ಪಾಂಡ್ಯಗೆ ಸೈಡ್ ಹೊಡೆದ ಸೂರ್ಯ – ಕ್ಯಾಪ್ಟನ್ಸಿ ಹಿಂದಿದೆ ಮೂವರ ಬಲ?
T-20Iಗೆ ಇನ್ಮುಂದೆ SKY ಸಾರಥಿ

ಪಾಂಡ್ಯಗೆ ಸೈಡ್ ಹೊಡೆದ ಸೂರ್ಯ – ಕ್ಯಾಪ್ಟನ್ಸಿ ಹಿಂದಿದೆ ಮೂವರ ಬಲ?T-20Iಗೆ ಇನ್ಮುಂದೆ SKY ಸಾರಥಿ

ಶ್ರೀಲಂಕಾ ವಿರುದ್ಧದ ಟಿ-20 ಸರಣಿಗೆ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗ್ತಾರೆ ಎನ್ನಲಾಗಿತ್ತು. ಬಟ್ ಅಂತಿಮಗಾಗಿ ಸೂರ್ಯಕುಮಾರ್ ಯಾದವ್​ಗೆ ಮಣೆ ಹಾಕಲಾಗಿದೆ. ಲಂಕಾ ವಿರುದ್ಧದ ಟಿ-20 ಸರಣಿಗೆ ಸೂರ್ಯಕುಮಾರ್​ ಯಾದವ್ ಸಾರಥ್ಯ ವಹಿಸಲಿದ್ದಾರೆ. ಆರಂಭದಲ್ಲಿ ಹಾರ್ದಿಕ್​ ಪಾಂಡ್ಯ T20 ತಂಡದ ಉಪನಾಯಕನ ಪಟ್ಟದಲ್ಲಿದ್ದಿದ್ದರಿಂದ ಭವಿಷ್ಯದ ಕ್ಯಾಪ್ಟನ್​​ ಎಂದೇ ಬಿಂಬಿತವಾಗಿದ್ರು. ರೋಹಿತ್​ ಶರ್ಮಾ ಚುಟುಕು ಫಾರ್ಮೆಟ್​ಗೆ ಗುಡ್​ ಬೈ ಹೇಳಿದ ಬಳಿಕ ಪಾಂಡ್ಯ​ಗೆ ಪಟ್ಟಾಭಿಷೇಕ ಬಹುತೇಕ ಕನ್​ಫರ್ಮ್​ ಎನ್ನಲಾಗಿತ್ತು. ಆದ್ರೀಗ ಸರ್​ಪ್ರೈಸ್​ ಎನ್ನುವಂತೆ, ಕ್ಯಾಪ್ಟನ್ಸಿ ರೇಸ್​ನಲ್ಲೇ ಇಲ್ಲದ ಸೂರ್ಯಕುಮಾರ್​ ಯಾದವ್​ಗೆ ನಾಯಕತ್ವ ನೀಡಲಾಗಿದೆ. ಅಷ್ಟಕ್ಕೂ ಮಿಸ್ಟರ್​​​ 360 ಡಿಗ್ರಿ ಬ್ಯಾಟರ್​​ಗೆ ಟಿ20 ನಾಯಕತ್ವ ಒಲಿದಿದ್ದೇಗೆ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ಇಲ್ಲಿ ಸೂರ್ಯ ಶೈನ್ ಆಗೋಕೆ ಕಾರಣ ತ್ರಿಮೂರ್ತಿ ಬಲ ಎನ್ನಲಾಗ್ತಿದೆ.

ಇದನ್ನೂ ಓದಿ: ಪಾಕ್‌ ಸದೆ ಬಡಿದ ಭಾರತ ವನಿತೆಯರು! – ಭಾರತಕ್ಕೆ ಗೆಲುವಿನ ಶುಭಾರಂಭ!

ಸೂರ್ಯನಿಗೆ ತ್ರಿಮೂರ್ತಿ ಬಲ!  

ಸೂರ್ಯನಿಗೆ ಇಲ್ಲಿ ಮೊದಲು ಬೆನ್ನೆಲುಬಾಗಿ ನಿಂತಿದ್ದೇ ನೂತನ ಕೋಚ್ ಗೌತಮ್ ಗಂಭೀರ್. ವರ್ಕ್​​ಲೋಡ್​ ಮ್ಯಾನೇಜ್​ಮೆಂಟ್​ ಕಾರಣಕ್ಕೆ ಸರಣಿಯಿಂದ ಸರಣಿಗೆ ವಿಶ್ರಾಂತಿ ಪಡೆಯುವ ನಾಯಕ ತಂಡಕ್ಕೆ ಬೇಡ. ಮುಂಬರೋ ಟಿ20 ವಿಶ್ವಕಪ್​ವರೆಗೆ ತಂಡದೊಂದಿಗೆ ಇರುವ ನಾಯಕ ಬೇಕು ಅನ್ನೋ ಬೇಡಿಕೆಯನ್ನ ಹೆಡ್​ ಕೋಚ್​ ಗೌತಮ್​ ಗಂಭೀರ್​ ಸೆಲೆಕ್ಷನ್​ ಕಮಿಟಿ ಮುಂದಿಟ್ಟಿದ್ರು. ಈ ಅಜೆಂಡಾ ಇಟ್ಟುಕೊಂಡೇ ಹಾರ್ದಿಕ್​ ಬದಲು ನಾಯಕತ್ವಕ್ಕೆ ಸೂರ್ಯಕುಮಾರ್​ ಹೆಸರನ್ನ ಪ್ರಸ್ತಾಪಿಸಿದ್ರು. ಹಾಗೇ ಸೆಕೆಂಡ್ ಶಕ್ತಿ ಅಂದ್ರೆ ಅದು ರೋಹಿತ್ ಶರ್ಮಾ. ಟೀಮ್​ ಇಂಡಿಯಾದ ಟಿ20 ಮಾದರಿಯ ನಾಯಕತ್ವ ತ್ಯಜಿಸಿರುವ, ಏಕದಿನ ಹಾಗೂ ಟೆಸ್ಟ್​ ತಂಡದ ನಾಯಕನಾಗಿ ಮುಂದುವರೆದಿರೋ ರೋಹಿತ್​ ಶರ್ಮಾ ಬೆಂಬಲ ಕೂಡ ಸೂರ್ಯಕುಮಾರ್​ಗಿದೆ. ರೋಹಿತ್ ಸೂರ್ಯ ಒಟ್ಟಾಗಿ ಬೆಳೆದವರು. ಮುಂಬೈ ಹಾಗೂ ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಆಡಿದ್ದಾರೆ. ರೋಹಿತ್​ ಅಲಭ್ಯತೆಯಲ್ಲಿ ಮುಂಬೈ ಇಂಡಿಯನ್ಸ್​ ತಂಡವನ್ನ ಸೂರ್ಯಕುಮಾರ್​ ಮುನ್ನಡೆಸಿದ್ದೂ ಇದೆ. ಈ ಎಲ್ಲಾ ಕಾರಣದಿಂದ ಗಂಭೀರ್​ ಸೂರ್ಯನ ಹೆಸರನ್ನು ನಾಯಕನ ಸ್ಥಾನಕ್ಕೆ ಪ್ರಸ್ತಾಪಿಸಿದಾಗ ರೋಹಿತ್​ ಕೂಡ ಸಮ್ಮತಿಸಿದ್ದಾರೆ. ಅಲ್ದೇ ಸೆಲೆಕ್ಷನ್​ ಕಮಿಟಿ ಚೇರ್​ ಪರ್ಸನ್​ ಅಜಿತ್​ ಅಗರ್ಕರ್​ಗೂ ಸೂರ್ಯನ ಮೇಲೆ ಒಲವಿತ್ತು. ಸೂರ್ಯ ತಮ್ಮ ತವರಿನ ಆಟಗಾರ ಅನ್ನೋದು ಒಂದು ಕಾರಣ. ಈ ಹಿಂದೆ ಗಂಭೀರ್​ ಕೆಕೆಆರ್​ ನಾಯಕನಾಗಿದ್ದಾಗ, ಸೂರ್ಯ ವೈಸ್​​ ಕ್ಯಾಪ್ಟನ್​ ಆಗಿದ್ದರು. ಇಬ್ಬರ ಕೆಮಿಸ್ಟ್ರಿ ಚನ್ನಾಗಿದೆ. ಯಾವುದೇ ವಿವಾದಗಳಾಗಿಲ್ಲ ಅನ್ನೋದು ಇನ್ನೊಂದು ಕಾರಣ. ಈ ಲೆಕ್ಕಾಚಾರ ಹಾಕಿ, ಸೆಲೆಕ್ಟರ್​ ಅಗರ್ಕರ್​​, ಸೂರ್ಯನನ್ನ ಕ್ಯಾಪ್ಟನ್​ ಆಗಿ ಆಯ್ಕೆ ಮಾಡಿದ್ದಾರೆ.

ಇನ್ನು ಪಾಂಡ್ಯಗೆ ನಾಯಕತ್ವ ನೀಡದಿರಲು ಪ್ರಮುಖ ಕಾರಣ ಅವರ ಫಿಟ್ನೆಸ್‌ ಸಮಸ್ಯೆ. ಪಾಂಡ್ಯ ತಮ್ಮ 8 ವರ್ಷಗಳ ಕ್ರಿಕೆಟ್​ ವೃತ್ತಿಬದುಕಿನಲ್ಲಿ ಹಲವು ಬಾರಿ ಗಾಯದ ಸಮಸ್ಯೆಗೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದರು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಪದೇಪದೆ ಗಾಯಕ್ಕೆ ತುತ್ತಾಗುವ ಕಾರಣ ಪಾಂಡ್ಯ ನೇಮಕಕ್ಕೆ ಬಿಸಿಸಿಐನ ಕೆಲ ಪ್ರಮುಖ ಅಧಿಕಾರಿಗಳು ಹಾಗೂ ಆಯ್ಕೆ ಸಮಿತಿಯ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇಲ್ಲಿ ಸೂರ್ಯನಿಗೆ ಕ್ಯಾಪ್ಟನ್ಸಿ  ಒಲಿದಿರೋದ್ರ ಹಿಂದೆ ಕಾಪು ಮಾರಿಯಮ್ಮನ ಆಶೀರ್ವಾದ ಇದೆ ಎಂಬ ಬಗ್ಗೆಯೂ ಸುದ್ದಿಯಾಗ್ತಿದೆ. ಸೂರ್ಯಕುಮಾರ್ ತಮ್ಮ​ ಪತ್ನಿ​ ದೇವಿಶಾ ಶೆಟ್ಟಿ ಜತೆಗೂಡಿ ಜುಲೈ 8ರಂದು ಕಾಪು ಶ್ರೀ ಹೊಸ ಮಾರಿಗುಡಿ  ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಸೂರ್ಯಕುಮಾರ್​ ಅವರಿಗೆ ನಾಯಕರಾಗುವ ಭಾಗ್ಯ ದೊರಕಲಿ ಎಂದು ಹಾರೈಸಿ ಪ್ರಸಾದ ನೀಡಿದ್ದರು. ಇದೀಗ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಸೂರ್ಯಕುಮಾರ್​ ನಾಯಕನಾಗಿ ಆಯ್ಕೆಯಾಗಿದ್ದಾರೆ. ನಾಯಕತ್ವ ಒಲಿದದ್ದು ಕಾಪು ಮಾರಿಗುಡಿಯ ಮಾರಿಯಮ್ಮ ದೇವಿಯ ಆಶೀರ್ವಾದದಿಂದಲೇ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅದೆಲ್ಲಾ ಏನೇ ಇದ್ರೂ ಸೂರ್ಯಕುಮಾರ್‌ ಯಾದವ್ ಕೂಡ ಅದ್ಭುತ ಆಟಗಾರ.​ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿ ಸರಣಿ ಗೆದ್ದಿದ್ದರು. ಸೂರ್ಯಕುಮಾರ್ ಯಾದವ್ ಕಾರ್ಯವೈಖರಿ ಬಗ್ಗೆಯೂ ಬಿಸಿಸಿಐ ಹಾಗೂ ಆಯ್ಕೆ ಸಮಿತಿಗೆ ಸಮಾಧಾನವಿದ್ದು, ಅವರನ್ನೇ ನಾಯಕನನ್ನಾಗಿ ಮುಂದುವರಿಸುವ ಸಾಧ್ಯತೆಯೂ ದಟ್ಟವಾಗಿದೆ.

Shwetha M

Leave a Reply

Your email address will not be published. Required fields are marked *