದೇ ಅಪ್‌ಡೇಟ್ ನೀಡಿಲ್ಲ. ಆದ್ರೀಗ ಅಭಿಷೇಕ್ ಕಾರು ಖರೀದಿಸಿರೋದು, ಐಶ್ ಇಷ್ಟದ ಸಂಖ್ಯೆಯನ್ನ ನಂಬರ್ ಪ್ಲೇಟ್‌ಗೆ ಹಾಕಿರೋದ್ರಿಂದ ವಿಚ್ಛೇದನ ವಿಚಾರಕ್ಕೆ ಬ್ರೇಕ್ ಬಿದ್ದಂತಾಗಿದೆ.