ಪಾಕ್ ಗೆ ಬರುವಂತೆ ಭಾರತವನ್ನು ಒಪ್ಪಿಸಿ ಎಂದು ICC ಬೆನ್ನು ಬಿದ್ದ PCB

ಪಾಕ್ ಗೆ ಬರುವಂತೆ ಭಾರತವನ್ನು ಒಪ್ಪಿಸಿ ಎಂದು ICC ಬೆನ್ನು ಬಿದ್ದ PCB

2024ರ ಟಿ-20 ವಿಶ್ವಕಪ್ ಬಳಿಕ ಎಲ್ಲಾ ತಂಡಗಳ ಕಣ್ಣು 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮೇಲೆ ನೆಟ್ಟಿದೆ. ಆದ್ರೆ ಪಾಕಿಸ್ತಾನದಲ್ಲಿ ಟೂರ್ನಿ ಆಯೋಜನೆ ಆಗುತ್ತಿರೋದೇ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ. ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಕಾಲಿಡಲ್ಲ ಎಂದು ಹಠ ಹಿಡಿದಿದ್ದು, ಟೂರ್ನಿ ಆಯೋಜನೆ ಬಗ್ಗೆ ದಿನಕ್ಕೊಂದು ಅಪ್​ಡೇಟ್ ಹೊರ ಬೀಳ್ತಿದೆ. ಭಾರತ ತಂಡವನ್ನ ಪಾಕಿಸ್ತಾನಕ್ಕೆ ಕರೆಸಿಕೊಳ್ಳೋಕೆ ಆಗ್ತಿಲ್ಲ ಅನ್ನೋ ಚಿಂತೆ ಒಂದ್ಕಡೆಯಾದ್ರೆ ಐಸಿಸಿಯಲ್ಲೂ ಕೂಡ ಪಾಕ್​ ಕ್ರಿಕೆಟ್ ಮಂಡಳಿಗೆ ಕವಡೆ ಕಾಸಿನ ಕಿಮ್ಮತ್ತೂ ಕೊಡ್ತಿಲ್ಲ. ವಾರ್ಷಿಕ ಸಭೆಯಲ್ಲೂ ಕೂಡ ಪಿಸಿಬಿಯನ್ನ ಸೈಡ್​ಲೈನ್ ಮಾಡಿದೆ. ಇದೇ ಕಾರಣಕ್ಕೆ ಈಗ ಪಿಸಿಬಿ ಐಸಿಸಿಯ ಕೈ ಕಾಲು ಹಿಡಿಯುವಂತಾಗಿದೆ. ಅಷ್ಟಕ್ಕೂ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆಗೆ ಸಿದ್ಧವಾಗ್ತಿರೋ ಪಿಸಿಬಿಯ ಪರಿಸ್ಥಿತಿ ಹೇಗಾಗಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಚ್ಚನ್‌ ಫ್ಯಾಮಿಲಿ ಡಿವೋರ್ಸ್‌ ಆಟ? – ಸ್ಟಾರ್‌ ಕುಟುಂಬದಿಂದ ಚೀಪ್‌  ಗಿಮಿಕ್?‌

2025ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ಆರಂಭಿಸಿದೆ. ಈಗಾಗ್ಲೇ ಪಿಸಿಬಿ ಸಂಪೂರ್ಣ ವೇಳಾಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದ್ದು, ಇದರಲ್ಲಿ ಲಾಹೋರ್‌ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೂ ಸೇರಿದೆ. ಆದರೆ ಇದರ ಹೊರತಾಗಿಯೂ ಐಸಿಸಿ ವಾರ್ಷಿಕ ಸಭೆಯಲ್ಲಿ ಚಾಂಪಿಯನ್ಸ್ ಟ್ರೋಫಿ ಕುರಿತು ಚರ್ಚೆಯೇ ನಡೆದಿಲ್ಲ. ಇದೇ ಈಗ ಪಾಕಿಸ್ತಾನದ ನಿದ್ದೆಗೆಡಿಸಿದೆ.  ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ವಾರ್ಷಿಕ ಸಭೆಯು ಶ್ರೀಲಂಕಾದಲ್ಲಿ ಜುಲೈ 19 ರಿಂದ 22 ರವರೆಗೆ ನಡೆದಿತ್ತು. ಆದ್ರೆ ಸಭೆಯಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಬಗ್ಗೆ ಚರ್ಚೆಗೂ ಅವಕಾಶ ಸಿಗದೇ ಇರೋದು ಪಿಸಿಬಿಯ ಆತಂಕಕ್ಕೆ ಕಾರಣವಾಗಿದೆ. ಆಟಗಾರರ ಭದ್ರತೆಯ ದೃಷ್ಟಿಯಿಂದ ಬಿಸಿಸಿಐ ಈ ಬಾರಿಯೂ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳದಿದ್ದರೆ, ಬಳಿಕ ಗ್ಗೆ ಐಸಿಸಿ ಮಹತ್ವದ ನಿರ್ಧಾರ ಕೈಗೊಳ್ಳಬಹುದು. ಚಾಂಪಿಯನ್ಸ್ ಟ್ರೋಫಿಯ ಆತಿಥ್ಯದಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಸಂಕಷ್ಟ ಎದುರಾಗಬಹುದು. ಏಪ್ಯಾಕಪ್‌ ಅಂತೆ ಚಾಂಪಿಯನ್‌ ಟ್ರೋಫಿಯನ್ನು ಹೈಬ್ರಿಡ್‌ ಮಾದರಿ ನಡೆಸಲು ಬಿಸಿಸಿಐ ಐಸಿಸಿಗೆ ಮನವಿ ಮಾಡಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹೈಬ್ರಿಡ್ ಮಾದರಿಯ ವಿರುದ್ಧ ಸಂಪೂರ್ಣ ಕಿಡಿಕಾರಿದೆ. ಹೀಗಾಗಿ ಐಸಿಸಿ ವಾರ್ಷಿಕ ಸಭೆಯಲ್ಲಿ ಪಿಸಿಬಿ ತನ್ನ ಪರವಾದ ಕೆಲವೊಂದು ಘೋಷಣೆಯನ್ನು ನಿರೀಕ್ಷಿಸುತ್ತಿತ್ತು. ಆದರೆ ಸಭೆ ಮುಗಿದ ಬಳಿಕ ಪಿಸಿಬಿಯ ನಿರೀಕ್ಷೆ ಹುಸಿಯಾಗಿದೆ.

ಐಸಿಸಿ ಹೆಗಲಿಗೆ ಬಿಸಿಸಿಐ ಹೊಣೆ!

ಪಾಕಿಸ್ತಾನ ಮತ್ತು ಭಾರತ 2012 ರಿಂದ ಯಾವುದೇ ದ್ವಿಪಕ್ಷೀಯ ಸರಣಿಗಳನ್ನು ಆಡಿಲ್ಲ. ಮುಂಬೈ ದಾಳಿ ನಂತರ ಭಾರತ ಸರ್ಕಾರವು ಪಾಕಿಸ್ತಾನದೊಂದಿಗಿನ ಕ್ರಿಕೆಟ್ ಪಂದ್ಯಗಳನ್ನು ಐಸಿಸಿ ಅಥವಾ ಎಸಿಸಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತಗೊಳಿಸಿದೆ. ಭಾರತ ತಂಡ ಕಳೆದ ವರ್ಷ ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿತ್ತು. ಇದರಿಂದಾಗಿ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲಾಯಿತು. ಆದ್ರೆ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಹಾಗೇ ಪಂದ್ಯಗಳಲ್ಲಿ ಭಾಗಿಯಾಗಿತ್ತು. ಹೀಗಾಗಿ ಈ ಬಾರಿ ಪಾಕಿಸ್ತಾನಕ್ಕೆ ಬರುವಂತೆ ಪಿಸಿಬಿ ಪಟ್ಟು ಹಿಡಿದಿದೆ. ಆದ್ರೆ ಬಿಸಿಸಿಐ ಒಪ್ಪಿಕೊಂಡಿಲ್ಲ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೆ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಂದ್ರೆ ಐಸಿಸಿ ಹೆಗಲಿಗೆ ಹಾಕಿದೆ.ಕೊಲಂಬೊದಲ್ಲಿ ಇತ್ತೀಚೆಗೆ ನಡೆದ ಐಸಿಸಿ ವಾರ್ಷಿಕ ಸಭೆಯಲ್ಲಿ ಚಾಂಪಿಯನ್ಸ್ ಟ್ರೋಫಿಯ ಬಜೆಟ್ ಅನ್ನು ಅನುಮೋದಿಸಲಾಗಿದೆ. ಆದರೆ ವೇಳಾಪಟ್ಟಿ ಮತ್ತು ಸ್ವರೂಪದ ಬಗ್ಗೆ ಚರ್ಚಿಸಿಲ್ಲ. ಚಾಂಪಿಯನ್ಸ್ ಟ್ರೋಫಿ ಆತಿಥೇಯರು ಪಾಕಿಸ್ತಾನ ಟೂರ್ನಿಯ ಕರಡು ಕಾರ್ಯಕ್ರಮ ಮತ್ತು ಸ್ವರೂಪ ಮತ್ತು ಬಜೆಟ್ ಅನ್ನು ಐಸಿಸಿಗೆ ಸಹ ಸಲ್ಲಿಸಿದ್ದಾರೆ. ಈಗ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯನ್ನು ಪ್ರಸಾರ ಮಾಡುವುದು, ಚರ್ಚಿಸುವುದು ಮತ್ತು ಅಂತಿಮಗೊಳಿಸುವುದು ಐಸಿಸಿ ಮೇಲಿದೆ. 2025ರ ಚಾಂಪಿಯನ್ಸ್  ಟೂರ್ನಿಗೆ ಪಾಕಿಸ್ತಾನದಲ್ಲಿ ಭಾರತ ತಂಡವನ್ನು ಆತಿಥ್ಯ ವಹಿಸಲು ತನ್ನ ಸರ್ಕಾರದಿಂದ ತೆರಿಗೆ ಸಂಬಂಧಿತ ನಿಯಮಗಳು, ಸ್ಥಳ ಆಯ್ಕೆ ಮತ್ತು ಅನುಮೋದನೆಯ ಬಗ್ಗೆ ಪಿಸಿಬಿ ತನ್ನ ಕಡೆಯಿಂದ ಐಸಿಸಿಗೆ ಲಿಖಿತವಾಗಿ ತಿಳಿಸಿದೆ.

ಟೀಂ ಇಂಡಿಯಾ ಆಟಗಾರರು ಪಾಕ್​ಗೆ ತೆರಳಿ ಆಡುವಂತೆ ಪಾಕಿಸ್ತಾನದ ಕ್ರಿಕೆಟಿಗರು ಕೂಡ ಬೆನ್ನು ಬಿದ್ದಿದ್ದಾರೆ. ಪಾಕಿಸ್ತಾನ ತಂಡದ ಮಾಜಿ ನಾಯಕ ಯೂನಿಸ್‌ ಖಾನ್‌ ಅಂತೂ ಸೀದಾ ವಿರಾಟ್ ಕೊಹ್ಲಿಯನ್ನೇ ಮುಂದಿಟ್ಟುಕೊಂಡು ಅಸ್ತ್ರ ಪ್ರಯೋಗ ಮಾಡಿದ್ದಾರೆ. ಕ್ರಿಕೆಟ್‌ ಜಗತ್ತಿನಲ್ಲಿ ಇಂದು ವಿರಾಟ್‌ ಕೊಹ್ಲಿ ಎಲ್ಲವನ್ನೂ ಸಾಧಿಸಿದ್ದಾರೆ. ಅವರು ಸಾಧಿಸುವುದು ಉಳಿದಿರುವುದು ಮಾತ್ರ ಪಾಕಿಸ್ತಾನದಲ್ಲಿ. 19 ವರ್ಷದೊಳಗಿನ ಭಾರತ ತಂಡದಲ್ಲಿದ್ದಾಗ ವಿರಾಟ್‌ ಕೊಹ್ಲಿ 2006ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾರೆ. ಆದರೆ ಹಿರಿಯರ ತಂಡದೊಂದಿಗೆ ಪಾಕಿಸ್ತಾನಕ್ಕೆ ತೆರಳು ಅವಕಾಶ ಅವರಿಗೆ ಸಿಕ್ಕಿಲ್ಲ. ಇನ್ನು ಪಾಕಿಸ್ತಾನದಲ್ಲಿ ವಿರಾಟ್‌ ಕೊಹ್ಲಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಹೀಗಾಗಿ 2025ರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ವಿರಾಟ್‌ ಕೊಹ್ಲಿ ಪಾಕಿಸ್ತಾನಕ್ಕೆ ಬರಬೇಕು. ಪಾಕಿಸ್ತಾನದ ನೆಲದಲ್ಲೂ ಶತಕ ಬಾರಿಸಬೇಕು ಎಂದು ಹೇಳಿದ್ದಾರೆ. ಇವ್ರೆಲ್ಲಾ ಎಷ್ಟೇ ಡೌವ್ ಮಾಡಿದ್ರೂ ಕೂಡ ನಮ್ಮ ಬಿಸಿಸಿಐ ಹೇಳಿ ಕೇಳಿ ಕ್ರಿಕೆಟ್‌ ಲೋಕದ ದೊಡ್ಡಣ್ಣ. ಹೀಗಾಗಿ ಬಿಸಿಸಿಐ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂದರೆ ಅದಕ್ಕೆ ತಿರುಗುತ್ತರ ನೀಡುವ ಸಾಮರ್ಥ್ಯ ಐಸಿಸಿಗೆ ಇಲ್ಲ. ಹೀಗಾಗಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಎಷ್ಟೇ ತಿಪ್ಪರಲಾಗ ಹಾಕಿ ಐಸಿಸಿ ಮುಂದೆ ಅಂಗಲಾಚಿದರೂ ಟೀಮ್ ಇಂಡಿಯಾ ಪಾಕ್‌ ಪ್ರವಾಸ ಕೈಗೊಳ್ಳೋದು ಕನಸಿನ ಮಾತು.

Shwetha M

Leave a Reply

Your email address will not be published. Required fields are marked *