ಪಾಕ್‌ ಆಟಗಾರನ ಪತ್ನಿ ಭಾರತದವಳು! – ಆ ಸುಂದರಿಗೆ ಇಂಡಿಯಾಕ್ಕಿಲ್ಲ ಎಂಟ್ರಿ!

ಪಾಕ್‌ ಆಟಗಾರನ ಪತ್ನಿ ಭಾರತದವಳು! – ಆ ಸುಂದರಿಗೆ ಇಂಡಿಯಾಕ್ಕಿಲ್ಲ ಎಂಟ್ರಿ!

ಪಾಕಿಸ್ತಾನದ ಆಲ್‌ ರೌಂಡರ್‌ ಹಸನ್‌ ಅಲಿ ಭಾರತದ ವಿರುದ್ಧ ಕಿಡಿಕಾರಿದ್ದಾರೆ.. ಟೀಂ ಇಂಡಿಯಾ ಪಾಕಿಸ್ತಾನದಲ್ಲಿ ಆಡೋದಿಕ್ಕೆ ರೆಡಿಯಿದೆ.. ಆದ್ರೆ ಭಾರತದ ಸರ್ಕಾರ ಅವಕಾಶ ಕೊಡ್ತಿಲ್ಲ ಎಂಬ ಆರೋಪವನ್ನು ಹಸನ್‌ ಅಲಿ ಮಾಡಿದ್ದಾರೆ.. ಇಷ್ಟೆಲ್ಲಾ ಭಾರತದ ಬಗ್ಗೆ ಮಾತಾಡುವ ಹಸನ್‌ ಅಲಿ ಮದುವೆಯಾಗಿದ್ದು ಮಾತ್ರ ಭಾರತದ ಹುಡುಗಿಯನ್ನು.. ಅಷ್ಟಕ್ಕೂ ಹಸನ್‌ ಅಲಿಯ ಹೆಂಡ್ತಿ ಯಾರು? ಯಾವಾಗ ಮದುವೆಯಾಗಿದ್ದು? ಪ್ರೀತಿ ಹುಟ್ಟಿದ್ದು ಯಾವಾಗ ಅನ್ನೋದ್ರ ಬಗ್ಗೆ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: IND Vs SL ಸರಣಿಗೆ ಬಿಗ್ ಶಾಕ್ – ಸೂರ್ಯ & ಪಾಂಡ್ಯ ನಡುವೆ ಬಿರುಕು

ಟೈಮ್‌ ಸಿಕ್ಕಾಗಲೆಲ್ಲಾ ಟೀಂ ಇಂಡಿಯಾ ಹಾಗೂ ಭಾರತದ ಮೇಲೆ ಹಸನ್‌ ಅಲಿ ಕಿಡಿಕಾರುತ್ತಲೇ ಇರ್ತಾರೆ. ಹಸನ್‌ಗೆ ಇದೊಂದು ಚಾಳಿಯೇ ಆಗಿಬಿಟ್ಟಿದೆ. ಆದ್ರೆ ಭಾರತ ಮೇಲೆ ಕಿರಿಕಾರುತ್ತಿರುವ ಹಸನ್‌ ಮದುವೆಯಾಗಿದ್ದು ಮಾತ್ರ  ಭಾರತದ ಸುಂದರಿಯನ್ನು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ಯಾವ ಹೀರೋಯನ್‌ಗೂ ಕಡಿಮೆಯಿಲ್ಲದಂತೆ ಇರುವ ಈ ಸುಂದರಿಯೇ ಹಸನ್‌ ಅಲಿಯ ಹೆಂಡ್ತಿ.. ಹಸನ್ ಅಲಿ ಪತ್ನಿ ಭಾರತೀಯ ಮೂಲದ ಸಾಮಿಯಾ ಅರ್ಝೂ ಅವರನ್ನ ವಿವಾಹವಾಗಿದ್ದಾರೆ.

ಸಾಮಿಯಾ ಅರ್ಜೂ ಹರಿಯಾಣದವಳು.. ಹರಿಯಾಣದ ನೂಹ್‌ ಜಿಲ್ಲೆಯ ಚಂದೇನಿಯಲ್ಲಿ 1995ರಲ್ಲಿ ಹುಟ್ಟಿದ್ದ ಸಾಮಿಯಾ, ಫರಿದಾಬಾದ್‌ನ ಮಾನವ್‌ ರಚನಾ ಯುನಿವರ್ಸಿಟಿಯಲ್ಲಿ ಏರನಾಟಿಕಲ್‌ ಇಂಜಿನಿಯರಿಂಗ್‌ ಪದವಿ ಪಡೆದಿದ್ದರು.. ವ್ಯಾಸಾಂಗ ಮುಗಿಸಿದ ನಂತರ ಸಾಮಿಯಾ ದುಬೈಗೆ ಹಾರಿದ್ದರು.. ಜೆಟ್‌ ಏರ್‌ವೇಸ್‌ನಲ್ಲಿ ಮೊದಲು ಏರ್‌ ಹಾಸ್ಟೆಸ್‌ ಆಗಿ ಕೆಲಸ ಆರಂಭಿಸಿದ್ದ ಸಾಮಿಯಾ ನಂತರ ದುಬೈನಲ್ಲಿ ಎಮಿರೇಟ್ಸ್‌ ಏರ್‌ಲೈನ್ಸ್‌ ಸೇರಿಕೊಂಡಿದ್ದಳು.. ಅಲ್ಲಿ ಕೆಲಸ ಮಾಡುತ್ತಿದ್ದಾಗಲೇ ಫ್ರೆಂಡ್ಸ್‌ ಮೂಲಕ ಹಸನ್‌ ಅಲಿಯ ಪರಿಚಯವಾಯಿತು.. ಸಾಮಿಯಾಳ ಬ್ಯೂಟಿಗೆ ಫಿದಾ ಆದ ಹಸನ್ ಅಲಿ ಮೊದಲು ಲವ್‌ ಪ್ರಪೋಸ್‌ ಮಾಡಿದ್ದ.. ಹಸನ್‌ ಅಲಿಯ ಪ್ರೀತಿಯನ್ನು ಒಪ್ಪಿಕೊಂಡ ಸಾಮಿಯಾ ಸುಮಾರು ಎರಡು ವರ್ಷಗಳ ಕಾಲ ಡೇಟಿಂಗ್‌ ಮಾಡಿ ನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟಿರು.. ಈ ಜೋಡಿಗೆ 2021ರಲ್ಲಿ ಒಬ್ಬಳು ಮುದ್ದಾದ ಮಗಳಿದ್ದಾಳೆ.. ಆದ್ರೆ ಮದುವೆಯ ನಂತರ ಭಾರತಕ್ಕೆ ಬರಲು ಸಾಮಿಯಾಗೆ ಸಾಧ್ಯವಾಗಿಲ್ಲ.. ಭಾರತ ಸರ್ಕಾರ ಪಾಕ್‌ ಪ್ರಜೆಗಳಿಗೆ ವೀಸಾ ನಿರಾಕರಣೆ ಮಾಡಿರೋದ್ರಿಂದ ಸಾಮಿಯಾ ಭಾರತಕ್ಕೆ ಬಂದಿಲ್ಲ.. ಹಾಗಿದ್ದರೂ 2023ರಲ್ಲಿ ಐಸಿಸಿ ವರ್ಲ್ಡ್‌ಕಪ್‌ ಅನ್ನು ಭಾರತ ಆಯೋಜನೆ ಮಾಡಿದ್ದರಿಂದ ಸಾಮಿಯಾಗೆ ತವರಿಗೆ ಬರುವ ಭಾಗ್ಯ ಒದಗಿ ಬಂದಿತ್ತು.. ಅದಾದ್ಮೇಲೆ ಸಾಮಿಯಾ ಒಮ್ಮೆಯೂ ಭಾರತಕ್ಕೆ ಬಂದಿಲ್ಲ. ಪಾಕ್‌ನಲ್ಲೇ ತನ್ನ ಗಂಡನ ಜೊತೆ ಜೀವನ ನಡೆಸುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *