KL ಓವರ್ ಟೇಕ್ ಮಾಡಿದ GILL – ಟೆಸ್ಟ್ ಸರಣಿ ಉಪನಾಯಕತ್ವಕ್ಕೂ ಕೊಕ್
ರಾಹುಲ್ ಸಾರಥ್ಯ ಕಸಿಯಿತಾ BCCI?

KL ಓವರ್ ಟೇಕ್ ಮಾಡಿದ GILL – ಟೆಸ್ಟ್ ಸರಣಿ ಉಪನಾಯಕತ್ವಕ್ಕೂ ಕೊಕ್ರಾಹುಲ್ ಸಾರಥ್ಯ ಕಸಿಯಿತಾ BCCI?

ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆಗಿದ್ದೇ ಆಗಿದ್ದು. ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗ್ತಿವೆ. ಐಪಿಎಲ್ ಸ್ಟಾರ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದು ಒಂದ್ಕಡೆಯಾದ್ರೆ ಮತ್ತೊಂದೆಡೆ ಸೀನಿಯರ್ಸ್​ ಸೈಡ್​ಲೈನ್ ಆಗ್ತಿದ್ದಾರೆ. ಕ್ಯಾಪ್ಟನ್ಸಿ ರೇಸ್​ನಲ್ಲಿದ್ದವನಿಗೆ ಕ್ಯಾಪ್ಟನ್ಸಿ ಸಿಗಲ್ಲ. ಆಟಗಾರನಾಗಿ ಸ್ಥಾನ ಪಡೆಯಬೇಕಿದ್ದವನಿಗೆ ಟೀಮ್‌ನಲ್ಲಿ ಪ್ಲೇಸೇ ಇಲ್ಲ. ವೈಸ್ ಕ್ಯಾಪ್ಟನ್ಸಿ ರೇಸ್​ನಲ್ಲಿದ್ದವನು ಕೇವಲ ಆಟಗಾರನಾಗಿ ಕಣಕ್ಕಿಳಿಯಬೇಕಾಗಿದೆ. ಅದ್ರಲ್ಲೂ ಲಂಕಾ ಸರಣಿಗೆ ಟೀಂ ಅನೌನ್ಸ್ ಆದ್ಮೇಲೆ ಕನ್ನಡಿಗ ಕೆ.ಎಲ್ ರಾಹುಲ್​ಗೆ ಬಾರೀ ನಿರಾಸೆಯಾಗಿದೆ. ಆರಂಭದಲ್ಲಿ ಒನ್ ಡೇ ಸರಣಿಗೆ ರಾಹುಲ್ ಕ್ಯಾಪ್ಟನ್ ಅಂತಾ ಹೇಳಲಾಗಿತ್ತು. ಬಟ್ ರೋಹಿತ್ ಶರ್ಮಾ ತಂಡಕ್ಕೆ ಮರಳಿದ್ದರಿಂದ ಅದು ಸಾಧ್ಯ ಆಗ್ಲಿಲ್ಲ. ಹೋಗ್ಲಿ ವೈಸ್ ಕ್ಯಾಪ್ಟನ್ ಪಟ್ಟನಾದ್ರೂ ಸಿಗುತ್ತೆ ಅಂದ್ರೆ ಅದೂ ಕೂಡ ಶುಭ್​ಮನ್ ಗಿಲ್ ಪಾಲಾಯ್ತು. ಇದೀಗ ರಾಹುಲ್​ರ ಮತ್ತೊಂದು ಕನಸಿಗೆ ಬಿಸಿಸಿಐ ಎಳ್ಳು ನೀರು ಬಿಡೋಕೆ ರೆಡಿಯಾಗಿದೆ.

ಇದನ್ನೂ ಓದಿ : ಪಾಂಡೆ ಲವ್ಸ್‌ ಪಾಂಡ್ಯ? – ಡೇಟಿಂಗ್‌, ಚಾಟಿಂಗ್‌, ಡ್ಯಾನ್ಸಿಂಗ್‌!!

ಟೆಸ್ಟ್ ನಲ್ಲೂ ರಾಹುಲ್ ಬರೀ ಆಟಗಾರ!

ಟೀಂ ಇಂಡಿಯಾ ಪರ ಅತ್ಯದ್ಭುತ ಪ್ರದರ್ಶನ ನೀಡುತ್ತಿರುವ ಕೆ.ಎಲ್ ರಾಹುಲ್ ಪದೇಪದೆ ಫಿಟ್​ನೆಸ್ ಸಮಸ್ಯೆಗೆ ಒಳಗಾಗುತ್ತಿದ್ದಾರೆ. 2021ರ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ರಾಹುಲ್ ಅವರನ್ನ ಟಿ20 ತಂಡದಿಂದ ಕೈಬಿಡಲಾಗಿತ್ತು. ಈ ಬಾರಿಯ ಟಿ20 ವರ್ಲ್ಡ್‌ಕಪ್ಗೂ ಸೆಲೆಕ್ಟ್ ಆಗಿರಲಿಲ್ಲ. ಅಲ್ಲಿಗೆ ರಾಹುಲ್ ಅವರ ಟಿ20 ಕೆರಿಯರ್ ಕ್ಲೋಸ್ ಆಗಿದೆ. ಇನ್ನು ಒನ್​ಡೇಯಲ್ಲಿ ರೋಹಿತ್ ಶರ್ಮಾ ಆಬ್ಸೆನ್ಸ್​​ನಲ್ಲಿ ಕ್ಯಾಪ್ಟನ್ಸಿ ಸಿಗುತ್ತೆ ಅನ್ಕೊಂಡಿದ್ರು. ಬಟ್ ಅದೂ ಸಾಧ್ಯವಾಗ್ಲಿಲ್ಲ. ಹೋಗ್ಲಿ ವೈಸ್ ಕ್ಯಾಪ್ಟನ್ಸಿಯಾದ್ರೂ ಸಿಗುತ್ತಾ ಅಂದ್ರೆ  ಆ ಕನಸೂ ಸಹ ನುಚ್ಚುನೂರಾಗಿದೆ. ಶುಭ್‌ಮನ್ ಗಿಲ್‌ಗೆ ಉಪನಾಯಕತ್ವ ಪಟ್ಟ ಕಟ್ಟಿ ರಾಹುಲ್ ಆಸೆಗೆ ಬಿಸಿಸಿಐ ಎಳ್ಳು ನೀರು ಬಿಟ್ಟಿದೆ. ಇದರ ನಡುವೆ ಮತ್ತೊಂದು ಆಘಾತ ಕನ್ನಡಿಗನಿಗೆ ಎದುರಾಗಿದೆ. ಹೋಗ್ಲಿ ಒನ್​ಡೇ ವೈಸ್ ಕ್ಯಾಪ್ಟನ್ಸಿ ಹೋದ್ಮೇಲೆ ಟೆಸ್ಟ್ ವೈಸ್ ಕ್ಯಾಪ್ಟನ್ಸಿಯಾದ್ರೂ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದರು ರಾಹುಲ್. ಆದ್ರೆ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಮಾತು, ಕನ್ನಡಿಗನ ಕನಸನ್ನ ಭಗ್ನಗೊಳ್ಳುವಂತೆ ಮಾಡಿದೆ.  ಶುಭ್‌ಮನ್ ಗಿಲ್ ಮೂರು ಮಾದರಿ ಆಟಗಾರ. ನಿಧಾನವಾಗಿ ನಾಯಕತ್ವದ ಗುಣಗಳನ್ನ ಕಲಿಯುತ್ತಿದ್ದಾರೆ. ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್​ ಯಾದವ್ ಅವರಿಂದ ನಾಯಕತ್ವದ ಬಗ್ಗೆ ಕಲಿಯಲಿದ್ದಾರೆ ಎಂದು ಅಗರ್ಕರ್ ಹೇಳಿದ್ದಾರೆ. ಅರೆ ಅಗರ್ಕರ್ ಹೇಳಿಕೆಗೂ ರಾಹುಲ್​ಗೆ ನಾಯಕನ ಪಟ್ಟ ಕೈ ತಪ್ಪೋದಕ್ಕೂ ಏನು ಲಿಂಕ್ ಅಂತಾ ಅನ್ನಿಸ್ಬೋದು. ಅಂದ್ರೆ ಗಿಲ್ ನಾಯಕತ್ವದ ಗುಣಗಳನ್ನ ಕಲಿಯುತ್ತಿದ್ದಾರೆ ಅಂದ್ರೆ ಅಲ್ಲಿಗೆ ಮುಗೀತು. ಗಿಲ್​ ಅವರೇ ಟೆಸ್ಟ್​ ತಂಡದ ಉಪನಾಯಕ​. ಮೂರು ಮಾದರಿಗೆ ಗಿಲ್ ಅವರನ್ನೇ ವೈಸ್ ಕ್ಯಾಪ್ಟನ್ ಮಾಡಲು ಬಿಸಿಸಿಐ ನಿರ್ಧರಿಸಿದೆ. ಸೆಪ್ಟೆಂಬರ್‌ನಲ್ಲಿ ಭಾರತ-ಬಾಂಗ್ಲಾದೇಶ ಟೆಸ್ಟ್​ ಸರಣಿ ನಡೆಯಲಿದೆ. ಆ ಸಿರೀಸ್‌ಗೆ ಟೀಂ ಇಂಡಿಯಾ ಆನೌನ್ಸ್ ಆಗೋದನ್ನೇ ಎಲ್ಲರೂ ಕಾಯ್ತಿದ್ದಾರೆ. ಹಾಗೇನಾದ್ರೂ ಗಿಲ್​ರನ್ನ ನಾಯಕನನ್ನಾಗಿ ಮಾಡಲು ಬಿಸಿಸಿಐ ತಂತ್ರಗಾರಿಕೆ ಮಾಡುತ್ತಿರೋದು ನಿಜವಾದ್ರೆ ಕೆ.ಎಲ್ ರಾಹುಲ್ ಇನ್ಮುಂದೆ ಕೇವಲ ಆಟಗಾರನಾಗಿ ಟೆಸ್ಟ್​​-ಒನ್​ಡೇ ಆಡಬೇಕಾಗುತ್ತೆ ಅಷ್ಟೇ. ನಾಯಕ ಹಾಗೇ ಉಪನಾಯಕನ ಸ್ಥಾನ ಕನಸಾಗೇ ಉಳಿಯಲಿದೆ.

ಕೆ.ಎಲ್ ರಾಹುಲ್​​ ಸ್ಟೈಲಿಶ್​ & ಕ್ಲಾಸಿಕ್ ಬ್ಯಾಟರ್. ವಿಕೆಟ್ ಮುಂದೆ ಮಾತ್ರವಲ್ಲ. ವಿಕೆಟ್ ಹಿಂದೆಯೂ ಅದ್ಭುತ ಪ್ರದರ್ಶನ ನೀಡ್ತಾರೆ. ವಿಕೆಟ್ ಕೀಪರ್ ಆಗಿಯೂ ಸಕ್ಸಸ್ ಆಗಿದ್ದು, ದಶಕದಿಂದ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದಾರೆ. ಆದ್ರೆ ರಾಹುಲ್ ಅದ್ಭುತ ಪ್ಲೇಯರ್ ಅನ್ನೋದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಅವರೊಬ್ಬ ಅನ್‌ಫಿಟ್ ಪ್ಲೇಯರ್ ಅನ್ನೋದು. ಕೆರಿಯರ್ ಆರಂಭದಲ್ಲಿ ಉತ್ತಮ ಆಟಗಾರನಾಗಿದ್ದರೂ ಪ್ಲೇಯಿಂಗ್-11ನಲ್ಲಿ ಸ್ಥಾನ ಪಡೆಯಲು ಕಾಂಪಿಟೇಶನ್ ಹೆಚ್ಚಿದ್ದರಿಂದ ಬೆಂಚ್ ಕಾಯಬೇಕಾಯ್ತು. ಬಳಿಕ ಪ್ಲೇಯಿಂಗ್-11ನಲ್ಲಿ ಖಾಯಂ ಸ್ಥಾನ ಆಯ್ತು ಅನ್ನುವಷ್ಟರಲ್ಲಿ ಗಾಯ ಎಂಬ ಪೆಡಂಭೂತ ರಾಹುಲ್ ಬೆನ್ನು ಬಿದ್ದಿತ್ತು. ಆ ಬಳಿಕ ಅವರ ಕೆರಿಯರ್ ಡೋಲಾಯಮನವಾಯ್ತು. ಒಂದು ಸರಣಿ ಆಡೋದು. ಮತ್ತೊಂದು ಸರಣಿಯಿಂದ ಹೊರಗುಳಿಯೋದು ಕಾಮನ್ ಆಯ್ತು. ಇದೇ ಈಗ ರಾಹುಲ್ ಕೆರಿಯರ್‌ಗೆ ಮುಳುವಾಗಿದೆ.

Shwetha M

Leave a Reply

Your email address will not be published. Required fields are marked *