ಪಾಂಡ್ಯ ಡಿವೋರ್ಸ್ ಗೆ ಕಾರಣ ಇದೇನಾ? – ನತಾಶ ಎಷ್ಟು ದುಡ್ಡು ಕೇಳಿದ್ರು?
ಹಾರ್ದಿಕ್‌ ನೋವಿನ ಮಾತು!

ಪಾಂಡ್ಯ ಡಿವೋರ್ಸ್ ಗೆ ಕಾರಣ ಇದೇನಾ? – ನತಾಶ ಎಷ್ಟು ದುಡ್ಡು ಕೇಳಿದ್ರು?ಹಾರ್ದಿಕ್‌ ನೋವಿನ ಮಾತು!

ಹರಿದಾಡ್ತಿದ್ದ ಸುದ್ದಿ ಕೊನೆಗೂ ನಿಜವಾಗಿದೆ. ಹಾರ್ದಿಕ್ ಪಾಂಡ್ಯ ಹಾಗೂ ನತಾಶ ಸ್ಟಾಂಕೋವಿಕ್ ಡಿವೋರ್ಸ್ ಪಡೆದಿದ್ದಾರೆ. ಕಳೆದ ಹಲವು ದಿನಗಳಿಂದ ಹಾರ್ದಿಕ್ ಪಾಂಡ್ಯ, ನತಾಶಾ ಡಿವೋರ್ಸ್ ಬಗ್ಗೆ ಗುಸು, ಗುಸು ಕೇಳಿ ಬಂದಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಸಾಕಷ್ಟು ಬೆಳವಣಿಗೆಗಳು ನಡೆದಿತ್ತು. ಆದ್ರೆ ಹಾರ್ದಿಕ್ ಪಾಂಡ್ಯ ಆಗ್ಲೀ, ನತಾಶಾ ಆಗ್ಲೀ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಆದ್ರೆ ನಿನ್ನೆ ಎಲ್ಲಾ ವದಂತಿಗಳಿಗೆ ಖುದ್ದು ಹಾರ್ದಿಕ್ ಪಾಂಡ್ಯ ದಂಪತಿ ಬ್ರೇಕ್ ಹಾಕಿದ್ದಾರೆ. ತಾವಿಬ್ಬರು ಪರಸ್ಪರ ಬೇರೆ ಬೇರೆಯಾಗಿರುವುದಾಗಿ ಸ್ವತಃ ಹಾರ್ದಿಕ್ ಪಾಂಡ್ಯ ಹಾಗೂ ನತಾಶ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮಗನ ಭವಿಷ್ಯದ ಬಗ್ಗೆಯೂ ಸುದೀರ್ಘವಾಗಿ ಬರೆದು ಪೋಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ಪಾಂಡ್ಯ, ನತಾಶ ಡಿವೋರ್ಸ್ ಗೆ ಏನ್ ಕಾರಣ? ಮಗನ ಭವಿಷ್ಯದ ಬಗ್ಗೆ ಇವರಿಬ್ರು ಏನ್ ಪ್ಲ್ಯಾನ್ ಮಾಡಿದ್ದಾರೆ? ಪಾಂಡ್ಯ ಬಳಿ ನತಾಶ ಜೀವನಾಂಶವಾಗಿ  ಎಷ್ಟು ಹಣ ಕೇಳಿದ್ದಾರೆ? ಡಿವೋರ್ಸ್ ಬಳಿಕ ಪಾಂಡ್ಯ ಹೇಳಿದ್ದೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕತ್ರಿನಾ ಕೈಫ್ ಫೋಟೋಗೆ ಪೂಜೆ – ಕ್ಯಾಟ್ ಬೇಬಿ ದೇವರಾಗಿದ್ದು ಯಾಕೆ?

ವಿಶ್ವಕಪ್ ವೀರ ಹಾರ್ದಿಕ್ ಪಾಂಡ್ಯ ಕಡೆಗೂ ತಮ್ಮ ಫ್ಯಾಮಿಲಿ ಲೈಫ್ ನ ಗುಟ್ಟನ್ನ ಬಯಲು ಮಾಡಿದ್ದಾರೆ. ಹೆಂಡ್ತಿ ಜೊತೆಗಿನ ಡಿವೋರ್ಸ್ ಗುಸು ಗುಸುಗೆ ತೆರೆ ಎಳೆದಿದ್ದಾರೆ. ಪರಸ್ಪರ ಒಪ್ಪೆಗೆಯೊಂಂದಿಗೆ ನತಾಶ ಮತ್ತು ತಾನು ದೂರವಾಗ್ತಿರೋದನ್ನ   ತೆರೆದಿಟ್ಟಿದ್ದಾರೆ.. ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ 4 ವರ್ಷಗಳ ವೈವಾಹಿಕ ಸಂಬಂಧ ಮುರಿದು ಬಿದ್ದಿದೆ ಅನ್ನೋದನ್ನ ಖಚಿತ ಪಡಿಸಿದ್ದಾರೆ..

ಪ್ರೀತಿಸಿ ಮದುವೆಯಾಗಿದ್ದ ಹಾರ್ದಿಕ್ ಪಾಂಡ್ಯ ಮತ್ತು ನತಾಸಾ ಸ್ಟಾಂಕೋವಿಕ್ ವಿಚ್ಛೇದನದ ಬಗ್ಗೆ ಅನೇಕ ತಿಂಗಳುಗಳಿಂದ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಸಾಕಷ್ಟು ಬೆಳವಣಿಗೆಗಳು ಕೂಡ ನಡೆದಿದ್ದವು. ಆದ್ರೂ ಕೂಡ ಅಭಿಮಾನಿಗಳಲ್ಲಿ ಒಂದು ಸಣ್ಣ ಹೋಪ್ ಇತ್ತು.. ಇವರಿಬ್ಬರು ಈ ಬಗ್ಗೆ ಏನೂ ಹೇಳ್ತಿಲ್ಲ. ಹರಿದಾಡ್ತಿರೋ ಸುದ್ದಿಗಳೆಲ್ಲಾ ಸುಳ್ಳು ಅಂತಾ ಅದೆಷ್ಟೋ ಮಂದಿ ಹೇಳ್ತಾ ಇದ್ರು.. ಆದ್ರೆ ಇದೀಗ ನತಾಶ ಹಾಗೂ ಪಾಂಡ್ಯ ಡಿವೋರ್ಸ್ ಪಡ್ಕೊಂಡಿದ್ದಾರೆ. ನಾಲ್ಕು ವರ್ಷಗಳ ತಮ್ಮ ದಾಂಪತ್ಯಕ್ಕೆ ಅಂತ್ಯ ಹಾಡುತ್ತಿದ್ದು, ಇಬ್ಬರೂ ಬೇರೆಯಾಗಲು ನಿರ್ಧರಿಸುವುದಾಗಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ..

4 ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ, ನತಾಶಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ ಮತ್ತು ನಮ್ಮೆಲ್ಲವನ್ನೂ ನೀಡಿದ್ದೇವೆ ಎಂದು ನಾವು ನಂಬುತ್ತೇವೆ. ಇದು ನಮಗೆ ಕಷ್ಟಕರವಾದ ನಿರ್ಧಾರವಾಗಿತ್ತು. ಏಕೆಂದರೆ ಒಟ್ಟಾಗಿ ನಾವು ನಮ್ಮ ಕೈಲಾದಷ್ಟು ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಹೊಂದಿದ್ದೇವು. ನಮ್ಮ ಕುಟುಂಬ ಬೆಳೆಸಿಕೊಂಡಿದ್ದೇವೆ’ ಎಂದು ಹಾರ್ದಿಕ್ ತಮ್ಮ ನೋವಿನ‌ ಮಾತನ್ನ  ಬರಹದ ಮೂಲಕ ವ್ಯಕ್ತಪಡಿಸಿದ್ದಾರೆ.

ಇನ್ನು ಹಾರ್ದಿಕ್ ಪಾಂಡ್ಯ ಅವರಿಗೆ ತಮ್ಮ ಮಗ ಅಗಸ್ತ್ಯ ಎಂದರೆ ಪಂಚಪ್ರಾಣ. ಹಾರ್ದಿಕ್ ಮತ್ತು ನತಾಶ ವಿಚ್ಛೇದನ ಪಡೆದ ನಂತರ ಅಗಸ್ತ್ಯ  ಯಾರೊಂದಿಗೆ ಇರುತ್ತಾನೆ ಎಂಬುದು ಕೂತುಹಲ ಮೂಡಿಸಿದೆ. ಆದರೆ, ಈ ಬಗ್ಗೆ ಪೋಸ್ಟ್ನಲ್ಲಿ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ. ‘ನಮ್ಮಿಬ್ಬರ ಜೀವನದ ಕೇಂದ್ರ ಬಿಂದುವಾಗಿರುವ ಅಗಸ್ತ್ಯನನ್ನು ನಾವು ಆಶೀರ್ವದಿಸಿದ್ದೇವೆ ಮತ್ತು ನಾವು ಅವನ ಸಂತೋಷಕ್ಕಾಗಿ ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ನೀಡುವುದನ್ನು ಖಚಿತಪಡಿಸಿಕೊಳ್ಳಲು ಅವನಿಗೆ ಸಹ-ಪೋಷಕರಾಗಿರುತ್ತೇವೆ. ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಉಳಿಸಿಕೊಳ್ಳಲು ನಿಮ್ಮ ಬೆಂಬಲ ಮತ್ತು ಸಹಕಾರವನ್ನು ಪ್ರಾಮಾಣಿಕವಾಗಿ ಕೇಳಿಕೊಳ್ಳುತ್ತೇವೆ ಎಂದು ಮನವಿ ಮಾಡಿದ್ದಾರೆ.  ಆದ್ರೆ ಅಗಸ್ತ್ಯ ಪಾಂಡ್ಯ ಜೊತೆ ಇರ್ತಾನಾ ಅಥವಾ ನತಾಶ ಜೊತೆ ಇರ್ತಾನಾ ಅಂತಾ ಈ ಇವರಿಬ್ರು ಸ್ಪಷ್ಟನೆ ಕೊಟ್ಟಿಲ್ಲ. ಇತ್ತೀಚೆಗಷ್ಟೇ ನತಾಶ ಹಾಗೂ ಅಗಸ್ತ್ಯ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ರು.. ನತಾಶ ಮಗನೊಂದಿಗೆ ಸೆರ್ಬಿಯಾಗೆ ಹೋಗಿದ್ದಾರೆ ಅಂತಾ ಹೇಳಲಾಗ್ತಿದೆ. ಹೀಗಾಗಿ ಅಗಸ್ತ್ಯ ನತಾಶಳೊಂದಿಗೆ ಇರುವ ಸಾಧ್ಯತೆ ಹೆಚ್ಚು ಅಂತಾ ಊಹೆ ಮಾಡ್ತಿದ್ದಾರೆ ಫ್ಯಾನ್ಸ್..

ಇನ್ನು ಇವರಿಬ್ಬರು ಸೋಶಿಯಲ್ ಮೀಡಿಯಾದ ಮೂಲಕ ಡಿವೋರ್ಸ್ ವಿಚಾರವನ್ನ ಅನೌನ್ಸ್ ಮಾಡಿದ್ದಾರೆ.. ಹಾರ್ದಿಕ್ ಪಾಂಡ್ಯ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ ಬಳಿಕ ಕಾಮೆಂಟ್ ಬಾಕ್ಸ್ ಆಫ್ ಮಾಡಿದ್ದಾರೆ. ಆದ್ರೆ ಹಾರ್ದಿಕ್ ಪಾಂಡ್ಯ ಫಾನ್ಸ್ ಮಾತ್ರ ನತಾಶ ಪೋಸ್ಟ್ಗೆ ಮನಬಂದಂತೆ ಕಾಮೆಂಟ್ ಮಾಡ್ತಿದ್ದಾರೆ.. ನತಾಶ ವಿರುದ್ಧ ಪಾಂಡ್ಯ ಫಾನ್ಸ್ ಕೋಪಗೊಂಡಿದ್ದಾರೆ..  ಅವನು ಎಷ್ಟು ಒಳ್ಳೆಯವನು ಎಂದು ಇವಳು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಆಕೆಯ ಸಹವಾಸ ಬಿಟ್ಟಿದ್ದೇ ಒಳ್ಳೆದಾಯ್ತು ಅಂತಾ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು   ಅವಳು ಈಗ ನಿಮ್ಮ ಆಸ್ತಿಯಲ್ಲಿ ಎಷ್ಟು ತೆಗೆದುಕೊಳ್ಳುತ್ತಾಳೆ? ಅಂತಾ ಪ್ರಶ್ನೆ ಮಾಡಿದ್ದಾರೆ.. ಹಾರ್ದಿಕ್ ತನ್ನ ಆಸ್ತಿಯ ಭಾಗದಲ್ಲಿ 50ರಷ್ಟು ತನ್ನ ತಾಯಿಯ ಹೆಸರಿಗೆ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ನತಾಶಾ ಜೀವನಾಂಶ ಪಡೆದಿದ್ದರೂ, ಹಾರ್ದಿಕ್ ಹೆಸರಿನಲ್ಲಿದ್ದ ಆಸ್ತಿಯಲ್ಲಿ ಮಾತ್ರ ಪಡೆಯಲು ಸಾಧ್ಯ ಅಂತ ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ..

ನತಾಶ ಹಾರ್ದಿಕ್ ಬಳಿ ಎಷ್ಟು ಜೀವನಾಂಶ ಕೇಳಿದ್ದಾರೆ ಎಂಬ ಬಗ್ಗೆ ಪಾಂಡ್ಯ ಆಗ್ಲಿ ನತಾಶ ತಿಳಿಸಿಲ್ಲ..‌ ಆದ್ರೆ ಪರಸ್ಪರ ಒಪ್ಪಿತ ವಿಚ್ಛೇದನ ಆಗಿರೋದ್ರಿಂದ ಮಗ ಅಗಸ್ತ್ಯನ ಪೋಷಣೆಗೆ ಪಾಂಡ್ಯ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಬಹುದು..

ಆದ್ರೆ ನತಾಶಗೆ ಜೀವನಾಂಶ ಕೊಡುವ ವಿಚಾರದಲ್ಲಿ ಅವರಿಬ್ಬರ ನಡುವೆಯೇ ಒಪ್ಪಂದ ಆಗಿರುವ ಸಾಧ್ಯತೆ ಹೆಚ್ಚಿದೆ.. ನತಾಶ ಮಾಡಲಿಂಗ್ ಸೇರಿದಂತೆ ಸ್ವಂತ ದುಡಿಮೆ ಹೊಂದಿದ್ದು, ಆಕೆಯೇ ಡಿವೋರ್ಸ್ ಗೆ ಮೊದಲು ಮುಂಡಾಗಿದ್ರೆ ಹಾರ್ದಿಕ್ ಯಾವುದೇ ಜೀವನಾಂಶ ನೀಡುವ ಅಗತ್ಯವಿಲ್ಲ. ಆದ್ರೆ ನತಾಶ ಪಾಂಡ್ಯ ತಮ್ಮ ವಿಚ್ಛೇದನಕ್ಕೆ ಅಸಲಿ ಕಾರಣದ ಬಗ್ಗೆ ಗೌಪ್ಯತೆ ಕಾಪಾಡಿರೋದ್ರಿಂದ ಇವರಿಬ್ಬರಲ್ಲಿ ಯಾರು ವಿಚ್ಛೇದನ ದ ನಿರ್ಧಾರವನ್ನ ಮೊದಲು ಕೈಗೊಂಡರು ಎಂಬುದು ಗುಟ್ಟಾಗಿ ಉಳಿದಿದೆ..

‌ಇನ್ನು ಪಾಂಡ್ಯ ಮತ್ತು ಸ್ಟಾಂಕೋವಿಕ್ ಮೇ 2020 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಲಾಕ್‌ಡೌನ್ ಸಮಯದಲ್ಲಿ ಅವರು ಮದುವೆ ಆಗಿದ್ರು. ಅದೇ ವರ್ಷ ಅಂದರೆ ಜುಲೈ 2020 ರಲ್ಲಿ ಈ ದಂಪತಿಗಳಿಗೆ ಗಂಡು ಮಗು ಜನಿಸಿತ್ತು. ಆ ಬಳಿಕ ಮಗನ ಎದುರಿಗೆ ಈ ಇಬ್ಬರು 2023 ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ಈ ದಂಪತಿಗಳು ತಮ್ಮ 4 ವರ್ಷದ ಜೊತೆ ಪಯಣಕ್ಕೆ ಅಂತ್ಯ ಹಾಡಿರುವುದು ವಿಪರ್ಯಾಸ.

Shwetha M

Leave a Reply

Your email address will not be published. Required fields are marked *