ಅಂಗದ್, ಅಕಾಯ್, ವಮಿಕಾ ಹೇಗಿದೆ ಕ್ರಿಕೆಟರ್ಸ್ ಮಕ್ಕಳ‌ ಹೆಸರು?  – ಈ ಪುಟಾಣಿಗಳ ಹೆಸರಿನ ಅರ್ಥವೇನು?

ಅಂಗದ್, ಅಕಾಯ್, ವಮಿಕಾ ಹೇಗಿದೆ ಕ್ರಿಕೆಟರ್ಸ್ ಮಕ್ಕಳ‌ ಹೆಸರು?  – ಈ ಪುಟಾಣಿಗಳ ಹೆಸರಿನ ಅರ್ಥವೇನು?

ಭಾರತದಲ್ಲಿ ಕ್ರಿಕೆಟರ್ಸ್ ಅಂದ್ರೆ ಅತಿದೊಡ್ಡ  ಸೆಲೆಬ್ರೆಟಿಗಳು. ಇವರ ಪರ್ಸನಲ್ ಲೈಫ್ ಯಾವಾಗಲೂ ಚರ್ಚೆಯಲ್ಲಿರುತ್ತದೆ. ಎಲ್ಲಿ ಹೋದ್ರೂ, ಏನ್ ಮಾಡಿದ್ರು ಕೂಡ ಸದಾ ಸುದ್ದಿಯಾಗುತ್ತೆ.. ಕ್ರಿಕೆಟರ್ಸ್  ಮಕ್ಕಳು, ಮಡದಿ ಬಗ್ಗೆ ಫ್ಯಾನ್ಸ್ ಗೆ ಕುತೂಹಲವಂತೂ ಇದ್ದೇ ಇರುತ್ತೆ..  ಅವರ ಲೈಫ್ ಸ್ಟೈಲ್, ಅವರ ಹೆಸರು ಮುಂತಾದವುಗಳನ್ನ ತಿಳಿದುಕೊಳ್ಳಲು ಫ್ಯಾನ್ಸ್ ಸದಾ ಉತ್ಸುಕರಾಗಿರ್ತಾರೆ. ಟೀಂ ಇಂಡಿಯಾದ ಕೆಲ ಕ್ರಿಕೆಟರ್ಸ್ ಅವರ ಮಕ್ಕಳಿಗೆ ವಿಭಿನ್ನವಾದ ಹೆಸ್ರು ಇಟ್ಟಿದ್ದಾರೆ..

ಇದನ್ನೂ ಓದಿ: ಪಾಂಡ್ಯಗೆ ಸೈಡ್ ಹೊಡೆದ ಸೂರ್ಯ – ಕ್ಯಾಪ್ಟನ್ಸಿ ಹಿಂದಿದೆ ಮೂವರ ಬಲ?

ಟೀಂ ಇಂಡಿಯಾ ಆಟಗಾರರಿಗೆ ಫ್ಯಾನ್ಸ್ ಬೇಸ್ ತುಂಬಾನೆ ದೊಡ್ಡದಿದೆ..  ಆಟಗಾರರನ್ನ ನೋಡಲೆಂದೇ ಮೈದಾನಕ್ಕೆ ಫ್ಯಾನ್ಸ್ ಬರ್ತಿರ್ತಾರೆ.. ಆಟಗಾರರನ್ನು ಅದೆಷ್ಟೋ ಮಂದಿ ದೇವರಂತೆ ಪೂಜಿಸ್ತಾರೆ.. ಅಷ್ಟರ ಮಟ್ಟಿಗೆ ತಮ್ಮ ಆಟಗಾರರ ಮೇಲೆ ಅಭಿಮಾನ ಇಟ್ಟುಕೊಂಡಿದ್ದಾರೆ.. ತಮ್ಮ ನೆಚ್ಚಿನ ಕ್ರಿಕೆಟರ್ಸ್ ಮೈದಾನದ ಹೊರಗೆ ಹೇಗಿರ್ತಾರೆ.. ಏನ್ ಮಾಡ್ತಾರೆ ಅಂತಾ ತಿಳಿದುಕೊಳ್ಳುತ್ತಲೇ ಇರ್ತಾರೆ.‌. ಕ್ರಿಕೆಟರ್ಸ್ ತಮ್ಮ ಮಕ್ಕಳಿಗೆ ವಿಭಿನ್ನವಾಗಿ ಹೆಸರಿಟ್ಟಿದ್ದಾರೆ.. ಯಾವ್ಯಾವ ಕ್ರಿಕೆಟರ್ಸ್ ತಮ್ಮ ಮಕ್ಕಳಿಗೆ ವಿಭಿನ್ನವಾಗಿ ಹೆಸರಿಟ್ಟಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಮಗಳಿಗೆ ವಮಿಕಾ ಮತ್ತು ಮಗನಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ.  ವಮಿಕಾ ಎಂದರೆ ಮಾತೆ ದುರ್ಗೆ. ಅಕಾಯ ಎಂದರೆ  ಶಿವ ಎಂದರ್ಥ.  ಇನ್ನು ಹರ್ಭಜನ್ ಸಿಂಗ್  ತನ್ನ ಮಗಳಿಗೆ ಹೀನಾ ಹೀರ್ ಎಂದು ಹೆಸರಿಟ್ಟಿದ್ದಾರೆ. ಹೀನಾ ಹೀರ್ ಎಂದರೆ ಸುಂದರ ದೇವತೆ ಅಂತಾ ಅರ್ಥ.

ಕ್ರಿಕೆಟಿಗ ಆಶಿಶ್ ನೆಹ್ರಾ, ಅವರು ತಮ್ಮ ಮಗಳಿಗೆ ಅರಿಯಾನಾ ನೆಹ್ರಾ ಎಂದು ಹೆಸರಿಟ್ಟಿದ್ದಾರೆ.. ಈ ಹೆಸರಿಗೆ ತುಂಬಾ ಪವಿತ್ರವಾದದ್ದು ಎಂಬ ಅರ್ಥವಿದೆ.

ಸದ್ಯ ಟೀಮ್ ಇಂಡಿಯ ನೂತನ ಕೋಚಾಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್, ತಮ್ಮ‌ಇಬ್ಬರು ಪುತ್ರಿಯರಿಗೆ ಅಜಿನ್ ಮತ್ತು ಅನೈಜಾ ಎಂಬ ಹೆಸರಿಟ್ಟಿದ್ದಾರೆ. ಅಜಿನ್ ಮತ್ತು ಅನೈಜಾ ಅಂದರೆ ಗೌರವಾನ್ವಿತ ಎಂದರ್ಥ.

ಇನ್ನು ಮಹೇಂದ್ರ ಸಿಂಗ್ ಧೋನಿ ಮಗಳಂತೂ ಆಲ್ ರೆಡಿ ಸೆಲೆಬ್ರಿಟಿಯಾಗಿದ್ದಾಳೆ.. ಆಕೆಯ ಕ್ಯೂಟ್‌ ಕ್ಯೂಟ್‌ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತೆ. ಧೋನಿ ತಮ್ಮ ಮಗಳಿಗೆ ಜೀವಾ ಎಂದು ಹೆಸರಿಟ್ಟಿದ್ದಾರೆ. ಜೀವಾ ಎಂದರೆ ಬುದ್ಧಿವಂತ, ಬೆಳಕು, ಹೊಳಪು, ದೇವರ ಬೆಳಕು ಎಂದರ್ಥ.

ಇನ್ನು ಟೀಂ ಇಂಡಿಯಾದ ಬೌಲರ್ ಆರ್ ಅಶ್ವಿನ್ ಅವರಿಗೂ ಇಬ್ಬರು ಹೆಣ್ಣುಮಕ್ಕಳು.  ಒಬ್ಬರ ಹೆಸರು ಆದ್ಯ . ಆದ್ಯ ಎಂದರೆ, ದೇವಿ ದುರ್ಗೆ ಎಂದರ್ಥ. ಇನ್ನೊಬ್ಬ ಮಗಳ ಹೆಸರು ಅಖಿರಾ ಎಂದು.. ಅಂದರೆ ಗಣೇಶ ಎಂದರ್ಥ.

ಯುವರಾಜ್ ಸಿಂಗ್ ಮತ್ತು ಹ್ಯಾಝೆಲ್ ಕೀಚ್ ತಮ್ಮ ಮಗನಿಗೆ ಓರಿಯನ್ ಕೀಚ್ ಸಿಂಗ್ ಎಂದು ಹೆಸರಿಟ್ಟಿದ್ದಾರೆ. ಓರಿಯನ್ ಎಂದರೆ ನಕ್ಷತ್ರಪುಂಜ ಎಂದರ್ಥ.

ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಅವರಿಗೆ ಪುತ್ರನಿದ್ದು, ಅವರ ಹೆಸರು ಜೋರವರ್ ಧವನ್. ಜೋರವರ್ ಎಂದರೆ ಧೈರ್ಯಶಾಲಿ ಎಂದರ್ಥ.

ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಮಗನಿಗೆ ಅಗಸ್ತ್ಯ ಎಂದು ಹೆಸರಿಟ್ಟಿದ್ದಾರೆ. ಅಗಸ್ತ್ಯ ಎನ್ನುವುದು ನಮ್ಮ‌ಪುರಾಣಗಳಲ್ಲಿ ಬರುವ ಮಹರ್ಷಿಯ ಹೆಸರು..

ಭಾರತದ ಆಟಗಾರ ಅಜಿಂಕ್ಯ ರಹಾನೆ ತಮ್ಮ ಮಗಳಿಗೆ ತುಂಬಾ ಮುದ್ದಾದ ಹೆಸರನ್ನು ಇಟ್ಟಿದ್ದಾರೆ. ಅಜಿಂಕ್ಯ ಮತ್ತು ರಾಧಿಕಾ ತಮ್ಮ ಮಗಳಿಗೆ ಆರ್ಯ ಎಂದು ಹೆಸರಿಟ್ಟಿದ್ದಾರೆ. ಆರ್ಯ ಎಂದರೆ ಉದಾತ್ತ ಮಹಿಳೆ, ಗೌರವಾನ್ವಿತ, ಸ್ನೇಹಿತ, ನಿಷ್ಠಾವಂತ, ಪರೋಪಕಾರಿ, ಮಂಗಳಕರ ಎಂದರ್ಥವಾಗಿದೆ.

ಇನ್ನು ಜಸ್ ಪ್ರೀತ್ ಬುಮ್ರಾ ತಮ್ಮ ಮಗನಿಗೆ ಅಂಗದ್ ಎಂದು ಹೆಸರಿಟ್ಟಿದ್ದಾರೆ.. ರಾಮಾಯಣದಲ್ಲಿ ಬರುವ ಮಹಾ ಬಲಶಾಲಿ ವಾಲಿಯ ಮಗನ ಹೆಸರೂ ಅಂಗದ.. ಹೀಗೆ ಕ್ರಿಕೆಟರ್ಸ್ ತಮ್ಮ‌ ಮಕ್ಕಳಿಗೆ ಸಾಮಾನ್ಯವಾಗಿ ಎಲ್ಲೂ ಸಿಗದ ಹೆಸರಿಟ್ಟರೂ ಅದರ ಅರ್ಥ ಚೆನ್ನಾಗಿರುವಂತೆ ನೋಡಿಕೊಳ್ಳುತ್ತಿರುವುದು ಗಮನಾರ್ಹ..

Shwetha M

Leave a Reply

Your email address will not be published. Required fields are marked *