KL ರಾಹುಲ್‌ ಗೆ ಕೊರಗಜ್ಜನ ಆಶೀರ್ವಾದ – ತುಳುನಾಡ ದೈವದ ಕೃಪೆ ಸಿಕ್ಕಿತಾ?
ಫಲಿಸಿತು ಕನ್ನಡಿಗನ ಪೂಜಾಫಲ

KL ರಾಹುಲ್‌ ಗೆ ಕೊರಗಜ್ಜನ ಆಶೀರ್ವಾದ – ತುಳುನಾಡ ದೈವದ ಕೃಪೆ ಸಿಕ್ಕಿತಾ?ಫಲಿಸಿತು ಕನ್ನಡಿಗನ ಪೂಜಾಫಲ

ಶ್ರೀಲಂಕಾ ಸರಣಿಗೆ ಬಿಸಿಸಿಐ ಟೀಮ್ ಇಂಡಿಯಾವನ್ನ ಪ್ರಕಟ ಮಾಡಿದೆ. ಕೊನೆಗೂ ಕನ್ನಡಿಗರ ಕೋರಿಕೆ ಈಡೇರಿದೆ. ಅದರಲ್ಲೂ ತುಳುನಾಡ ಕಾರಣಿಕ ದೈವ ಕೊರಗಜ್ಜನ ಆಶೀರ್ವಾದವೂ ಫಲಿಸಿದೆ. ಹೌದು. ನಮ್ಮ ಹೆಮ್ಮೆಯ ಕನ್ನಡಿಗ ಕೆ.ಎಲ್ ರಾಹುಲ್ ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಇದೆಲ್ಲಾ ತುಳುನಾಡ ದೈವದ ಆಶೀರ್ವಾದವೇ ಕಾರಣ ಅಂತಿದ್ದಾರೆ ಅಭಿಮಾನಿಗಳು. ಕೊರಗಜ್ಜನ ಹರಕೆ ಈಡೇರಿಸಿದ ಒಂದೇ ವಾರದಲ್ಲಿ ಟೀಮ್ ಇಂಡಿಯಾದಲ್ಲಿ ಸೇರಿಕೊಂಡಿದ್ದಾರೆ ಕೆ.ಎಲ್ ರಾಹುಲ್. ಹಾಗಾದ್ರೆ ಸ್ನೇಹಿತರೇ, ಕೆ.ಎಲ್ ಕೊರಗಜ್ಜನ ಸನ್ನಿಧಾನಕ್ಕೆ ಬಂದಿದ್ದು ಯಾಕೆ, ಬಪ್ಪನಾಡುಗೆ ಭೇಟಿ ಕೊಟ್ಟಿದ್ಯಾಕೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಐಶ್‌ ಗೆ ಬಚ್ಚನ್‌ ಫ್ಯಾಮಿಲಿ ದೂರ ದೂರ..  – ನಟಿಯೊಂದಿಗಿನ ಸಲುಗೆಯೇ ಮುಳುವಾಯ್ತಾ?

ಕೊರಗಜ್ಜ ದಕ್ಷಿಣ ಕನ್ನಡ ಜಿಲ್ಲೆಯ ಕಾರಣಿಕ ದೈವ. ಅಪಾರ ಭಕ್ತರನ್ನು ಹೊಂದಿರುವ ಪ್ರಮುಖ ದೈವ ಕೊರಗಜ್ಜ. ಕೊರಗಜ್ಜನ ಕಾರಣಿಕ ಶಕ್ತಿ ಜಿಲ್ಲೆಯ ಗಡಿದಾಟಿದೆ. ದೇಶಾದ್ಯಂತ ನಾನಾ ಭಕ್ತರು ಅಭಯ ಕೋರಿಕೊಂಡು ಕೊರಗ್ಗಜನ ದೈವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇವರಲ್ಲಿ ಒಬ್ಬರು ಕೆ. ಎಲ್​ ರಾಹುಲ್ ಮತ್ತು ಅವರ ದಂಪತಿ ಅಥಿಯಾ ಶೆಟ್ಟಿ ಕೂಡಾ ಹೌದು. ಕಳೆದ ವಾರವಷ್ಟೇ ಕೆ.ಎಲ್ ರಾಹುಲ್ ಕೊರಗಜ್ಜನ ಆದಿಸ್ಥಾನಕ್ಕೆ ಭೇಟಿ ನೀಡಿದ್ದರು. ಕೊರಗಜ್ಜನ ದೈವದ ಆದಿ ಸ್ಥಾನಕ್ಕೆ ಕೆ.ಎಲ್ ರಾಹುಲ್ ಕುಟುಂಬ ಸಮೇತ ಆಗಮಿಸಿದ್ದರು. ಕುತ್ತಾರಿನ ದೆಕ್ಕಾಡು ಅಲ್ಲಿರೋ ಆದಿಸ್ಥಾನಕ್ಕೆ ಭೇಟಿ ನೀಡಿದ್ದು, ಕೆಲಕಾಲ ಪ್ರಾರ್ಥನೆಯಲ್ಲಿ ತಲ್ಲೀನರಾಗಿದ್ದರು. ಕೆ. ಎಲ್​ ರಾಹುಲ್ ಅವರು ಪತ್ನಿ ಹಾಗೂ ಬಾಮೈದ ಅಹಾನ್​ ಶೆಟ್ಟಿ ಅವರೊಂದಿಗೆ ಆಗಮಿಸಿದ್ದರು. ಅಷ್ಟೇ ಅಲ್ಲ, ಕೆ.ಎಲ್ ರಾಹುಲ್ ಉಳ್ಳಾಲದ ಕುತ್ತಾರು ಕೊರಗಜ್ಜನ ಕಟ್ಟೆಯಲ್ಲಿ ಕೋಲದಲ್ಲೂ ಕೂಡಾ ಪಾಲ್ಗೊಂಡಿದ್ದರು. ಕಳೆದ ಭಾನುವಾರ ಕೊರಗಜ್ಜನ ಕೋಲದಲ್ಲಿ ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ, ಸುನಿಲ್ ಶೆಟ್ಟಿ ಕುಟುಂಬ ಕೂಡಾ ಭಾಗಿಯಾಗಿತ್ತು. ಇದು ಹರಕೆಯ ಕೋಲವಾಗಿತ್ತು ಅನ್ನೋದು ಮತ್ತೊಂದು ವಿಶೇಷ. ಇದ್ರಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡಾ ಭಾಗವಹಿಸಿದ್ದರು. ಮಹಿಳೆಯರಿಗೆ ರಾತ್ರಿ ಹೊತ್ತು ಕಟ್ಟೆಯ ಒಳಗೆ ಪ್ರವೇಶವಿಲ್ಲದ ಕಾರಣ ಕತ್ರಿನಾ ಮತ್ತು ಅಥಿಯಾ ಶೆಟ್ಟಿ ಹೊರಗಡೆಯಿಂದಲೇ ಕೋಲವನ್ನು ಕಣ್ತುಂಬಿಕೊಂಡಿದ್ದರು.

ಇಲ್ಲಿ ಒಂದು ವಿಚಾರ ಗಮನಿಸಬೇಕು ಸ್ನೇಹಿತರೇ,. ಕೆ.ಎಲ್ ರಾಹುಲ್ ಪ್ರತಿಬಾರಿಯೂ ತನ್ನ ಕ್ರಿಕೆಟ್ ಕೆರಿಯರ್‌ನಲ್ಲಿ ವಿಶ್ವಾಸ ಕಳೆದುಕೊಂಡಾಗಲೆಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ತನ್ನ ಸಾಧನೆಗೂ ಜೊತೆಗೆ ತನ್ನ ನೋವಿನ ಸಮಯದಲ್ಲೂ ಕೆ.ಎಲ್ ನಂಬೋದು ದೇವರನ್ನು ಮಾತ್ರ. ಈ ಬಾರಿ ಟಿ20 ವಿಶ್ವಕಪ್‌ಗೆ ಕನ್ನಡಿಗ ಕೆ.ಎಲ್ ಆಯ್ಕೆಯಾಗಿರಲಿಲ್ಲ. ಇದಾದ ಮೇಲೆ ಜಿಂಬಾಬ್ವೆ ಸರಣಿಗೂ ಸೆಲೆಕ್ಟ್ ಆಗಿರಲಿಲ್ಲ. ಇದೀಗ ಲಂಕಾ ಸರಣಿ ಆಯ್ಕೆಗೂ ಮುನ್ನವೇ ಕೆ.ಎಲ್ ಓಡೋಡಿ ಬಂದಿದ್ದು ಶಕ್ತಿಯುತ ದೈವ ಕೊರಗಜ್ಜನ ಸನ್ನಿಧಾನಕ್ಕೆ. ಕೊರಗಜ್ಜನ ಆಶೀರ್ವಾದದ ಫಲವೋ ಎಂಬಂತೆ ಈಗ ಕೆ.ಎಲ್ ಟೀಮ್ ಇಂಡಿಯಾಕ್ಕೆ ಗ್ರೇಟ್ ಕಂಬ್ಯಾಕ್ ಮಾಡಿದ್ದಾರೆ. ಜೊತೆಗೆ ಕೆ.ಎಲ್ ರಾಹುಲ್ ದಂಪತಿ

ಐತಿಹಾಸಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೂ ಭೇಟಿ ನೀಡಿದ್ದರು.  ಪತ್ನಿ ಅತಿಯಾ ಶೆಟ್ಟಿ ಅವರ ಜತೆ ದೇಗುಲಕ್ಕೆ ಭೇಟಿ ನೀಡಿದ ಕೆ.ಎಲ್ ರಾಹುಲ್ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು. ಬಪ್ಪನಾಡು ಕ್ಷೇತ್ರವು ಕೂಡಾ ದಕ್ಷಿಣ ಕನ್ನಡ ಜಿಲ್ಲೆಯ ಪವರ್ ಫುಲ್ ಕ್ಷೇತ್ರ. ಇಲ್ಲೂ ಕೂಡಾ ಕನ್ನಡಿಗ ಕೆ.ಎಲ್ ವಿಶೇಷ ಪೂಜೆ ಮಾಡಿಸಿದ್ದರು. ಇದೀಗ ಕೊರಗಜ್ಜನ ಕೃಪಾಕಟಾಕ್ಷ, ದುರ್ಗಾಪರಮೇಶ್ವರಿ ಮಾತೆಯ ಆಶೀರ್ವಾದದ ಫಲ ಕೆ.ಎಲ್ ರಾಹುಲ್ ಏನು ಅಂದುಕೊಂಡಿದ್ದರೋ ಅದೇ ಆಗಿದೆ. ವಿಶ್ವ ಕಪ್​ ತಂಡದಲ್ಲಿ ಅವಕಾಶ ಸಿಗದ ನೋವಲ್ಲಿದ್ದ ಕೆ. ಎಲ್ ರಾಹುಲ್ ಗೆ ಕೊರಗಜ್ಜ ನಿಜವಾಗಿಯೂ ಶಕ್ತಿ ತುಂಬಿದ್ದಾರೆ. ​ ಶ್ರೀಲಂಕಾ ಪ್ರವಾಸದಲ್ಲಿ ವಿಕೆಟ್ ಕೀಪರ್ ಆಗಿ ಕೆ.ಎಲ್ ಟೀಮ್ ಇಂಡಿಯಾ ತಂಡ ಸೇರಿಕೊಂಡಿದ್ದಾರೆ. ಇಲ್ಲಿ ಕೊರಗಜ್ಜನ ಬಳಿ ಕೆ.ಎಲ್ ರಾಹುಲ್ ಹರಕೆ ಕಟ್ಟಿಕೊಂಡು ಹರಕೆ ಈಡೇರಿಸಿಕೊಂಡು ಹೋಗಿದ್ದು ಹೌದು. ಇದಾಗಿ ಕೆಲವೇ ದಿನಗಳಲ್ಲಿ ಕೆ.ಎಲ್ ರಾಹುಲ್ ಪ್ರಾರ್ಥನೆ ಈಡೇರಿದ್ದೂ ಕೂಡಾ ಅಷ್ಟೇ ಸತ್ಯ. ಜೊತೆಗೆ ಕೋಟಿ ಕೋಟಿ ಕನ್ನಡಿಗರ ಪ್ರಾರ್ಥನೆ ಕೂಡಾ ಫಲಿಸಿದೆ.

Shwetha M

Leave a Reply

Your email address will not be published. Required fields are marked *